• Home
  • »
  • News
  • »
  • sports
  • »
  • Virat Kohli-Babar Azam: ವಿರಾಟ್ ಕೊಹ್ಲಿ ಜೊತೆ ಬಾಬರ್​ ಅಜಮ್ ಬ್ಯಾಟಿಂಗ್, ವೈರಲ್ ಆಯ್ತು ನೆಟ್ ಪ್ರಾಕ್ಟೀಸ್ ವಿಡಿಯೋ

Virat Kohli-Babar Azam: ವಿರಾಟ್ ಕೊಹ್ಲಿ ಜೊತೆ ಬಾಬರ್​ ಅಜಮ್ ಬ್ಯಾಟಿಂಗ್, ವೈರಲ್ ಆಯ್ತು ನೆಟ್ ಪ್ರಾಕ್ಟೀಸ್ ವಿಡಿಯೋ

ವಿರಾಟ್-ಬಾಬರ್

ವಿರಾಟ್-ಬಾಬರ್

Virat Kohli-Babar Azam: ವಿರಾಟ್ ಕೊಹ್ಲಿ ಗಬ್ಬಾದಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಅಲ್ಲದೇ ಕೊಹ್ಲಿ ಪಾಕಿಸ್ತಾನ ತಂಡದೊಂದಿಗೆ ಗಬ್ಬಾದಲ್ಲಿ ನೆಟ್ ಅಭ್ಯಾಸ ನಡೆಸುತ್ತಿದ್ದಾರೆ.

  • Share this:

ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಈಗಾಗಲೆ ಆರಂಭವಾಗಿದ್ದು, ಲೀಗ್​ನ ಸೂಪರ್ 12 ಪಂದ್ಯಗಳು ಅಕ್ಟೋಬರ್ 22ರಿಂದ ಆರಂಭವಾಗಲಿದೆ. ಏಷ್ಯಾ ಕಪ್ 2022ರ ಸಮಯದಲ್ಲಿ ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ (Virat Kohli), ವಿಶ್ವಕಪ್​ನಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.  ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 23 ರಂದು ಪಾಕಿಸ್ತಾನದ (IND vs PAK) ವಿರುದ್ಧ ಆಡಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಆರಂಭಿಕ ಜೋಡಿ ಬಾಬರ್ ಅಜಮ್ (Babar Azam) ಮತ್ತು ಮೊಹಮ್ಮದ್ ರಿಜ್ವಾನ್ ಕೂಡ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಈ ಮೂವರು ಅಗ್ರ ಆಟಗಾರರು ಒಟ್ಟಿಗೆ ಆಡುವುದನ್ನು ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ.


ನೆಟ್​ ಅಭ್ಯಾಸದಲ್ಲಿ ವಿರಾಟ್-ಬಾಬರ್:


ಆಸ್ಟ್ರೇಲಿಯಾ ವಿರುದ್ಧದ ಭಾರತದ T20 ವಿಶ್ವಕಪ್ ಅಭ್ಯಾಸ ಪಂದ್ಯವು ಸೋಮವಾರ ಸಂಜೆ ಗಬ್ಬಾದಲ್ಲಿ ಕೊನೆಗೊಂಡಿತು. ಇದಾದ ನಂತರ ವಿರಾಟ್ ಕೊಹ್ಲಿ ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿರುವುದು ಕಂಡು ಬಂದಿತು. ವಿರಾಟ್ ಕೊಹ್ಲಿ ಪಾಕಿಸ್ತಾನ ತಂಡದೊಂದಿಗೆ ಗಬ್ಬಾದಲ್ಲಿ ನೆಟ್ ಅಭ್ಯಾಸ ನಡೆಸುತ್ತಿದ್ದಾರೆ. ವಿರಾಟ್ 40 ನಿಮಿಷಗಳ ಸುದೀರ್ಘ ತರಬೇತಿಯನ್ನು ಮಾಡಿದರು.ಪಾಕಿಸ್ತಾನದ ನಾಯಕರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರು ನೆಟ್ಸ್‌ನಲ್ಲಿ ಉಪಸ್ಥಿತರಿದ್ದರು ಮತ್ತು ಕೊಹ್ಲಿ ಪಕ್ಕದ ನೆಟ್ಸ್‌ನಲ್ಲಿ ತಮ್ಮ ಬ್ಯಾಟಿಂಗ್ ಅಭ್ಯಾಸವನ್ನು ನಡೆಸುತ್ತಿದ್ದರು. ಬ್ಯಾಟಿಂಗ್ ಅವಧಿಯ ನಂತರ ವಿರಾಟ್ ಕೊಹ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಳಿ ಹೋಗಿ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಅಭ್ಯಾಸದ ವೇಳೆ ರಾಹುಲ್ ದ್ರಾವಿಡ್ ಅಲ್ಲಿದ್ದರು. ಆಸ್ಟ್ರೇಲಿಯಾದೊಂದಿಗಿನ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಔಟಾದ ರೀತಿಯ ಎಸೆತಗಳನ್ನು ಹೆಚ್ಚಾಗಿ ಎದುರಿಸಿದ್ದಾರೆ.


ಇದನ್ನೂ ಓದಿ: T20 WC Team India: ಟೀಂ ಇಂಡಿಯಾ 17 ದಿನ ಮುಂಚಿತವಾಗಿ ಆಸ್ಟ್ರೇಲಿಯಾಗೆ ಹೋಗಿದ್ದು ಈ ಕಾರಣಕ್ಕಂತೆ, ಕೊನೆಗೂ ರಿವೀಲ್​ ಆಯ್ತು ರಹಸ್ಯ


ಮೊದಲೆರಡು ಪಂದ್ಯದಲ್ಲಿ ವಿಶ್ರಾಂತಿ:


ವೆಸ್ಟರ್ನ್ ಆಸ್ಟ್ರೇಲಿಯಾ XI ವಿರುದ್ಧದ ಮೊದಲ ಎರಡು ಅಭ್ಯಾಸ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಇದರ ನಂತರ, ಹಾಲಿ ಟಿ 20 ವಿಶ್ವ ಚಾಂಪಿಯನ್ ಮತ್ತು ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಆಡುವ XI ಗೆ ಮರಳಿದರು. ಆದರೆ, ಪಂದ್ಯದಲ್ಲಿ ವಿಶೇಷ ರನ್ ಗಳಿಸಲು ಸಾಧ್ಯವಾಗಲಿಲ್ಲ. ಕೊಹ್ಲಿ 13 ಎಸೆತಗಳಲ್ಲಿ 19 ರನ್ ಗಳಿಸಿದರು ಮತ್ತು ಮಿಚೆಲ್ ಸ್ಟಾರ್ಕ್ ಶಾರ್ಟ್ ಬಾಲ್‌ನಲ್ಲಿ ಔಟಾದರು.


ಕೇವಲ ಒಂದು ತಿಂಗಳ ಹಿಂದೆ, ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಸುದೀರ್ಘ ವಿರಾಮದ ನಂತರ ಭಾರತ ತಂಡಕ್ಕೆ ಮರಳಿದರು. ಏಷ್ಯಾ ಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ 122 ರನ್ ಗಳಿಸುವ ಮೂಲಕ ತನ್ನ ಮೂರು ವರ್ಷಗಳ ಶತಕಗಳ ಬರವನ್ನು ಕೊನೆಗೊಳಿಸಿದ ಕಾರಣ ಭಾರತದ ಮಾಜಿ ನಾಯಕ ಫಾರ್ಮ್‌ಗೆ ಮರಳಿದರು. ಅಂದಿನಿಂದ ಕೊಹ್ಲಿ ಆಕರ್ಷಕ ಫಾರ್ಮ್‌ನಲ್ಲಿದ್ದಾರೆ ಮತ್ತು ಅವರು ಟಿ20 ಕ್ರಿಕೆಟ್‌ನಲ್ಲಿ ಭಾರತದ ಹೊಸ ಬ್ಯಾಟಿಂಗ್ ಮಾದರಿಗೆ ಸಂಪೂರ್ಣವಾಗಿ ಹೊಂದಿಕೊಂಡಿದ್ದಾರೆ ಎಂದು ಕ್ರಿಕೆಟ್​ ಪಂಡಿತರು ಹೇಳುತ್ತಿದ್ದಾರೆ.


ಇದನ್ನೂ ಓದಿ: T20 WC Team India: ಪಾಕ್‌ಗೆ ಬೆಣ್ಣೆ, ಭಾರತಕ್ಕೆ ಸುಣ್ಣ; ಹೋಟೆಲ್‌ ರೂಂ ಕೊಡುವಲ್ಲೂ ಐಸಿಸಿ ತಾರತಮ್ಯ!


ಟಿ20 ವಿಶ್ವಕಪ್​ಗೆ ಭಾರತ ತಂಡ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

Published by:shrikrishna bhat
First published: