ವಿಂಡೀಸ್ ವಿರುದ್ಧ 2ನೇ ಟೆಸ್ಟ್​ಗೆ ಟೀಂ ಇಂಡಿಯಾ ಪ್ರಕಟ: ಮಯಾಂಕ್​​ಗಿಲ್ಲ ಸ್ಥಾನ

 • News18
 • Last Updated :
 • Share this:
  ನ್ಯೂಸ್ 18 ಕನ್ನಡ

  ವೆಸ್ಟ್​ ಇಂಡೀಸ್ ವಿರುದ್ಧ ನಾಳೆಯಿಂದ ಹೈದರಾಬಾದ್​ನಲ್ಲಿ ಆರಂಭವಾಗಲಿರುವ 2ನೇ ಟೆಸ್ಟ್​ಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು, ಬಿಸಿಸಿಐ 12 ಆಟಗಾರರ ಹೆಸರನ್ನು ಪ್ರಕಟಿಸಿದೆ.

  ಆದರೆ 2ನೇ ಟೆಸ್ಟ್​​ನಲ್ಲೂ ಕನ್ನಡಿಗ ಮಯಾಂಕ್ ಅಗರ್ವಾಲ್​​ಗೆ ಮಾತ್ರ ಸ್ಥಾನ ನೀಡಿಲ್ಲ. ಬದಲು ಶಾರ್ದೂಲ್ ಠಾಕೂರ್​ 12ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

  ಮೊದಲ ಟೆಸ್ಟ್​ಗೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯದ ಅಗರ್ವಾಲ್, ಸದ್ಯ 2ನೇ ಟೆಸ್ಟ್​ನಲ್ಲೂ ಬೆಂಚ್ ಕಾಯ ಬೇಕಾಗಿ ಬಂದಿದೆ. ಈ ಮೂಲಕ ವಿಂಡೀಸ್ ವಿರುದ್ಧ 2ನೇ ಟೆಸ್ಟ್​ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಬೇಕು ಎಂದಿದ್ದ ಮಯಾಂಕ್ ಕನಸು ನುಚ್ಚುನೂರಾಗಿದೆ.

  2ನೇ ಟೆಸ್ಟ್​ಗೆ ಭಾರತ ತಂಡ: 

  ವಿರಾಟ್​ ಕೊಹ್ಲಿ (ನಾಯಕ), ಕೆ.ಎಲ್ ರಾಹುಲ್​, ಪೃಥ್ವಿ ಶಾ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪ ನಾಯಕ), ರಿಷಭ್ ಪಂತ್​, ರವೀಂದ್ರ ಜಡೇಜಾ, ಆರ್​. ಅಶ್ವಿನ್​, ಕುಲ್​ದೀಪ್ ಯಾದವ್​, ಮೊಹಮ್ಮದ್​ ಶಮಿ, ಉಮೇಶ್​​ ಯಾದವ್​, ಶಾರ್ದೂಲ್​ ಠಾಕೂರ್​​.

     First published: