• Home
  • »
  • News
  • »
  • sports
  • »
  • Virat Kohli: ಐಸಿಸಿ ಹೊಸ ವಿಡಿಯೋಗೆ ವಿರಾಟ್ ಕೊಹ್ಲಿ ಫ್ಯಾನ್ಸ್ ಗರಂ, ಅಷ್ಟಕ್ಕೂ ಅಂಥದ್ದೇನಿದೆ ನೋಡಿ

Virat Kohli: ಐಸಿಸಿ ಹೊಸ ವಿಡಿಯೋಗೆ ವಿರಾಟ್ ಕೊಹ್ಲಿ ಫ್ಯಾನ್ಸ್ ಗರಂ, ಅಷ್ಟಕ್ಕೂ ಅಂಥದ್ದೇನಿದೆ ನೋಡಿ

ವಿರಾಟ್ ಕೊಹ್ಲಿ-ಐಸಿಸಿ

ವಿರಾಟ್ ಕೊಹ್ಲಿ-ಐಸಿಸಿ

Virat Kohli: ಈಗಾಗಲೇ ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಈಗಾಗಲೆ ಆರಂಭವಾಗಿದ್ದು, ಲೀಗ್​ನ ಸೂಪರ್ 12 ಪಂದ್ಯಗಳು ಅಕ್ಟೋಬರ್ 22ರಿಂದ ಆರಂಭವಾಗಲಿದೆ. ಏಷ್ಯಾ ಕಪ್ 2022ರ ಸಮಯದಲ್ಲಿ ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ (Virat Kohli) ವಿಶ್ವಕಪ್​ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.

ಮುಂದೆ ಓದಿ ...
  • Share this:

ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಈಗಾಗಲೆ ಆರಂಭವಾಗಿದ್ದು, ಲೀಗ್​ನ ಸೂಪರ್ 12 ಪಂದ್ಯಗಳು ಅಕ್ಟೋಬರ್ 22ರಿಂದ ಆರಂಭವಾಗಲಿದೆ. ಏಷ್ಯಾ ಕಪ್ 2022ರ ಸಮಯದಲ್ಲಿ ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ (Virat Kohli) ವಿಶ್ವಕಪ್​ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ. ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23 ರಂದು ಪಾಕಿಸ್ತಾನದ (IND vs PAK) ವಿರುದ್ಧ ಆಡಬೇಕಾಗಿದೆ. ಇದರ ನಡುವೆ ಐಸಿಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿರಾಟ್ ಕೊಹ್ಲಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಐಸಿಸಿ (ICC) ಹಂಚಿಕೊಂಡಿರುವ ವಿಡಿಯೋದಲ್ಲಿ ಅಂಥದಲ್ಲಿ ಏನಿದೆ ಎಂದು ನೊಡೋಣ ಬನ್ನಿ.


ಕೊಹ್ಲಿ ಫ್ಯಾನ್ಸ್​ಗೆ ಬೇಸರ:


ಹೌದು, ಟಿ20 ವಿಶ್ವಕಪ್​ ಗಾಗಿ ಐಸಿಸಿ ಟೀಂ ಇಂಡಿಯಾಗಾಗಿ ವಿಡಿಯೋವೊಂದನ್ನು ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ನಾಯಕ ರೋಹಿತ್, ಉಪನಾಯಕ ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಹಾಗೂ ಚಹಾಲ್ ಕಾಣಿಸಿಕೊಂಡಿದ್ದಾರೆ. ಆದರೆ ಇದರಲ್ಲಿ ವಿರಾಟ್ ಕೊಹ್ಲಿ ಇಲ್ಲದಿರುವುದು ಇದೀಗ ಎಲ್ಲರ ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಅವರ ಅಭಿಮಾನಿಗಳು ಕೊಹ್ಲಿಯನ್ನು ಐಇಸಿಸಿ ಕಡೆಗಣಿಸಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.









View this post on Instagram






A post shared by ICC (@icc)





ವಿರಾಟ್ ಜೊತೆ ಬ್ಯಾಟ್ ಬೀಸಿದ ಬಾಬರ್:


ಆಸ್ಟ್ರೇಲಿಯಾ ವಿರುದ್ಧದ ಭಾರತದ T20 ವಿಶ್ವಕಪ್ ಅಭ್ಯಾಸ ಪಂದ್ಯ ನಂತರ ವಿರಾಟ್ ಕೊಹ್ಲಿ ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿತು. ವಿರಾಟ್ ಕೊಹ್ಲಿ ಪಾಕಿಸ್ತಾನ ತಂಡದೊಂದಿಗೆ ಗಬ್ಬಾದಲ್ಲಿ ನೆಟ್ ಅಭ್ಯಾಸ ನಡೆಸುತ್ತಿದ್ದಾರೆ. ವಿರಾಟ್ 40 ನಿಮಿಷಗಳ ಸುದೀರ್ಘ ತರಬೇತಿಯನ್ನು ಮಾಡಿದರು.


ಇದನ್ನೂ ಓದಿ: T20 WC 2022 IND vs PAK: ಭಾರತ-ಪಾಕ್​ ಹೈವೋಲ್ಟೇಜ್​ ಕದನಕ್ಕೆ ಜೋಶ್​ ತುಂಬಿದ WWE ಸೂಪರ್​ ಸ್ಟಾರ್​!


ಪಾಕಿಸ್ತಾನದ ನಾಯಕರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರು ನೆಟ್ಸ್‌ನಲ್ಲಿ ಉಪಸ್ಥಿತರಿದ್ದರು ಮತ್ತು ಕೊಹ್ಲಿ ಪಕ್ಕದ ನೆಟ್ಸ್‌ನಲ್ಲಿ ತಮ್ಮ ಬ್ಯಾಟಿಂಗ್ ಅಭ್ಯಾಸವನ್ನು ನಡೆಸುತ್ತಿದ್ದರು. ಬ್ಯಾಟಿಂಗ್ ಅವಧಿಯ ನಂತರ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಳಿ ಹೋಗಿ ಮಾತನಾಡಿದ್ದಾರೆ. ಆಸ್ಟ್ರೇಲಿಯಾದೊಂದಿಗಿನ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಔಟಾದ ರೀತಿಯ ಎಸೆತಗಳನ್ನು ಹೆಚ್ಚಾಗಿ ಎದುರಿಸಿದ್ದಾರೆ.

ಕೊಹ್ಲಿಗೆ ವಿಶ್ರಾಂತಿ:




ವೆಸ್ಟರ್ನ್ ಆಸ್ಟ್ರೇಲಿಯಾ XI ವಿರುದ್ಧದ ಮೊದಲ ಎರಡು ಅಭ್ಯಾಸ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಇದರ ನಂತರ, ಹಾಲಿ ಟಿ20 ವಿಶ್ವ ಚಾಂಪಿಯನ್ ಮತ್ತು ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಆಡುವ XI ಗೆ ಮರಳಿದರು. ಆದರೆ, ಪಂದ್ಯದಲ್ಲಿ ವಿಶೇಷ ರನ್ ಗಳಿಸಲು ಸಾಧ್ಯವಾಗಲಿಲ್ಲ. ಕೊಹ್ಲಿ 13 ಎಸೆತಗಳಲ್ಲಿ 19 ರನ್ ಗಳಿಸಿದರು ಮತ್ತು ಮಿಚೆಲ್ ಸ್ಟಾರ್ಕ್ ಶಾರ್ಟ್ ಬಾಲ್‌ನಲ್ಲಿ ಔಟಾದರು.


ಇದನ್ನೂ ಓದಿ: IND vs PAK: ಪಾಕ್​ನಲ್ಲಿ ಮ್ಯಾಚ್​ ಆಡಲ್ಲ ಅಂದಿದ್ದಕ್ಕೆ ಪಿಸಿಬಿಗೆ ಉರಿ ಉರಿ! ವಿಶ್ವಕಪ್​ಗೆ ಬರಲ್ಲ ಅಂತ ಪಟ್ಟು ಹಿಡಿದ್ರಾ?



ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

Published by:shrikrishna bhat
First published: