T20 World Cup 2022: ಟಿ20 ವಿಶ್ವಕಪ್​ಗೆ ನ್ಯೂಜಿಲೆಂಡ್ ತಂಡ ಪ್ರಕಟ, 7ನೇ ಬಾರಿ ವರ್ಲ್ಡ್​ಕಪ್ ಆಡಲಿರುವ ಕಿವೀಸ್​ ಪ್ಲೇಯರ್

T20 World Cup 2022: T20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಅಗ್ರ ತಂಡಗಳು ಈಗಾಗಲೇ ತಮ್ಮ ವಿಶ್ವಕಪ್ ತಂಡಗಳನ್ನು ಪ್ರಕಟಿಸಿದ್ದು, ಇದೀಗ ನ್ಯೂಜಿಲ್ಯಾಂಡ್​ ಸಹ ತಮ್ಮ ತಂಡವನ್ನು ಪ್ರಕಟಿಸಿದೆ.

ನ್ಯೂಜಿಲೆಂಡ್ ತಂಡ

ನ್ಯೂಜಿಲೆಂಡ್ ತಂಡ

  • Share this:
T20 ವಿಶ್ವಕಪ್ (T20 World Cup 2022) ಆಸ್ಟ್ರೇಲಿಯಾದಲ್ಲಿ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಅಗ್ರ ತಂಡಗಳು ಈಗಾಗಲೇ ತಮ್ಮ ವಿಶ್ವಕಪ್ ತಂಡಗಳನ್ನು ಪ್ರಕಟಿಸಿವೆ. ಇದೀಗ ಅದೇ ರೀತಿ ನ್ಯೂಜಿಲೆಂಡ್ (New Zealand) ತಂಡ ಸಹ ಮುಂಬರಲಿರುವ ಐಸಿಸಿ ಟಿ20 ವಿಶ್ವಕಪ್​ ಗೆ ತಮ್ಮ ತಂಡವನ್ನು ಪ್ರಕಟಿಸಿದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡ ರನ್ನರ್ ಅಪ್ ಆಗಿತ್ತು. ಆದರೆ ಕಳೆದ ವರ್ಷದಿಂದ ಕಿವೀಸ್​ ತಂಡ ಅಷ್ಟಾಗಿ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಅಲ್ಲದೇ ನಾಯಕ ಕೇನ್ ವಿಲಿಯಮ್ಸನ್ (Kane Williamson) ಸಹ ಕಳಪೆ ಫಾರ್ಮ್‌ನಲ್ಲಿ ಮುಂದುವರಿದಿದ್ದಾರೆ. ಇದೀಗ ಟಿ20 ವಿಶ್ವಕಪ್‌ಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಸ್ವರೂಪದಲ್ಲಿ ಅವರು ಉತ್ತಮ ಫಾರ್ಮ್‌ನಲ್ಲಿ ಇಲ್ಲದಿದ್ದರೂ, ಅವರು ಮತ್ತೊಮ್ಮೆ ಕೇನ್ ವಿಲಿಯಮ್ಸನ್ ಅವರನ್ನು ನಂಬಿ ನಾಯಕತ್ವವನ್ನು ವಹಿಸಿದೆ.

ಟಿ20 ವಿಶ್ವಕಪ್​ಗೆ ಕಿವೀಸ್​ ತಂಡ:

ಅಕ್ಟೋಬರ್​ 16ರಿಂದ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್​ಗೆ ಇದೀಗ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. 15 ಜನರ ಈ ತಂಡದಲ್ಲಿ ಕೇನ್ ವಿಲಿಯಮ್ಸನ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು, ಜೇಮ್ಸ್ ನೀಶಮ್ ಅವರು ಮತ್ತೆ ಕಂಬ್ಯಾಕ್​ ಮಾಡಿದ್ದಾರೆ. ಅನುಭವಿ ಆಟಗಾರ ಗಪ್ಟಿಲ್ ಮತ್ತೊಮ್ಮೆ ಟಿ20 ವಿಶ್ವಕಪ್ ಆಡಲಿದ್ದಾರೆ. ಇದರೊಂದಿಗೆ ಅತಿ ಹೆಚ್ಚು ಟಿ20 ವಿಶ್ವಕಪ್‌ ಆಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. 2022 ವಿಶ್ವಕಪ್ ಗಪ್ಟಿಲ್ ಅವರಿಗೆ ಇದು 7ನೇ ವಿಶ್ವಕಪ್​ ಆಗಲಿದೆ. ಇದು ಸಹ ವಿಶ್ವಕಪ್​ ಇತಿಹಾಸದಲ್ಲಿ ಹೊಸ ದಾಖಲೆಯಾಗಿದೆ.

ಟಿ20 ವಿಶ್ವಕಪ್​ಗೆ ನ್ಯೂಜಿಲೆಂಡ್ ತಂಡ:

ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಫಿನ್ ಅಲೆನ್, ಬೌಲ್ಟ್, ಬ್ರೇಸ್ ವೆಲ್, ಮಾರ್ಕ್ ಚಾಪ್ಮನ್, ಕಾನ್ವೇ, ಫರ್ಗುಸನ್, ಆಡಮ್ ಮಿಲ್ನೆ, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ಸ್ಯಾಂಟ್ನರ್, ಸೌಥಿ, ಇಶ್ ಸೋಧಿ.

A ಗುಂಪಿನಲ್ಲಿ ಕಿವೀಸ್​ ತಂಡ:

ಇನ್ನು, ನ್ಯೂಜಿಲೆಂಡ್ ತಂಡವು ಶ್ರೇಯಾಂಕದ ಮೂಲಕ ನೇರವಾಗಿ ಸೂಪರ್ 12 ಗೆ ಅರ್ಹತೆ ಪಡೆದಿದೆ. ಕಿವೀಸ್ ಸೂಪರ್ 12 ರ ಗುಂಪು 1 ರಲ್ಲಿದೆ. ಈ ಗುಂಪಿನಲ್ಲಿ ಕಿವೀಸ್ ಜೊತೆಗೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಇವೆ. ಶ್ರೀಲಂಕಾ (ಎ ಗುಂಪಿನ ವಿಜೇತ) ಮತ್ತು ಐರ್ಲೆಂಡ್ (ಗುಂಪು ಬಿ ರನ್ನರ್ ಅಪ್) ಈ ನಾಲ್ಕು ತಂಡಗಳನ್ನು ಸೇರುವ ಸಾಧ್ಯತೆಯಿದೆ.

ಇದನ್ನೂ ಓದಿ: ICC Ranking: ಐಸಿಸಿ ನೂತನ ರ‍್ಯಾಕಿಂಗ್ ಬಿಡುಗಡೆ, ಬಾಬರ್​ ಅಜಮ್ ಹಿಂದಿಕ್ಕಿದ ಟೀಂ ಇಂಡಿಯಾ ಯಂಗ್​ ಪ್ಲೇಯರ್​

ಟಿ20 ವಿಶ್ವಕಪ್​ನಲ್ಲಿ ನ್ಯೂಜಿಲೆಂಡ್ ವೇಳಾಪಟ್ಟಿ:

17 ಅಕ್ಟೋಬರ್ - ನ್ಯೂಜಿಲೆಂಡ್ vs ದಕ್ಷಿಣ ಆಫ್ರಿಕಾ
19 ಅಕ್ಟೋಬರ್ - ನ್ಯೂಜಿಲೆಂಡ್ vs ಭಾರತ
26 ಅಕ್ಟೋಬರ್ - ಪಾಕಿಸ್ತಾನ vs ನ್ಯೂಜಿಲೆಂಡ್
31 ಅಕ್ಟೋಬರ್ - ಭಾರತ vs ನ್ಯೂಜಿಲೆಂಡ್
ನವೆಂಬರ್ 05 – ನ್ಯೂಜಿಲೆಂಡ್ vs A2
ನವೆಂಬರ್ 07 - ನ್ಯೂಜಿಲೆಂಡ್ vs ಅಫ್ಘಾನಿಸ್ತಾನ
ನವೆಂಬರ್ 10 - ಸೆಮಿ ಫೈನಲ್ 1 – A1 vs B2
ನವೆಂಬರ್ 11 - ಸೆಮಿ ಫೈನಲ್ 2- A2 vs B1
ನವೆಂಬರ್ 14 - ಫೈನಲ್ ಪಂದ್ಯ
Published by:shrikrishna bhat
First published: