• Home
  • »
  • News
  • »
  • sports
  • »
  • Rohit Sharma: ರೋಹಿತ್​ ಶರ್ಮಾರನ್ನು ಹಿಂದಿಕ್ಕಿದ ಯುವ ಕ್ರಿಕೆಟಿಗ! ಸಾಧನೆ ಅಂದ್ರೆ ಇದೇ ಅಲ್ವಾ?

Rohit Sharma: ರೋಹಿತ್​ ಶರ್ಮಾರನ್ನು ಹಿಂದಿಕ್ಕಿದ ಯುವ ಕ್ರಿಕೆಟಿಗ! ಸಾಧನೆ ಅಂದ್ರೆ ಇದೇ ಅಲ್ವಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜಗದೀಶನ್ ತಮ್ಮ 5ನೇ ನಿರಂತರ ಲಿಸ್ಟ್-ಎ ಶತಕವನ್ನು ಸಿಡಿಸಿದ್ದು, ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿ ಪಡೆದಿದ್ದಾರೆ.

  • Share this:

ತಮಿಳುನಾಡು (TamilNadu) ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಾರಾಯಣ್ ಜಗದೀಶನ್  (Narayan Jagadeesan) ಇದೀಗ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಫಾರ್ಮ್ ಅನ್ನು ಹೊಂದಿದ್ದು ಅರುಣಾಚಲ ಪ್ರದೇಶದ ವಿರುದ್ಧ ನವೆಂಬರ್ 21 ರಂದು ನಡೆಯುತ್ತಿರುವ ಟೂರ್ನಿಯಲ್ಲಿ ಕೂಡ ಉತ್ತಮ ಪಂದ್ಯಾಟದ ಪ್ರದರ್ಶನ ನೀಡಿದ್ದಾರೆ. ಜಗದೀಶನ್ ತಮ್ಮ 5ನೇ ನಿರಂತರ ಲಿಸ್ಟ್-ಎ ಶತಕವನ್ನು ಸಿಡಿಸಿದ್ದು, ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿ ಪಡೆದಿದ್ದಾರೆ. ಹೀಗೆ ಜಗದೀಶನ್ ಇದು ತಮ್ಮದು ಅಂತ್ಯವಲ್ಲ ಬರೇ ಆರಂಭ ಮಾತ್ರ ಎಂಬ ಸೂಚನೆಯನ್ನು ಕ್ರಿಕೆಟ್ ಅಖಾಡಾದಲ್ಲಿ ನೀಡಿದ್ದಾರೆ.


ಅದ್ಭುತ ಆಟ ಪ್ರದರ್ಶಿಸಿದ ಜಗದೀಶನ್


ಅರುಣಾಚಲದ ಬೌಲಿಂಗ್ ದಾಳಿಯನ್ನು ಚೆನ್ನಾಗಿಯೇ ಬಳಸಿಕೊಂಡ ಜಗದೀಶನ್ ಆಟದ ಮೈದಾನದಲ್ಲಿ ಉತ್ತಮ ಪ್ರದರ್ಶನವನ್ನು ನೀಡುವುದರ ಜೊತೆಗೆ ಎದುರಾಳಿಗಳ ಬೆವರಿಸಿಳಿಸಿಬಿಟ್ಟಿದ್ದಾರೆ ಎಂಬುದು ಸುಳ್ಳಲ್ಲ. 76 ಬಾಲ್‌ಗಳಲ್ಲಿ ಶತಕವನ್ನು ಸಿಡಿಸಿ ಅದ್ಭುತ ಪ್ರದರ್ಶನ ನೀಡಿದ ಜಗದೀಶನ್, ಮುಂದಿನ ಶತಕವನ್ನು ಬರೇ 38 ಬಾಲ್‌ಗಳಲ್ಲಿ ಸಿಡಿಸಿದ್ದಾರೆ ಎಂದರೆ ಅವರ ಬ್ಯಾಟಿಂಗ್ ವೈಖರಿ ಹೇಗಿದೆ ಎಂಬುದು ಯೋಚಿಸುವಂತಹ ವಿಷಯವೇ ಆಗಿದೆ.


ಇದನ್ನೂ ಓದಿ: ಪಾಕಿಸ್ತಾನದಲ್ಲಿ ಶಾಪಿಂಗ್​ ಮಾಡಿದ ಕಿಂಗ್ ಕೊಹ್ಲಿ, ವಿಡಿಯೋ ವೈರಲ್


ಇಂದು ಜಗದೀಶನ್ ಅವರನ್ನು ಹಿಡಿಯುವವರು ಯಾರೂ ಇಲ್ಲ ಎಂಬ ಮಾತುಗಳೇ ಸ್ಟೇಡಿಯಮ್‌ನಲ್ಲಿ ಕೇಳಿಬರುತ್ತಿದೆ. ರೋಹಿತ್ ಶರ್ಮಾ ಅವರ 264 ರನ್‌ಗಳನ್ನು ದಾಟಲು ಜಗದೀಶನ್ ಹೆಚ್ಚುವರಿ 77 ರನ್‌ಗಳನ್ನು ತಮ್ಮ ಖಾತೆಯಲ್ಲಿ ಸೇರಿಸಿದ್ದು ಜೊತೆಗೆ ಲಿಸ್ಟ್-ಎ ಯ ಇಂಗ್ಲೆಂಡ್‌ನ ಅಲಿಸ್ಟೈರ್ ಬ್ರೌನ್ ಹೆಸರಿನಲ್ಲಿದ್ದ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ದಾಖಲೆಯನ್ನು ಮುರಿದಿದ್ದಾರೆ.


ಮ್ಯಾರಥಾನ್ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ ಜಗದೀಶನ್ ಕೈಯಲ್ಲಿ ಹಿಡಿದ ಮಂತ್ರದಂಡದಂತೆ 196.45 ಸ್ಟ್ರೈಕ್ ರೇಟ್‌ನಲ್ಲಿ 141 ಎಸೆತಗಳಲ್ಲಿ 25 ಬೌಂಡರಿ ಹಾಗೂ 15 ಸಿಕ್ಸಿ ಹೊಡೆದು 277 ರನ್‌ಗಳ ಮಳೆಯನ್ನೇ ಸುರಿಸಿದ್ದಾರೆ.


ಜಗದೀಶನ್ ಗಳಿಸಿದ ಸ್ಕೋರ್‌ಗಳೆಷ್ಟು?


ಆಂಧ್ರದ ವಿರುದ್ಧ 114 ರನ್, ಛತ್ತೀಸ್‌ಗಢ ವಿರುದ್ಧ 107 ರನ್, ಗೋವಾ ವಿರುದ್ಧ 168 ರನ್ ಮತ್ತು ಹರಿಯಾಣ ವಿರುದ್ಧ 128 ರನ್ ಗಳಿಸಿದ ನಂತರ ಜಗದೀಶನ್ ಅರುಣಾಚಲ್ ವಿರುದ್ಧ 277 ರನ್ ಸಿಡಿಸಿದ್ದಾರೆ. ದಾಖಲೆಗಳನ್ನು ಮುರಿದ ಆಟಗಾರನೆಂಬ ಹಿರಿಮೆಗೂ ಪಾತ್ರರಾದ ಜಗದೀಶನ್ ಕುಮಾರ ಸಂಗಕ್ಕಾರ, ಅಲ್ವಿರೋ ಪೀಟರ್‌ಸನ್ ಮತ್ತು ದೇವದತ್ ಪಡಿಕ್ಕಲ್ ಅವರನ್ನು ಹಿಂದಿಕ್ಕಿ ಸತತ 5 ಲಿಸ್ಟ್-ಎ ಶತಕಗಳನ್ನು ಸಿಡಿಸಿದ ವಿಶ್ವದ ಮೊದಲ ಕ್ರಿಕೆಟಿಗರಾದರು.


Jagadeesan's 277-run blast has come after his knocks of 114 vs Andhra, Cricket News, Rohith Sharma, Kannada News, Karnataka News, ಐತಿಹಾಸಿಕ 277 ರನ್ ಗಳಿಸುವ ಮೂಲಕ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ, ವಿಶ್ವ ದಾಖಲೆ! ವಿಜಯ್ ಹಜಾರೆ ಟ್ರೋಫಿಯಲ್ಲಿ ತಮಿಳುನಾಡಿನ ಎನ್ ಜಗದೀಸನ್, ಕ್ರಿಕೆಟ್ ನ್ಯೂಸ್, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್
ಸಾಂದರ್ಭಿಕ ಚಿತ್ರ


ಇಂದು ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಸೀಸನ್‌ನಲ್ಲಿ ಜಗದೀಶನ್ ಅವರ ಐದನೇ ಶತಕವಾಗಿರುವುದರಿಂದ ಭಾರತೀಯ ದೇಶೀಯ ಏಕದಿನ ಸ್ಪರ್ಧೆಯ ಒಂದೇ ಋತುವಿನಲ್ಲಿ ತಮ್ಮ ಹೆಸರಿಗೆ ನಾಲ್ಕು ಶತಕಗಳನ್ನು ಹೊಂದಿರುವ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಪೃಥ್ವಿ ಶಾ ಮೊದಲಾದ ಅತಿರಥ ಮಹಾರಥ ಆಟಗಾರರನ್ನೇ ಹಿಂದಿಕ್ಕಿದ್ದಾರೆ. 2008-09ರ ಆವೃತ್ತಿಯ ಟ್ರೋಫಿಯಲ್ಲಿ ಕೊಹ್ಲಿ ನಾಲ್ಕು ಶತಕಗಳನ್ನು ಸಿಡಿಸಿದ್ದರು.


ವಿಜಯ್ ಹಜಾರೆ ಟ್ರೋಫಿಯಲ್ಲಿ ಅತಿ ಹೆಚ್ಚು ಶತಕಗಳು


5* - ಎನ್ ಜಗದೀಶನ್


4 - ವಿರಾಟ್ ಕೊಹ್ಲಿ, ಪೃಥ್ವಿ ಶಾ, ದೇವದತ್ ಪಡಿಕ್ಕಲ್


ಪಟ್ಟಿ-ಎ ಯಲ್ಲಿ ಸತತವಾಗಿ ಹೆಚ್ಚು ಶತಕ ಸಡಿಸಿದ ಆಟಗಾರರು


5* - ಎನ್ ಜಗದೀಶನ್


4 - ಕುಮಾರ್ ಸಂಗಕ್ಕಾರ, ಅಲ್ವಿರೋ ಪೀಟರ್ಸನ್, ದೇವದತ್ ಪಡಿಕ್ಕಲ್


ಗರಿಷ್ಠ ವೈಯಕ್ತಿಕ ಪಟ್ಟಿ-ಎ ಸ್ಕೋರ್


277 - ಎನ್ ಜಗದೀಶನ್ (ತಮಿಳುನಾಡು ವರ್ಸಸ್ ಅರುಣಾಚಲ ಪ್ರದೇಶ), 2022


268 - ಅಲಿಸ್ಟೇರ್ ಬ್ರೌನ್ (ಸರ್ರೆ ವರ್ಸಸ್ ಗ್ಲಾಮೊರ್ಗಾನ್), 2002


264 - ರೋಹಿತ್ ಶರ್ಮಾ (ಭಾರತ ವರ್ಸಸ್ ಶ್ರೀಲಂಕಾ), 2014


257 - ಡಿ'ಆರ್ಸಿ ಶಾರ್ಟ್ (ಪಶ್ಚಿಮ ಆಸ್ಟ್ರೇಲಿಯಾ ವರ್ಸಸ್ ಕ್ವೀನ್ಸ್‌ಲ್ಯಾಂಡ್), 2018


248 - ಶಿಖರ್ ಧವನ್ (ಭಾರತ ಎ ವರ್ಸಸ್ ದಕ್ಷಿಣ ಆಫ್ರಿಕಾ ಎ), 2013

First published: