• Home
  • »
  • News
  • »
  • sports
  • »
  • T20 World Cup: ವರ್ಲ್ಡ್​​ಕಪ್​ನಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ, ಹೀಗೆ ಮುಂದುವರೆದ್ರೆ ಸೆಮಿಫೈನಲ್​ ಕಥೆ ಗೋತಾ!

T20 World Cup: ವರ್ಲ್ಡ್​​ಕಪ್​ನಲ್ಲಿ ಪಾಕಿಸ್ತಾನ ಕಳಪೆ ಪ್ರದರ್ಶನ, ಹೀಗೆ ಮುಂದುವರೆದ್ರೆ ಸೆಮಿಫೈನಲ್​ ಕಥೆ ಗೋತಾ!

ಪಾಕಿಸ್ತಾನ ತಂಡ

ಪಾಕಿಸ್ತಾನ ತಂಡ

ಐಸಿಸಿ ಪುರುಷರ T20 ವಿಶ್ವಕಪ್ (T20 World Cup) 2022 ರ ಸೆಮಿ-ಫೈನಲ್‌ (Semi Final) ನಲ್ಲಿ ಗ್ರೂಪ್ 2 ರ ಆರು ತಂಡಗಳು ಜೋಡಿ ಸ್ಥಾನಗಳಿಗಾಗಿ ಸ್ಪರ್ಧಿಸುವುದರಿಂದ ಪಾಕ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.

  • Trending Desk
  • Last Updated :
  • Karnataka, India
  • Share this:

ಎರಡು ಸುತ್ತಿನ ಪಂದ್ಯಗಳ ನಂತರ ಗ್ರೂಪ್ 2  ರಲ್ಲಿ (Group 2) ಅರ್ಹತಾ ತಂಡಗಳ ಸ್ಥಾನದಲ್ಲಿ ಭಾರತ (India) ವು ಮುಖ್ಯ ಸ್ಥಾನದಲ್ಲಿದ್ದು ಪಾಕಿಸ್ತಾನ (Pakistan) ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವಂತೆ ಕಾಣುತ್ತಿದೆ. ಆದರೆ ಐಸಿಸಿ ಪುರುಷರ T20 ವಿಶ್ವಕಪ್ (T20 World Cup) 2022 ರ ಸೆಮಿ-ಫೈನಲ್‌ (Semi Final) ನಲ್ಲಿ ಗ್ರೂಪ್ 2 ರ ಆರು ತಂಡಗಳು ಜೋಡಿ ಸ್ಥಾನಗಳಿಗಾಗಿ ಸ್ಪರ್ಧಿಸುವುದರಿಂದ ಪಾಕ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಪಾಕ್‌ ಆಡಲು ಹೇಗೆ ಅರ್ಹತೆ ಗಳಿಸಲಿದೆ ಎಂಬುದನ್ನು ತಿಳಿದುಕೊಳ್ಳೋಣ


ಸೆಮಿಫೈನಲ್ ತಲುಪಲು ಮುನ್ನಡೆಯಲ್ಲಿರುವ ತಂಡಗಳು


ಭಾರತ ತನ್ನ ಆರಂಭಿಕ ಎರಡು ಪಂದ್ಯಗಳಿಂದ ಗರಿಷ್ಠ ನಾಲ್ಕು ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಸೆಮಿ-ಫೈನಲ್‌ಗೆ ಅರ್ಹತೆ ಪಡೆಯುವ ಪ್ರಮುಖ ಸ್ಥಾನದಲ್ಲಿದೆ. ನಿವ್ವಳ ರನ್ ರೇಟ್ +1.425 ಬಲವಾದ ಆರಂಭವನ್ನು ಸೂಚಿಸುತ್ತಿದ್ದು ರೋಹಿತ್ ಶರ್ಮಾ ತಂಡವನ್ನು ಅಗ್ರ ಎರಡು ಸ್ಥಾನದಿಂದ ತಡೆಯಲು ಅನಿರೀಕ್ಷಿತ ಬದಲಾವಣೆಯನ್ನೊಡ್ಡುವ ಸಾಧ್ಯತೆ ಇದೆ.


ವಿಶ್ವಕಪ್​ನಲ್ಲಿಮ ಪಾಕ್​ ಕಳಪೆ ಪ್ರದರ್ಶನ!


ದಕ್ಷಿಣ ಆಫ್ರಿಕಾ-ಜಿಂಬಾಬ್ವೆ ಪಂದ್ಯದಲ್ಲಿ ಮಳೆ ಅಡಚಣೆಯನ್ನುಂಟು ಮಾಡಿದ್ದು ಯಾವುದೇ ಫಲಿತಾಂಶಗಳಿಲ್ಲದೆ ಎರಡೂ ತಂಡಗಳು ಮೂರು ಆಟಗಳನ್ನು ಆಡಬೇಕಾಗಿದ್ದು ಭಾರತದಿಂದ ಒಂದು ಅಂಕ ಹಿನ್ನಡೆಯಲ್ಲಿದೆ ಮತ್ತು ಇದು ಕೊನೆಯ ಹಂತದಲ್ಲಿ ಎಲ್ಲಾ ರೀತಿಯ ಭಿನ್ನತೆಗಳನ್ನುಂಟು ಮಾಡಲಿದೆ.


ಪಾಕಿಸ್ತಾನದ ವಿರುದ್ಧ ಜಿಂಬಾಬ್ವೆಯ ಅದ್ಭುತ ಗೆಲುವು ಅವರಿಗೆ ಅವಕಾಶವನ್ನು ನೀಡಿದೆಯಾದರೂ ಜಿಂಬಾಬ್ವೆ ತಂಡವು ಇನ್ನೂ ಕನಿಷ್ಠ ಎರಡು ಪಂದ್ಯಗಳನ್ನಾದರೂ ಗೆಲ್ಲಬೇಕಾಗಬಹುದು ಮತ್ತು ಉಳಿದಿರುವ ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲಬೇಕು. ಗುರುವಾರ ಬಾಂಗ್ಲಾದೇಶದ ವಿರುದ್ಧ 104 ರನ್‌ಗಳ ಗೆಲುವಿನಿಂದ ರಚಿಸಲಾದ ರನ್ ರೇಟ್ +5.200 ನಿಂದಾಗಿ ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾ ಉತ್ತಮ ಮಾರ್ಜಿನ್ ಅನ್ನು ಹೊಂದಿದೆ ಎಂಬುದನ್ನು ಸಂಕೇತಿಸಿದೆ.


ಪಾಕ್‌ಗೆ ಗೆಲ್ಲುವ ಅವಕಾಶ ಇದೆಯೇ?


ಪಾಕ್ ಸೆಮಿಫೈನಲ್‌ಗೆ ತಲುಪಬೇಕು ಎಂದಾದಲ್ಲಿ ವಿಶೇಷವಾದ ಅವಕಾಶವನ್ನೊದಗಿಸಬೇಕಾಗುತ್ತದೆ. ಅಂತಿಮ ನಾಲ್ಕನೇ ಸ್ಥಾನವನ್ನು ತಲುಪುವುದು ಅಷ್ಟು ಸುಲಭವಾಗಿಲ್ಲ. ಈಗ ಪಾಕ್‌ನ ಮುಂದಿರುವ ಉಳಿದ ಮೂರು ಪಂದ್ಯಗಳಾದ ಭಾನುವಾರ ನೆದರ್‌ಲ್ಯಾಂಡ್‌ನೊಂದಿಗೆ ಆಡುವ ಪಂದ್ಯ, ಗುರುವಾದ ದಕ್ಷಿಣ ಆಫ್ರಿಕಾದೊಂದಿಗಿನ ಹಣಾಹಣಿ ಹಾಗೂ ಭಾನುವಾರ ಅಂದರೆ ನವೆಂಬರ್ 6 ರಂದು ಬಾಂಗ್ಲಾದೇಶದೊಂದಿಗಿನ ಸಮರದಲ್ಲಿ ಗೆಲ್ಲುವುದಾಗಿದೆ.


ಇದನ್ನೂ ಓದಿ: ಕಿಂಗ್ ಕೊಹ್ಲಿ ಕಂಡು ಆಸ್ಟ್ರೇಲಿಯಾದ ಮಾಜಿ ಆಟಗಾರ ಮಾಡಿದ್ದೇನು? ವಿಡಿಯೋ ಸಿಕ್ಕಾಪಟ್ಟೆ ವೈರಲ್!


ಆದರೆ ಇದು ಪಾಕ್‌ನ ಕೈಯಲ್ಲಿಲ್ಲ ಎಂಬ ಮಾತೂ ಇದೆ. ಭಾರತ, ಜಿಂಬಾಬ್ವೆ ಅಥವಾ ದಕ್ಷಿಣ ಆಫ್ರಿಕಾ ಇವು ಮೂರರಲ್ಲಿ ಯಾವುದೇ ಎರಡು ತಂಡವು ತಮ್ಮ ಉಳಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿದರೆ ಆರು ಅಂಕಗಳಿಗಿಂತ ಹೆಚ್ಚಿನ ಪಾಯಿಂಟ್ ಗಳಿಸುತ್ತಾರೆ. ಈ ಅಂಕವು ಪಾಕ್‌ ತಲುಪಬಹುದಾದ ಗರಿಷ್ಟ ಅಂಕಕ್ಕೆ ಸಮನಾಗಿದೆ.


ಪ್ರಮುಖ ಮುಂಬರಲಿರುವ ಪಂದ್ಯಗಳು


1) ಬಾಂಗ್ಲಾದೇಶ ವರ್ಸಸ್ ಜಿಂಬಾಬ್ವೆ ಅಕ್ಟೋಬರ್ 30 ಭಾನುವಾರ 


ಇವೆರಡರಲ್ಲಿ ಯಾವ ತಂಡ ಗೆಲುವು ಸಾಧಿಸಿದರೂ ಉಳಿದ ಎರಡು ಪಂದ್ಯಗಳಲ್ಲಿ ಅರ್ಹತೆ ಗಳಿಸಲು ಹೋರಾಡುವುದು ಖಚಿತವಾಗಿವೆ. ಎರಡೂ ತಂಡಗಳ ಬೌಲಿಂಗ್ ಸಾಮರ್ಥ್ಯ ಆಕರ್ಷಕವಾಗಿದ್ದು ನಿಜಕ್ಕೂ ಇದು ಸ್ಪರ್ಧಾತ್ಮಕ ಮುಖಾಮುಖಿ ಎಂದೆನಿಸಿದೆ.


2) ಭಾರತ ವರ್ಸಸ್ ದಕ್ಷಿಣ ಆಫ್ರಿಕಾ - ಭಾನುವಾರ 30 ಅಕ್ಟೋಬರ್


ಎರಡೂ ತಂಡಗಳ ಮುಖಾಮುಖಿಯು ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಸಂಚಲನವನ್ನೇ ಉಂಟುಮಾಡಲಿದ್ದು, ಎರಡೂ ತಂಡಗಳು ಅರ್ಹತೆ ಪಡೆಯುವ ಸಾಧ್ಯತೆ ಇದೆ.


3) ಪಾಕಿಸ್ತಾನ v ದಕ್ಷಿಣ ಆಫ್ರಿಕಾ - ಗುರುವಾರ 03 ನವೆಂಬರ್


ಹಿಂದಿನ ಪಂದ್ಯಗಳಲ್ಲಿನ ಫಲಿತಾಂಶಗಳನ್ನು ಅವಲಂಬಿಸಿ, ದಕ್ಷಿಣ ಆಫ್ರಿಕಾದೊಂದಿಗೆ ಪಾಕಿಸ್ತಾನದ ಮುಖಾಮುಖಿಯು ಎರಡೂ ತಂಡದವರಿಗೆ ಮುಖ್ಯವಾಗಿದೆ. ಇದು ಅರ್ಹತೆಯ ಸಂದರ್ಭವಿಲ್ಲದೆಯೇ ವಿಶ್ವದ ಎರಡು ಉತ್ತಮ ತಂಡಗಳ ನಡುವಿನ ದೊಡ್ಡ ಘರ್ಷಣೆಯಾಗಿದೆ.


ಇದನ್ನೂ ಓದಿ: ಬಿಸಿಸಿಐ ಐತಿಹಾಸಿಕ ನಿರ್ಧಾರ, ಮಹಿಳಾ ಕ್ರಿಕೆಟಿಗರಿಗೂ ಪುರುಷರಷ್ಟೇ ಸಮಾನ ವೇತನ


ಉಳಿದಿರುವ ಗುಂಪು 2 ಪಂದ್ಯಗಳು


ಭಾನುವಾರ 30 ಅಕ್ಟೋಬರ್: ಬಾಂಗ್ಲಾದೇಶ ವರ್ಸಸ್ ಜಿಂಬಾಬ್ವೆ, ದಿ ಗಬ್ಬಾ, ಬ್ರಿಸ್ಬೇನ್


ಭಾನುವಾರ 30 ಅಕ್ಟೋಬರ್: ನೆದರ್ಲ್ಯಾಂಡ್ಸ್ ವರ್ಸಸ್ ಪಾಕಿಸ್ತಾನ, ಪರ್ತ್ ಕ್ರೀಡಾಂಗಣ


ಅಕ್ಟೋಬರ್ 30 ಭಾನುವಾರ: ಭಾರತ ವರ್ಸಸ್ ದಕ್ಷಿಣ ಆಫ್ರಿಕಾ, ಪರ್ತ್ ಕ್ರೀಡಾಂಗಣ


ಬುಧವಾರ 02 ನವೆಂಬರ್: ಜಿಂಬಾಬ್ವೆ ವರ್ಸಸ್ ನೆದರ್ಲ್ಯಾಂಡ್ಸ್, ಅಡಿಲೇಡ್ ಓವಲ್


ಬುಧವಾರ 02 ನವೆಂಬರ್: ಭಾರತ ವರ್ಸಸ್ ಬಾಂಗ್ಲಾದೇಶ, ಅಡಿಲೇಡ್ ಓವಲ್


ಗುರುವಾರ 03 ನವೆಂಬರ್: ಪಾಕಿಸ್ತಾನ ವರ್ಸಸ್ ದಕ್ಷಿಣ ಆಫ್ರಿಕಾ, SCG, ಸಿಡ್ನಿ


ಭಾನುವಾರ 06 ನವೆಂಬರ್: ದಕ್ಷಿಣ ಆಫ್ರಿಕಾ ವರ್ಸಸ್ ನೆದರ್ಲ್ಯಾಂಡ್ಸ್, ಅಡಿಲೇಡ್ ಓವಲ್


ಭಾನುವಾರ 06 ನವೆಂಬರ್: ಪಾಕಿಸ್ತಾನ ವರ್ಸಸ್ ಬಾಂಗ್ಲಾದೇಶ, ಅಡಿಲೇಡ್ ಓವಲ್


ಭಾನುವಾರ 06 ನವೆಂಬರ್: ಜಿಂಬಾಬ್ವೆ ವರ್ಸಸ್ ಭಾರತ, MCG, ಮೆಲ್ಬೋರ್ನ್

Published by:ವಾಸುದೇವ್ ಎಂ
First published: