• Home
  • »
  • News
  • »
  • sports
  • »
  • Kohli-Rohit: 2024ರ ಟಿ20 ವಿಶ್ವಕಪ್ ಆಡ್ತಾರಾ ರೋಹಿತ್ -ಕೊಹ್ಲಿ? ಸ್ಪಷ್ಟನೆ ನೀಡಿದ ಬಿಸಿಸಿಐ

Kohli-Rohit: 2024ರ ಟಿ20 ವಿಶ್ವಕಪ್ ಆಡ್ತಾರಾ ರೋಹಿತ್ -ಕೊಹ್ಲಿ? ಸ್ಪಷ್ಟನೆ ನೀಡಿದ ಬಿಸಿಸಿಐ

ಕೊಹ್ಲಿ-ರೋಹಿತ್

ಕೊಹ್ಲಿ-ರೋಹಿತ್

Kohli-Rohit: ಸದ್ಯ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2024ರಲ್ಲಿ ಟಿ20 ವಿಶ್ವಕಪ್ ಆಡುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಇದರ ಬಗ್ಗೆ ಇದೀಗ ಬಿಸಿಸಿಐ ಸ್ಪಷ್ಟನೆ ನೀಡಿದೆ.

  • Share this:

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಪ್ರಸ್ತುತ ದಿಗ್ಗಜ ಆಟಗಾರರು. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ (T20 World Cup) ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಂ ಇಂಡಿಯಾ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದೆ. ಈ ವಿಶ್ವಕಪ್ ಪಂದ್ಯಾವಳಿಯ ನಡುವೆ ಸೋಮವಾರ (ಅಕ್ಟೋಬರ್ 31, 2022) ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಪ್ರವಾಸಕ್ಕಾಗಿ ಬಿಸಿಸಿಐ (BCCI) ಭಾರತೀಯ ತಂಡವನ್ನು ಪ್ರಕಟಿಸಿತು. ನ್ಯೂಜಿಲೆಂಡ್ ಪ್ರವಾಸದಲ್ಲಿ ರೋಹಿತ್ ಮತ್ತು ವಿರಾಟ್ (Virat Kohli) ಇಬ್ಬರಿಗೂ ವಿಶ್ರಾಂತಿ ನೀಡಲಾಗಿದೆ. ಕೆಲಸದ ನಿರ್ವಹಣೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಚೇತನ್ ಶರ್ಮಾ ಹೇಳಿದ್ದಾರೆ. ಇದೇ ವೇಳೆ 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಮತ್ತು ರೋಹಿತ್ ಆಡುವುದಿಲ್ಲ ಎಂಬ ಚರ್ಚೆಯೂ ಶುರುವಾಗಿದೆ.


ವಿಶ್ವಕಪ್​ ಆಡ್ತಾರಾ ಕೊಹ್ಲಿ-ರೋಹಿತ್?:


ಭಾರತ ಕ್ರಿಕೆಟ್ ತಂಡವು 18 ನವೆಂಬರ್ 2022 ರಿಂದ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ T20 ಸರಣಿಯನ್ನು ಪ್ರಾರಂಭಿಸುತ್ತಿದೆ. ಈ ಪ್ರವಾಸದ ಟಿ20 ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಅವರಿಗೆ ವಹಿಸಲಾಗಿದೆ. ಅದಾದ ನಂತರ ರೋಹಿತ್ ಮತ್ತು ವಿರಾಟ್ ಭವಿಷ್ಯದ ಬಗ್ಗೆ ಚರ್ಚೆ ಶುರುವಾಗಿದೆ. ಏಕೆಂದರೆ, 2024ರಲ್ಲಿ ಟಿ-20 ವಿಶ್ವಕಪ್ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿದೆ. ಸದ್ಯ ರೋಹಿತ್‌ಗೆ 35 ವರ್ಷ, ಕೊಹ್ಲಿಗೆ 33 ವರ್ಷ. ಈ ಇಬ್ಬರು ಆಟಗಾರರ ಭವಿಷ್ಯದ ಬಗ್ಗೆ ಕೇಳಿದಾಗ, ಚೇತನ್ ಶರ್ಮಾ, ಪಂದ್ಯಾವಳಿಯ ಮಧ್ಯದಲ್ಲಿ ನೀವು ಯಾರೊಂದಿಗೂ ಈ ಬಗ್ಗೆ ಹೇಗೆ ಮಾತನಾಡುತ್ತೀರಿ? ಟೂರ್ನಿಯ ವೇಳೆ ಅವರ ಭವಿಷ್ಯದ ಬಗ್ಗೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ಇಬ್ಬರೂ ದೊಡ್ಡ ಆಟಗಾರರು. ನಮ್ಮ ನಿರ್ಧಾರದ ಬಗ್ಗೆ ಅವರಿಗೆ ಏನಾದರೂ ಅನಿಸಿದರೆ ಅವರೇ ಬಂದು ನಮ್ಮೊಂದಿಗೆ ಮಾತನಾಡುತ್ತಾರೆ’ ಎಂದು ಹೇಳಿದ್ದಾರೆ.


ಯುವಕರಿಗೆ ಕಲಿಯುವ ಅವಕಾಶ:


ಚೇತನ್ ಶರ್ಮಾ, 'ನೀವು ಹೇಳುತ್ತಿರುವ ಆಟಗಾರರು ತಂಡದ ಭಾಗವಾಗಿದ್ದರೆ, ತಂಡದ ಇತರ ಯುವ ಆಟಗಾರರು ಅವರಿಂದ ಸಾಕಷ್ಟು ಕಲಿಯುತ್ತಾರೆ. ಈ ದೊಡ್ಡ ಆಟಗಾರರಿಂದ ಕಲಿಯಲು ಮತ್ತು ತರಬೇತಿ ನೀಡಲು ಯುವ ಆಟಗಾರರು ಹೇಗೆ ಅವಕಾಶಗಳನ್ನು ಪಡೆಯುತ್ತಿದ್ದಾರೆಂದು ನಾನು ನೋಡುತ್ತಿರುವೆ. ಭಾರತ ತಂಡದ ಬಾಗಿಲು ಯಾರಿಗೂ ಮುಚ್ಚಿಲ್ಲ. ನೀವು ವೃತ್ತಿಪರ ಕ್ರಿಕೆಟ್‌ನಲ್ಲಿ ಮಿಂಚಿದರೆ, ವಯಸ್ಸು ಕೇವಲ ಒಂದು ಸಂಖ್ಯೆ. ವ್ಯತಿರಿಕ್ತವಾಗಿ ಅನುಭವಿ ಆಟಗಾರರನ್ನು ಆಯ್ಕೆ ಮಾಡಲು ಆಯ್ಕೆದಾರರು ಹೆಚ್ಚು ಸಂತೋಷಪಡುತ್ತಾರೆ‘ ಎಂದು ಹೇಳಿದ್ದಾರೆ.


ಇದನ್ನೂ ಓದಿ: IND vs BAN: ನಾವು ವಿಶ್ವಕಪ್ ಗೆಲ್ಲಲು ಇಲ್ಲಿಗೆ ಬಂದಿಲ್ಲ, ಬಾಂಗ್ಲಾ ನಾಯಕನ ಶಾಕಿಂಗ್​ ಹೇಳಿಕೆ


ಉತ್ತಮ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ:


ಏತನ್ಮಧ್ಯೆ, ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರದರ್ಶನವು ಇಲ್ಲಿಯವರೆಗೆ ತೃಪ್ತಿಕರವಾಗಿದೆ. ಈ ಟೂರ್ನಿಯಲ್ಲಿ ಭಾರತ ಇದುವರೆಗೆ 3 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿದೆ. ಇದೀಗ ಭಾರತದ ನಾಲ್ಕನೇ ಪಂದ್ಯ ಬಾಂಗ್ಲಾದೇಶ ವಿರುದ್ಧ ಇಂದು ನಡೆಯಲಿದೆ. ಈ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಹಾಗಾಗಿ ಈ ಟೂರ್ನಿಯಲ್ಲಿ ರೋಹಿತ್ ಅರ್ಧಶತಕ ಸಿಡಿಸಿದ್ದಾರೆ.


ಇದನ್ನೂ ಓದಿ: Virat Kohli: ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ ಕಿಂಗ್​ ಕೊಹ್ಲಿ, ಇಲ್ಲಿವರೆಗೂ ಎಂದು ನಡೆಯದ ಕ್ಷಣಕ್ಕೆ ಸಾಕ್ಷಿಯಾಗಲಿದೆ ಅಡಿಲೇಡ್​


ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ ಭರ್ಜರಿ ಬ್ಯಾಟಿಂಗ್​:


ಇನ್ನು, ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್​ ಮಾಡಿದ್ದಾರೆ. ಈ ಮೂಲಕ ಟೀಂ ಇಂಡಿಯಾದ 2 ಗೆಲುವಿನಲ್ಲಿ ಕೊಹ್ಲಿ ಪಾತ್ರ ಪ್ರಮುಖವಾಗಿತ್ತು ಎನ್ನುವುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.

Published by:shrikrishna bhat
First published: