Virat Kohli: ಕೊಹ್ಲಿ ಕ್ರಿಕೆಟ್​ನಿಂದ ನಿವೃತ್ತಿ ಆಗಬೇಕು, ಶಾಕಿಂಗ್​ ಹೇಳಿಕೆ ನೀಡಿದ ಪಾಕ್​ ಮಾಜಿ ನಾಯಕ

Virat Kohli: ಕೊಹ್ಲಿ ಫಾರ್ಮ್​ಗೆ ಮರಳಿದ ನಂತರವೂ ಇದೀಗ ಪಾಕ್​ನ ಮಾಜಿ ನಾಯಕ ಅವರ ನಿವೃತ್ತಿಯ ಬಗ್ಗೆ ಮಾತನಾಡಿದ್ದು, ಸಖತ್​ ಚರ್ಚೆಗೆ ಕಾರಣವಾಗಿದೆ.

ಕೊಹ್ಲಿ-ಅಫ್ರಿದಿ

ಕೊಹ್ಲಿ-ಅಫ್ರಿದಿ

  • Share this:
ಏಷ್ಯಾಕಪ್‌ನಲ್ಲಿ (Asia Cup) ಎರಡು ಅರ್ಧಶತಕಗಳು ಮತ್ತು ಅವರ ಚೊಚ್ಚಲ T20I ಶತಕದೊಂದಿಗೆ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್​ಗೆ ಮರಳಿದ್ದಾರೆ. ಇಂಗ್ಲೆಂಡ್ ಪ್ರವಾಸದ ನಂತರ ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್‌ನಿಂದ ಒಂದು ತಿಂಗಳ ವಿರಾಮ ತೆಗೆದುಕೊಂಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅನೇಕ ಅನುಭವಿಗಳು ಅವರನ್ನು ಟೀಕಿಸಿದರೆ, ಉಳಿದ ಯಂಗ್​ ಪ್ಲೇಯರ್ಸ್​ಗಳು ಕೊಹ್ಲಿ ಪರವಾಗಿ ಬ್ಯಾಟ್​ ಬೀಸಿದ್ದಾರೆ. ಆದರೆ ಇದೀಗ ಅವರೆಲ್ಲರಿಗೂ ಕೊಹ್ಲಿ ತಮ್ಮ ಬ್ಯಾಟಿಂಗ್​ ಮೂಲಕ ಉತ್ತರ ನೀಡಿದ್ದಾರೆ. ಅಲ್ಲದೇ ಮುಂಬರುವ ಟಿ20 ವಿಶ್ವಕಪ್​ಗೆ (T20 World Cup) ತಂಡದ ದೊಡ್ಡ ತಲೆನೋವಾಗಿದ್ದ ಕೊಹ್ಲಿ ಫಾರ್ಮ್​ ಬಗ್ಗೆ ಇದೀಗ ಸ್ಪಷ್ಟನೆ ದೊರಕಿದ್ದು, ತಂಡದಲ್ಲಿ ಹೊಸ ಆಶಾಭಾವನೆ ಮೂಡಿದೆ. ಆದರೆ ಕೊಹ್ಲಿ ಫಾರ್ಮ್​ಗೆ ಮರಳಿದ ನಂತರವೂ ಇದೀಗ ಪಾಕ್​ನ ಮಾಜಿ ನಾಯಕ ಅವರ ನಿವೃತ್ತಿಯ ಬಗ್ಗೆ ಮಾತನಾಡಿದ್ದು, ಸಖತ್​ ಚರ್ಚೆಗೆ ಕಾರಣವಾಗಿದೆ.

ಕೊಹ್ಲಿಗೆ ನಿವೃತ್ತಿ ಸಮಯ ಬಂದಿದೆ:

ಹೌದು, ಇಂತಹುದೊಂದು ಶಾಕಿಂಗ್​ ಹೇಳಿಕೆ ನೀಡಿರುವ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ತಂಡದಿಂದ ಕೈಬಿಡುವುದು ಅಫ್ರಿದಿಗೆ ಇಷ್ಟವಿಲ್ಲವಂತೆ. ಈ ಕುರಿತು ಮಾತನಾಡಿರುವ ಅವರು, ‘ವಿರಾಟ್ ಕೊಹ್ಲಿ ಅವರ ವೃತ್ತಿ ಜೀವನ, ಅವರ ಆಟದ ವೈಖರಿ, ಅವರ ವೃತ್ತಿಜೀವನದ ಆರಂಭ ಎಲ್ಲವೂ ಉತ್ತಮವಾಗಿತ್ತು. ವಿರಾಟ್ ಕೊಹ್ಲಿ ಚಾಂಪಿಯನ್ ನೀವು ನಿವೃತ್ತಿಯತ್ತ ಸಾಗುವ ಹಂತ ಬಂದಿದೆ ಎಂದು ನನಗೆ ಅನಿಸುತ್ತಿದೆ. ಆದರೆ ಈ ವೇಳೆ ಉನ್ನತ ಮಟ್ಟದಲ್ಲಿ ಹೋಗುವುದು ನಿಮ್ಮ ಗುರಿಯಾಗಬೇಕು. ಆದರೆ ನೀವು ಉತ್ತುಂಗದಲ್ಲಿ ಇರುವಾಗ ನಿಮ್ಮ ತಂಡ ನಿಮ್ಮನ್ನು ತಂಡದಿಂದ ಕೈಬಿಡುವ ಹಂತವನ್ನು ತಲುಪಬಾರದು. ಅದಕ್ಕಾಗಿ ಅವರು ಇದೀಗ ನಿವೃತ್ತಿ ಹೊಂದುವುದು ಒಳ್ಳೆಯದು. ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶೈಲಿಯಲ್ಲಿ ಮತ್ತು ಬಹುಶಃ ಅದೇ ರೀತಿಯಲ್ಲಿ ಮುಗಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಅನಿಸುತ್ತದೆ‘ ಎಂದು ಹೇಳಿದ್ದಾರೆ.

ಆದರೆ ಕೊಹ್ಲಿ ಇದೀಗ ಮತ್ತೆ ಫಾರ್ಮ್​ಗೆ ಮರಳಿದ್ದು, ಈ ಸಮಯದಲ್ಲಿ ಅವರ ನಿವೃತ್ತಿ ಕುರಿತು ಮಾತನಾಡುತ್ತಿರುವುದು ಸರಿಯಲ್ಲ ಎಂದು ಅನೇಕ ನೆಟ್ಟಿಗರು ಹೇಳುತ್ತಿದ್ದಾರೆ. ಏಕೆಂದರೆ ಮುಂಬರುವ ಟಿ20 ವಿಶ್ವಕಪ್​ ಜೊತೆಗೆ, ಮುಂದಿನ ವರ್ಷ ಭಾರತದಲ್ಲಿಯೇ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಭಾರತ ತಂಡಕ್ಕೆ ಇವರ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Team India: ಟಿ20 ವಿಶ್ವಕಪ್‌ಗೆ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಟೀಂ ಇಂಡಿಯಾ, ವೈರಲ್​ ಆಯ್ತು ವಿಡಿಯೋ

ಕೊಹ್ಲಿ ನನಗಿಂತ ಉತ್ತಮ ಎಂದಿದ್ದ ಗಂಗೂಲಿ: 

ಕೊಹ್ಲಿ ಕುರಿತು ಮಾತನಾಡಿರುವ ಗಂಗೂಲಿ, ‘ಕೊಹ್ಲಿ ಭಾರತಕ್ಕಾಗಿ ಮಾತ್ರವಲ್ಲ, ತನಗಾಗಿಯೂ ರನ್ ಗಳಿಸಬೇಕಾಗಿದೆ. ಇದು ಅವರಿಗೆ ಉತ್ತಮ ಸೀಸನ್ ಆಗಲಿದೆ ಎಂದು ಭಾವಿಸುತ್ತೇವೆ. ಅವರು ಲಯಕ್ಕೆ ಮರಳುತ್ತಾರೆ ಎಂದು ನಮಗೆಲ್ಲರಿಗೂ ವಿಶ್ವಾಸವಿದೆ. ವಿರಾಟ್‌ ಕೊಹ್ಲಿ ತಮಗಿಂತಲೂ ಅತ್ಯಂತ ಕೌಶಲಭರಿತ ಬ್ಯಾಟ್ಸ್‌ಮನ್‌ ಮತ್ತು ಉತ್ತಮ ಆಟಗಾರ. ಇದೇ ರೀತಿ ಅವರು ತಮ್ಮ ಬ್ಯಾಟಿಂಗ್​ ಮುಂದುವರೆಸಬೇಕು. ಹೋಲಿಕೆಯು ಆಟಗಾರನಾಗಿ ಕೌಶಲದ ದೃಷ್ಟಿಯಿಂದ ಇರಬೇಕು. ನನಗಿಂತಲೂ ಕೊಹ್ಲಿ ಹೆಚ್ಚಿನ ಪಂದ್ಯಗಳನ್ನು ಆಡಬಹುದು. ಆತ ಓರ್ವ ಪ್ರಚಂಡ ಆಟಗಾರ‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: Smriti Mandhana: ದೇಶ ಪ್ರೇಮ ಅಂದ್ರೆ ಇದೇ ಅಲ್ವಾ, ಮಂಧನಾ ಮೇಲಿದ್ದ ಅಭಿಮಾನ ಮತ್ತಷ್ಟು ಹೆಚ್ಚಾಯ್ತು

ಟಿ20 ವಿಶ್ವಕಪ್​ಗೆ ಭಾರತ ತಂಡ:

ಟಿ20 ವಿಶ್ವಕಪ್​ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (WC), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ವೈ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಬಿ. ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
Published by:shrikrishna bhat
First published: