Mahendra Singh Dhoni: ಧೋನಿ ಎಂದರೆ ನನಗಿಷ್ಟ ಎಂದ ತಮಿಳುನಾಡು ಮುಖ್ಯಮಂತ್ರಿ!

MK Stalin: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಕೂಡ ಭವ್ಯ ಆಚರಣೆಯಲ್ಲಿ ಭಾಗವಹಿಸಿದ್ದರು. ಅವರು “ನಾನು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇಲ್ಲಿ ಬಂದಿಲ್ಲ, ನಾನು ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ಅವರ ಒಬ್ಬ ಅಭಿಮಾನಿಯಾಗಿ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದೇನೆ” ಎಂದು ಬಹಿರಂಗವಾಗಿ ಹೇಳಿದರು.

ಎಂ.ಎಸ್.ಧೋನಿ -ಎಂ.ಕೆ.ಸ್ಟಾಲಿನ್

ಎಂ.ಎಸ್.ಧೋನಿ -ಎಂ.ಕೆ.ಸ್ಟಾಲಿನ್

  • Share this:
    ಸಾಮಾನ್ಯವಾಗಿ ಭಾರತ ಕ್ರಿಕೆಟ್‌ನಲ್ಲಿ ಯಾರು ನಿಮಗೆ ತುಂಬಾ ಇಷ್ಟವಾದ ಆಟಗಾರ ಎಂದು ಕೇಳಿದರೆ, ಬಹುತೇಕರು ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ (Mahendra Singh Dhoni) ಹೆಸರನ್ನು ಹೇಳುತ್ತಾರೆ. ಧೋನಿಯ ಆಟಕ್ಕೆ, ಅವರ ನಾಯಕತ್ವದ ಗುಣಗಳಿಗೆ ಮನಸೋತ ಅಭಿಮಾನಿಗಳಿಗೇನು ಕೊರತೆ ಇಲ್ಲ. ಇಲ್ಲೊಂದು ರಾಜ್ಯದ ಮುಖ್ಯಮಂತ್ರಿಯವರು ಸಹ ಧೋನಿಯ ದೊಡ್ಡ ಅಭಿಮಾನಿ ಎಂದು ಅವರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ ನೋಡಿ. ಕೆಲವು ತಿಂಗಳುಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ (Chennai Super KIngs) ಐಪಿಎಲ್ ತಂಡವು 2021 ಐಪಿಎಲ್ (IPL2021) ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದು ನಮಗೆಲ್ಲಾ ತಿಳಿದಿರುವ ವಿಷಯವೇ ಆಗಿದೆ. ಆದರೆ ಚೆನ್ನೈನಲ್ಲಿ ಕಳೆದ ಶನಿವಾರದಂದು ತಮ್ಮ ಐಪಿಎಲ್ 2021 ಪ್ರಶಸ್ತಿ ಗೆಲುವನ್ನು ತುಂಬಾನೇ ಭವ್ಯವಾಗಿ ತಂಡವು ವಿಜಯೋತ್ಸವ ಆಚರಿಸಿದೆ.

    ಈ ಕಾರ್ಯಕ್ರಮದಲ್ಲಿ ರಾಜಕೀಯ ವ್ಯಕ್ತಿಗಳು ಸಹ ಭಾಗವಹಿಸಿದ್ದರು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (MK Stalin) ಕೂಡ ಭವ್ಯ ಆಚರಣೆಯಲ್ಲಿ ಭಾಗವಹಿಸಿದ್ದರು. ಅವರು “ನಾನು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಇಲ್ಲಿ ಬಂದಿಲ್ಲ, ನಾನು ಸಿಎಸ್‌ಕೆ ನಾಯಕ ಎಂ.ಎಸ್.ಧೋನಿ ಅವರ ಒಬ್ಬ ಅಭಿಮಾನಿಯಾಗಿ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದೇನೆ” ಎಂದು ಬಹಿರಂಗವಾಗಿ ಹೇಳಿದರು.

    ಇಷ್ಟಕ್ಕೆ ಮಾತು ನಿಲ್ಲಿಸದ ಮುಖ್ಯಮಂತ್ರಿಯವರು “ನಾನು ಮಾತ್ರವಲ್ಲ, ನನ್ನ ದಿವಂಗತ ತಂದೆ ಮತ್ತು ಮಾಜಿ ಸಿಎಂ ಅಗಿದ್ದಂತಹ ಎಂ.ಕರುಣಾನಿಧಿ ಸಹ ಧೋನಿ ಅವರ ದೊಡ್ಡ ಅಭಿಮಾನಿಯಾಗಿದ್ದರು” ಎಂದು ಸ್ಟಾಲಿನ್ ಈ ಸಂದರ್ಭದಲ್ಲಿ ಹೇಳಿದರು.

    “ಎನ್. ಶ್ರೀನಿವಾಸನ್ ಅವರು ನನ್ನನ್ನು ಮುಖ್ಯಮಂತ್ರಿ ಎಂದು ಕರೆದರೂ, ನಾನು ಧೋನಿಯ ಅಭಿಮಾನಿಯಾಗಿ ಬಂದೆ ಮತ್ತು ನನ್ನ ತಂದೆ ಕರುಣಾನಿಧಿ ಕೂಡ ಧೋನಿಯ ದೊಡ್ಡ ಅಭಿಮಾನಿಯಾಗಿದ್ದರು. ಅವರ ರಾಜ್ಯ ಜಾರ್ಖಂಡ್ ಆದರೆ, ಅವರು ಈಗ ತಮಿಳುನಾಡಿನ ಪ್ರೀತಿಯ ಹುಡುಗನಂತೆ ಆಗಿದ್ದಾರೆ. ಅವರು ಯಾವಾಗಲೂ ಶಾಂತ ಚಿತ್ತರಾಗಿರುತ್ತಾರೆ ಮತ್ತು ಕಷ್ಟದ ಸಮಯವನ್ನು ಹೇಗೆ ಎದುರಿಸಬೇಕೆಂದು ಚೆನ್ನಾಗಿ ಅರಿತುಕೊಂಡಿದ್ದಾರೆ" ಎಂದು ಸ್ಟಾಲಿನ್ ಹೇಳಿದರು.



    ಇದನ್ನು ಓದಿ: FB Messenger ಇಂದ ಕಾಲ್ ಬಂದ್ರೆ ಯಾವ್ದೇ ಕಾರಣಕ್ಕೂ ರಿಸೀವ್ ಮಾಡ್ಬೇಡಿ, ಇದ್ರಲ್ಲಿ ಸಿಕ್ಕಿಸೋ ದೊಡ್ಡ ಗ್ಯಾಂಗ್ ಇದೆ, ಜೋಕೆ!

    "ಅವರು ಉತ್ತಮ ನಾಯಕರಾಗಿ ತಮ್ಮ ತಂಡವನ್ನು ಮುನ್ನಡೆಸುವಲ್ಲಿ ತುಂಬಾನೇ ಯಶಸ್ಸನ್ನು ಕಂಡಿದ್ದಾರೆ. ಈ ವರ್ಷದ ಐಪಿಎಲ್ ಗೆದ್ದಿದ್ದಕ್ಕಾಗಿ ನಾನು ಅವರನ್ನು ಮತ್ತು ಸಿಎಸ್‌ಕೆಯ ಸಂಪೂರ್ಣ ಫ್ರಾಂಚೈಸಿಯನ್ನು ಈ ಮೂಲಕ ಅಭಿನಂದಿಸುತ್ತೇನೆ. ಧೋನಿ ಇನ್ನೂ ಅನೇಕ ಸೀಸನ್‌ಗಳಲ್ಲಿ ಸಿಎಸ್‌ಕೆ ಪರ ಆಡುವುದನ್ನು ನೋಡಲು ನಾವು ನಿಜವಾಗಿಯೂ ಬಯಸುತ್ತೇವೆ" ಎಂದು ಅವರು ಹೇಳಿದರು.

    ನಂತರ ಮಾತನಾಡಿದ ಧೋನಿ, ಚೆನ್ನೈನಲ್ಲಿಯೇ ತಮ್ಮ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಲು ಬಯಸುವುದಾಗಿ ಹೇಳಿದರು. "ನಾನು ಯಾವಾಗಲೂ ನನ್ನ ಕ್ರಿಕೆಟ್ ಅನ್ನು ಯೋಜಿಸಿದ್ದೇನೆ. ನನ್ನ ಕೊನೆಯ ತವರು ಆಟ, ಏಕದಿನ ಪಂದ್ಯ ರಾಂಚಿಯಲ್ಲಿ ನಡೆದಿತ್ತು. ನನ್ನ ಕೊನೆಯ ಟಿ20 ಪಂದ್ಯ ಚೆನ್ನೈನಲ್ಲಿ ನಡೆಯಲಿದೆ ಎಂದು ಆಶಿಸುತ್ತೇನೆ. ಅದು ಮುಂದಿನ ವರ್ಷವೇ ಅಥವಾ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಯಾವಾಗ ಎನ್ನುವುದರ ಬಗ್ಗೆ ನನಗೆ ನಿಜವಾಗಿಯೂ ತಿಳಿದಿಲ್ಲ" ಎಂದು ಧೋನಿ ಹೇಳಿದರು.

    ಇದನ್ನು ಓದಿ: Tirupati Rain: ರಣ ಮಳೆ ಆರ್ಭಟದಿಂದ ತಿಮ್ಮಪ್ಪನಿಗೂ ತಪ್ಪದ ಸಂಕಷ್ಟ: ಸದ್ಯಕ್ಕೆ ತಿರುಪತಿಗೆ ಹೋಗುವ ಆಸೆ ಬೇಡ!

    ಸಿಎಸ್‌ಕೆ ತಂಡವು 2021ರ ಐಪಿಎಲ್ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿ ನಾಲ್ಕನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತ್ತು. ಸಿಎಸ್‌ಕೆ ತಂಡವು ಇಂಡಿಯಾ ಸಿಮೆಂಟ್ಸ್ ಒಡೆತನದಲ್ಲಿದೆ, ಇದು ಬಿಸಿಸಿಐನ ಮಾಜಿ ಮುಖ್ಯಸ್ಥ ಎನ್. ಶ್ರೀನಿವಾಸನ್ ನೇತೃತ್ವದಲ್ಲಿದೆ.
    Published by:Harshith AS
    First published: