ಸಾವಿರನೇ ಟೆಸ್ಟ್'ಗೆ ಇಂಗ್ಲೆಂಡ್ ಸಜ್ಜು: ಐತಿಹಾಸಿಕ ಪಂದ್ಯದಲ್ಲಿ ಸೆಣಸಲಿದೆ ಭಾರತ

news18
Updated:August 1, 2018, 9:19 AM IST
ಸಾವಿರನೇ ಟೆಸ್ಟ್'ಗೆ ಇಂಗ್ಲೆಂಡ್ ಸಜ್ಜು: ಐತಿಹಾಸಿಕ ಪಂದ್ಯದಲ್ಲಿ ಸೆಣಸಲಿದೆ ಭಾರತ
news18
Updated: August 1, 2018, 9:19 AM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್ ಕ್ರಿಕೆಟ್ ತಂಡ ಇಂದು ಐತಿಹಾಸಿಕ ದಾಖಲೆ ಸೃಷ್ಟಿಸಲು ರೆಡಿಯಾಗಿದೆ. ಇಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ನಲ್ಲಿ ನಡೆಯಲಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಇಂಗ್ಲೆಂಡ್ ಪಾಲಿಗೆ ಐತಿಹಾಸಿಕ ಟೆಸ್ಟ್ ಪಂದ್ಯವಾಗಿದೆ. 141 ವರ್ಷಗಳ ಹಿಂದೆ ಮೊದಲ ಟೆಸ್ಟ್ ಪಂದ್ಯವನ್ನಾಡಿದ ಇಂಗ್ಲೆಂಡ್ 1000 ಟೆಸ್ಟ್ ಪಂದ್ಯಗಳನ್ನ ಪೂರೈಸಿದ ಮೊದಲ ರಾಷ್ಟ್ರವೆಂಬ ದಾಖಲೆ ಸೃಷ್ಠಿಸಲಿದೆ. ‘

ಇನ್ನು ಇತ್ತ ಟಿ-20 ಸರಣಿ ಗೆದ್ದು, ಏಕದಿನ ಸರಣಿಯಲ್ಲಿ ಮುಗ್ಗರಿಸಿರುವ ಟೀಂ ಇಂಡಿಯಾ ಆಂಗ್ಲರ ನಾಡಿನಲ್ಲಿ ಮತ್ತೊಮ್ಮೆ ಜಯದ ಕಹಳೆ ಊದಲು ತಯಾರಿ ನಡೆಸಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಬಲಾಡ್ಯವಾಗಿದ್ದು, ಟೀಮ್ ಇಂಡಿಯಾ ಆತಿಥೇಯರಿಗೆ ಆಘಾತ ನೀಡುವ ಕನಸು ಕಾಣುತ್ತಿದೆ. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದ್ದು, ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿವೆ.

ಸದ್ಯ ಟೀಮ್ ಇಂಡಿಯಾಕ್ಕೆ ತಲೆನೋವಾಗಿರುವುದು ಆರಂಭಿಕರಾಗಿ ಯಾರನ್ನ ಕಣಕ್ಕಿಳಿಸಬೇಕು ಎಂಬುದು. ಮುರಳಿ ವಿಜಯ್​, ಶಿಖರ್ ಧವನ್​, ಕೆ.ಎಲ್ ರಾಹುಲ್​  ಈ ಮೂವರಲ್ಲಿ ಯಾರು ಇಬ್ಬರು ಎಂಬುದು ನಾಯಕ ಕೊಹ್ಲಿಗೆ ಗೊಂದಲವಾಗಿ ಪರಿಣಮಿಸಿದೆ. ಇನ್ನುಳಿದಂತೆ ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಕಾಣಿಸಿಕೊಳ್ಳಲಿದ್ದು, ಸ್ಥಿರ ಪ್ರದರ್ಶನದ ವಿಶ್ವಾಸವನ್ನು ಮೂಡಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಅಜಿಂಕ್ಯ ರಹಾನೆ ತಮ್ಮ ಜವಾಬ್ದಾರಿ ಅರಿತು ಆಡಬೇಕಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಸಿಕ್ಕ ಅವಕಾಶದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿರುವ ದಿನೇಶ್ ಕಾರ್ತಿಕ್ ತಂಡ ಸೇರಿಕೊಳ್ಳುವ ಅವಕಾಶ ಹೆಚ್ಚಿದೆ. ಜೊತೆಗೆ ಆಲ್ರೌಂಡರ್ ರೂಪದಲ್ಲಿ ಯಾರು ಕಣಕ್ಕೆ ಇಳೀತಾರೆ ಎಂಬ ಚರ್ಚೆ ಆರಂಭವಾಗಿದೆ. ಹಾರ್ದಿಕ್ ಪಾಂಡ್ಯ ಹಾಗೂ ವಿಶ್ವದ ಮಾಜಿ ನಂಬರ್ 1 ಬೌಲರ್ ರವೀಂದ್ರ ಜಡೇಜಾ ನಡುವೆ ಒಂದು ಸ್ಥಾನಕ್ಕಾಗಿ ಫೈಟ್ ನಡೆಯಲಿದೆ. ಇನ್ನು ವೇಗಿಗಳಾದ ಉಮೇಶ್ ಯಾದವ್, ಇಶಾಂತ್ ಶರ್ಮಾ, ಸ್ಪಿಂಗ್ ಬೌಲರ್ ಮೊಹಮ್ಮದ್ ಶಮಿ ತಂಡದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ. ವಾತಾವರಣ ಹಾಗೂ ಪಿಚ್​​ನ ಮರ್ಮ ಅರಿತು ಕೊಹ್ಲಿ ಎಷ್ಟು ಮಂದಿ ಸ್ಪಿನ್ ಬೌಲರ್​​ಗೆ ಅವಕಾಶ ನೀಡಬೇಕು ಎಂಬುದನ್ನು ಆಲೋಚಿಸುತ್ತಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಕುಲ್ದೀಪ್ ಯಾದವ್​​ಗೆ ಆಡುವ 11ರ ಬಳಗದಲ್ಲಿ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ.

ಇನ್ನು ಇಂಗ್ಲೆಂಡ್ ತಂಡಕ್ಕೆ ತವರಿನ ಬೆಂಬಲವಿದ್ದು, ಭರ್ಜರಿ ಪ್ರದರ್ಶನ ನೀಡುವ ಲೆಕ್ಕಾಚಾರ ಹಾಕಿಕೊಂಡಿದೆ. ಅನುಭವಿ ಅಲಿಸ್ಟಾರ್ ಕುಕ್ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಫಾರ್ಮ್​​ಗೆ ಮರಳಿರುವುದು ಆಂಗ್ಲರ ಪಾಳಯದಲ್ಲಿ ಸಂತಸ ಮೂಡಿಸಿದೆ. ಮಧ್ಯಮ ಕ್ರಮಾಂಕದಲ್ಲಿ ನಾಯಕ ಜೋ ರೂಟ್, ಅಬ್ಬರಿಸಬಲ್ಲರು. ಸ್ಟಾರ್ ಪ್ಲೇಯರ್ಸ್ ಜೋಸ್ ಬಟ್ಲರ್ ಹಾಗೂ ಜಾನಿ ಬೇರ್ಸ್ಟ್ರೋ ಸಮಯೋಚಿತ ಆಟ ಆಡಬೇಕಿದೆ. ಇಷ್ಟೆಲ್ಲಾ ಒಂದೆಡೆಯಾದರೆ ಇಂಗ್ಲೆಂಡ್ ತಂಡದ ಬ್ರಹ್ಮಾಸ್ತ್ರ ಈ ಇಬ್ಬರು ಪೇಸರ್ಸ್​. ಸ್ಟುವರ್ಟ್​ ಬ್ರಾಡ್ ಹಾಗೂ ಜೇಮ್ಸ್ ಆ್ಯಂಡರ್ಸನ್​​ ಮೇಲೆ ತಂಡ ಹೆಚ್ಚು ನೆಚ್ಚಿಕೊಂಡಿದೆ. ಜೊತೆಗೆ  ಸ್ಪಿನ್ ಬೌಲರ್ ರೂಪದಲ್ಲಿ ಆದಿಲ್ ರಶೀದ್ ಕಾಣಿಸಿಕೊಳ್ಳಲಿದ್ದು, ಕೊಹ್ಲಿ ಪಡೆ ಕಟ್ಟಿ ಹಾಕಲು ಪ್ಲಾನ್ ಮಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಸವಾಲುಗಳ ನಡುವೆ ಟಾಸ್ ಯಾವ ತಂಡದ ಪರ ವಾಲುತ್ತೇ, ಯಾವ ತಂಡ ಮೊದಲ ದಿನದ ಗೌರವ ತನ್ನದಾಗಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...