Team India: ಅಂದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ಕ್ರಿಕೆಟಿಗ, ಇಂದು ದುಡ್ಡಿಲ್ಲದೇ ಎಮ್ಮೆ ಮೇಯಿಸುತ್ತಿದ್ದಾರೆ!

Team India: ಬಾಲಾಜಿ ದಾಮೋರ್ ಹೆಸರನ್ನು ಅನೇಕ ಜನರು ಕೇಳಿರಲಿಕ್ಕಿಲ್ಲ. ಬಾಲಾಜಿ ಕೂಡ ಭಾರತ ತಂಡದ ಪರ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದಾರೆ. ಅಂಧರ ಕ್ರಿಕೆಟ್​ ತಂಡದ ಪ್ರಮುಖ ಆಟಗಾರರಾಗಿದ್ದ ಬಾಲಾಜಿ ಅವರು ಇಂದು ಆರ್ಥಿಕ ಸಮಸ್ಯೆಯಿಂದ ಜೀವನ ನಡೆಸುತ್ತಿದ್ದಾರೆ.

ಬಾಲಾಜಿ ದಾಮೋರ್

ಬಾಲಾಜಿ ದಾಮೋರ್

  • Share this:
ಬಾಲಾಜಿ ದಾಮೋರ್ (Bhalaji Damor) ಹೆಸರನ್ನು ಅನೇಕ ಜನರು ಕೇಳಿರಲಿಕ್ಕಿಲ್ಲ. ಬಾಲಾಜಿ ಕೂಡ ಭಾರತ ತಂಡದ (Team India) ಪರ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್ ಆಡಿದ್ದಾರೆ. ಅಂಧರ ಕ್ರಿಕೆಟ್​ ತಂಡದ ಪ್ರಮುಖ ಆಟಗಾರರಾಗಿದ್ದ ಬಾಲಾಜಿ ಅವರು, ಇದೀಗ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ. ಆದರೆ ಅವರ ಜೀವನ ನಮ್ಮ ಟೀಂ ಇಂಡಿಯಾದ ಸ್ಟಾರ್​ ಕ್ರಿಕೆಟಿಗರಂತ್ತಿಲ್ಲ. 1998 ರ ಅಂಧರ ಕ್ರಿಕೆಟ್ ವಿಶ್ವಕಪ್‌ನಲ್ಲಿ (Blind Cricket World Cup) ಭಾರತ ತಂಡವನ್ನು ಸೆಮಿಫೈನಲ್‌ಗೆ ಮುನ್ನಡೆಸಿದ್ದ ಬಾಲಾಜಿ ದಾಮೋರ್. ಈಗ ಅದೇ ಆರ್ಥಿಕ ಸಮಸ್ಯೆ ಜೊತೆಗೆ ಜೀವನ ನಡೆಸುತ್ತಿದ್ದಾರೆ. ಎಮ್ಮೆ, ಮೇಕೆ ಮೇಯಿಸುವ ಕೆಲಸ ಮಾಡುತ್ತಿರುವ ಅವರು, ಅದೇ ಸಮಯದಲ್ಲಿ, ಜೀವನಕ್ಕಾಗಿ ಸಣ್ಣ ಕೆಲಸಗಳನ್ನು ಮಾಡುತ್ತಿದ್ದಾರೆ. ಬಾಲಾಜಿ ಅವರ ವೃತ್ತಿಜೀವನದ ದಾಖಲೆಯು ಸಾಕಷ್ಟು ಉತ್ತಮವಾಗಿತ್ತು. ಅವರು 125 ಪಂದ್ಯಗಳಲ್ಲಿ 3125 ರನ್ ಗಳಿಸಿದರು ಮತ್ತು 150 ವಿಕೆಟ್ ಗಳನ್ನು ಪಡೆದಿದ್ದರು.

ಭಾರತದ ಪರ ದಾಖಲೆ ಬರೆದಿದ್ದ ಬಾಲಾಜಿ:

ಅರಾವಳಿ ಜಿಲ್ಲೆಯ ಪಿಪ್ರಾನಾ ಗ್ರಾಮದ ನಿವಾಸಿ ಬಾಲಾಜಿ ದಾಮೋರ್ ಅವರು ತಮ್ಮ ವಿಭಾಗದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. 1998ರ ಅಂಧರ ವಿಶ್ವಕಪ್ ಪಂದ್ಯದ ಸೆಮಿಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ  ಸೋತಾಗಲೂ, ಆಗಿನ ಅಧ್ಯಕ್ಷ ಕೆಆರ್ ನಾರಾಯಣನ್ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಬಾಲಾಜಿ ದಾಮೋರ್ ಅವರನ್ನು ಹೊಗಳಿದ್ದರು. ಬಾಲಾಜಿ ಅಂಧರಾದ ನಂತರವೂ ಬ್ಯಾಟ್ಸ್‌ಮನ್‌ಗಳಿಗೆ ಸುಲಭವಾಗಿ ಬೌಲ್ ಮಾಡುತ್ತಿದ್ದರು.

ಬಾಲಾಜಿ ಅವರ ಮನೆ


ಸಾಮಾನ್ಯ ಮನೆಯಲ್ಲಿ ವಾಸ:

ಪ್ರಸ್ತುತ, ಬಾಲಾಜಿ ದಾಮೋರ್ ಕೂಡ ಪಿಪ್ರಾನಾ ಗ್ರಾಮದ ತನ್ನ ಒಂದು ಎಕರೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸಹೋದರನಿಗೂ ಈ ಭೂಮಿಯಲ್ಲಿ ಸಮಾನ ಪಾಲು ಇದೆ. ಕುಟುಂಬದ ಮೂಲಭೂತ ಅಗತ್ಯಗಳನ್ನು ಪೂರೈಸಲು ಅವರ ಜಮೀನಿನಿಂದ ಸಾಕಷ್ಟು ಆದಾಯವಿಲ್ಲ. ಅವರ ಪತ್ನಿ ಅನು ಕೂಡ ಗ್ರಾಮದ ಇತರ ಜನರ ಹೊಲಗಳಲ್ಲಿ ಕೆಲಸ ಮಾಡುತ್ತಾರೆ. ಬಾಲಾಜಿಗೆ 4 ವರ್ಷದ ಸತೀಶ್ ಎಂಬ ಮಗನಿದ್ದಾನೆ, ಅವನ ಕಣ್ಣುಗಳು ಸಾಮಾನ್ಯವಾಗಿದೆ. ವಾಸದ ಹೆಸರಲ್ಲಿ ಒಂದೇ ಕೋಣೆಯ ಪಾಳುಬಿದ್ದ ಮನೆಯನ್ನು ಈ ಕುಟುಂಬ ಹೊಂದಿದೆ. ಈ ಮನೆಯಲ್ಲಿ ಬಾಲಾಜಿ ಕ್ರಿಕೆಟಿಗನಾಗಿ ಪಡೆದ ಪ್ರಮಾಣಪತ್ರಗಳು ಮತ್ತು ಇತರ ಪ್ರಶಸ್ತಿಗಳನ್ನು ಅಚ್ಚುಕಟ್ಟಾಗಿ ಇಟ್ಟಿದ್ದಾರೆ.

ಇದನ್ನೂ ಓದಿ: Urvashi Rautela: ನಾನು ಪಂತ್​ಗೆ ಕ್ಷಮೆಯೇ ಕೇಳಿಲ್ಲ, ಉಲ್ಟಾ ಹೊಡೆದ ಊರ್ವಶಿ - ಏನ್ ಕಥೆ ನಿಮ್ದು ಅಂತಿದ್ದಾರೆ ಫ್ಯಾನ್ಸ್

ಅಂಧರ ಕ್ರಿಕೆಟ್​ನಲ್ಲಿ ಮಿಂಚಿದ್ದ ಬಾಲಾಜಿ:

ಇನ್ನು, ಕ್ರಿಕೆಟ್ ಆಟದಿಂದ ಬಾಲಾಜಿ ಖಂಡಿತವಾಗಿಯೂ ಇಡೀ ಜಗತ್ತಿನಲ್ಲಿ ಛಾಪು ಮೂಡಿಸಿದ್ದರು. ಒಮ್ಮೆ ಅವರು ಕ್ರಿಕೆಟ್ ಮೈದಾನದಿಂದ ಹೊರಬಂದ ನಂತರ, ಅವರ ಜೀವನವು ತೊಂದರೆಗಳಿಂದ ಕೂಡಿದೆ. ವಿಶ್ವಕಪ್ ಬಳಿಕ ಉದ್ಯೋಗಕ್ಕಾಗಿ ಸಾಕಷ್ಟು ಪ್ರಯತ್ನ ಪಟ್ಟರೂ ಸ್ಪೋರ್ಟ್ಸ್ ಕೋಟಾ ಮೂಲಕವೂ ಕೆಲಸ ಸಿಗಲಿಲ್ಲ ಎಂದು ಹೇಳುತ್ತಾರೆ.

ಬಾಲಾಜಿ ದಾಮೋರ್


ಆದರೂ ಇಂದಿಗೂ ಕ್ರಿಕೆಟ್​ ಮೇಲಿನ ಪ್ರೀತಿಯಿಂದ ಅವರು ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಕ್ರಿಕೆಟ್ ಕಲಿಸಲು ಹತ್ತಿರದ ಅಂಧರ ಶಾಲೆಗೆ ಹೋಗುತ್ತಾರಂತೆ. ಇದಕ್ಕಾಗಿ ಅವರು ನಾಮಮಾತ್ರದ ಮೊತ್ತವನ್ನು ಖರ್ಚು ಮಾಡುತ್ತಿದ್ದಾರಂತೆ.

ಇದನ್ನೂ ಓದಿ: Rohit Sharma: ರೋಹಿತ್ ಶರ್ಮಾ ಎಜುಕೇಷನ್​ ಏನು ಗೊತ್ತಾ? ಹಿಟ್​ಮ್ಯಾನ್​ಗೂ ಸೌತ್​ಗೂ ಇದೆ ನಂಟು!

ಬಾಲಾಜಿಯ ಕುಟುಂಬವು ತಿಂಗಳಿಗೆ 3,000 ರೂಪಾಯಿಗಳನ್ನು ಗಳಿಸುತ್ತಿದೆ. ಈ ಮೊತ್ತವು 17 ವರ್ಷಗಳ ಹಿಂದೆ 1998 ರಲ್ಲಿ ಬಾಲಾಜಿ ಆಟಗಾರನಾಗಿ ಪಡೆಯುತ್ತಿದ್ದ 5,000 ರೂ.ಗಿಂತ ಕಡಿಮೆಯಾಗಿದೆ. ಬಾಲ್ಯದಲ್ಲಿಯೂ ಬಾಲಾಜಿ ಎಮ್ಮೆ ಮತ್ತು ಮೇಕೆಗಳನ್ನು ಮಾತ್ರ ಮೇಯಿಸುತ್ತಿದ್ದರು. ಅವರಲ್ಲಿರುವ ಕ್ರಿಕೆಟ್ ಪ್ರತಿಭೆಯನ್ನು ಕಂಡು ಜನರು ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡಲು ಪ್ರೋತ್ಸಾಹಿಸಿದರು. ಈಗ ಕ್ರಿಕೆಟ್ ಆಟದಲ್ಲಿ ಹೆಸರು ಗಳಿಸಿದ ಮೇಲೂ ಮೊದಲು ಮಾಡುತ್ತಿದ್ದ ಕೆಲಸವನ್ನೇ ಮಾಡುತ್ತಿರುವುದು ವಿಪರ್ಯಾಸವಾಗಿದೆ. ಈಗಲಾದರೂ ಇವರ ಸಂಕಷ್ಟಕ್ಕೆ ಬಿಸಿಸಿಐ ಸ್ಪಂದಿಸಬೇಕಾಗಿದೆ.
Published by:shrikrishna bhat
First published: