ಐಪಿಎಲ್ 2022ರ (IPL 2022) ಫೈನಲ್ ಪಂದ್ಯ ಮೇ 29 ರಂದು ನಡೆಯಲಿದೆ. ಇದರ ನಂತರ ಜೂನ್ 9 ರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA)) ನಡುವೆ 5 ಟಿ20 ಪಂದ್ಯಗಳ ಸರಣಿ ನಡೆಯಲಿದ್ದು, ಅದಕ್ಕೂ ಮೊದಲು ಭಾರತೀಯ ಕ್ರಿಕೆಟಿಗರೊಬ್ಬರು ವಿವಾಹವಾಗಲಿದ್ದಾರೆ. ಹೌದು ಭಾರತದ ವೇಗದ ಬೌಲರ್ ದೀಪಕ್ ಚಹಾರ್ (Deepak Chahar) ಜೂನ್ 1 ರಂದು ತಮ್ಮ ಗೆಳತಿ ಜಯ ಭಾರದ್ವಾಜ್ (Jaya Bhardwaj) ಅವರನ್ನು ವಿವಾಹವಾಗಲಿದ್ದಾರೆ. ಐಪಿಎಲ್ನ ಕೊನೆಯ ಸೀಸನ್ನಲ್ಲಿ, ದೀಪಕ್ ಚಹಾರ್ ಯುಎಇ ಸ್ಟ್ಯಾಂಡ್ಗೆ ಹೋಗಿ ಜಯ ಭಾರದ್ವಾಜ್ಗೆ ಪ್ರಪೋಸ್ ಮಾಡಿದ್ದರು. ಈ ವಿಡಿಯೋ ಎಲ್ಲಡೆ ಸಖತ್ ವೈರಲ್ ಆಗಿತ್ತು. ಇದೀಗ ಇವರಿಬ್ಬರೂ ವಿವಾಹವಾಗಲಿದ್ದಾರೆ ಎಂದು ಆಧಿಕೃತವಾಗಿ ಬಹಿರಂಗವಾಗಿದೆ.
ವಿವಾಹ ಆಮಂತ್ರಣ ಪ್ರತಿಕೆ ವೈರಲ್:
ದೀಪಕ್ ಚಹಾರ್ ಮತ್ತು ಜಯಾ ಭಾರದ್ವಾಜ್ ಅವರ ಮದುವೆ ಪತ್ರಿಕೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಪಿಎಲ್ 2022 ರ ಮೊದಲು ದೀಪಕ್ ಚಹಾರ್ ಗಾಯಗೊಂಡರು, ಆದ್ದರಿಂದ ಅವರು ಐಪಿಎಲ್ನಲ್ಲಿ ಆಡಲು ಸಾಧ್ಯವಾಗಲಿಲ್ಲ, ಮತ್ತು ಅವರು ದಕ್ಷಿಣ ಆಫ್ರಿಕಾ ಸರಣಿಗಾಗಿ ಆಡುವುದಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಅಕ್ಟೋಬರ್-ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಫಿಟ್ ಆಗಲು ಚಹಾರ್ ಶ್ರಮಿಸುತ್ತಿದ್ದಾರೆ.
ಐಪಿಎಲ್ 2022ರಿಂದ ಹೊರಗುಳಿದ ಚಹಾರ್:
ಐಪಿಎಲ್ 2022 ರ ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಚಹರ್ ಅವರನ್ನು ರೂ 14 ಕೋಟಿಗೆ ಖರೀದಿಸಿತು, ಆದರೆ ಗಾಯದ ಕಾರಣ ಅವರು ಆಡಲು ಸಾಧ್ಯವಾಗಲಿಲ್ಲ, ಇದು ಸಿಎಸ್ಕೆಗೆ ತೀವ್ರ ಹೊಡೆತ ನೀಡಿತು. ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಈ ವರ್ಷ ಪ್ಲೇ-ಆಫ್ಗೆ ಅರ್ಹತೆ ಪಡೆದಿಲ್ಲ. ಕಳೆದ ವರ್ಷ ಸಿಎಸ್ಕೆಯನ್ನು ಐಪಿಎಲ್ ಚಾಂಪಿಯನ್ ಆಗಿಸುವಲ್ಲಿ ದೀಪಕ್ ಚಹಾರ್ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ: IPL 2022 Rohit Sharma: ರೋಹಿತ್ ಶರ್ಮಾ ಹೇಳಿಕೆಗೆ RCB ಅಭಿಮಾನಿಗಳ ಬೇಸರ, ಅಂತದೇನಂದ್ರು ಗೊತ್ತಾ ಹಿಟ್ಮ್ಯಾನ್?
ಕಳೆದ ಬಾರಿ ಮೈದಾನದಲ್ಲಿಯೇ ಪ್ರಪೋಸ್ ಮಾಡಿದ್ದ ಚಹಾರ್:
ಐಪಿಎಲ್ 2021 ರ ಪ್ಲೇಆಫ್ ಹಂತದಲ್ಲಿ ಚಹಾರ್ ಜಯಾ ಅವರಿಗೆ ಪ್ರಪೋಸ್ ಮಾಡಲು ಯೋಜಿಸಿದ್ದರು ಎಂದು ದೀಪಕ್ ಚಹಾರ್ ಅವರ ತಂದೆ ಲೋಕೇಂದ್ರ ಸಿಂಗ್ ಚಹಾರ್ ಅವರು ಬಹಿರಂಗಪಡಿಸಿದ್ದರು. ಆದಾಗ್ಯೂ, CSK ನಾಯಕ ಧೋನಿ ಅವರ ಸಲಹೆಯ ಮೇರೆಗೆ ಅವರು ಪಂಜಾಬ್ ಕಿಂಗ್ಸ್ ವಿರುದ್ಧ CSK ನ ಕೊನೆಯ ಲೀಗ್ ಪಂದ್ಯದ ಸಂದರ್ಭದಲ್ಲಿ ಚಹಾರ್ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದರು.
View this post on Instagram
ಜಯಾ ಭಾರದ್ವಾಜ್ ದೆಹಲಿಯ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಚಾರದಿಂದ ದೂರವಾಗಿರುವುದರಿಂದ ಜಯಾ ಅವರ ಬಗ್ಗೆ ಯಾರಿಗೂ ಹೆಚ್ಚು ತಿಳಿದಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ಅಷ್ಟಾಗಿ ಆ್ಯಕ್ಟಿವ್ ಸಹ ಇಲ್ಲ. ಅವರು MTV ಸ್ಪ್ಲಿಟ್ಸ್ ವಿಲ್ಲಾ ಸೀಸನ್ 2 ರ ವಿಜೇತ ಸಿದ್ಧಾರ್ಥ್ ಭಾರದ್ವಾಜ್ ಅವರ ಕಿರಿಯ ಸಹೋದರಿ. ಸಿದ್ಧಾರ್ಥ್ ಭಾರದ್ವಾಜ್ ವಿಜೆ ಮಾತ್ರವಲ್ಲದೆ ಮಾಡೆಲ್ ಕೂಡ ಆಗಿದ್ದಾರೆ.
ಇದನ್ನೂ ಓದಿ: IPL 2022 CSK vs RR: ಫ್ಲೇ ಆಫ್ ಹಂತಕ್ಕೆ ತಲುಪಿದ ರಾಜಸ್ಥಾನ್, ಅಂತಿಮ ಪಂದ್ಯದಲ್ಲಿಯೂ ಸೋತ ಸಿಎಸ್ಕೆ
ದೀಪಕ್ ಚಹಾರ್ ವೃತ್ತಿ ಜೀವನ:
ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ದೀಪಕ್ ಚಹಾರ್ ಪ್ರದರ್ಶನ ನೋಡುವುದಾದರೆ, ಚಹಾರ್ ಭಾರತಕ್ಕಾಗಿ 20 T20I ಮತ್ತು 7 ODIಗಳನ್ನು ಆಡಿದ್ದಾರೆ ಮತ್ತು ಕ್ರಮವಾಗಿ 26 ಮತ್ತು 10 ವಿಕೆಟ್ಗಳನ್ನು ಪಡೆದಿದ್ದಾರೆ. ಐಪಿಎಲ್ನಲ್ಲಿ 63 ಪಂದ್ಯಗಳನ್ನು ಆಡಿದ್ದಾರೆ ಮತ್ತು 29.19 ಸರಾಸರಿಯಲ್ಲಿ ಒಟ್ಟು 59 ವಿಕೆಟ್ಗಳನ್ನು ಉರುಳಿಸಿದ್ದಾರೆ. ಅವರು ಐಪಿಎಲ್ ಲೀಗ್ನಲ್ಲಿ 2 ಬಾರಿ 4 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅವರು ಬ್ಯಾಟ್ನೊಂದಿಗೆ 79 ರನ್ ಗಳಿಸಿದ್ದಾರೆ ಮತ್ತು ಅವರ ಗರಿಷ್ಠ ಸ್ಕೋರ್ 39 ರನ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ