• Home
  • »
  • News
  • »
  • sports
  • »
  • T20 World Cup: ಈ ಆಟಗಾರರಿಗೆ ಇದು ಕೊನೆಯ ವಿಶ್ವಕಪ್? ಈಗ್ಲಾದ್ರೂ ಬದಲಾಗಬೇಕು ಎಂದ ದ್ರಾವಿಡ್

T20 World Cup: ಈ ಆಟಗಾರರಿಗೆ ಇದು ಕೊನೆಯ ವಿಶ್ವಕಪ್? ಈಗ್ಲಾದ್ರೂ ಬದಲಾಗಬೇಕು ಎಂದ ದ್ರಾವಿಡ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IND vs ENG: ಸೆಮಿಫೈನಲ್‌ನಲ್ಲಿ ಭಾರತವು ಇಂಗ್ಲೆಂಡ್‌ನ ಸವಾಲನ್ನು ಸುಲಭವಾಗಿ ಜಯಿಸಿ ಫೈನಲ್‌ಗೆ lಗ್ಗೆ ಇಟ್ಟಿದೆ. ಆದರೆ ಇದೀಗ ಈ ಸೋಲು ಭಾರತ ತಂಡದಲ್ಲಿ ಕೆಲ ಹಿರಿಯ ಆಟಗಾರರಿಗೆ ಅವಕಾಶ ಸಿಗುವುದೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.

  • Share this:

ಟಿ20 ವಿಶ್ವಕಪ್ ನಲ್ಲಿ (T20 World Cup) ಭಾರತ ತಂಡ (Team India) ಹೀನಾಯ ಸೋಲಿನ ಬಳಿಕ ಭಾರತದ ಹಿರಿಯ ಆಟಗಾರರ ಭವಿಷ್ಯದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ. ಇಂಗ್ಲೆಂಡ್ (England) ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳಿಂದ ಇಂಗ್ಲೆಂಡ್ ವಿರುದ್ಧ ಸೋತಿತ್ತು. ಭಾರತ ನೀಡಿದ 169 ರನ್‌ಗಳ ಸವಾಲನ್ನು ಇಂಗ್ಲೆಂಡ್ ಸುಲಭವಾಗಿ ದಾಟಿ ಫೈನಲ್‌ಗೆ ಲಗ್ಗೆ ಇಟ್ಟಿತು. ಆದರೆ ಇದೀಗ ಈ ಸೋಲು ಭಾರತ ತಂಡದಲ್ಲಿ ಮತ್ತೆ ಕೆಲ ಹಿರಿಯ ಆಟಗಾರರಿಗೆ ಅವಕಾಶ ಸಿಗುವುದೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಅಲ್ಲದೇ ಈ ಕುರಿತು ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಸಹ ಮಾತನಾಡಿದ್ದಾರೆ.


ಹಿರಿಯ ಆಟಗಾರರ ಬಗ್ಗೆ ದ್ರಾವಿಡ್ ಹೇಳಿದ್ದು:


ಮುಂದಿನ ಟಿ20 ವಿಶ್ವಕಪ್ 2024ರಲ್ಲಿ ನಡೆಯಲಿದೆ. ಆದರೆ ಅಂದು ಭಾರತ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆಯುತ್ತಾರಾ? ಹೀಗೊಂದು ಪ್ರಶ್ನೆ ಎಲ್ಲಡೆ ಕೇಳಿಬರುತ್ತಿದೆ. ಮುಂದಿನ ಟಿ20 ವಿಶ್ವಕಪ್ ನಲ್ಲಿ ಅಶ್ವಿನ್ ಹಾಗೂ ಕಾರ್ತಿಕ್ ಆಡದಿರುವುದು ಬಹುತೇಕ ಖಚಿತವಾಗಿದೆ. ಆದರೆ ವಿರಾಟ್ ಮತ್ತು ರೋಹಿತ್ ಫಾರ್ಮ್ ಮತ್ತು ಫಿಟ್ನೆಸ್ ಬಲದ ಮೇಲೆ ಆಡುತ್ತಾರೆಯೇ? ಪಂದ್ಯದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಲಾಯಿತು. ಆ ವೇಳೆ ದ್ರಾವಿಡ್, ಈ ಬಗ್ಗೆ ಇಷ್ಟು ಬೇಗ ಮಾತನಾಡುವುದು ಸೂಕ್ತವಲ್ಲ, ಮುಂದಿನ ವಿಶ್ವಕಪ್‌ಗೆ ಇನ್ನೂ ಸಾಕಷ್ಟು ಸಮಯವಿದೆ ಎಂದಿದ್ದಾರೆ.


ವಿರಾಟ್-ರೋಹಿತ್ ಆಯ್ಕೆ ಏನಾಗಬಹುದು?:


ಸದ್ಯ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ 35 ವರ್ಷ. ವಿರಾಟ್ ಕೊಹ್ಲಿ ಈಗಷ್ಟೇ 34 ವರ್ಷ ಪೂರೈಸಿದ್ದಾರೆ. ಹಾಗಾಗಿ ಫಾರ್ಮ್ ಮತ್ತು ಫಿಟ್‌ನೆಸ್ ಇದ್ದರೆ ಮಾತ್ರ ಇಬ್ಬರಿಗೂ ಆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗುತ್ತದೆ. ಮತ್ತೊಂದೆಡೆ, 36 ವರ್ಷದ ರವಿಚಂದ್ರನ್ ಅಶ್ವಿನ್‌ಗೆ ಇದು ಕೊನೆಯ ವಿಶ್ವಕಪ್ ಆಗಿರಬಹುದು. ದಿನೇಶ್ ಕಾರ್ತಿಕ್ ಕೂಡ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ. ಭುವನೇಶ್ವರ್ ಮತ್ತು ಶಮಿ ಪ್ರದರ್ಶನದಲ್ಲಿ ಸ್ಥಿರತೆ ತೋರದಿದ್ದರೆ, ಮುಂದಿನ ಟಿ20 ವಿಶ್ವಕಪ್‌ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು.


ಇದನ್ನೂ ಓದಿ: IND vs ENG T20 WC 2022: 15 ವರ್ಷಗಳ ಕನಸು ಭಗ್ನ, ರೋಹಿತ್ ಬಳಿಕ ಸೋಲು ನೆನೆದು ಕಣ್ಣೀರಿಟ್ಟ ಪಾಂಡ್ಯ


ಮುಂದಿನ ವರ್ಷ ODI ವಿಶ್ವಕಪ್:


ಇದೇ ವೇಳೆ ಮುಂದಿನ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಆ ವಿಶ್ವಕಪ್ ವರೆಗೂ ರೋಹಿತ್ ಶರ್ಮಾ ಭಾರತ ತಂಡದ ನಾಯಕರಾಗಿ ಉಳಿಯುವ ಸಾಧ್ಯತೆ ಇದೆ. ಭಾರತಕ್ಕೆ ವಿಶ್ವಕಪ್ ಗೆಲ್ಲಲು ಇದು ರೋಹಿತ್‌ಗೆ ಕೊನೆಯ ಅವಕಾಶ ಎಂದೇ ಹೇಳಬಹುದು. ಅಲ್ಲದೇ ತವರಿನಲ್ಲಿ ನಡೆಯುತ್ತಿರುವ ಹಿನ್ನಲೆ ಭಾರತಕ್ಕೆ ಇದು ಒಂದು ಪ್ಲಸ್ ಪಾಯಿಂಟ್ ಆಗಿರಲಿದೆ. ಇದೇ ಕಾರಣಕ್ಕಾಗಿ ಅಭಿಮಾನಿಗಳು ಏಕದಿನ ವಿಶ್ವಕಪ್​ ಆದರೂ ಭಾರತದ ಮಡಿಲಿಗೆ ಬರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ:  IND vs ENG: ಸೋಲಿನ ಬಳಿಕ ಕಣ್ಣೀರಿಟ್ಟ ರೋಹಿತ್ ಶರ್ಮಾ, ಕೊಹ್ಲಿ-ಪಾಂಡ್ಯ ಫುಲ್​ ಅಪ್​ಸೆಟ್​


15 ವರ್ಷಗಳ ಕನಸು ಭಗ್ನ:


ಹೌದು, 2007ರಲ್ಲಿ ಭಾರತ ತಂಡ ಧೋನಿ ನಾಯಕತ್ವದಲ್ಲಿ ಮೊದಲ ಬಾಋಇಗೆ ಟಿ20 ವಿಶ್ವಕಪ್​ನ್ನು ಗೆದ್ದು ಬೀಗಿತ್ತು. ಅದಾದ ಬಳಿಕ ಈವರೆಗೂ ಒಮ್ಮೆಯೂ ಟಿ20 ವಿಶ್ವಕಪ್ ಗೆದ್ದಿಲ್ಲ. ಆದರೆ 15 ವರ್ಷಗಳ ಬಳಿಕ ಈ ಬಾರಿ ಭಾರತ ತಂಡ ಕಪ್​ ಗೆಲ್ಲಲಿದೆ ಎಂದು ಕೋಟ್ಯಾಂತರ ಅಭಿಮಾನಿಗಳು ಕಾತುರರಾಗಿದ್ದರು. ಆದರೆ ಇಂಗ್ಲೆಂಡ್ ವಿರುದ್ಧ ಸೋತ ಬಳಿಕ ಈ ಕನಸು ಛಿಧ್ರವಾಗಿದೆ.

Published by:shrikrishna bhat
First published: