T20 World Cup: ಟಿ20 ವಿಶ್ವಕಪ್ ಕುರಿತು ಭಾರತ ತಂಡ ಆತಂಕದಲ್ಲಿದೆ, ಶಾಕಿಂಗ್ ಹೇಳಿಕೆ ನೀಡಿದ ಪಂತ್

ಟೀಂ ಇಂಡಿಯಾ ವಿಶ್ವಕಪ್​ ಗೆಲ್ಲುವ ನಿರೀಕ್ಷೆಯ್ಲಲಿದೆ. ಆದರೆ ಈ ಬಿಗ್​ ಟೂರ್ನಿಗೂ ಮೊದಲು ರಿಷಭ್ ಪಂತ್ (Rishabh Pant)​ ನೀಡಿರುವ ಹೇಳಿಕೆ ಎಲ್ಲಡೆ ಸಖತ್ ಚರ್ಚೆಗೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯಾ ಕಪ್​ 2022 (Asia Cup) ನಡೆಯಲಿದೆ. ಆಗಸ್ಟ್ 27ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ಏಷ್ಯಾ ಕಪ್ ನಡೆಯಲಿದೆ. ಅಲ್ಲದೇ ಏಷ್ಯಾ ಕಪ್​ 2022ರಲ್ಲಿ ಭಾರತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಇದಕ್ಕಾಗಿ ಈಗಾಗಲೇ ಟೀಂ ಇಂಡಿಯಾ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ. ಅಲ್ಲದೇ ಭಾರತ ಈ ಬಾರಿ ಹಾಲಿ ಚಾಂಪಿಯನ್​ ಆಗಿ ಕಣಕ್ಕಿಳಿಯಲಿದ್ದಾರೆ. ಇದರ ನಡುವೆ ಅಕ್ಟೋಬರ್​ ತಿಂಗಳಲ್ಲಿ ಆರಂಭವಾಗಲಿರುವ T20 ವಿಶ್ವಕಪ್ (T20 World Cup) ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ರೋಹಿತ್​ ಶರ್ಮಾ (Rohit Sharma) ನಾಯಕತ್ವದಲ್ಲಿ ಈ ಬಾರಿ ಟೀಂ ಇಂಡಿಯಾ ವಿಶ್ವಕಪ್​ ಗೆಲ್ಲುವ ನಿರೀಕ್ಷೆಯ್ಲಲಿದೆ. ಆದರೆ ಈ ಬಿಗ್​ ಟೂರ್ನಿಗೂ ಮೊದಲು ರಿಷಭ್ ಪಂತ್ (Rishabh Pant)​ ನೀಡಿರುವ ಹೇಳಿಕೆ ಎಲ್ಲಡೆ ಸಖತ್ ಚರ್ಚೆಗೆ ಕಾರಣವಾಗಿದೆ.

ಶಾಕಿಂಗ್ ಹೇಳಿಕೆ ನೀಡಿದ ರಿಷಭ್ ಪಂತ್:

ಹೌದು, ಈಗಾಗಲೇ ಭಾರತ ತಂಡ ಸಾಲು ಸಾಲು ಸರಣಿಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ಟಿ20 ವಿಶ್ವಕಪ್​ ಆರಂಭವಾಗುವ ಮುನ್ನವೇ ರಿಷಭ್ ಪಂತ್​ ನೀಡಿರುವ ಹೇಳಿಕೆ ಎಲ್ಲಡೆ ಚರ್ಚೆಗೆ ಗ್ರಾಸವಾಗಿದೆ. ಹೌದು, ಟಿ20 ವಿಶ್ವಕಪ್​ ಕುರಿತು ಮಾತನಾಡಿರುವ ಅವರು, ‘ವಿಶ್ವಕಪ್ ಸಮೀಪಿಸುತ್ತಿದ್ದಂತೆ ಆತಂಕ ಸ್ವಲ್ಪ ಹೆಚ್ಚಾಗಿದೆ. ನನಗೆ ಮಾತ್ರವಲ್ಲ, ತಂಡದ ಎಲ್ಲರ ಸ್ಥಿತಿಯೂ ಇದೇ ಆಗಿದ್ದು, ಮುಂಬರುವ ಟಿ20 ವಿಶ್ವಕಪ್​ ​ಕುರಿತು ಸಂಪೂರ್ಣ ಭಾರತ ತಂಡವೇ ಆತಂಕದಲ್ಲಿದೆ. ಆದರೂ ನಮ್ಮ ತಂಡವೂ ಟೂರ್ನಿಯಲ್ಲಿ 100 ಪ್ರತಿಶತದಷ್ಟು ಪ್ರಯತ್ನಪಡುತ್ತೇವೆ. ಕೇವಲ ನಾನು ಮಾತ್ರವಲ್ಲ, ತಂಡವೂ ಪ್ರಯತ್ನ ಪಡುವುದು ನಮ್ಮ ಗುರಿಯಾಗಿದೆ. ಅಲ್ಲದೇ ಫೈನಲ್​ ತಲುಪಿ ಈ ಬಾರಿ ಕಪ್​ ಗೆದ್ದೇ ಗೆಲ್ಲುತ್ತೇವೆ‘ ಎಂದು ಪಂತ್​ ಹೇಳಿದ್ದಾರೆ.

ಅಕ್ಟೋಬರ್ ನಲ್ಲಿ ಪ್ರಾರಂಭವಾಗಲಿದೆ ಮೆಗಾ ಟೂರ್ನಿ:

ಈ ಬಾರಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್​ ನಡೆಯಲಿದೆ. ಈಗಾಗಲೇ ವಿಶ್ವಕಪ್​ಗಾಗಿ ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಇದರ ಭಾಗವಾಗಿ ಭಾರತ ತಂಡವೂ ಸಹ ಈ ಮೆಗಾ ಟೂರ್ನಿಗೆ ಭರ್ಜರಿ ತಯಾರಿ ನಡೆಸುತ್ತಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಪಾಕ್ ಎದುರು ಆಡಲಿದೆ. ಇನ್ನು, ಕಳೆದ ವರ್ಷ ಟಿ20 ವಿಶ್ವಕಪ್ ಗ್ರೂಪ್ ಹಂತದಲ್ಲೇ ನಿರ್ಗಮಿಸಿತ್ತು. ಭಾರತ 2021ರ ವೈಫಲ್ಯವನ್ನು ಮರೆತು ಅತ್ಯುತ್ತಮ ಪ್ರದರ್ಶನ ನೀಡಲು ಟೀಂ ಇಂಡಿಯಾ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: KL Rahul: ರಾಷ್ಟ್ರಗೀತೆಗೆ ಗೌರವ ಕೊಟ್ಟ ಕನ್ನಡಿಗ ಕೆಎಲ್​ ರಾಹುಲ್​, ಇದಕ್ಕೆ ಇವ್ರು ಸಖತ್ ಇಷ್ಟ ಆಗೋದು

ಟಿ20 ವಿಶ್ವಕಪ್‌ನ ತಂಡಗಳು:

ಗುಂಪು A: ನಮೀಬಿಯಾ, ಶ್ರೀಲಂಕಾ, ಯುಎಇ, ನೆದರ್ಲ್ಯಾಂಡ್ಸ್
ಗುಂಪು B: ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್, ಜಿಂಬಾಬ್ವೆ
ಸೂಪರ್ 12
ಗುಂಪು 1: ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ವಿಜೇತ ಗುಂಪು ಎ, ರನ್ನರ್-ಅಪ್ ಗುಂಪು ಬಿ
ಗುಂಪು 2: ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ವಿಜೇತ ತಂಡ ಗುಂಪು ಬಿ, ರನ್ನರ್ ಅಪ್ ಗುಂಪು ಎ

ಇದನ್ನೂ ಓದಿ: ICC T20 World Cup: ಟಿ20 ವಿಶ್ವಕಪ್​ನಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರಿವರು, ನಿವೃತ್ತಿ ಪಡೆದರೂ ಇವರೇ ಟಾಪ್

ಪಂತ್​-ಊರ್ವಶಿ ರೌಟೇಲಾ ವಿವಾದ:

ಇನ್ನು, ಕೆಲ ದಿನಗಳ ಹಿಂದೆ ರಿಷಭ್ ಪಂತ್ ಮತ್ತು ನಟಿ ಊರ್ವಶಿ ರೌಟೇಲಾ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿವಾದವೊಂದು ಹುಟ್ಟಿಕೊಂಡಿತ್ತು. ಊರ್ವಶಿ ಅವರು ‘RP‘ ಎಂದು ಹೇಳುವ ಮೂಲಕ ಪಂತ್ ಕುರಿತು ಮಾತನಾಡಿದ್ದರು. ಆದರೆ ಇದಕ್ಕೆ ಪಂತ್ ಸಹ  ಊರ್ವಶಿ ರೌಟೇಲಾ ಅವರ ಹೆಸರು ಹೇಳದೇ ತಿರುಗೇಟು ನೀಡಿದ್ದರು.
Published by:shrikrishna bhat
First published: