ಟೀಂ ಇಂಡಿಯಾದ ವೇಗಿ ದೀಪಕ್ ಚಹಾರ್ (Deepak Chahar) ವಿವಾಹ ಬುಧವಾರ (ಜೂನ್ 1, 2022) ಆಗ್ರಾದಲ್ಲಿ ಜರುಗಿತು. ಜಯ ಭಾರದ್ವಾಜ್ (Jaya Bhardwaj) ಅವರೊಂದಿಗೆ ಚಹಾರ್ ವಿವಾಹವಾದರು. ದೀಪಕ್ ಮತ್ತು ಜಯಾ ಆಗ್ರಾದ ಪಂಚತಾರಾ ಹೋಟೆಲ್ನಲ್ಲಿ ಅದ್ಧೂರಿಯಾಗಿ ವಿವಾಹವಾದರು. ಅಲ್ಲದೇ ನಿನ್ನೆಯಷ್ಟೇ ಆರತಕ್ಷತೆ ಕಾರ್ಯಕ್ರಮವೂ ನಡೆಇದ್ದು, ಮದುವೆ ಮತ್ತು ಆರತಕ್ಷತೆ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಹಾಜರಿದ್ದರು. ಟೀಂ ಇಂಡಿಯಾದ ಆಟಗಾರರು ಸಹ ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. ಇನ್ನು, ದೀಪಕ್ ಚಹಾರ್ ಮತ್ತು ಜಯ ಭಾರದ್ವಾಜ್ ಅವರ ವಿವಾಹದ ಫೋಟೋಗಳು (Photos) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗಿದೆ. ಅಲ್ಲದೇ ಚಹಾರ್ಗೆ ಅಭಿಮಾನಿಗಳಿಂದ ಶುಭಾಯಶಗಳು ಹರಿದುಬರುತ್ತಿದೆ.
ಅದ್ಧೂರಿಯಾಗಿ ನೆರವೇರಿದ ವಿವಾಹ:
ಇನ್ನು, ಕಳೆದ ಜೂನ್ 1ರಂದು ದೀಪಕ್ ಮತ್ತು ಜಯಾ ಅವರ ವಿವಾಹ ಕಾರ್ಯಕ್ರಮ ಆಗ್ರಾದ ಖಾಸಗಿ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ವೇಳೆ ಮದುವೆಗೆ ಆಗಮಿಸುವಾಗ ದೀಪಕ್ ಮತ್ತು ಜಯಾ ನೃತ್ಯ ಮಾಡಿಕೊಂಡು ಬಂದಿದ್ದ ವಿಡಿಯೋ ಎಲ್ಲಡೆ ವೈರಲ್ ಆಗಿತ್ತು. ಇದರ ಜೊತೆಗೆ ದೀಪಕ್ ಅವರ ಸೋದರ ಲೆಗ್ ಸ್ಪಿನ್ನರ್ ರಾಹುಲ್ ಚಹಾರ್ ಮತ್ತು ಸಹೋದರಿ ಮಾಲ್ತಿ ಚಹಾರ್ ನೃತ್ಯ ಮಾಡಿದ್ದು ಈ ವಿಡಿಯೋ ಕೂಡ ವೈರಲ್ ಆಗಿದೆ. ದೀಪಕ್ ಮತ್ತು ಜಯಾ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಐಪಿಎಲ್ 2021 ರಲ್ಲಿ, ದೀಪಕ್ ಸ್ಟೇಡಿಯಂ ಸ್ಟ್ಯಾಂಡ್ಗೆ ಹೋಗಿ ಜಯ ಭಾರದ್ವಾಜ್ ಅವರಿಗೆ ರಿಂಗ್ ತೊಡಿಸುವ ಮೂಲಕ ಪ್ರಪೋಸ್ ಮಾಡಿದ್ದರು.
ಅಣ್ಣನ ಕಾಲೆಳೆದ ತಂಗಿ:
ಹೌದು, ದೀಪಕ್ ಚಹಾರ್ ಮದುವೆಯಾಗಿ ಇದೀಗ ಹನಿಮೂನ್ ಗೆ ಹೋಗುವ ತಯಾರಿಯಲ್ಲಿದ್ದಾರೆ. ಇದರ ನಡುವೆ ಚಹಾರ್ ತಂಗಿ ಮಾಲತಿ ಚಹಾರ್ ಅವರು ಟ್ವಿಟರ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ದೀಪಕ್ ಚಹಾರ್ ಮತ್ತು ಜಯಾ ಭಾರದ್ವಾಜ್ ಜೊತೆಗಿನ ಫೋಟೋ ಹಂಚಿಕೊಂಡು ಇಬ್ಬರಿಗೂ ಶುಭಕೋರುವುದರ ಜೊತೆಗೆ ಅಣ್ಣನ ಕಾಲೆಳೆದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮಾಲತಿ, ‘ಈಗ ಹುಡುಗಿ ನಮ್ಮವರಾಗಿದ್ದಾರೆ... ನಿಮ್ಮಿಬ್ಬರಿಗೂ ಮದುವೆಯ ಶುಭಾಶಯಗಳು. ದೀಪಕ್ ಚಹಾರ್ ಹನಿಮೂನ್ ವೇಳೆ ಸೊಂಟದ ಬಗ್ಗೆ ಗಮನವಿರಲಿ. ಯಾಕೆಂದರೆ ಮುಂದೆ ವಿಶ್ವಕಪ್ ಇದೆ ಎಚ್ಚರ‘ ಎಂದು ಬರೆಯುವ ಮೂಲಕ ಅಣ್ಣನ ಕಾಲೆಳೆದಿದ್ದಾರೆ.
ಇನ್ನು, ವೆಸ್ಟ್ ಇಂಡೀಸ್ ವಿರುದ್ದದ ಟಿ20 ಪಂದ್ಯದ ವೇಳೆ ದೀಪಕ್ ಚಹಾರ್ ಸೋಂಟ ನೋವಿಗೆ ತುತ್ತಾಗಿದ್ದರು. ಇದಾದ ಬಳಿಕ ಐಪಿಎಲ್ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಮಘ್ಸ್ ತಂಡ ಅವರನ್ನು ಬರೋಬ್ಬರಿ 14 ಕೋಟಿಗೆ ಖರೀದಿಸಿತ್ತು. ಆದರೂ ಅವರ ಗಾಯದಿಮದ ಚೇತರಿಸಿಕೊಳ್ಳದ ಕಾರಣ ಐಪಿಎಲ್ 15ನೇ ಆವೃತ್ತಿಯಿಂದ ಸಂಪೂರ್ಣವಾಗಿ ಹೊರಗುಳಿಯಬೇಕಾಯಿತು.
ಇನ್ನೂ ಸಹ ಚಹಾರ್ ಸಂಪೂರ್ಣವಾಗಿ ಫಿಟ್ ಆಗದ ಕಾರಣ ದಕ್ಷಿಣ ಆಫ್ರಿಕಾ ವಿರುದ್ದ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಯಿಂದಲೂ ದೀಪಕ್ ಚಹಾರ್ ಹೊರಗುಳಿದಿದ್ದಾರೆ. ಇದರ ನಡುವೆ ಮುಂಬರುವ ಅಕ್ಟೋಬರ್-ನವೆಂಬರ್ನಲ್ಲಿ ಟಿ20 ವಿಶ್ವಕಪ್ಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದೆ. ದೀಪಕ್ ಚಹಾರ್ ಈ ಬಾರಿಯ ವಿಶ್ವಕಪ್ ನಲ್ಲಿ ಈ ವೇಗಿ ತಂಡಕ್ಕೆ ಸೇರಿಕೊಳ್ಳಿದ್ದಾರೋ ಇಲ್ಲವೋ ಎಂಬ ಪ್ರಶ್ನೆ ಕಾಡತೊಡಗಿದೆ. ಇನ್ನು, ಚಹಾರ್ ಅನುಪಸ್ಥಿತಿ ಟೀಂ ಇಂಡಿಯಾ ತಲೆನೋವು ಹೆಚ್ಚುವಂತೆ ಮಾಡಿdಎ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ