• Home
  • »
  • News
  • »
  • sports
  • »
  • Virat Kohli: ಕೊಹ್ಲಿ ಬೆಡ್​​​ ರೂಂ ವಿಡಿಯೋ ವೈರಲ್​, ತಾಳ್ಮೆ ಕಳೆದುಕೊಂಡ ವಿರಾಟ್!

Virat Kohli: ಕೊಹ್ಲಿ ಬೆಡ್​​​ ರೂಂ ವಿಡಿಯೋ ವೈರಲ್​, ತಾಳ್ಮೆ ಕಳೆದುಕೊಂಡ ವಿರಾಟ್!

ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ

T20 World Cup 2022: ವಿಡಿಯೋದಲ್ಲಿ ಕೊಹ್ಲಿ ಡ್ರೆಸ್ಸಿಂಗ್ ಗೆ ಸಂಬಂಧಿಸಿದ ವಸ್ತುಗಳನ್ನು ಹೊಂದಿದ್ದಾರೆ. ಅದೇ ವೇಳೆಗೆ ಕೊಹ್ಲಿ ಕೊಠಡಿಯಲ್ಲಿರುವ ಬೆಡ್ ಮೇಲೆ ದೇವರ ಮೂರ್ತಿಗಳಿವೆ. ಆದರೆ ಅವರ ಕೋಣೆಯ ವಿಡಿಯೋ ಹೊರಬಿದ್ದ ಬಳಿಕ ಕೊಹ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ.

  • Share this:

ಸೆಲೆಬ್ರಿಟಿಗಳ (Celebrity) ಜೀವನ ಹೇಗಿರುತ್ತೆ ಅಂತ ತಿಳಿದುಕೊಳ್ಳುವ ಆಸಕ್ತಿ ಎಲ್ಲರಿಗೂ ಇರುತ್ತದೆ. ಆದರೆ ಕೆಲವೊಮ್ಮೆ ಸೆಲೆಬ್ರಿಟಿಗಳ ಖಾಸಗಿ (Personal) ವಿಚಾರಕ್ಕೆ ಹೋದಾಗ ಮಾತ್ರ ಸೆಲೆಬ್ರಿಟಿಗಳಿಗೂ ಕೋಪ ಬರುತ್ತೆ. ಇದೀಗ ಅಂಥದ್ದೇ ಒಂದು ಘಟನೆ ನಡೆದಿದೆ. ಅದು ಕೂಡ ಟೀಂ ಇಂಡಿಯಾ (Team India) ದ ಮಾಜಿ ಕ್ಯಾಪ್ಟನ್, ದೇಶ ಕಂಡ ಅದ್ಭುತ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ (Virat Kohli) ಯವರ ಹೋಟೆಲ್​ ರೂಮ್ (Hotel Room) ​ವೊಂದರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಅವರಿಗೆ ಸಂಬಂಧಿಸಿದ ಎಲ್ಲದರ ಬಗ್ಗೆ ತುಂಬಾ ಆಸಕ್ತಿ ವಹಿಸುತ್ತಾರೆ. ಅವರು ಕುಡಿಯುವ ನೀರಿನಿಂದ ಹಿಡಿದು ಮಾಡುವ ಕಸರತ್ತು, ಗಳಿಕೆಯಿಂದ ಹಿಡಿದು ತೊಡುವ ಬಟ್ಟೆ ಹೀಗೆ ಕೊಹ್ಲಿಯ ಪ್ರತಿಯೊಂದು ಸಣ್ಣ ವಿಷಯವೂ ಎಲ್ಲರನ್ನೂ ಆಕರ್ಷಿಸುತ್ತದೆ.


ಕೊಹ್ಲಿ ಹೋಟೆಲ್ ರೂಮ್​ ವಿಡಿಯೋ ವೈರಲ್!


ಸದ್ಯ ಕೊಹ್ಲಿ 2022ರ ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾದಲ್ಲಿದ್ದಾರೆ ಎಂಬುದು ಗೊತ್ತೇ ಇದೆ. ಆದರೆ ಅವರು ಇದ್ದ ಹೋಟೆಲ್ ರೂಮಿನ ವಿಡಿಯೋ ಹೊರಬಿದ್ದಿದೆ. ಕೊಹ್ಲಿಯ ಕೊಠಡಿ ಒಳಗೆ ಹೇಗಿದೆ ಎಂಬುದನ್ನು ಇದು ತೋರಿಸುತ್ತದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ವಿಡಿಯೋದಲ್ಲಿ ಕೊಹ್ಲಿ ಡ್ರೆಸ್ಸಿಂಗ್ ಗೆ ಸಂಬಂಧಿಸಿದ ವಸ್ತುಗಳನ್ನು ಹೊಂದಿದ್ದಾರೆ. ಅದೇ ವೇಳೆಗೆ ಕೊಹ್ಲಿ ಕೊಠಡಿಯಲ್ಲಿರುವ ಬೆಡ್ ಮೇಲೆ ದೇವರ ಮೂರ್ತಿಗಳಿವೆ. ಆದರೆ ಅವರ ಕೋಣೆಯ ವಿಡಿಯೋ ಹೊರಬಿದ್ದ ಬಳಿಕ ಕೊಹ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ.


ತಾಳ್ಮೆ ಕಳೆದುಕೊಂಡ ಕಿಂಗ್​ ಕೊಹ್ಲಿ!


ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ವಿರಾಟ್​ ಕೊಹ್ಲಿ ಕೋಪಗೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. 'ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ನೋಡುವುದು... ಅವರನ್ನು ಭೇಟಿಯಾಗುವುದು ಅಭಿಮಾನಿಗಳಿಗೆ ಖುಷಿ ನೀಡುತ್ತದೆ. ನಾವು  ಕೂಡ ಅಭಿಮಾನಿಗಳನ್ನು ಭೇಟಿ ಮಾಡಲು ಉತ್ಸುಕರಾಗಿದ್ದೇವೆ. ಆದರೆ ಈ ವಿಡಿಯೋ ನನಗೆ ಬೇಸರ ತಂದಿದೆ. ನನ್ನ ಕೋಣೆಯಲ್ಲಿಯೂ ನನಗೆ ಖಾಸಗಿತನವಿಲ್ಲ. ನನ್ನ ಕೋಣೆಯಲ್ಲಿ ಗೌಪ್ಯತೆಯನ್ನು ಹೊಂದಿಲ್ಲದಿದ್ದರೆ, ನಾನು ಅದನ್ನು ಎಲ್ಲಿ ಹೊಂದಬಹುದು? ಅಂತಹ ಅಭಿಮಾನವನ್ನು ನಾನು ಬೆಂಬಲಿಸಲಾರೆ. ಇತರರ ಖಾಸಗಿತನವನ್ನು ಗೌರವಿಸಿ ಅವರನ್ನು ವಸ್ತುಗಳಂತೆ ಪರಿಗಣಿಸಬೇಡಿ' ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದು ವಿಡಿಯೋ ಜೊತೆ ಪೋಸ್ಟ್ ಮಾಡಿದ್ದಾರೆ.









View this post on Instagram






A post shared by Virat Kohli (@virat.kohli)




ಇದನ್ನೂ ಓದಿ: ರಾಹುಲ್​ ಮೇಲೆ ಯಾಕಿಷ್ಟು ಕುರುಡು ನಂಬಿಕೆ? ರನ್​ ಬರದಿದ್ರೂ ಚಾನ್ಸ್​ ಕೊಡ್ತಿರೋದು ಆ ಕಾರಣಕ್ಕಾ?


ಸೂಪರ್​ ಫಾರ್ಮ್​ನಲ್ಲಿರೋ ಕಿಂಗ್ ವಿರಾಟ್​!


ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಸೂಪರ್ ಫಾರ್ಮ್‌ನಲ್ಲಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕಗಳೊಂದಿಗೆ ಅಜೇಯರಾಗಿ ಉಳಿದು ತಂಡದ ಯಶಸ್ಸಿನಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಿದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೇವಲ 12 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಈ ಪಂದ್ಯದಲ್ಲಿ ಆಡದಿದ್ದರೂ, ಟಿ20 ವಿಶ್ವಕಪ್‌ನಲ್ಲಿ 1000 ರನ್ ಗಳಿಸಿದ ಟೀಂ ಇಂಡಿಯಾದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದಿದ್ದಾರೆ ಕೊಹ್ಲಿ.


ಸದ್ಯ ಕೊಹ್ಲಿ 1,001 ರನ್ ಗಳಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್ ಮಹೇಲಾ ಜಯವರ್ಧನೆ ಮೊದಲ ಸ್ಥಾನದಲ್ಲಿದ್ದಾರೆ. ಅವರು 1,016 ರನ್ ಗಳಿಸಿದ್ದಾರೆ. ಕೊಹ್ಲಿ ಇನ್ನೂ 16 ರನ್ ಗಳಿಸಿದರೆ ಜಯವರ್ಧನೆ ದಾಖಲೆ ಸರಿಗಟ್ಟಲಿದ್ದಾರೆ.


ಇದನ್ನೂ ಓದಿ:ಟೀಂ ಇಂಡಿಯಾಗೆ ಬಿಗ್​ ​ಶಾಕ್, ತಂಡಕ್ಕೆ ಬೆನ್ನೆಲುಬಾಗಿದ್ದ ಆಟಗಾರನ ಬೆನ್ನಿಗೆ ಗಾಯ! ಮುಂದಿನ ಪಂದ್ಯಕ್ಕೆ ಅಲಭ್ಯ


ಇನ್ನೂ ಟೀಂ ಇಂಡಿಯಾ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಕ್ಕೆ ದಿನೇಶ್ ಕಾರ್ತಿಕ್​ ಅಲಭ್ಯರಾಗಿದ್ದಾರೆ. ಸೌತ್​ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ಬೆನ್ನಿಗೆ ಗಾಯ ಮಾಡಿಕೊಂಡಿದ್ದಾರೆ ದಿನೇಶ್ ಕಾರ್ತಿಕ್​. ಹೀಗಾಗಿ ಮುಂದಿನ ಪಂದ್ಯದಲ್ಲಿ ಅವರು ಆಡೋದು ಡೌಟ್​ ಎನ್ನಲಾಗುತ್ತಿದೆ.

Published by:ವಾಸುದೇವ್ ಎಂ
First published: