India vs Zimbabwe: ಜಿಂಬಾಬ್ವೆ ವಿರುದ್ಧ ಸರಣಿ ಗೆದ್ದು ಭರ್ಜರಿ ಡ್ಯಾನ್ಸ್ ಮಾಡಿದ ಟೀಂ ಇಂಡಿಯಾ, ವಿಡಿಯೋ ವೈರಲ್

ಜಿಂಬಾಬ್ವೆ ವಿರುದ್ಧದ ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಭರ್ಜರಿ ಸಂಭ್ರಮಾಚರಣೆ ನಡೆಸಿದ್ದಾರೆ. ಭಾರತೀಯ ಆಟಗಾರರು ‘ಕಾಲಾ ಚಷ್ಮಾ’ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಈ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತ ಮತ್ತು ಜಿಂಬಾಬ್ವೆ  (IND vs ZIM) ನಡುವಿನ 3 ಪಂದ್ಯಗಳ ಏಕದಿನ ಸರಣಿಯನ್ನುಕ್ಲೀನ್​ಸ್ವೀಪ್ ಮಾಡುವ ಮೂಲಕ ಕೆಎಲ್ ರಾಹುಲ್  (KL Rahul) ನಾಯಕತ್ವದ ಭಾರತ ತಂಡವು ಸರಣಿಯನ್ನು ಗೆದ್ದು ಬೀಗಿದೆ. ಕಳೆದ ದಿನ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಜಿಂಬಾಬ್ವೆ (Zimbabwe ) ವಿರುದ್ಧ 13 ರನ್‌ಗಳ ರೋಚಕ ಗೆಲುವು ದಾಖಲಿಸಿದೆ. ಕೊನೆಯ ಓವರ್‌ನವರೆಗೂ ಸೆಣಸಾಡಿದ ಜಿಂಬಾಬ್ವೆ ಅಂತಿಮವಾಗಿ 13 ರನ್​ ಗಳಿಂದ ಸೋಲನ್ನಪ್ಪಿತು. ಆದರೆ ಜಿಂಬಾಬ್ವೆ ತಂಡದ ಸಿಕಂದರ್​ ರಾಜಾ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಶತಕ ಸಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಜಿಂಬಾಬ್ವೆ ವಿರುದ್ಧದ ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಭರ್ಜರಿ ಸಂಭ್ರಮಾಚರಣೆ ನಡೆಸಿದೆ. ಭಾರತೀಯ ಆಟಗಾರರು ‘ಕಾಲಾ ಚಷ್ಮಾ‘ ಹಾಡಿಗೆ ಡ್ಯಾನ್ಸ್ ಮಾಡಿದ್ದು, ಈ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (Video Viral) ಆಗಿದೆ.

ಭರ್ಜರಿ ಡ್ಯಾನ್ಸ್ ಮಾಡಿದ ಟೀಂ ಇಂಡಿಯಾ ಆಟಗಾರರು:

ಆರಂಭಿಕ ಆಟಗಾರ ಶಿಖರ್ ಧವನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಟಗಾರರ ಸಂಭ್ರಮಾಚರಣೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ನಾವು ವಿಜಯವನ್ನು ಹೀಗೆ ಆಚರಿಸುತ್ತೇವೆ. ಹ್ಯಾಶ್‌ಟ್ಯಾಗ್ ಕಾಲಾ ಚಷ್ಮಾ ಎಂದು ಬರೆದುಕೊಂಡಿದ್ದಾರೆ. ಸಂಭ್ರಮಾಚರಣೆಯಲ್ಲಿ ಧವನ್ ಕಪ್ಪು ಕನ್ನಡಕವನ್ನು ಧರಿಸಿದ್ದರು. ನಾಯಕ ಕೆಎಲ್ ರಾಹುಲ್ ಅವರೊಂದಿಗೆ ಸಂಭ್ರಮಾಚರಣೆ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ನೃತ್ಯದಲ್ಲಿ ಯುವ ಆಟಗಾರರಾದ ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಭಾರತ ತಂಡದ ಈ ವಿಶೇಷ ವಿಡಿಯೋಗೆ ಇದುವರೆಗೆ 13 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ.


ಚೊಚ್ಚಲ ಶತಕ ಸಿಡಿಸಿದ ಗಿಲ್​:

ಜಿಂಬಾಬ್ವೆ ವಿರುದ್ಧದ 3ನೇ ಪಂದ್ಯದಲ್ಲಿ ಶುಭಮನ್ ಗಿಲ್ ಭರ್ಜರಿ ಬ್ಯಾಟಿಂಗ್​ ಮಾಡಿದ್ದಾರೆ. ಈ ಮೂಲಕ ಶುಭಮನ್ ಗಿಲ್​ ತಮ್ಮ ಅಂತರಾಷ್ಟ್ರೀಯ ಶತಕ ಸಿಡಿಸಿ ಸಂಭ್ರಮಿಸಿದರು. ಶುಭ್​ಮನ್ ಗಿಲ್ ಹಾಗೂ ಇಶಾನ್ ಕಿಶನ್ 3ನೇ ವಿಕೆಟ್​ಗೆ ಶತಕದ ಜೊತೆಯಾಟವಾಡಿದರು. ಗಿಲ್​ 82 ಎಸೆತಗಳಲ್ಲಿ 12 ಫೋರ್​ನೊಂದಿಗೆ ಚೊಚ್ಚಲ ಶತಕ ಪೂರೈಸಿ ಸಂಭ್ರಮಿಸಿದರು. ಶುಭ್​ಮನ್ ಗಿಲ್ 97 ಎಸೆತಗಳಲ್ಲಿ 130 ರನ್​ ಬಾರಿಸಿ ಕೊನೆಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ ಟೀಂ ಇಂಡಿಯಾ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ: India vs Pakistan: ಪಾಕ್​ ಪಂದ್ಯದ ವೇಳೆ ಖಂಡಿತ ಒತ್ತಡ ಇರುತ್ತೆ, ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಹೇಳಿದ್ದೇನು?

ಇದರ ಜೊತೆಗೆ ಗಿಲ್ ಪಂದ್ಯ ಪುರುಷೋತ್ತಮ ಮಾತ್ರವಲ್ಲದೆ ಸರಣಿ ಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು. ಅವರು ಮೂರು ಇನ್ನಿಂಗ್ಸ್‌ಗಳಲ್ಲಿ 122.5 ಸರಾಸರಿಯಲ್ಲಿ 245 ರನ್ ಗಳಿಸಿದರು. ಗಿಲ್ ಅವರು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮ ತಂದೆಗೆ ಅರ್ಪಿಸಿದರು. ಇವರಲ್ಲದೆ ಕಿಶನ್ 50 ರನ್, ಧವನ್ 40 ರನ್ ಮತ್ತು ರಾಹುಲ್ 30 ರನ್ ಗಳಿಸಿದರು. ಜಿಂಬಾಬ್ವೆಯ ಸಿಕಂದರ್ ರಜಾ (115) ಶತಕ ಬಾರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಏಷ್ಯಾ ಕಪ್​ಗಾಗಿ ದುಬೈಗೆ ಹಾರಿದ ಟೀಂ ಇಂಡಿಯಾ:

ಹೌದು, ಸದ್ಯ ಜಿಂಬಾಬ್ವೆ ಸರಣಿ ಮುಗಿಸಿರುವ ಭಾರತ ತಂಡವು, ಇದೀಗ ಏಷ್ಯಾ ಕಪ್​ಗಾಗಿ ದುಬೈಗೆ ಹಾರಿದೆ. ಆದರೆ ಜಿಂಬಾಬ್ವೆಯಿಂದ ಕೆಎಲ್ ರಾಹುಲ್​ ಅವರು ನೇರವಾಗಿ ದುಬೈಗೆ ಹೋಗಲಿದ್ದಾರೆ. ಏಷ್ಯಾ ಕಪ್​ನಲ್ಲಿ ಭಾರತ ತಂಡ ಆಗಸ್ಟ್ 28ರಂದು ಪಾಕಿಸ್ತಾನ ಎದುರು ತನ್ನ ಮೊದಲ ಪಂದ್ಯವಾಡಲಿದೆ.

ಇದನ್ನೂ ಓದಿ: Rahul Dravid: ಟೀಂ ಇಂಡಿಯಾಗೆ ಬಿಗ್​ ಶಾಕ್, ಏಷ್ಯಾ ಕಪ್‌ಗೆ ರಾಹುಲ್ ದ್ರಾವಿಡ್ ಅನುಮಾನ?

ಏಷ್ಯಾ ಕಪ್​ಗಾಗಿ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.
Published by:shrikrishna bhat
First published: