• Home
  • »
  • News
  • »
  • sports
  • »
  • T20 World Cup 2022: ಮೆಲ್ಬೋರ್ನ್ ತಲುಪಿದ ಟೀಂ ಇಂಡಿಯಾ, ಪಾಕ್​ ವಿರುದ್ಧದ ಪಂದ್ಯಕ್ಕೆ ಭರ್ಜರಿ ತಯಾರಿ 

T20 World Cup 2022: ಮೆಲ್ಬೋರ್ನ್ ತಲುಪಿದ ಟೀಂ ಇಂಡಿಯಾ, ಪಾಕ್​ ವಿರುದ್ಧದ ಪಂದ್ಯಕ್ಕೆ ಭರ್ಜರಿ ತಯಾರಿ 

ಟೀಂ ಇಂಡಿಯಾ

ಟೀಂ ಇಂಡಿಯಾ

T20 World Cup 2022: ಭಾರತ ಮತ್ತು ಪಾಕಿಸ್ತಾನ ತಂಡಗಳು T20 ವಿಶ್ವಕಪ್‌ನಲ್ಲಿ ಭಾನುವಾರ (ಅಕ್ಟೋಬರ್ 23) ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಮುಖಾಮುಖಿಯಾಗಲಿವೆ. ಬಹು ನಿರೀಕ್ಷಿತ ಪಂದ್ಯಕ್ಕಾಗಿ ಉಭಯ ತಂಡಗಳು ಮೆಲ್ಬೋರ್ನ್ ತಲುಪಿವೆ.

  • Share this:

ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡವು (Team India) ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಪಾಕಿಸ್ತಾನ ವಿರುದ್ಧದ (IND vs PAK) ಶ್ರೇಷ್ಠ ಪಂದ್ಯಕ್ಕಾಗಿ ಮೆಲ್ಬೋರ್ನ್ ತಲುಪುವ ಮೂಲಕ ತನ್ನ ತಯಾರಿಯನ್ನು ಪ್ರಾರಂಭಿಸಿದೆ. ಬೆಳಗ್ಗೆ ಮೆಲ್ಬೋರ್ನ್ (Melbourne) ಕ್ರಿಕೆಟ್ ಮೈದಾನ ತಲುಪುವ ಮೂಲಕ ಟೀಂ ಇಂಡಿಯಾ ತರಬೇತಿ ಆರಂಭಿಸಿದೆ. ಇಂದು ಅಂದರೆ ಶುಕ್ರವಾರ ಬೆಳಗ್ಗೆಯಿಂದ ಮೆಲ್ಬೋರ್ನ್‌ನಲ್ಲಿ ಮಳೆಯಾಗದಿರುವ (Rain) ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದ್ದು, ಇದೇ ರೀತಿ ಪಂದ್ಯದ ದಿನ ಸಹ ಮಳೆ ಬರದಿರಲಿ ಎಂಬ ಹಂಬಲ ಕೋಟ್ಯಾಂತರ ಅಭಿಮಾನಿಗಳದ್ದಾಗಿದೆ.


ಅಭ್ಯಾಸದಲ್ಲಿ ತೊಡಗಿಕೊಂಡಿರುವ ಭಾರತ:


ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಭಾರತೀಯ ಆಟಗಾರರು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ತರಬೇತಿ ಪಡೆಯುತ್ತಿರುವ ಫೋಟೋವನ್ನು ಹಂಚಿಕೊಂಡಿದೆ. ಈ ಫೋಟೋಗೆ ಬಿಸಿಸಿಐ ಶೀರ್ಷಿಕೆ ನೀಡಿ, 'ಭಾರತ ಮತ್ತು ಪಾಕಿಸ್ತಾನ ಪಂದ್ಯದ ಮೊದಲು ನಮ್ಮ ಮೊದಲ ತರಬೇತಿಗಾಗಿ ನಾವು ಇಲ್ಲಿದ್ದೇವೆ. ಇದಕ್ಕೂ ಮುನ್ನ ಬ್ರಿಸ್ಬೇನ್‌ನಲ್ಲಿ ನಡೆಯಬೇಕಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಭಾರತ ತಂಡ ಗುರುವಾರ ಮೆಲ್ಬೋರ್ನ್ ತಲುಪಿದೆ.ಎರಡು ಸೆಷನ್‌ಗಳ ಮೂಲಕ ತರಬೇತಿ:


ಟೀಂ ಇಂಡಿಯಾ ನೆಟ್ಸ್‌ನಲ್ಲಿ ಬೆವರು ಹರಿಸಲಿದೆ ಟೀಂ ಇಂಡಿಯಾ ಶುಕ್ರವಾರ ಮೆಲ್ಬೋರ್ನ್‌ನಲ್ಲಿ ಎರಡು ಸೆಷನ್‌ಗಳಿಗೆ ತರಬೇತಿ ಪಡೆಯಲಿದೆ. ಬೆಳಿಗ್ಗೆ, ತಂಡದ ಕಂಡೀಷನಿಂಗ್ ಸೆಷನ್ ಅನ್ನು ಇರಿಸಲಾಗಿದೆ ಮತ್ತು ಸಂಜೆ ಭಾರತ ತಂಡವು MACG ನಲ್ಲಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತದೆ. ಭಾರತ ಕ್ರಿಕೆಟ್ ತಂಡ ಅಕ್ಟೋಬರ್ 23 ರಂದು ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಮೊನ್ನೆ ಗುರುವಾರ, ಟೀಂ ಇಂಡಿಯಾ ತನ್ನ ಮೊದಲ ಪಂದ್ಯಕ್ಕೆ ಮೂರು ದಿನಗಳ ಮೊದಲು ಮೆಲ್ಬೋರ್ನ್ ತಲುಪಿದೆ.ಭಾರತದ ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಸಾಮಾಜಿಕ ಮಾಧ್ಯಮದಲ್ಲಿ ಮೆಲ್ಬೋರ್ನ್ ತಲುಪುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಾಯಕ ರೋಹಿತ್ ಶರ್ಮಾ, ಮೀಸಲು ವೇಗಿ ಶಾರ್ದೂಲ್ ಠಾಕೂರ್, ಮೊಮ್ಮದ್ ಸಿರಾಜ್ ಮತ್ತು ಆಲ್ ರೌಂಡರ್ ಅಕ್ಷರ್ ಪಟೇಲ್ ಅವರೊಂದಿಗೆ ಚಾಹಲ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಎಲ್ಲರೂ ವಿಮಾನದೊಳಗೆ ಕಾಣಿಸಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಅವರು ರೋಹಿತ್ ಶರ್ಮಾ ಅವರ ಮಗಳು ಅದಾರ ಜೊತೆಗಿನ ಫೋಟೋವನ್ನು ಸಹ ಅಪ್ಲೋಡ್ ಮಾಡಿದ್ದಾರೆ. ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಭುವನೇಶ್ವರ್ ಕುಮಾರ್ ಕುಟುಂಬ ಸಮೇತ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ.


ಇದನ್ನೂ ಓದಿ: T20 WC India vs Pakistan: ಭಾರತ-ಪಾಕಿಸ್ತಾನ ಪಂದ್ಯ, ಹೇಗಿದೆ ಪಿಚ್​ ರಿಪೋರ್ಟ್? ಇಲ್ಲಿದೆ ಹವಾಮಾನ ವರದಿ


ಟಿ20 ವಿಶ್ವಕಪ್​ಗೆ ಭಾರತ-ಪಾಕ್​ ತಂಡ:


ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.


ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಆಸಿಫ್ ಅಲಿ, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಶಾನ್ ಮಸೂದ್, ಮೊಹಮ್ಮದ್ ನವಾಜ್, ಶಾಹೀನ್ ಶಾ ಆಫ್ರಿದಿ, ಖುಷ್ದಿಲ್ ಶಾ, ಮೊಹಮ್ಮದ್ ವಾಸಿಂ, ನಸೀಮ್ ಶಾ, ಮೊಹಮ್ಮದ್ ಹಸ್ನೈನ್.

Published by:shrikrishna bhat
First published: