• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2023: ಟಾಟಾ Tiago EV ಕಾರ್‌ ಮೇಲೆ ಬಾಲ್ ಬಿದ್ರೆ 5 ಲಕ್ಷ! ಕಾರು ಪ್ಲೆಯರ್ಸ್‌ಗೆ, ಹಣ ಸೋಶಿಯಲ್ ಸರ್ವಿಸ್‌ಗೆ!

IPL 2023: ಟಾಟಾ Tiago EV ಕಾರ್‌ ಮೇಲೆ ಬಾಲ್ ಬಿದ್ರೆ 5 ಲಕ್ಷ! ಕಾರು ಪ್ಲೆಯರ್ಸ್‌ಗೆ, ಹಣ ಸೋಶಿಯಲ್ ಸರ್ವಿಸ್‌ಗೆ!

ಐಪಿಎಲ್​ 2023

ಐಪಿಎಲ್​ 2023

IPL 2023: ಟಾಟಾ ಮೋಟಾರ್ಸ್ ಇತ್ತೀಚೆಗೆ ಪ್ರೀಮಿಯಂ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಟಿಯಾಗೊ EV ಅನ್ನು ಬಿಡುಗಡೆ ಮಾಡಿದೆ. ಕಾರನ್ನು ಮತ್ತಷ್ಟು ಪ್ರಚಾರ ಮಾಡಲು ಮತ್ತು ಅದರ ಮಾರಾಟವನ್ನು ಹೆಚ್ಚಿಸುವ ಸಲುವಾಗಿ IPL 2023 ಆವೃತ್ತಿಯ ಅಧಿಕೃತ ಪಾಲುದಾರಾರಗಿದೆ.

  • News18 Kannada
  • 4-MIN READ
  • Last Updated :
  • New Delhi, India
  • Share this:

ಐಪಿಎಲ್ ವಿಶ್ವದ ಅತ್ಯಂತ ಪ್ರತಿಷ್ಠಿತ ಕ್ರಿಕೆಟ್ ಲೀಗ್ ಆಗಿದೆ. ಈ ಟೂರ್ನಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಐಪಿಎಲ್ (IPL 2023) ಮೂಲಕ ತಮ್ಮ ಉತ್ಪನ್ನಗಳನ್ನು ಹೆಚ್ಚು ಜನರನ್ನು ತಲುಪಲು ಕಂಪನಿಗಳು ಪೈಪೋಟಿ ನಡೆಸುತ್ತವೆ. ಈಗ ಟಾಟಾ ಮೋಟಾರ್ಸ್ ಅದೇ ಕೆಲಸ ಮಾಡುತ್ತಿದೆ. ಟಾಟಾ ಮೋಟಾರ್ಸ್ ಇತ್ತೀಚೆಗೆ ಪ್ರೀಮಿಯಂ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಟಿಯಾಗೊ EV ಅನ್ನು ಬಿಡುಗಡೆ ಮಾಡಿದೆ. ಕಾರನ್ನು ಮತ್ತಷ್ಟು ಪ್ರಚಾರ ಮಾಡಲು ಮತ್ತು ಅದರ ಮಾರಾಟವನ್ನು ಹೆಚ್ಚಿಸುವ ಸಲುವಾಗಿ, ಇದನ್ನು IPL 2023 ಆವೃತ್ತಿಯ ಅಧಿಕೃತ ಪಾಲುದಾರ ಎಂದು ಘೋಷಿಸಲಾಗಿದೆ. ಬಿಸಿಸಿಐ ಮತ್ತು ಟಾಟಾ ಮೋಟಾರ್ಸ್ ನಡುವೆ ಇದು ಸತತ ಆರನೇ ವರ್ಷ ಪಾಲುದಾರಿಕೆಯಾಗಿದೆ.


EV ಕಾರುಗಳ ಬಗ್ಗೆ ಜಾಗೃತಿ:


ಟಾಟಾ ಮೋಟಾರ್ಸ್ IPL-2023 ಅಧಿಕೃತ ಪಾಲುದಾರಿಕೆಯ ಮೂಲಕ EV ಕಾರಿಗಳಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ. ವಿಶೇಷವಾಗಿ ಪ್ರೀಮಿಯಂ ಹ್ಯಾಚ್‌ಬ್ಯಾಕ್ Tiago EVಗಾಗಿ ಐಪಿಎಲ್​ ಪ್ಲಾಟ್‌ಫಾರ್ಮ್ ಅನ್ನು ಬಳಸಲಾಗುತ್ತಿದೆ. ಇದರೊಂದಿಗೆ, ಐಪಿಎಲ್ ನಡೆಯುವ ಎಲ್ಲಾ ಸ್ಥಳಗಳಲ್ಲಿ Tata Tiago EV ಅನ್ನು ಪ್ರದರ್ಶಿಸಲಾಗುತ್ತದೆ.


ಜೊತೆಗೆ ಟಾಟಾ ಮೋಟಾರ್ಸ್ '100 reasons ​ go.ev with Tiago.ev' ಎಂಬ ಅಭಿಯಾನವನ್ನು ನಡೆಸಲಿದೆ. ಈ ಅಭಿಯಾನವು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. Tiago.ev ಎಲೆಕ್ಟ್ರಿಕ್ ಸ್ಟ್ರೈಕರ್ ಅವಾರ್ಡ್ ಹೆಸರಿನಲ್ಲಿ ಪಂದ್ಯದಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರನಿಗೆ ಟಾಟಾ ಮೋಟಾರ್ಸ್ ಟ್ರೋಫಿ ಮತ್ತು ರೂ.1,00,000 ನಗದು ಬಹುಮಾನವನ್ನು ನೀಡಲಿದೆ.


ಇದನ್ನೂ ಓದಿ: PBKS vs KKR Live Score, IPL 2023: ಟಾಸ್​ ಗೆದ್ದ ಕೋಲ್ಕತ್ತಾ ನೈಟ್​ ರೈಡರ್ಸ್​, ಸ್ಯಾಮ್​ ಕರನ್​ ಮೇಲೆ ಹೆಚ್ಚಿನ ನಿರೀಕ್ಷೆ


ಜೊತೆಗೆ Tiago.ev ಎಲೆಕ್ಟ್ರಿಕ್ ಸ್ಟ್ರೈಕರ್ ಆಫ್ ದಿ ಸೀಸನ್ ಪ್ರಶಸ್ತಿ ವಿಜೇತರು ಹೊಚ್ಚಹೊಸ Tata Tiago.ev ಅನ್ನು ಚಾಲನೆ ಮಾಡುತ್ತಾರೆ. ಅಲ್ಲದೆ, ಟಾಟಾ ಮೋಟಾರ್ಸ್ ಕರ್ನಾಟಕದಲ್ಲಿ ಕಾಫಿ ತೋಟಗಳ ಜೈವಿಕ ವೈವಿಧ್ಯತೆಯನ್ನು ಸುಧಾರಿಸಲು ಮರಗಳನ್ನು ನೆಡಲು 5,00,000 ರೂ. ನೀಡಲು ಮುಂದಾಗಿದೆ. ಆದರೆ IPL-2023 ರಲ್ಲಿ ಬ್ಯಾಟ್ಸ್​​ಮನ್​ Tiago.ev ನ ಕಾರಿಗೆ ಚೆಂಡು ಬಡಿದರೆ ಟಾಟಾ ಮೋಟಾರ್ಸ್ ಈ ಕೊಡುಗೆಯನ್ನು ಅಂದರೆ 5 ಲಕ್ಷ ನೀಡುತ್ತದೆ. ಕಾರಿಗೆ ಚೆಂಡು ಎಷ್ಟು ಬಾರಿ ಬಡಿದರೂ ಅಷ್ಟೂ ಹಣವನ್ನು ದಾನ ಮಾಡುವುದಾಗಿ ಘೋಷಿಸಿದೆ.


2018 ರಿಂದ ಐಪಿಎಲ್​ನೊಂದಿಗೆ ಕೈ ಜೋಡಿಸಿದೆ:


ಟಾಟಾ ಇವಿ ಮಾಲೀಕರಿಗೆ ಕಂಪನಿಯ ಬಹುಮಾನಗಳನ್ನು ಸಹ ನೀಡುತ್ತದೆ. ಕಂಪನಿಯು ಪಂದ್ಯಗಳನ್ನು ವೀಕ್ಷಿಸಲು ಟಿಕೆಟ್ ನೀಡುತ್ತದೆ. ಏತನ್ಮಧ್ಯೆ, ಟಾಟಾ ಮೋಟಾರ್ಸ್ 2018 ರಿಂದ ಐಪಿಎಲ್‌ನೊಂದಿಗೆ ಸಂಬಂಧ ಹೊಂದಿದೆ. ಇದುವರೆಗೆ ಇದು ಐಪಿಎಲ್‌ನಲ್ಲಿ ನೆಕ್ಸಾನ್, ಹ್ಯಾರಿಯರ್, ಆಲ್ಟೋಜ್, ಸಫಾರಿ, ಪಂಚ್‌ನಂತಹ ಟಾಪ್ ಮಾಡೆಲ್‌ಗಳನ್ನು ಪ್ರದರ್ಶಿಸಿದೆ. ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸಲು ಟಾಟಾ ಮೋಟಾರ್ಸ್ ಈ ವರ್ಷ IPL ನಲ್ಲಿ Tiago.ev ಅನ್ನು ಹೈಲೈಟ್ ಮಾಡುತ್ತಿದೆ.




ಐಪಿಎಲ್ ಪಾಲುದಾರಿಕೆಯ ಕುರಿತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮಾರ್ಕೆಟಿಂಗ್, ಮಾರಾಟ ಮತ್ತು ಸೇವಾ ಕಾರ್ಯತಂತ್ರದ ಮುಖ್ಯಸ್ಥ ವಿವೇಕ್ ಶ್ರೀವತ್ಸ ಮಾತನಾಡಿ, ‘ಐಪಿಎಲ್ ಅಧಿಕೃತ ಪಾಲುದಾರಿಕೆಯ ಮೂಲಕ ನಾವು ಇವಿಗಳ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಹಾಗಾಗಿ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಸಣ್ಣ ಪಟ್ಟಣಗಳಲ್ಲಿಯೂ ಇವಿಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲು ಐಪಿಎಲ್ ನಮಗೆ ಪ್ರಮುಖವಾಗಿದೆ. ಈ ಪಾಲುದಾರಿಕೆಯು ಭಾರತದಲ್ಲಿ ಇವಿಗಳನ್ನು ವೇಗವಾಗಿ ಅಳವಡಿಸಿಕೊಳ್ಳುವುದನ್ನು ಉತ್ತೇಜಿಸುತ್ತದೆ‘ ಎಂದು ಹೇಳಿದ್ದಾರೆ.

First published: