'ವಿಶ್ವಕಪ್​​ನಲ್ಲಿ ಭಾರತ 3 ವಿಕೆಟ್ ಕೀಪರ್ಸ್​​ ಜೊತೆ ಕಣಕ್ಕಿಳಿಯಬೇಕು': ಇದು ಕ್ರಿಕೆಟ್ ದಿಗ್ಗಜನ ಮಾತು

ಟೀಂ ಇಂಡಿಯಾ ಪರ ವಿಶ್ವಕಪ್​​ನಲ್ಲಿ ಬ್ಯಾಕ್ ಓಪನರ್ ಆಗಿ ಯಾರಿಗೆ ಸ್ಥಾನ ಎಂಬುದು ಅಂತಿಮವಾಗಿಲ್ಲ. ಕೆ ಎಲ್ ರಾಹುಲ್ ಕಳಪೆ ಫಾರ್ಮ್​ನಲ್ಲಿದ್ದರೆ, ಇತ್ತ ಆಡಿದ ಎರಡು ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್​ರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ.

Vinay Bhat
Updated:February 5, 2019, 8:50 PM IST
'ವಿಶ್ವಕಪ್​​ನಲ್ಲಿ ಭಾರತ 3 ವಿಕೆಟ್ ಕೀಪರ್ಸ್​​ ಜೊತೆ ಕಣಕ್ಕಿಳಿಯಬೇಕು': ಇದು ಕ್ರಿಕೆಟ್ ದಿಗ್ಗಜನ ಮಾತು
ಸುನಿಲ್ ಗವಾಸ್ಕರ್ (ಮಾಜಿ ಕ್ರಿಕೆಟಿಗ)
Vinay Bhat
Updated: February 5, 2019, 8:50 PM IST
2019ರ ವಿಶ್ವಕಪ್​​ಗೆ ಇನ್ನೇನು ಕೇವಲ ಎರಡು ತಿಂಗಳಿಗಳಷ್ಟೆ ಬಾಕಿ ಉಳಿದಿವೆ. ಈಗಾಗಲೇ ಎಲ್ಲ ತಂಡಗಳು ಬರದ ಸಿದ್ಧತೆಯಲ್ಲಿ ತೊಡಗಿದ್ದು, ಟೀಂ ಇಂಡಿಯಾ ಕೂಡ ಆಟಗಾರರ ಪ್ರಯೋಗದಲ್ಲಿ ತೊಡಗಿದೆ. ಸದ್ಯ ಸಾಗುತ್ತಿರುವ ನ್ಯೂಜಿಲೆಂಡ್ ಸರಣಿಯಲ್ಲಿ ಭಾರತೀಯ ಆಟಗಾರರ ಪ್ರದರ್ಶನದ ಮೇಲೆ ಯಾರನ್ನ ಆಯ್ಕೆ ಮಾಡಬೇಕು ಎಂಬುದು ಬಿಸಿಸಿಐ ಲೆಕ್ಕಚಾರವಾಗಿದೆ.

ಹೀಗಿರುವಾಗ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ವಿಶ್ವಕಪ್​​ನಲ್ಲಿ ಭಾರತ ಮೂವರು ವಿಕೆಟ್ ಕೀಪರ್​ಗಳೊಂದಿಗೆ ಕಣಕ್ಕಿಳಿದರೆ ಉತ್ತಮ ಎಂದು ಹೇಳಿದ್ದಾರೆ.

ಟೀಂ ಇಂಡಿಯಾ ಪರ ವಿಶ್ವಕಪ್​​ನಲ್ಲಿ ಬ್ಯಾಕ್ ಓಪನರ್ ಆಗಿ ಯಾರಿಗೆ ಸ್ಥಾನ ಎಂಬುದು ಅಂತಿಮವಾಗಿಲ್ಲ. ಕೆ ಎಲ್ ರಾಹುಲ್ ಕಳಪೆ ಫಾರ್ಮ್​ನಲ್ಲಿದ್ದರೆ, ಇತ್ತ ಆಡಿದ ಎರಡು ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್​ರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಹೀಗಿರುವಾಗ ಭಾರತದ ಆರಂಭಿಕ ಸ್ಥಾನವನ್ನು ರಿಷಭ್ ಪಂತ್ ವಹಿಸಿದರೆ ಉತ್ತಮ ಎಂದಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ಭಾರತ-ನ್ಯೂಜಿಲೆಂಡ್ ಚುಟುಕು ಸಮರ; ಶುಭಾರಂಭದ ನಿರೀಕ್ಷೆಯಲ್ಲಿ ರೋಹಿತ್ ಪಡೆ

ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬಗ್ಗೆ ಯಾವುದೇ ಚಿಂತೆಯಿಲ್ಲ. ವಿರಾಟ್ ಕೊಹ್ಲಿ, ಅಂಬಟಿ ರಾಯುಡು ಹಾಗೂ ಧೋನಿ ಈ ಜವಾಬ್ದಾರಿಯನ್ನು ಸುಲಭವಾಗಿ ನಿರ್ವಹಿಸುತ್ತಾರೆ. ಇವರ ಜೊತೆ ದಿನೇಶ್ ಕಾರ್ತಿಕ್​​​ ಒಬ್ಬ ಗ್ರೇಟ್ ಮ್ಯಾಚ್ ಫಿನಿಶರ್. ಅವರ ಆಟವನ್ನು ನಾವು ನೋಡುತ್ತಲೆ ಬಂದಿದ್ದೇವೆ. ಮಧ್ಯಮ ಕ್ರಮಾಂಕದಲ್ಲಿ ಕಾರ್ತಿಕ್​ಗೂ ಸ್ಥಾನ ನೀಡಬೇಕು.

ಇದನ್ನೂ ಓದಿ: ಐಪಿಎಲ್: ಟೂರ್ನಿಯೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ಟಾಪ್ 5 ಬ್ಯಾಟ್ಸ್​ಮನ್​ಗಳು ಇವರೆ ನೋಡಿ!

ವಿಶ್ವಕಪ್​ನಲ್ಲಿ ಮೊದಲ 30 ಓವರ್​​ ವರೆಗೆ ಆರಂಭಿಕರು ವಿಕೆಟ್ ಕಾಯ್ದುಕೊಳ್ಳುವುದು ಮುಖ್ಯವಾಗಿರುತ್ತದೆ. ಅಲ್ಲದೆ ದೊಡ್ಡ ಮೊತ್ತದ ಚೇಸಿಂಗ್ ಇದ್ದು ಪಂದ್ಯ ಗೆಲ್ಲಬೇಕಾದರೆ 50 ಓವರ್​ ವರೆಗೂ ಬ್ಯಾಟ್ ಬೀಸಬೇಕಾಗುತ್ತದೆ. ಹೀಗಾಗಿ ತಂಡದಲ್ಲಿ ಕೆಲವೊಂದು ಮಹತ್ವದ ನಿರ್ಣಯ ತೆಗೆದುಕೊಳ್ಳಬೇಕು. ಇದಕ್ಕಾಗೆ ವಿಶ್ವಕಪ್​ನಲ್ಲಿ ಮೂರು ವಿಕೆಟ್ ಕೀಪರ್​​ಗಳೊಂದಿಗೆ ಭಾರತ ಕಣಕ್ಕಿಳಿಯುವುದು ಒಳ್ಳೆಯದು ಎಂಬ ಅಭಿಪ್ರಾಯ ಗವಾಸ್ಕರ್ ತಿಳಿಸಿದ್ದಾರೆ.
Loading...

First published:February 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...