• Home
  • »
  • News
  • »
  • sports
  • »
  • Virat Kohli: ಪಾಕ್​ ನಿದ್ದೆಗೆಡಿಸಿದ ಕಿಂಗ್​ ಕೊಹ್ಲಿ ವಿಡಿಯೋ, ಹೊಸ ಹೇರ್​ಸ್ಟೈಲ್​ನಲ್ಲಿ ಮಿಂಚಿದ ವಿರಾಟ್​

Virat Kohli: ಪಾಕ್​ ನಿದ್ದೆಗೆಡಿಸಿದ ಕಿಂಗ್​ ಕೊಹ್ಲಿ ವಿಡಿಯೋ, ಹೊಸ ಹೇರ್​ಸ್ಟೈಲ್​ನಲ್ಲಿ ಮಿಂಚಿದ ವಿರಾಟ್​

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

Virat Kohli: ಅಕ್ಟೋಬರ್ 23 ರಂದು ಪಾಕಿಸ್ತಾನ ವಿರುದ್ಧದ ಟಿ 20 ವಿಶ್ವಕಪ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • Share this:

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಮುಂಬರುವ ಟಿ20 ವಿಶ್ವಕಪ್ ನಲ್ಲಿ (T20 World Cup 2022) ಮೈದಾನದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ ಈ ಪ್ರತಿಷ್ಠಿತ ಟೂರ್ನಿಯ ತಯಾರಿಯಲ್ಲಿ ನಿರತರಾಗಿದ್ದಾರೆ. ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಹೊಸ ಹೇರ್ ಸ್ಟೈಲ್‌ನೊಂದಿಗೆ (Hairstyle) ಕಾಣಿಸಿಕೊಳ್ಳಲಿದ್ದಾರೆ. ಅವರ ಹೊಸ ಲುಕ್​ನ ಫೋಟೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲಡೆ ಇದೀಗ ಸಖತ್ ವೈರಲ್ ಆಗಿದೆ. ಅಲ್ಲದೇ ಅವರು ಕೊಹ್ಲಿ ಜಿಮ್ ನಲ್ಲಿ (Gym) ವೇಟ್ ಲಿಫ್ಟಿಂಗ್ ಮಾಡುತ್ತಿರುವ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಹೊಸ ಹೇರ್​ ಸ್ಟೈಲ್​ನಲ್ಲಿ ಕಿಂಗ್ ಕೊಹ್ಲಿ:


ಆಸ್ಟ್ರೇಲಿಯಾದ ಪ್ರಸಿದ್ಧ ಕೇಶ ವಿನ್ಯಾಸಕಿ ಜೋರ್ಡಾನ್ ಅವರು ಕೊಹ್ಲಿ ಅವರಿಗೆ ಹೊಸ ಹೇರ್ಕಟ್ ಮಾಡಿದ್ದಾರೆ. ಇದರ ಫೋಟೋವನ್ನು ಕೊಹ್ಲಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ. ಜೋರ್ಡಾನ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಕೊಹ್ಲಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವಿರಾಟ್ ತಮ್ಮ ಹೊಸ ಕೇಶವಿನ್ಯಾಸವನ್ನು ಕಾಣಿಸಿಕೊಂಡಿದ್ದಾರೆ.ಜಿಮ್​ನಲ್ಲಿ ಭರ್ಜರಿಯಾಗಿ ವಿರಾಟ್ ವರ್ಕೋಟ್:


ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ಗೆ ಸೀರಿಯಸ್ ಆಗಿ ತಯಾರಿ ನಡೆಸುತ್ತಿದ್ದಾರೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಆಸ್ಟ್ರೇಲಿಯಾ ತಲುಪಿದೆ. ಭಾರತವು ಪರ್ತ್‌ನ WCAC ಕ್ರಿಕೆಟ್ ಮೈದಾನದಲ್ಲಿ T20 ವಿಶ್ವಕಪ್‌ಗಾಗಿ ತರಬೇತಿ ಶಿಬಿರವನ್ನು ಆಯೋಜಿಸಿದೆ. ಅಲ್ಲದೇ ವಿರಾಟ್ ಕೊಹ್ಲಿ ಜಿಮ್ ನಲ್ಲಿ ವೇಟ್ ಲಿಫ್ಟಿಂಗ್ ಮಾಡುತ್ತಿದ್ದು, ಪಾಕ್​ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಲು ಸಿದ್ಧರಾಗುತ್ತಿದ್ದಾರೆ.ವಿಶ್ವಕಪ್​ನಲ್ಲಿ ಕೊಹ್ಲಿ ಪ್ರದರ್ಶನ:


ಭಾರತ ತಂಡ ಪ್ರಸ್ತುತ ಪರ್ತ್‌ನಲ್ಲಿ ಟಿ20 ವಿಶ್ವಕಪ್‌ಗೆ ತಯಾರಿ ನಡೆಸುತ್ತಿದೆ. ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಎರಡು ಅಭ್ಯಾಸ ಪಂದ್ಯಗಳನ್ನು ಆಡಬೇಕಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದ್ದು, ಎರಡನೇ ಅಭ್ಯಾಸ ಪಂದ್ಯ ಗುರುವಾರ (ಅಕ್ಟೋಬರ್ 13) ನಡೆಯಲಿದೆ. ವಿರಾಟ್ ಕೊಹ್ಲಿ ಮೊದಲ ಅಭ್ಯಾಸ ಪಂದ್ಯದಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧ ಆಡಲು ಸಾಧ್ಯವಾಗಲಿಲ್ಲ. ಇನ್ನು, ಅಕ್ಟೋಬರ್​ 23ರಂದು ಭಾರತ ಟಿ20 ವಿಶ್ವಕಪ್​ ನಲ್ಲಿ ಪಾಕಿಸ್ತಾನ ಎದುರು ತನ್ನ ಮೊದಲ ಪಂದ್ಯವನ್ನು ಆಡಲಿದೆ. ಈಗಾಗಲೇ ಈ ಪಂದ್ಯದ ಸಂಪೂರ್ಣ ಟಿಕೆಟ್​ಗಳು ಮಾರಾಟವಾಗಿದೆ.


ಇದನ್ನೂ ಓದಿ: T20 World Cup: ಪಾಕ್​ ವಿರುದ್ಧ ಕಣಕ್ಕಿಳಿಯುತ್ತಿದ್ದಂತೆ ಧೋನಿ ದಾಖಲೆ ಮುರಿಯಲಿದ್ದಾರೆ ಹಿಟ್​ಮ್ಯಾನ್​ ರೋಹಿತ್​


ಇನ್ನು, 33 ವರ್ಷದ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 21 ಪಂದ್ಯಗಳಲ್ಲಿ 76.81 ಸರಾಸರಿಯಲ್ಲಿ 10 ಅರ್ಧಶತಕಗಳೊಂದಿಗೆ 845 ರನ್ ಗಳಿಸಿದರು. ಔಟಾಗದೆ 89 ರನ್ ಗಳಿಸಿದ್ದು ವಿರಾಟ್ ಅವರ ಅತ್ಯುತ್ತಮ ಸ್ಕೋರ್. ಈ ಐಸಿಸಿ ಮೆಗಾ ಟೂರ್ನಮೆಂಟ್‌ನಲ್ಲಿ ಅವರು ಇಲ್ಲಿಯವರೆಗೆ 78 ಬೌಂಡರಿಗಳು ಮತ್ತು 20 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನದ ಮೇಲೆ ಟೀಂ ಇಂಡಿಯಾ ಹೆಚ್ಚಿನ ನಿರೀಕ್ಷೆ ಹೊಂದಿದೆ. ಏಷ್ಯಾ ಕಪ್ 2022 ರ ಹೊತ್ತಿಗೆ ಅವರು ಫಾರ್ಮ್‌ಗೆ ಮರಳಿದ್ದಾರೆ. ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ 71ನೇ ಶತಕ ಸಿಡಿಸಿದ್ದರು.

Published by:shrikrishna bhat
First published: