• Home
  • »
  • News
  • »
  • sports
  • »
  • IND vs PAK: ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ನಡೆಯುತ್ತಾ? ಬಿಸಿಸಿಐ ಕೊಟ್ಟ ಉತ್ತರವೇನು?

IND vs PAK: ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ನಡೆಯುತ್ತಾ? ಬಿಸಿಸಿಐ ಕೊಟ್ಟ ಉತ್ತರವೇನು?

IND vs PAK

IND vs PAK

IND vs PAK: ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ತಂಡಗಳು 2012-13ರಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ನಂತರ ಏಕದಿನ ಮತ್ತು ಟಿ20 ಸರಣಿಗಾಗಿ ಪಾಕಿಸ್ತಾನ ಭಾರತ ಪ್ರವಾಸ ಕೈಗೊಂಡಿತ್ತು. ಅಂದಿನಿಂದ ಎರಡೂ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

ಮುಂದೆ ಓದಿ ...
  • Share this:

ಸದ್ಯ ಕ್ರಿಕೆಟ್​ ಅಭಿಮಾನಿಗಳು ಟಿ20 ವಿಶ್ವಕಪ್​ಗಾಗಿ (T20 World Cup 2022) ಕಾತುರತೆಯಿಂದ ಕಾಯುತ್ತಿದ್ದಾರೆ. ಇನ್ನೇನು ಇದೇ ಅಕ್ಟೊಬರ್​ 16ರಿಂದ ಟಿ20 ವಿಶ್ವಕಪ್​ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ. ಈ ಮೆಗಾ ಟೂರ್ನಿಗಾಗಿ ಭಾರತ ತಂಡ (Team India) ಈಗಾಗಲೇ ಆಸೀಸ್​ಗೆ ತಲುಪಿದ್ದು, ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ಅಲ್ಲದೇ ಭಾರತ ತನ್ನ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು ಎದುರಿಸಲಿದೆ. ಆದರೆ ಈ ಎರಡೂ ದೇಶಗಳ ನಡುವೆ ಅನೇಕ ವರ್ಷಗಳಿಂದ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಭಾರತ ಮತ್ತು ಪಾಕಿಸ್ತಾನ (IND vs PAK) ಪಂದ್ಯಗಳು ನಡೆಯುತ್ತಿವೆ. ಆದರೆ ಭವಿಷ್ಯದದಲ್ಲಿ, ಭಾರತ ಮತ್ತು ಪಾಕಿಸ್ತಾನ ತಂಡಗಳು 2023-2027ರ ವರೆಗೆ ದ್ವಿಪಕ್ಷೀಯ ಸರಣಿಯಲ್ಲಿ ಪರಸ್ಪರ ಮುಖಾಮುಖಿಯಾಗುವುದಿಲ್ಲ.  ಈ ಕುರಿತುಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಎಲ್ಲಾ ರಾಜ್ಯಗಳ ಸಂಘಗಳಿಗೆ ಮಾಹಿತಿ ನೀಡಿದೆ.


2027ರ ವರೆಗೆ ಟೀಂ ಇಂಡಿಯಾ ಫುಲ್​ ಬ್ಯೂಸ್​:


ಬಹುರಾಷ್ಟ್ರಗಳ ಪಂದ್ಯಾವಳಿಯ ಹೊರತಾಗಿಯೂ. ಭಾರತೀಯ ಪುರುಷರ ಕ್ರಿಕೆಟ್ ತಂಡವು 2023-2027ರಿಂದ 38 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇದರಲ್ಲಿ 20 ಸ್ವದೇಶದಲ್ಲಿ ಮತ್ತು 18 ವಿದೇಶಿ ನೆಲದಲ್ಲಿ ಸೇರಿವೆ. ಟೀಂ ಇಂಡಿಯಾ ತವರಿನಲ್ಲಿ 21 ಪಂದ್ಯಗಳನ್ನು ಆಡಲಿದ್ದು. ವಿದೇಶದಲ್ಲೂ ಅಷ್ಟೇ ಸಂಖ್ಯೆಯ ಏಕದಿನ ಪಂದ್ಯಗಳನ್ನು ಆಡಲಿದೆ. ಈ ಅವಧಿಯಲ್ಲಿ ಭಾರತ ತವರಿನಲ್ಲಿ 31 ಮತ್ತು ವಿದೇಶದಲ್ಲಿ 30 ಟಿ20 ಪಂದ್ಯಗಳನ್ನು ಆಡಬೇಕಿದೆ.


ಟೀಂ ಇಂಡಿಯಾ 2023 ಮತ್ತು 2027ರ ನಡುವೆ ಒಟ್ಟು 141 ಪಂದ್ಯಗಳನ್ನು
ಆಡಲಿದೆ. ಭಾರತ ಸರ್ಕಾರದ ಅನುಮೋದನೆಯ ತನಕ BCCI ಪಾಕಿಸ್ತಾನದೊಂದಿಗಿನ ದ್ವಿಪಕ್ಷೀಯ ಸರಣಿಗಳ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಭಾರತ ತಂಡವು ಕಳೆದ ಬಾರಿ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ 141 ದ್ವಿಪಕ್ಷೀಯ ಪಂದ್ಯಗಳನ್ನು ಮಾತ್ರ ಆಡಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದಾಗಿ ಭಾರತದ ಪಂದ್ಯಗಳನ್ನು ಕಡಿತಗೊಳಿಸಲಾಗಿದೆ. ಮುಂಬರುವ ಐಪಿಎಲ್‌ನಲ್ಲಿ 75-80 ಪಂದ್ಯಗಳು ನಡೆಯಲಿವೆ.


ಇದನ್ನೂ ಓದಿ: T20 World Cup: ಈ ಪಂಚಸೂತ್ರ ಗೆದ್ದರೆ ಮಾತ್ರ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆಲ್ಲೋದಂತೆ!


ಆಸ್ಟ್ರೇಲಿಯಾ-ಇಂಗ್ಲೆಂಡ್ ಜೊತೆ ಸರಣಿ:


ಪ್ರತಿ ವರ್ಷ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಜೊತೆ ತವರು ಮತ್ತು ವಿದೇಶದಲ್ಲಿ ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗಳನ್ನು ಆಡಲಿದೆ. ಭಾರತ ತಂಡವು ಎರಡು ವರ್ಷಗಳಿಗೊಮ್ಮೆ ದೇಶ ಮತ್ತು ವಿದೇಶದಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಎಫ್‌ಟಿಪಿಯ ಮುಂದಿನ ಸುತ್ತಿನಲ್ಲಿ ಭಾರತವು ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯಗಳನ್ನು ಆಡಬೇಕಿದೆ. ತವರಿನಲ್ಲಿ ಎರಡೂ ತಂಡಗಳ ವಿರುದ್ಧ ಟೀಂ ಇಂಡಿಯಾ 5 ಟಿ20 ಪಂದ್ಯಗಳನ್ನು ಆಡಲಿದೆ.


ಟಿ20 ವಿರ್ಶವಕಪ್​ನಲ್ಲಿ ಭಾರತ-ಪಾಕ್ ಮುಖಾಮುಖಿ:


ಇತ್ತೀಚಿನ ಏಷ್ಯಾ ಕಪ್ 2022ರಲ್ಲಿ ಭಾರತ ಮತ್ತು ಪಾಕಿಸ್ತಾನದ ಪುರುಷರ ಕ್ರಿಕೆಟ್ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು, ಅಲ್ಲಿ ಎರಡೂ ತಂಡಗಳು ಒಂದೊಂದು ಪಂದ್ಯದಲ್ಲಿ ಪರಸ್ಪರ ಗೆದ್ದಿವೆ. ಇದೀಗ ಎರಡೂ ತಂಡಗಳು ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಲಿವೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.


ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ನಲ್ಲಿ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್​ 11, ಈ ಆಟಗಾರರಿದ್ರೆ ಎಂತಾ ಎದುರಾಳಿಯಾದ್ರೂ ಉಡೀಸ್​


ಭಾರತ-ಪಾಕ್ ಮುಖಾಮುಖಿ:


ಟೀಂ ಇಂಡಿಯಾ ವಿಶ್ವಕಪ್ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ಕಳೆದ ವರ್ಷ, ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಸೋಲಿಸಿದ್ದು ಪಾಕಿಸ್ತಾನ. ಆದರೆ ಈ ಬಾರಿ ಆ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಭಾರತ ಸಿದ್ಧವಾಗಿದೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಮುಖ್ಯವಾಗಿ, ಸುಮಾರು 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಎಂಸಿಜಿಯಲ್ಲಿ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಒಂದು ತಿಂಗಳು ಮುಂಚಿತವಾಗಿ ಮಾರಾಟವಾಗಿವೆ. ಹೀಗಾಗಿ ಈ ಅಮೋಘ ಪಂದ್ಯದ ವೇಳೆ ಎರಡೂ ತಂಡಗಳಿಗೆ ಮೈದಾನದಲ್ಲಿ ಅಭಿಮಾನಿಗಳಿಂದ ಉತ್ತಮ ಬೆಂಬಲ ಸಿಗಲಿದೆ.

Published by:shrikrishna bhat
First published: