• Home
  • »
  • News
  • »
  • sports
  • »
  • T20 World Cup 2022: ಆಸೀಸ್​ಗೆ ಹಾರಲು ಟೀಂ ಇಂಡಿಯಾಗೆ ಡೇಟ್​ ಫಿಕ್ಸ್, ಬುಮ್ರಾ ಬದಲಿಗೆ ಈ ಆಟಗಾರನಿಗೆ ಚಾನ್ಸ್?

T20 World Cup 2022: ಆಸೀಸ್​ಗೆ ಹಾರಲು ಟೀಂ ಇಂಡಿಯಾಗೆ ಡೇಟ್​ ಫಿಕ್ಸ್, ಬುಮ್ರಾ ಬದಲಿಗೆ ಈ ಆಟಗಾರನಿಗೆ ಚಾನ್ಸ್?

ಟೀಂ ಇಂಡಿಯಾ

ಟೀಂ ಇಂಡಿಯಾ

T20 World Cup 2022: ಭಾರತೀಯ ಕ್ರಿಕೆಟ್ ತಂಡವು ಅಕ್ಟೋಬರ್ 6 ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ಅಲ್ಲಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿದೆ. ಗಾಯಗೊಂಡಿರುವ ಜಸ್ಪ್ರೀತ್ ಬುಮ್ರಾ ಅವರ ಸ್ಥಾನವನ್ನು ಬಿಸಿಸಿಐ ಇನ್ನೂ ಪ್ರಕಟಿಸಿಲ್ಲ.

  • Share this:

ಮುಂಬರುವ T20 ವಿಶ್ವಕಪ್‌ಗಾಗಿ (T20 World Cup 2022) ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ (Team India) ಇದೇ ಗುರುವಾರದಂದು (ಅಕ್ಟೋಬರ್ 6) ಆಸ್ಟ್ರೇಲಿಯಾಕ್ಕೆ ಹಾರಲಿದೆ. ಟೀಂ ಇಂಡಿಯಾ 15 ಆಟಗಾರರೊಂದಿಗೆ ಪರ್ತ್ ತಲುಪಲಿದ್ದು, ಈ ಪ್ರತಿಷ್ಠಿತ ICC ಪಂದ್ಯಾವಳಿಗಾಗಿ ಅವರು ತಮ್ಮ ಬೇಸ್ ಕ್ಯಾಂಪ್ ಅನ್ನು ಪರ್ತ್ ನಲ್ಲಿ  ಸ್ಥಾಪಿಸಲಿದ್ದಾರೆ.  ಗಾಯಗೊಂಡಿರುವ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಬದಲಿ ಆಟಗಾರನನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇನ್ನೂ ಘೋಷಿಸಿಲ್ಲ. ಇದಲ್ಲದೇ ಮೀಸಲು ಆಟಗಾರರೂ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಹೋಗುವುದಿಲ್ಲ. ಅದರಲ್ಲಿಯೂ ಮೊಹಮ್ಮದ್ ಶಮಿ ಸಹ ಇನ್ನೂ ಫಿಟ್ನೇಸ್​ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.


ಬುಮ್ರಾ ಬದಲಿಗೆ ಯಾರಿಗಿದೆ ಚಾನ್ಸ್?:


ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ಮೀಸಲು ಆಟಗಾರರು ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ನಿರತರಾಗಿದ್ದಾರೆ. ಆದಾಗ್ಯೂ, ಅಲ್ಲಿಯವರೆಗೆ ಭಾರತ ತಂಡವು ಅದರ ನೆಟ್ ಬೌಲರ್‌ಗಳನ್ನು ಹೊಂದಿದ್ದು, ಅವರು ಬ್ಯಾಟ್ಸ್‌ಮನ್‌ಗಳನ್ನು WACA ಪಿಚ್‌ನಲ್ಲಿ ಅಭ್ಯಾಸ ಮಾಡುತ್ತಾರೆ. ಕೊರೋನಾ ಸೋಂಕಿನಿಂದ ಚೇತರಿಸಿಕೊಂಡು ಸಂಪೂರ್ಣ ಫಿಟ್ ಆದ ನಂತರವೇ ಟಿ20 ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೂಚಿಸಿದ್ದಾರೆ.


ಶಮಿಯನ್ನು ದೀಪಕ್ ಚಹಾರ್ ಜೊತೆಗೆ ಮೀಸಲು ಬೌಲರ್‌ಗಳಲ್ಲಿ ಇರಿಸಲಾಗಿದೆ , ಟಿ 20 ವಿಶ್ವಕಪ್‌ಗಾಗಿ ದೀಪಕ್ ಚಹಾರ್ ಜೊತೆಗೆ ಭಾರತದ ಮೀಸಲು ವೇಗದ ಬೌಲರ್‌ಗಳಲ್ಲಿ ಶಮಿ ಕೂಡ ಇದ್ದಾರೆ. ಕೊರೋನಾ ಸೋಂಕಿನಿಂದ ಅವರು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಆಡಲು ಸಾಧ್ಯವಾಗಲಿಲ್ಲ.ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ನಂತರ, ದ್ರಾವಿಡ್ ಶಮಿಗೆ ಆದ್ಯತೆ ನೀಡಬಹುದು ಎಂದು ಸೂಚಿಸಿದರು, ಆದರೂ ಚಹಾರ್ ಮತ್ತು ಮೊಹಮ್ಮದ್ ಸಿರಾಜ್ ಸಹ ಸ್ಪರ್ಧಿಗಳಾಗಿದ್ದಾರೆ.


ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ಗೂ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್​, ಸ್ಟಾರ್​ ಬೌಲರ್​ ಔಟ್​!


ನಾವು ಆಯ್ಕೆಗಳನ್ನು ನೋಡುತ್ತಿದ್ದೇವೆ:


ಈ ಕುರಿತು ಮಾತನಾಡಿರುವ ಭಾರತ ತಂಡದ ಪ್ರಮುಖ ಕೋಚ್​ ರಾಹುಲ್ ದ್ರಾವಿಡ್, 'ನಾವು ಆಯ್ಕೆಗಳನ್ನು ನೋಡುತ್ತಿದ್ದೇವೆ. ನಮಗೆ ಅಕ್ಟೋಬರ್ 15ರ ವರೆಗೆ ಸಮಯವಿದೆ. ಶಮಿ ಸ್ಟ್ಯಾಂಡ್‌ಬೈನಲ್ಲಿದ್ದಾರೆ ಆದರೆ ಅವರಿಗೆ ಕೊನೆಯ ಎರಡು ಸರಣಿಗಳನ್ನು ಆಡಲು ಸಾಧ್ಯವಾಗಲಿಲ್ಲ. ಪ್ರಸ್ತುತ ಅವರು NCA ಯಲ್ಲಿದ್ದಾರೆ ಮತ್ತು ನಾವು ಅವರ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ. ನಂತರವಷ್ಟೇ ನಿರ್ಧಾರ ಕೈಗೊಳ್ಳಲಾಗುವುದು. ಗಾಯದ ಸಮಸ್ಯೆಯಿಂದ ಬುಮ್ರಾ ಟೂರ್ನಿಯಿಂದ ಹೊರಗುಳಿದಿದ್ದಾರೆ. ಭಾರತ ತಂಡ ಅಕ್ಟೋಬರ್ 6 ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದ್ದು, ಅಲ್ಲಿ ಪರ್ತ್‌ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ‘ ಎಂದು ಹೇಳಿದ್ದಾರೆ. ಅಭ್ಯಾಸ ಪಂದ್ಯದ ನಂತರ ನಂತರ ಬ್ರಿಸ್ಬೇನ್‌ಗೆ ತೆರಳಲಿದೆ. ಭಾರತವು ಅಕ್ಟೋಬರ್ 23 ರಂದು ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವನ್ನು ಆಡಬೇಕಾಗಿದೆ.


ಇದನ್ನೂ ಓದಿ: Urvashi-Rishabh: ರಿಷಭ್ ಪಂತ್​ಗೆ ಫ್ಲೈಯಿಂಗ್ ಕಿಸ್ ಮೂಲಕ ವಿಶ್​ ಮಾಡಿದ ಊರ್ವಶಿ, ಇಬ್ಬರು ಗೆಳತಿಯರ ಮುದ್ದಿನ ಹೀರೋ ಎಂದ ನೆಟ್ಟಿಗರು


2022ರ ಟಿ20 ವಿಶ್ವಕಪ್‌ಗೆ ಭಾರತ ತಂಡ:


ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್ (ವಿಸಿ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (ಡಬ್ಲ್ಯುಕೆ), ದಿನೇಶ್ ಕಾರ್ತಿಕ್ (ಡಬ್ಲ್ಯುಕೆ), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ವೈ ಚಾಹಲ್, ಅಕ್ಷರ್ ಪಟೇಲ್, ಬಿ. ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸ್ಟ್ಯಾಂಡ್-ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Published by:shrikrishna bhat
First published: