• Home
  • »
  • News
  • »
  • sports
  • »
  • Ravindra Jadeja: ಗುಜರಾತ್ ಬಿಜೆಪಿ ಅಭ್ಯರ್ಥಿಯಾಗಿ ಜಡ್ಡು ಪತ್ನಿ ಆಯ್ಕೆ, ಪ್ರಧಾನಿಗೆ ಧನ್ಯವಾದ ಹೇಳಿದ ಜಡೇಜಾ!

Ravindra Jadeja: ಗುಜರಾತ್ ಬಿಜೆಪಿ ಅಭ್ಯರ್ಥಿಯಾಗಿ ಜಡ್ಡು ಪತ್ನಿ ಆಯ್ಕೆ, ಪ್ರಧಾನಿಗೆ ಧನ್ಯವಾದ ಹೇಳಿದ ಜಡೇಜಾ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Gujarat Election: ಮುಂಬರುವ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಅವರು ಆಯ್ಕೆಯಾಗಿದ್ದಾರೆ. ಪತ್ನಿ ರಿವಾಬಾ ಅವರನ್ನು ಆಯ್ಕೆ ಮಾಡಿದಕ್ಕಾಗಿ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಅವರು ತಮ್ಮ ಪತ್ನಿಗೆ ಅಭಿನಂದಿಸಿದ್ದಾರೆ

ಮುಂದೆ ಓದಿ ...
  • Share this:

ಭಾರತೀಯ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ (Ravindra Jadeja) ಅವರ ಪತ್ನಿ ರಿವಾಬಾ ಅವರು ಆಗಾಗ್ಗೆ ಸುದ್ದಿಯಲ್ಲಿ ಇರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. 2021 ರಲ್ಲಿ ರಿವಾಬಾ (Rivaba Jadejaಅವರು ಗುಜರಾತ್ ನಲ್ಲಿ (Gujarat) ನಡೆದ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಕೋವಿಡ್-19 (Covid 19) ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕೆ ಅವರ ಅತ್ತಿಗೆ ನಯನಬಾ (ಕಾಂಗ್ರೆಸ್ ಸದಸ್ಯೆ)ರನ್ನು ಕಟುವಾಗಿ ಟೀಕಿಸಿದ್ದು ಬಹುತೇಕರಿಗೆ ಗೊತ್ತಿರುತ್ತದೆ. ನಂತರ ಹಲವಾರು ಜನರನ್ನು ಒಟ್ಟುಗೂಡಿಸಿ ಕೋವಿಡ್-19 ಸಾಂಕ್ರಾಮಿಕ ರೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಮೂಲಕ ಕಾರ್ಯಕ್ರಮದಲ್ಲಿ ರಿವಾಬಾ ಭಾಗವಹಿಸಿದ್ದರು ಮತ್ತು ತಮ್ಮ ಮಾಸ್ಕ್ ಸಹ ಅವರು ಸರಿಯಾಗಿ ಧರಿಸಿರಲಿಲ್ಲ ಎಂದು ಮರಾಠಿ ದಿನಪತ್ರಿಕೆಯೊಂದು ವರದಿ ಮಾಡಿತ್ತು.


ಇದಷ್ಟೇ ಅಲ್ಲದೆ ಆಗಸ್ಟ್ 2020 ರಲ್ಲಿ, ರಿವಾಬಾ ಮಾಸ್ಕ್ ಧರಿಸದೆ ಸಿಕ್ಕಿಬಿದ್ದ ನಂತರ ಪೊಲೀಸ್ ಕಾನ್ಸ್ಟೇಬಲ್ ನೊಂದಿಗೆ ಜಗಳವಾಡಿದ್ದು ಮತ್ತು 2018 ರಲ್ಲಿ ಜಾಮ್ ನಗರದಲ್ಲಿ ರಿವಾಬಾ ಅವರ ವಾಹನ ಡಿಕ್ಕಿ ಹೊಡೆದ ನಂತರ ಪೊಲೀಸರು ರಿವಾಬಾ ಅವರ ಮೇಲೆ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದ್ದನ್ನು ಬಹುತೇಕರು ಮರೆತಿರಲಿಕ್ಕಿಲ್ಲ. ಆದರೆ ಈಗ ಮತ್ತೆ ರಿವಾಬಾ ಅವರು ಸುದ್ದಿಯಲ್ಲಿರುವುದು ಒಳ್ಳೆಯ ಕಾರಣಕ್ಕೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಬಿಜೆಪಿ ಅಭ್ಯರ್ಥಿಯಾಗಿ ರಿವಾಬಾ:


ಹೌದು, ಮುಂಬರುವ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಅವರು ಆಯ್ಕೆಯಾಗಿದ್ದಾರೆ. ಪತ್ನಿ ರಿವಾಬಾ ಅವರನ್ನು ಆಯ್ಕೆ ಮಾಡಿದಕ್ಕಾಗಿ ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಅವರು ತಮ್ಮ ಪತ್ನಿಗೆ ಅಭಿನಂದಿಸಿದ್ದಾರೆ ಮತ್ತು ಈ ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.



ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ರವೀಂದ್ರ ಜಡೇಜಾ ಅವರು "ವಿಧಾನಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಪಡೆದ ನನ್ನ ಪತ್ನಿಗೆ ಅಭಿನಂದನೆಗಳು. ನೀವು ಮಾಡಿದ ಎಲ್ಲಾ ಪ್ರಯತ್ನ ಮತ್ತು ಕಠಿಣ ಪರಿಶ್ರಮದ ಬಗ್ಗೆ ನನಗೆ ತುಂಬಾನೇ ಹೆಮ್ಮೆ ಇದೆ. ನಿಮಗೆ ನನ್ನ ಶುಭ ಹಾರೈಕೆಗಳು, ನೀವು ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ಹೀಗೆಯೇ ಮುಂದುವರೆಸಿ ಅಂತ ಹಾರೈಸುತ್ತೇನೆ” ಎಂದು ಬರೆದಿದ್ದಾರೆ.


ಪ್ರಧಾನಿಯವರಿಗೆ ಅಭಿನಂದನೆ ತಿಳಿಸಿದ ಜಡೇಜಾ:


ನಮ್ಮ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಅಮಿತ್ ಶಾಜಿ ಅವರಿಗೆ ಅವರ ಪತ್ನಿ ರಿವಾಬಾ ಅವರ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಉದಾತ್ತ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ ಎಂದು ಜಡೇಜಾ ಅವರು ಹೇಳಿದರು.


ನಿನ್ನೆ ಗುರುವಾರದಂದು ಬಿಡುಗಡೆಯಾದ 160 ಅಭ್ಯರ್ಥಿಗಳ ಪಟ್ಟಿಯಲ್ಲಿ ರಿವಾಬಾ ಜಡೇಜಾ ಜಾಮ್ ನಗರದ ಉತ್ತರ ಕ್ಷೇತ್ರಕ್ಕೆ ಬಿಜೆಪಿಯ ಆಯ್ಕೆಯಾಗಿದ್ದಾರೆ. ಪಕ್ಷವು ಹಾಲಿ ಶಾಸಕ ಧರ್ಮೇಂದ್ರ ಸಿನ್ಹಾ ಎಂ ಜಡೇಜಾ ಅವರನ್ನು ಕೈಬಿಟ್ಟಿದ್ದಾರೆ. ಲೋಕಸಭಾ ಚುನಾವಣೆಗೆ ಮುಂಚಿತವಾಗಿ 2019 ರಲ್ಲಿ ರಿವಾಬಾ ಬಿಜೆಪಿಗೆ ಸೇರಿದರು. ಇದಕ್ಕೂ ಮೊದಲು ಅವರು ಕರ್ಣಿ ಸೇನೆಯ ಮಹಿಳಾ ವಿಭಾಗದ ಮುಖ್ಯಸ್ಥರಾಗಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.


ಯಾರು ಈ ರಿವಾಬಾ ಜಡೇಜಾ?:


ಕಾಂಗ್ರೆಸ್ ನ ಹಿರಿಯ ನಾಯಕ ಹರಿ ಸಿಂಗ್ ಸೋಲಂಕಿ ಅವರ ಸಂಬಂಧಿಯಾಗಿರುವ ರಿವಾಬಾ ಅವರು 2016 ರಲ್ಲಿ ರವೀಂದ್ರ ಜಡೇಜಾ ಅವರನ್ನು ವಿವಾಹವಾದರು. ಕುಟುಂಬದ ರಜಪೂತ ಪರಂಪರೆ ಮತ್ತು ಮಾಜಿ ರಾಜಮನೆತನದ ವಂಶಾವಳಿಯನ್ನು ಅವಲಂಬಿಸಿ, ಅವರು ಜಾಮ್ ನಗರ್-ಸೌರಾಷ್ಟ್ರ ಪ್ರದೇಶದಲ್ಲಿ ಸಕ್ರಿಯ ರಾಜಕಾರಣಿಯಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ, ಅವರು ಜನರ ಬೆಂಬಲವನ್ನು ಪಡೆಯಲು ಹಳ್ಳಿಗಳಾದ್ಯಂತ ಪ್ರಯಾಣಿಸುತ್ತಿದ್ದಾರೆ.


ಸೆಪ್ಟೆಂಬರ್ 5, 1990 ರಂದು ಜನಿಸಿದ ರಿವಾಬಾ ಅವರು ಗುಜರಾತ್ ನ ರಾಜ್‌ಕೋಟ್ ನಲ್ಲಿರುವ ಅತ್ಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಂಡ್ ಸೈನ್ಸ್ ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದರು ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

Published by:shrikrishna bhat
First published: