• Home
  • »
  • News
  • »
  • sports
  • »
  • T20 WC Team India: ಪಾಕ್‌ಗೆ ಬೆಣ್ಣೆ, ಭಾರತಕ್ಕೆ ಸುಣ್ಣ; ಹೋಟೆಲ್‌ ರೂಂ ಕೊಡುವಲ್ಲೂ ಐಸಿಸಿ ತಾರತಮ್ಯ!

T20 WC Team India: ಪಾಕ್‌ಗೆ ಬೆಣ್ಣೆ, ಭಾರತಕ್ಕೆ ಸುಣ್ಣ; ಹೋಟೆಲ್‌ ರೂಂ ಕೊಡುವಲ್ಲೂ ಐಸಿಸಿ ತಾರತಮ್ಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

T20 WC Team India: ಐಸಿಸಿ ಟಿ20 ವಿಶ್ವಕಪ್‌ 2022ರ (T20 World Cup 2022) ಇಂದಿನಿಂದ ಅದ್ಧೂರಿಯಾಗಿ ಆರಂಭಗೊಂಡಿದೆ. ಇದರ ಭಾಗವಾಗಿ ಎಲ್ಲಾ ತಂಡಗಳು ಈಗಾಗಲೇ ಆಸೀಸ್​ ತಲುಪಿದೆ.

  • Share this:

ಐಸಿಸಿ ಟಿ20 ವಿಶ್ವಕಪ್‌ 2022ರ (T20 World Cup 2022) ಇಂದಿನಿಂದ ಅದ್ಧೂರಿಯಾಗಿ ಆರಂಭಗೊಂಡಿದೆ. ಇದರ ಭಾಗವಾಗಿ ಎಲ್ಲಾ ತಂಡಗಳು ಈಗಾಗಲೇ ಆಸೀಸ್​ ತಲುಪಿದೆ. ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾದ 15 ಜನರ ತಂಡ ಈಗಾಗಳೇ ಆಸೀಸ್​ ತಲುಪಿದ್ದು ಟಿ20 ವಿಶ್ವಕಪ್ ಗಾಗಿ ಭರ್ಜರಿ ತಯಾರಿಯಲ್ಲಿ ತೊಡಗಿಕೊಂಡಿದೆ. ಅಲ್ಲದೇ ಟೂರ್ನಿಯ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯ ಆಡಲಿರುವ ಟೀಂ ಇಂಡಿಯಾ ಬ್ರಿಸ್ಬೇನ್‌ಗೆ ತಲುಪಿದೆ. ಅಕ್ಟೋಬರ್ 17 ಮತ್ತು 19ರಂದು ಟೀಂ ಇಂಡಿಯಾ ಅಭ್ಯಾಸ ಪಂದ್ಯ ಆಡಲಿದ್ದು, 17ರಂದು ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಅಭ್ಯಾಸ ಪಂದ್ಯವನ್ನು ಆಡಲಿದೆ.


ಟೀಂ ಇಂಡಿಯಾ ಕಡೆಗಣಿಸಿದ ಐಸಿಸಿ:


ಹೌದು, ಈಗಾಗಲೇ ಭಾರತ ತಂಡ ಅಭ್ಯಾಸ ಪಂದ್ಯಕ್ಕಾಗಿ ಬ್ರಿಸ್ಬೇನ್‌ ತಲುಪಿದೆ. ಆದರೆ ಐಸಿಸಿ ಟೀಂ ಇಂಡಿಯಾಗೆ ಬ್ರಿಸ್ಬೇನ್‌ನಲ್ಲಿ ಸರಿಯಾದ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ತಿಳಿದುಬಂದಿದೆ. ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಭಾರತದ ಆಟಗಾರರನ್ನು ಕಡೆಗಣಿಸಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಏಕೆಂದರೆ ಬ್ರಿಸ್ಬೇನ್‌ನಲ್ಲಿ ಈಗಾಗಲೇ ಇರುವ ಆಸ್ಟ್ರೇಲಿಯಾ ತಂಡಕ್ಕೆ 5 ಸ್ಟಾರ್​ ಹೋಟೆಲ್​ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಈ ಹೋಟೆಲ್​ ನಲ್ಲಿಯೇ ಪಾಕಿಸ್ತಾನ ತಂಡವೂ ತಂಗಿದೆ. ಆದರೆ ಭಾರತ ತಂಡದ ಆಟಗಾರರಿಗೆ ಮಾತ್ರ 4 ಸ್ಟಾರ್​ ಹೋಟೆಲ್​ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.


ಇದೇ ಕಾರಣಕ್ಕಾಗಿ ಟೀಂ ಇಂಡಿಯಾ ಆಟಗಾರರು ಇದರ ಕುರಿತು ಐಸಿಸಿ ವಿರುದ್ಧ ಅಸಮಾಧನಾ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದೊಂದು ಐಸಿಸಿ ಟೂರ್ನಿ ಆಗಿರುವುದರಿಂದ ಎಲ್ಲಾ ತಂಡಗಳನ್ನೂ ಸಮಾನವಾಗಿ ಕಾಣಬೇಕು. ಎಲ್ಲರನ್ನೂ ಗೌರವಿಸಬೇಕು ಎನ್ನಲಾಗುತ್ತಿದ್ದು, ಈ ವಿಚಾರದಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾ ಮತ್ತು ಐಸಿಸಿ ಎಡವಿದೆ ಎಂಬ ಮಾತುಗಳು ಓಡಾಡುತ್ತಿವೆ.


ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ನಲ್ಲಿ ಬಿಗ್​ ಟ್ವಿಸ್ಟ್, ಭಾರತ-ಪಾಕ್​ ಪಂದ್ಯ ನಡೆಯುವುದು ಡೌಟ್​?


ಪಾಕ್​ಗೆ 5 ಸ್ಟಾರ್​ ಹೋಟೆಲ್ ಆದ್ರೆ ಟೀಂ ಇಂಡಿಯಾಗೆ:


ಇನ್ನು, ಬ್ರಿಸ್ಬೇನ್‌ನ 4-ಸ್ಟಾರ್ ಹೋಟೆಲ್​ ಆದ ರೈಡ್ಜಸ್ ಫೋರ್ಟಿಟ್ಯೂಡ್ ವ್ಯಾಲಿ ಹೋಟೆಲ್‌ ಅನ್ನು ಟೀಂ ಇಂಡಿಯಾಗೆ ನೀಡಲಾಗಿದೆ. ಟೀಂ ಇಂಡಿಯಾವು ಅಕ್ಟೋಬರ್ 17 ಮತ್ತು 19 ರಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಈಗಾಗಲೇ ಜಸ್ಪ್ರಿತ್ ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಹೀಗಾಗಿ ಶಮಿ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.


ಟಿ20 ವಿಶ್ವಕಪ್‌ನಲ್ಲಿ ಭಾರತದ ಪಂದ್ಯಗಳು:


23 ಅಕ್ಟೋಬರ್ 2022: ಭಾರತ Vs ಪಾಕಿಸ್ತಾನ, ಸೂಪರ್ 12- ಮೆಲ್ಬೋರ್ನ್ ಕ್ರಿಕೆಟ್ ಮೈದಾನ, ಮಧ್ಯಾಹ್ನ 1.30.
27 ಅಕ್ಟೋಬರ್ 2022: ಭಾರತ Vs ಗುಂಪು ಹಂತ, ಸೂಪರ್ 12 ರಿಂದ ಅರ್ಹತೆ ಪಡೆದ ತಂಡ - ಸಿಡ್ನಿ ಕ್ರಿಕೆಟ್ ಮೈದಾನ, ಮಧ್ಯಾಹ್ನ 12.30.
30 ಅಕ್ಟೋಬರ್ 2022: ಭಾರತ Vs ದಕ್ಷಿಣ ಆಫ್ರಿಕಾ, ಸೂಪರ್ 12 - ಪರ್ತ್ ಕ್ರೀಡಾಂಗಣ, ಸಂಜೆ 4.30.
02 ನವೆಂಬರ್ 2022: ಭಾರತ Vs ಬಾಂಗ್ಲಾದೇಶ, ಸೂಪರ್ 12 - ಅಡಿಲೇಡ್ ಓವಲ್, ಮಧ್ಯಾಹ್ನ 1.30
06 ನವೆಂಬರ್ 2022: ಭಾರತ Vs ಗುಂಪು ಹಂತ, ಸೂಪರ್ 12 ರಿಂದ ಅರ್ಹತೆ ಪಡೆದ ತಂಡ - ಮೆಲ್ಬೋರ್ನ್ ಕ್ರಿಕೆಟ್ ಮೈದಾನ, ಮಧ್ಯಾಹ್ನ 1.30 ಗಂಟೆಗೆ.


ಇದನ್ನೂ ಓದಿ: Rohit Sharma: ಟಿ20 ವಿಶ್ವಕಪ್‌ಗಿಂತ ಬುಮ್ರಾಗೆ ಆ ವಿಷಯ ಹೆಚ್ಚು ಮುಖ್ಯವಾಗಿದೆ, ಅಚ್ಚರಿಯ ಹೇಳಿಕೆ ನೀಡಿದ ರೋಹಿತ್


ಟಿ20 ವಿಶ್ವಕಪ್‌ಗೆ ಭಾರತ ತಂಡ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.

Published by:shrikrishna bhat
First published: