T20 World Cup 2024: ಟಿ20 ವಿಶ್ವಕಪ್​ಗೆ 20 ತಂಡಗಳು, ಅಮೇರಿಕ ಟೀಂ ನೇರ ಎಂಟ್ರಿ..!

ಟಿ20 ವಿಶ್ವಕಪ್ (T20 World Cup) 2024ರ ಆತಿಥೇಯ ರಾಷ್ಟ್ರಗಳನ್ನು ಹೆಸರಿಸಲಾಗಿದೆ. 2024ರ ಟೂರ್ನಿ ವೆಸ್ಟ್ ಇಂಡೀಸ್ (West Indies) ಮತ್ತು ಅಮೆರಿಕದಲ್ಲಿ (America) ನಡೆಯಲಿದೆ.

T 20 World cup

T 20 World cup

  • Share this:
ಟಿ20 ವಿಶ್ವಕಪ್ (T20 World Cup) 2024ರ ಆತಿಥೇಯ ರಾಷ್ಟ್ರಗಳನ್ನು ಹೆಸರಿಸಲಾಗಿದೆ. 2024ರ ಟೂರ್ನಿ ವೆಸ್ಟ್ ಇಂಡೀಸ್ (West Indies) ಮತ್ತು ಅಮೆರಿಕದಲ್ಲಿ (America) ನಡೆಯಲಿದೆ. ಆತಿಥೇಯ ರಾಷ್ಟ್ರವಾಗಿ, ಯುನೈಟೆಡ್ ಸ್ಟೇಟ್ಸ್ ಟಿ20 ವಿಶ್ವಕಪ್‌ಗೆ ಅರ್ಹತಾ ಪಂದ್ಯವನ್ನು ಆಡದೆ ನೇರವಾಗಿ ಅರ್ಹತೆ ಪಡೆದಿದೆ. ಈ ಸ್ಪರ್ಧೆಯಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ. ಯುನೈಟೆಡ್ ಸ್ಟೇಟ್ಸ್ (United States) ಪ್ರಸ್ತುತ ICC ಯ ಸಹಾಯಕ ಸದಸ್ಯ. ಯುನೈಟೆಡ್ ಸ್ಟೇಟ್ ನಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚುತ್ತಿರುವ ಕಾರಣ, ಅಲ್ಲಿ ಟಿ20 ವಿಶ್ವಕಪ್ ಪಂದ್ಯವನ್ನು ಆಡಲು ನಿರ್ಧರಿಸಲಾಗಿದೆ. ಪ್ರಸ್ತುತ ಯುಎಸ್ ತಂಡದಲ್ಲಿ ಸಾಕಷ್ಟು ಭಾರತೀಯ ಆಟಗಾರರು ಆಡುತ್ತಿದ್ದಾರೆ.

ಆದ್ದರಿಂದ ಹೆಚ್ಚಿನ ಭಾರತೀಯ ಆಟಗಾರರು ಈಗ ಟಿ 20 ವಿಶ್ವಕಪ್‌ನಲ್ಲಿ ಆಡುವುದನ್ನು ಕಾಣಬಹುದು. US T20 ಇಂಟರ್‌ನ್ಯಾಶನಲ್‌ನಲ್ಲಿ 27 ಆಟಗಾರರು ಆಡುತ್ತಿದ್ದಾರೆ, ಅವರಲ್ಲಿ 7 ಆಟಗಾರರು ಭಾರತದಲ್ಲಿ ಹುಟ್ಟಿ ನಂತರ ಯುಎಸ್‌ಗೆ ತೆರಳಿದ್ದಾರೆ. ಇವರಲ್ಲಿ ಪಂಜಾಬ್‌ನ ಜಸ್ಕರನ್ ಮಲ್ಹೋತ್ರಾ, ಸನ್ನಿ, ಗುಜರಾತ್‌ನ ಮನಕ್ ಪಟೇಲ್, ನಿಸರ್ಗ್, ತಿಮಿಲ್ ಪಟೇಲ್, ಮಹಾರಾಷ್ಟ್ರದ ಸೌರಭ್, ಸುಶಾಂತ್ ಸೇರಿದ್ದಾರೆ. ಇದರ ಜೊತೆಗೆ, 2-3 ಆಟಗಾರರಿದ್ದಾರೆ, ಅವರ ಪೋಷಕರು ಕೆಲವು ವರ್ಷಗಳ ಹಿಂದೆ ಯುನೈಟೆಡ್ ಸ್ಟೇಟ್ಸ್ ಗೆ ವಲಸೆ ಬಂದಿದ್ದಾರೆ.

ಯುಎಸ್ ಟಿ20 ತಂಡದಲ್ಲಿ ಹಲವು ದೇಶದ ಆಟಗಾರರು:

ಯುಎಸ್ ಟಿ20 ತಂಡದಲ್ಲಿ ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಶ್ರೀಲಂಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದ ಆಟಗಾರರೂ ಇದ್ದಾರೆ. ಈ ಆಟಗಾರರು ತಮ್ಮ ದೇಶದಲ್ಲಿ ಕ್ರಿಕೆಟ್ ಆಡಲು ಅವಕಾಶವಿಲ್ಲದ ಕಾರಣ ಯುಎಸ್‌ಗೆ ಹೋಗಿ ಆಡಲು ಆಯ್ಕೆ ಮಾಡಿದ್ದಾರೆ, ಆದರೆ ಯುಎಸ್‌ಗಾಗಿ ಆಡಲು, ಅವರು ಮೊದಲು ಅಲ್ಲಿ ಸ್ಥಳೀಯ ಕ್ರಿಕೆಟ್ ಆಡಬೇಕು, ಆಗ ಮಾತ್ರ ಅವರು ಆಡಲು ಅರ್ಹತೆ ಪಡೆಯಬಹುದು. US 2019 ರಿಂದ ಅಮೆರಿಕ ತಂಡಕ್ಕೆ ಟಿ20 ಮತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: 29 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಮೊದಲ ಗ್ಲೋಬಲ್ ಟೂರ್ನಿ; 8 ಐಸಿಸಿ ಟ್ರೋಫಿಗಳ ವೇಳಾಪಟ್ಟಿ ಪ್ರಕಟ

ಉನ್ಮುಕ್ತ್ ಚಂದ್ ಸಹ ಯುಎಸ್‌ ಪರ ಆಡುತ್ತಿದ್ದಾರೆ:

ಅಂಡರ್-19 ವಿಶ್ವಕಪ್ ಗೆಲ್ಲಲು ಭಾರತಕ್ಕೆ ನೆರವಾದ ಉನ್ಮುಕ್ತ್ ಚಂದ್ ಪ್ರಸ್ತುತ ಯುಎಸ್‌ನಲ್ಲಿದ್ದಾರೆ. ಅವರು ಕಳೆದ ವರ್ಷ ಮೈನರ್ ಲೀಗ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದರು. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ 2024ರ ವಿಶ್ವಕಪ್‌ನಲ್ಲಿ ಅಮೆರಿಕ ಪರ ಆಡುವುದನ್ನು ಕಾಣಬಹುದು. ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ವೇಗದ ಶತಕ ಗಳಿಸಿದ ನ್ಯೂಜಿಲೆಂಡ್‌ನ ಕೋರಿ ಆಂಡರ್ಸನ್ ಕೂಡ ಯುಎಸ್ ತಂಡದೊಂದಿಗೆ ಸಂಪರ್ಕ ಹೊಂದಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಲಿಯಾಮ್ ಪ್ಲಂಕೆಟ್ ಕೂಡ ಅಮೆರಿಕಕ್ಕೆ ಆಗಮಿಸಿರುವುದರಿಂದ ಈ ಎಲ್ಲಾ ಆಟಗಾರರು ಟಿ20 ವಿಶ್ವಕಪ್‌ನಲ್ಲಿ ಅಮೆರಿಕ ಪರ ಆಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ ದಿನಾಂಕ ಪ್ರಕಟ..!

ಮಹಿಳಾ ವಿಶ್ವಕಪ್ ಕುರಿತು ಮಾಹಿತಿ:

ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಈ ಬಾರಿ ಕಾಮನಬಿಲ್ಲು ರಾಷ್ಟ್ರ ದಕ್ಷಿಣ ಆಫ್ರಿಕಾದಲ್ಲಿ ಜರುಗಲಿದೆ. ಕೋವಿಡ್‌ ಕಾರಣಾಂತರಗಳಿಂದ ಎರಡು ವರ್ಷದಿಂದ ಮುಂದೂಡಲಾಗಿದ್ದ ಪಂದ್ಯಾವಳಿಯನ್ನು ಮುಂಬರುವ 2023 ರ ಜನವರಿಯಲ್ಲಿ ಆಯೋಜಿಸಿಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದ್ದು, 41 ಪಂದ್ಯಗಳು ಜರುಗಲಿವೆ.
Published by:shrikrishna bhat
First published: