• Home
  • »
  • News
  • »
  • sports
  • »
  • T20 World Cup: ಟಿ20 ವಿಶ್ವಕಪ್​ಗೂ ಮೊದಲೇ ಟೀಂ ಇಂಡಿಯಾದಲ್ಲಿ ಟೆನ್ಷನ್, ಬುಮ್ರಾ ನಂತರ ಮತ್ತೊಬ್ಬ ಆಟಗಾರ ಇಂಜೂರಿ

T20 World Cup: ಟಿ20 ವಿಶ್ವಕಪ್​ಗೂ ಮೊದಲೇ ಟೀಂ ಇಂಡಿಯಾದಲ್ಲಿ ಟೆನ್ಷನ್, ಬುಮ್ರಾ ನಂತರ ಮತ್ತೊಬ್ಬ ಆಟಗಾರ ಇಂಜೂರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

T20 World Cup: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದಾದ ಬಳಿಕ ಅವರು ಹೇಳಿದ ಪ್ಲೇಯಿಂಗ್ ಇಲೆವೆನ್ ಟೀಂ ಇಂಡಿಯಾದ ಟೆನ್ಶನ್ ಅನ್ನು ಹೆಚ್ಚಿಸಿದೆ. 

  • Share this:

ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವೆ 3 ಟಿ20 ಸರಣಿಯ (T20 Cricket) ಮೂರನೇ ಮತ್ತು ಅಂತಿಮ ಪಂದ್ಯ ನಡೆಯುತ್ತಿದೆ. ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.  ಇದಾದ ಬಳಿಕ ಅವರು ಹೇಳಿದ ಪ್ಲೇಯಿಂಗ್ ಇಲೆವೆನ್ ಟೀಂ ಇಂಡಿಯಾದ ಟೆನ್ಶನ್ ಅನ್ನು ಹೆಚ್ಚಿಸಿದೆ. ಭಾರತ ಸರಣಿ ಗೆದ್ದಿದೆ. ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ (KL Rahul) ಹಾಗೂ ವಿರಾಟ್ ಕೊಹ್ಲಿಗೆ (Virat Kohli) ವಿಶ್ರಾಂತಿ ನೀಡಲಾಗಿದೆ. ಇಬ್ಬರೂ ಈ ಪಂದ್ಯದಲ್ಲಿ ಆಡುತ್ತಿಲ್ಲ ಎಂದಿದ್ದಾರೆ.


ಅರ್ಶದೀಪ್ ಸಿಂಗ್ ಇಂಜೂರಿ:


ರಾಹುಲ್-ವಿರಾಟ್ ಬಿಟ್ಟರೆ ಬೇರೆ ಯಾವುದೇ ಆಟಗಾರರು ತಂಡದ ಭಾಗವಾಗದಿರುವುದು ಭಾರತದ ಚಿಂತೆಯನ್ನು ಹೆಚ್ಚಿಸಿದೆ. ವಾಸ್ತವವಾಗಿ, ಎಡಗೈ ವೇಗಿ ಅರ್ಶದೀಪ್ ಸಿಂಗ್ ಈ ಪಂದ್ಯವನ್ನು ಆಡುತ್ತಿಲ್ಲ. ಟಾಸ್ ಗೆದ್ದ ನಂತರ, ನಾಯಕ ರೋಹಿತ್ ಶರ್ಮಾ, ಅರ್ಶ್‌ದೀಪ್ ಅವರ ಬೆನ್ನಿನಲ್ಲಿ ಸಮಸ್ಯೆ ಇದೆ ಎಂದು ಹೇಳಿದರು. ಅದಕ್ಕಾಗಿಯೇ ಅವರು ಈ ಪಂದ್ಯವನ್ನು ಆಡುತ್ತಿಲ್ಲ. ಆದರೆ, ಅರ್ಷದೀಪ್ ಗಾಯದ ಬಗ್ಗೆ ರೋಹಿತ್ ಹೆಚ್ಚಿನ ಮಾಹಿತಿ ನೀಡಿಲ್ಲ. ಅರ್ಶದೀಪ್ ಅವರ ಗಾಯವು ತುಂಬಾ ಗಂಭೀರವಾಗಿಲ್ಲ ಎಂದು ಅವರು ಹೇಳಿದ್ದಾರೆ.


ಅವರು ತಮ್ಮ ಬೆನ್ನಿನ ನೋವಿನ ಬಗ್ಗೆ ದೂರು ನೀಡಿದ್ದರು. ಈ ಕಾರಣಕ್ಕೆ ಮುನ್ನೆಚ್ಚರಿಕೆಯಾಗಿ ಈ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಿಲ್ಲ. ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾದ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯ ಇದಾಗಿದೆ.  ಕುತೂಹಲಕಾರಿ ವಿಷಯವೆಂದರೆ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಮತ್ತು ಅರ್ಶದೀಪ್ ಸಿಂಗ್​ ಇದರಲ್ಲಿ ಆಡುತ್ತಿಲ್ಲ, ಆದರೆ ಮೂವರೂ ಟಿ20 ವಿಶ್ವಕಪ್‌ನ ತಂಡದಲ್ಲಿದ್ದಾರೆ.


ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ಗೂ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್​, ಸ್ಟಾರ್​ ಬೌಲರ್​ ಔಟ್​!


ಬುಮ್ರಾ ನಂತರ ಇದೀಗ ಅರ್ಶದೀಪ್​:


ಜಸ್ಪ್ರೀತ್ ಬುಮ್ರಾ ಗಾಯಗೊಂಡಿರುವ ಭಾರತ ತಂಡ ಈಗಾಗಲೇ ಸಂಕಷ್ಟದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಅರ್ಷದೀಪ್ ಅವರ ಬೆನ್ನಿನ ಸಮಸ್ಯೆ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡದ ಮ್ಯಾನೇಜ್‌ಮೆಂಟ್‌ನ ಚಿಂತೆಯನ್ನು ಹೆಚ್ಚಿಸಿದೆ. ಬುಮ್ರಾ ಅನುಪಸ್ಥಿತಿಯಲ್ಲಿ ಅರ್ಶದೀಪ್ ಸ್ಪೆಷಲಿಸ್ಟ್ ಡೆತ್ ಓವರ್ ಬೌಲರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಕಳೆದ ಪಂದ್ಯದಲ್ಲಿ ಅರ್ಶದೀಪ್ ದುಬಾರಿ ಎನಿಸಿಕೊಂಡರು. 4 ಓವರ್ ಗಳಲ್ಲಿ 62 ರನ್ ನೀಡಿ 2 ವಿಕೆಟ್ ಪಡೆದರು. ತಿರುವನಂತಪುರಂ ಟಿ20ಯಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿ 32 ರನ್ ನೀಡಿ ಮೂರು ವಿಕೆಟ್ ಪಡೆದರು. ಅವರು ತಮ್ಮ ಮೊದಲ ಓವರ್‌ನಲ್ಲಿ ಎಲ್ಲಾ ಮೂರು ವಿಕೆಟ್‌ಗಳನ್ನು ಪಡೆದರು. ಅರ್ಷದೀಪ್ ಈ ವರ್ಷ ಟಿ20 ಪಾದಾರ್ಪಣೆ ಮಾಡಿದ್ದು, ಇದುವರೆಗೆ ಆಡಿರುವ 13 ಟಿ20 ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ: KL Rahul ಐಷಾರಾಮಿ ಜೀವನ ಹೇಗಿದೆ ಗೊತ್ತಾ? ಕನ್ನಡಿಗನ ಲೈಫ್‌ಸ್ಟೈಲ್ ನೀವೂ ನೋಡಿ


ಟಿ20 ವಿಶ್ವಕಪ್​ನಿಂದ ಬುಮ್ರಾ ಔಟ್​:
ಟಿ20 ವಿಶ್ವಕಪ್‌ನಿಂದ ಜಸ್ಪ್ರೀತ್ ಬುಮ್ರಾ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಆಯ್ಕೆಗಾರರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಈಗ ಕುತೂಹಲಕಾರಿಯಾಗಿದೆ. ವಿಶ್ವಕಪ್‌ಗೆ 15 ಸದಸ್ಯರ ತಂಡವನ್ನು ಟೀಂ ಇಂಡಿಯಾ ಪ್ರಕಟಿಸಿದೆ. ನಾಲ್ಕು ಜನರನ್ನು ಸ್ಟ್ಯಾಂಡ್-ಬೈ ಆಟಗಾರರು ಎಂದು ಘೋಷಿಸಲಾಗಿದೆ. ಇದರಲ್ಲಿ ಶಮಿ, ಚಾಹರ್, ಶ್ರೇಯಸ್ ಅಯ್ಯರ್ ಮತ್ತು ರವಿ ಬಿಷ್ಣೋಯ್ ಇದ್ದಾರೆ. ಬುಮ್ರಾ ಗಾಯದಿಂದ ಹೊರಗುಳಿದಿರುವುದರಿಂದ, ಅವರಂತೆಯೇ ಆಟಗಾರ (ಪೇಸರ್) ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ದೀಪಕ್ ಚಹಾರ್ ಅಥವಾ ಮೊಹಮ್ಮದ್ ಶಮಿ ಅವರಲ್ಲಿ ಒಬ್ಬರನ್ನು ಮುಖ್ಯ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

Published by:shrikrishna bhat
First published: