• Home
  • »
  • News
  • »
  • sports
  • »
  • T20 WC 2022 AUS vs NZ: ಇಂದಿನಿಂದ ಸೂಪರ್ 12 ಹಂತ ಆರಂಭ, ಮೊದಲ ಪಂದ್ಯದಲ್ಲಿ ಆಸೀಸ್​-ಕಿವೀಸ್​ ಹಣಾಹಣಿ

T20 WC 2022 AUS vs NZ: ಇಂದಿನಿಂದ ಸೂಪರ್ 12 ಹಂತ ಆರಂಭ, ಮೊದಲ ಪಂದ್ಯದಲ್ಲಿ ಆಸೀಸ್​-ಕಿವೀಸ್​ ಹಣಾಹಣಿ

AUS vs NZ

AUS vs NZ

T20 WC 2022 AUS vs NZ: ಇಂದಿನಿಂದ ಟಿ20 ವಿಶ್ವಕಪ್​ 2022ರ ಸೂಪರ್ 12 ಹಂತ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಆಸ್ಟ್ಋಏಲಿಯಾ ಮತ್ತು ರನ್ನರ್ ಅಫ್ ನ್ಯೂಜಿಲ್ಯಾಂಡ್​ ಸೆಣಸಾಡಲಿದೆ.

  • Share this:

2021 ರಲ್ಲಿ ದುಬೈನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ (AUS vs NZ) ನಡುವಿನ ಫೈನಲ್ ಪಂದ್ಯದಂತೆಯೇ ಟಿ 20 ವಿಶ್ವಕಪ್‌ನ ಸೂಪರ್ 12 ಲೆಗ್ ಶನಿವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (SCG) ಪ್ರಾರಂಭವಾಗಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪಂದ್ಯಕ್ಕೂ ಮಳೆ ಕಾಟ ನೀಡುವ ಸಾಧ್ಯತೆ ಇದೆ. ಪಂದ್ಯಕ್ಕೆ ಶೇಕಡಾ 90 ರಷ್ಟು ಮಳೆಯಾಗುವ ನಿರೀಕ್ಷೆಯಿದೆ. ಸೂಪರ್ 12 ಹಂತದ ಎರಡನೇ ಪಂದ್ಯ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ (ENG vs AFG) ನಡುವೆ ನಡೆಯಲಿದೆ.


ಪಂದ್ಯದ ವಿವರ:


ಇನ್ನು, ಟಿ20 ವಿಶ್ವಕಪ್‌ನ ಸೂಪರ್ 12 ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಇಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಮುಖಾಮುಖಿ ಆಗಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 12:30 ರಿಂದ ನಡೆಯಲಿದೆ. ಟಾಸ್ ಅರ್ಧ ಗಂಟೆ ಮುಂಚಿತವಾಗಿ ಅಂದರೆ ಮಧ್ಯಾಹ್ನ 12:00 ಗಂಟೆಗೆ ನಡೆಯಲಿದೆ. ಪಂದ್ಯದ ನೇರ ಪ್ರಸಾರವನ್ನು ಭಾರತದಲ್ಲಿನ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಮತ್ತು ಲೈವ್ ಸ್ಟ್ರೀಮಿಂಗ್ ಅನ್ನು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ನೋಡಬಹುದು.


ಪಂದ್ಯಕ್ಕಾಗಿ ಕಿವೀಸ್​ ವೇಟಿಂಗ್​:


ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, 'ನಾವು ಪಿಚ್ ಅನ್ನು ಸಹ ನೋಡಿಲ್ಲ. ಶುಕ್ರವಾರ ಬೆಳಗ್ಗೆ ಬಂದಿದ್ದೇವೆ. ನಾವು ಆಡುವ XI ಅನ್ನು ಇನ್ನೂ ಖಚಿತಪಡಿಸುವುದಿಲ್ಲ, ಏಕೆಂದರೆ ಪಂದ್ಯವು ಕಡಿಮೆ ಓವರ್‌ಗಳಾಗಿದ್ದರೆ, ತಂಡದಲ್ಲಿ ಬದಲಾವಣೆಯ ಸಾಧ್ಯತೆಗಳಿವೆ. ಆದ್ದರಿಂದ ನಾವು ಕಾಯಬೇಕಾಗಿದೆ‘ ಎಂದು ಹೇಳಿದ್ದಾರೆ.


ಇದನ್ನೂ ಓದಿ: T20 World Cup 2022 IND vs PAK: ಪಾಕಿಸ್ತಾನದಲ್ಲಿ ರೋಹಿತ್ ಶರ್ಮಾಗೆ ಹೀಗೆ ಕರೆಯುತ್ತಾರಂತೆ, ಕೇಳಿದ್ರೆ ಅಚ್ಚರಿ ಪಡ್ತೀರಾ!


ಆಸ್ಟ್ರೇಲಿಯದ ನಾಯಕ ಆರನ್ ಫಿಂಚ್ ಪ್ರಕಾರ, ಶನಿವಾರದ ಪಂದ್ಯಾವಳಿಯ ಮೊದಲ ಪಂದ್ಯವು ಕಡಿಮೆ ಓವರ್‌ಗಳಲ್ಲಿ ಕೊನೆಗೊಂಡರೆ ಹಾಲಿ ಚಾಂಪಿಯನ್‌ಗಳು ಮತ್ತು ಆತಿಥೇಯರು ತಮ್ಮ ಬ್ಯಾಟಿಂಗ್ ತಂತ್ರವನ್ನು ಬದಲಾಯಿಸಬೇಕಾಗಬಹುದು ಎಂದಿದ್ದಾರೆ.


ಪಂದ್ಯಕ್ಕೆ ಮಳೆ ಕಾಟ:


ಇನ್ನು, ಸಿಡ್ನಿ ಹವಾಮಾನ ಇಲಾಖೆಯ ಪ್ರಕಾರ, ಶನಿವಾರ ಸಂಜೆ 80 ಪ್ರತಿಶತದಷ್ಟು ಮಳೆಯಾಗುವ ನಿರೀಕ್ಷೆಯಿದೆ. 90 ರಷ್ಟು ಮಳೆ ಮಧ್ಯಾಹ್ನ ಮತ್ತು ಸಂಜೆಯ ನಂತರ ನಿರೀಕ್ಷಿಸಲಾಗಿದೆ. ಇದಲ್ಲದೇ ಸಿಡಿಲು, ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಭಾನುವಾರ ಭಾರತ-ಪಾಕಿಸ್ತಾನ ನಡುವೆ ನಡೆದ ಪಂದ್ಯದ ಮೇಲೂ ಮಳೆಯ ಛಾಯೆ ಆವರಿಸಿದೆ. ಭಾನುವಾರವೂ ಹಗಲಿನಲ್ಲಿ ಶೇ.90ರಷ್ಟು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.


ಟಿ20 ವಿಶ್ವಕಪ್ ಗುಂಪಿನ ಪಂದ್ಯಗಳಲ್ಲಿ ಯಾವುದೇ ಮೀಸಲು ದಿನವಿಲ್ಲ. ಆದಾಗ್ಯೂ, ಮೀಸಲು ದಿನವು ಸೆಮಿಫೈನಲ್ ಮತ್ತು ಫೈನಲ್‌ನಲ್ಲಿದೆ. ಮತ್ತೊಂದೆಡೆ, ನ್ಯೂಜಿಲೆಂಡ್ ನಾಯಕ ಕೆನ್ ವಿಲಿಯಮ್ಸನ್ ತಮ್ಮ ತಂಡವು 20 ಓವರ್‌ಗಳಿಗೆ ಅನುಗುಣವಾಗಿ ತಯಾರಿ ನಡೆಸುತ್ತಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: T20 WC 2022 IND vs PAK: ಭಾರತ-ಪಾಕ್ ಪಂದ್ಯದ ಮೊದಲು ಜನ ಗೂಗಲ್‌ನಲ್ಲಿ ಏನು ಹುಡುಕುತ್ತಿದ್ದಾರೆ? ಬಹಿರಂಗವಾಯ್ತು ರಹಸ್ಯ


ಉಭಯ ತಂಡಗಳು ಇಂತಿವೆ:


ಆಸ್ಟ್ರೇಲಿಯಾ: ಆರನ್ ಫಿಂಚ್ (ಸಿ), ಆಷ್ಟನ್ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಕೇನ್ ರಿಚರ್ಡ್ಸನ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೂ ವೇಡ್ (wk), ಡೇವಿಡ್ ವಾರ್ನರ್ ಮತ್ತು ಆಡಮ್ ಝಂಪಾ.


ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಿಮ್ ಸೌಥಿ, ಇಶ್ ಸೋಧಿ, ಮಿಚೆಲ್ ಸ್ಯಾಂಟ್ನರ್, ಗ್ಲೆನ್ ಫಿಲಿಪ್ಸ್, ಜಿಮ್ಮಿ ನೀಶಮ್, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಮಾರ್ಟಿನ್ ಗುಪ್ಟಿವ್, ಲಾಚ್ಲಾನ್ ಫರ್ಗುಸನ್, ಡೆವೊನ್ ಕಾನ್ವೇ (wk), ಮಾರ್ಕ್ ಚಾಪ್ಮನ್, ಮೈಕಲ್ ಬ್ರೇಸ್ವೆಲ್, ಟ್ರೆಂಟ್ ಬೋಲ್ಟ್‌ವೆಲ್, ಮತ್ತು ಫಿನ್ ಅಲೆನ್.

Published by:shrikrishna bhat
First published: