ಆಸೀಸ್​-ಆಫ್ರಿಕಾ ಭಾರತ ಪ್ರವಾಸಕ್ಕೆ ಡೇಟ್​ ಫಿಕ್ಸ್, ವರ್ಷಾಂತ್ಯದವರೆಗೆ Team India ಫುಲ್​ ಬ್ಯುಸಿ

ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಯೋಜಿಸಲಾಗಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯು ಈ ಬಾರಿಯ ವಿಶ್ವಕಪ್‌ಗೆ ತಯಾರಿ ರೀತಿ ಆಯೋಜಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾಕಪ್ (Asia Cup 2022) ಈ ತಿಂಗಳ ಅಂತ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ (UAE) ಆರಂಭವಾಗಲಿದೆ. ಆದರೆ ಅದರ ನಂತರ ಎರಡು ತಂಡಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಭಾರತ (Team India) ಪ್ರವಾಸ ಮಾಡಲಿವೆ. ಇದೇ ವೇಳೆ ಆರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಅದರ ಬೆನ್ನಲ್ಲೇ, ಐಸಿಸಿ ಟ್ವೆಂಟಿ-20 ವಿಶ್ವಕಪ್ (Icc T20 World Cup) ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವುದರಿಂದ ಟೀಮ್ ಇಂಡಿಯಾದ (Team India) ವೇಳಾಪಟ್ಟಿ ತುಂಬಾ ಬ್ಯುಸಿಯಾಗಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಟಿ20 ಸರಣಿಗಾಗಿ ಆಸ್ಟ್ರೇಲಿಯಾ (Australia) ತಂಡ ಭಾರತಕ್ಕೆ ಬರಲಿದೆ. ಮೂರು ಪಂದ್ಯಗಳ ಸರಣಿಯು ನಾಗ್ಪುರ, ಮೊಹಾಲಿ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ಸರಣಿ ಮುಗಿದ ತಕ್ಷಣ, ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಆಡಲಿದೆ. ಆಪ್ರಿಕಾ ವಿರುದ್ಧ ಮೂರು ಟ್ವೆಂಟಿ-20 ಹಾಗೂ ಮೂರು ಏಕದಿನ ಪಂದ್ಯಗಳೂ ನಡೆಯಲಿವೆ.

ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾದ ಭಾರತ ಪ್ರವಾಸದ ವೇಳಾಪಟ್ಟಿ:

ಭಾರತ Vs ಆಸ್ಟ್ರೇಲಿಯಾ :

ಸೆಪ್ಟೆಂಬರ್ 20, 1ನೇ ಟಿ20 (ಮೊಹಾಲಿ)
ಸೆಪ್ಟೆಂಬರ್ 23, 2ನೇ ಟಿ20 (ನಾಗ್ಪುರ)
ಸೆಪ್ಟೆಂಬರ್ 25, 3ನೇ ಟಿ20 (ಹೈದರಾಬಾದ್)

ಭಾರತ Vs ದಕ್ಷಿಣ ಆಫ್ರಿಕಾ :

ಸೆಪ್ಟೆಂಬರ್ 28, 1ನೇ ಟಿ20 (ತಿರುವನಂತಪುರಂ)
ಅಕ್ಟೋಬರ್ 2, 2 ನೇ ಟಿ20 (ಗುವಾಹಟಿ)
4 ಅಕ್ಟೋಬರ್, 3ನೇ T20I (ಇಂಧೋರ್)

ಭಾರತ Vs ದಕ್ಷಿಣ ಆಫ್ರಿಕಾ :

ಅಕ್ಟೋಬರ್ 6, 1 ನೇ ODI (ಲಕ್ನೋ)
ಅಕ್ಟೋಬರ್ 9, ಎರಡನೇ ODI (ರಾಂಚಿ)
11 ಅಕ್ಟೋಬರ್, ಮೂರನೇ ODI (ದೆಹಲಿ)

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ ವೇಳಾಪಟ್ಟಿ ಪ್ರಕಟ, ಇಂಡೋ-ಪಾಕ್​ ಕದನಕ್ಕೆ ಡೇಟ್ ಫಿಕ್ಸ್

ಟಿ20 ವಿಶ್ವಕಪ್‌ಗೆ ಬಿಸಿಸಿಐ ಸಿದ್ಧತೆ

ಏತನ್ಮಧ್ಯೆ, ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಯೋಜಿಸಲಾಗಿದೆ. ಆದ್ದರಿಂದ ಮುಂಬರುವ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯು ಈ ಬಾರಿಯ ವಿಶ್ವಕಪ್‌ಗೆ ತಯಾರಿ ನಡೆಸುವುದು ಮಹತ್ವದ್ದಾಗಿದೆ. ಈ ಸರಣಿಯ ನಂತರ ಬಿಸಿಸಿಐ ಆಯ್ಕೆ ಸಮಿತಿ ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಏಷ್ಯಾಕಪ್ ಮುಗಿದ ತಕ್ಷಣ ಈ ಸರಣಿಯನ್ನು ಆಯೋಜಿಸಲಾಗಿದೆ. ಹೀಗಾಗಿ ವಿಶ್ವಕಪ್‌ಗೂ ಮುನ್ನ ಮುನ್ನೆಚ್ಚರಿಕೆಯಾಗಿ ರೋಹಿತ್ ಶರ್ಮಾ, ರಿಷಬ್ ಪಂತ್, ಜಸ್ಪ್ರೀತ್ ಬುಮ್ರಾ ಅವರಂತಹ ಪ್ರಮುಖ ಆಟಗಾರರಿಗೆ ಈ ಸರಣಿಯಿಂದ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.

ಏಷ್ಯಾ ಕಪ್ 2022 ವೇಳಾಪಟ್ಟಿ ಪ್ರಕಟ:
 ಇನ್ನು, ಇಂದು ಏಷ್ಯಾ ಕಪ್ 2022ರ ವೇಳಾಪಟ್ಟಿ ಪ್ರಕಟವಾಗಿದ್ದು, ಭಾರತ ಮತ್ತು ಪಾಕಿಸ್ತಾನದ ಪಂದ್ಯಕ್ಕೂ ಡೇಟ್​ ಫಿಕ್ಸ್ ಆಗಿದೆ. ಒಟ್ಟು 6 ತಂಡಗಳು ಕಪ್​ಗಾಗಿ ಸೆಣಸಾಡಲಿದ್ದು, ಈ 6 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಟೂರ್ನಿಯು ಆಗಸ್ಟ್  27 ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ 11ರಂದು ಫೈನಲ್​ ಪಂದ್ಯ ಜರುಗಲಿದೆ. ಸಂಪೂರ್ಣ ವೇಳಾಪಟ್ಟಿಯನ್ನು ಜಯ್​ ಶಾ ಅವರು ಟ್ವೀಟ್​ ಮೂಲಕ ತಿಳಿಸಿದ್ದಾರೆ.
ಭಾರತ - ಪಾಕ್ ಮುಖಾಮುಖಿ:
ಟಿ 20 ವಿಶ್ವಕಪ್​ ಮೊದಲೆ ಈ ಬಾರಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾ ಕಪ್​ನಲ್ಲಿ ಮುಖಾಮುಖಿಯಾಗಲಿದೆ. ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಎದುರು ಸೋತಿರುವ ಟೀಂ ಇಂಡಿಯಾ ಈ ಬಾರಿ ಏಷ್ಯಾಕಪ್​ನಲ್ಲಿ ಪಾಕ್​ ಅನ್ನು ಸೋಲಿಸುವ ಮೂಲಕ ಹಿಂದಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ. ಈವರೆಗಿನ ಅಂಕಿ ಅಂಶಗಳ ಪ್ರಕಾರ ಭಾರತ ತಂಡ ಏಷ್ಯಾಕಪ್​ನಲ್ಲಿ ಪಾಕ್​ ಎದುರು ಹೆಚ್ಚು ಪ್ರಾಬಲ್ಯ ತೋರಿದ್ದು, 12 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು ಬೀಗಿದರೆ ಕೇವಲ 4 ಪಂದ್ಯಗಳಲ್ಲಿ ಸೋಲನ್ನಪ್ಪಿದೆ. ಉಳಿದ ಒಂದು ಪಂದ್ಯ ಡ್ರಾ ಅಲ್ಲಿ ಅಂತ್ಯಗೊಂಡಿದೆ.

Published by:shrikrishna bhat
First published: