T20 World Cup 2022: ಗಂಗೂಲಿ ಚಿಂತೆ ಹೆಚ್ಚಿಸಿದ ಟೀಂ ಇಂಡಿಯಾ ಪ್ರದರ್ಶನ, ರೋಹಿತ್-ರಾಹುಲ್​ ಬಗ್ಗೆ ಏನಂದ್ರು ನೋಡಿ!

Sourav Ganguly: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಏಷ್ಯಾ ಕಪ್-2022 ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಆಸ್ಟ್ರೇಲಿಯ ವಿರುದ್ಧದ ಸರಣಿಯೂ ಸೋಲಿನೊಂದಿಗೆ ಆರಂಭವಾಗಿದ್ದು, ತಂಡದ ಈ ಪ್ರದರ್ಶನವನ್ನು ಕಳವಳಕ್ಕೆ ಕಾರಣವೆಂದು ಗಂಗೂಲಿ ಹೇಳಿದ್ದಾರೆ.

ರೋಹಿತ್-ಗಂಗೂಲಿ-ದ್ರಾವಿಡ್

ರೋಹಿತ್-ಗಂಗೂಲಿ-ದ್ರಾವಿಡ್

  • Share this:
ಹಾಲಿ ಚಾಂಪಿಯನ್ ಆಗಿದ್ದರೂ ಟೀಂ ಇಂಡಿಯಾ (Team India) ಏಷ್ಯಾಕಪ್ (Asia Cup) ಪ್ರಶಸ್ತಿ ಗೆಲ್ಲಲು ಸಾಧ್ಯವಾಗಲಿಲ್ಲ. ಸೂಪರ್-4 ಸುತ್ತಿನಲ್ಲಿಯೇ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋತು ಟೂರ್ನಿಯಿಂದಲೇ ಔಟ್​ ಆಯಿತು. ನಂತರ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ (IND vs AUS) ವಿರುದ್ಧದ ಸರಣಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮೊಹಾಲಿಯಲ್ಲಿ ನಡೆದ ಮೊದಲ ಟಿ20ಯಲ್ಲಿ ಸೋಲನ್ನಪ್ಪಿತು. ಇದೀಗ ಟಿ20 ವಿಶ್ವಕಪ್‌ಗೂ (T20 World Cup) ಮುನ್ನ ಭಾರತ ತನ್ನ ನ್ಯೂನತೆಗಳನ್ನು ನೀಗಿಸಲು ಕೇವಲ 5 ಟಿ20 ಪಂದ್ಯಗಳು ಮಾತ್ರ ಉಳಿದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ, ನಾಯಕ ರೋಹಿತ್ ಶರ್ಮಾ ( Rohith Sharma) ಕೂಡ ಆಟಗಾರರು ತಮ್ಮ ಕಂಫರ್ಟ್ ಝೋನ್‌ನಿಂದ ಹೊರಬಂದು ತಮ್ಮ ಆಟದಲ್ಲಿ ಅಗತ್ಯ ಬದಲಾವಣೆಗಳನ್ನು ತರಬೇಕೆಂದು ಹೇಳಿಕೊಂಡಿದ್ದಾರೆ. ಇದರಿಂದ ಭಾರತ ತಂಡವು 15 ವರ್ಷಗಳ ಬಳಿಕ ಟಿ20 ವಿಶ್ವಕಪ್​ನ್ನು ಗೆಲ್ಲಬಹುದೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇದು ಕಳವಳಕಾರಿ ಸಂಗತಿ ಎಂದ ದಾದಾ :

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಟೀಂ ಇಂಡಿಯಾ ದೊಡ್ಡ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿರುವುದು ಕಳವಳಕಾರಿ ಸಂಗತಿ ಎಂದು ಒಪ್ಪಿಕೊಂಡಿದ್ದಾರೆ. ಆದರೆ, ಅವರು ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರನ್ನು ಬೆಂಬಲಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ರೋಹಿತ್ ಶರ್ಮಾ ಅವರ ಗೆಲುವಿನ ಶೇಕಡಾವಾರು 80 ರ ಆಸುಪಾಸಿನಲ್ಲಿದೆ. ಭಾರತ ಕಳೆದ ಮೂರು-ನಾಲ್ಕು ಪಂದ್ಯಗಳಲ್ಲಿ ಸೋತಿದೆ, ಆದರೆ ಅದಕ್ಕೂ ಮೊದಲು ರೋಹಿತ್ 35-40 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿದ್ದರು ಮತ್ತು ಭಾರತವು ಕೇವಲ 5-6 ಪಂದ್ಯಗಳಲ್ಲಿ ಸೋತಿತ್ತು‘ ಎಂದು ಹೇಳಿದ್ದಾರೆ.

ದೊಡ್ಡ ಟೂರ್ನಿಗಳಲ್ಲಿ ತಂಡದ ಪ್ರದರ್ಶನ ಚಿಂತಾಜನಕವಾಗಿದೆ:

ಇನ್ನು, ರೋಹಿತ್ ಮತ್ತು ರಾಹುಲ್ ದ್ರಾವಿಡ್ ಭಾರತ ತಂಡದ ಪ್ರಸ್ತುತ ಪ್ರದರ್ಶನದ ಬಗ್ಗೆ ಚಿಂತಿತರಾಗಿದ್ದಾರೆ ಮತ್ತು ಅವರು ಅದನ್ನು ಸುಧಾರಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ನಾನು ಒಂದು ಅಥವಾ ಎರಡು ಸೋಲಿನ ಬಗ್ಗೆ ಚಿಂತಿಸುವುದಿಲ್ಲ, ಆದರೆ ಹೌದು, ನಾವು ದೊಡ್ಡ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ನಾವು ಖಂಡಿತವಾಗಿಯೂ ಅದರ ಬಗ್ಗೆ ಚಿಂತಿಸಬೇಕಿದೆ. ಅಲ್ಲದೇ ಈ ಬಗ್ಗೆ ನಾಯಕ ಮತ್ತು ಕೋಚ್​ ಇನ್ನಷ್ಟು ಉತ್ತಮವಾಗಲು ಪ್ರಯತ್ನಿಸಬೇಕಿದೆ ಎಂದು ನೇರವಾಗಿ ಹೇಳಿದ್ದಾರೆ.

ಭಾರತ ತಂಡ ಎರಡರಿಂದ ಮೂರು ವಾರಗಳ ಕಾಲ (ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ) ಹೊರಡಲಿದೆ. ಅಲ್ಲಿ ಅಭ್ಯಾಸ ಪಂದ್ಯಗಳನ್ನು ಆಡಲು ಮತ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಅವರು ಪೂರ್ಣ ಸಮಯವನ್ನು ಪಡೆಯುತ್ತಾರೆ. ಇದು ಅವರಿಗೆ ಲಾಭ್ವಾಗಲಿದೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ 2022ಗೆ ಎಲ್ಲಾ ತಂಡಗಳು ಪ್ರಕಟ, ಯಾವ ಟೀಂ ಸಖತ್​ ಸ್ಟ್ರಾಂಗ್​? ಇಲ್ಲಿದೆ ಸಂಪೂರ್ಣ ಪಟ್ಟಿ

ವಿರಾಟ್ ಫಾರ್ಮ್‌ಗೆ ಮರಳಿರುವುದು ಉತ್ತಮ ಸಂಗತಿ:

ಏಷ್ಯಾಕಪ್‌ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿಯನ್ನು ಬಿಸಿಸಿಐ ಅಧ್ಯಕ್ಷರು ಸಹ ಹೊಗಳಿದ್ದಾರೆ. ಏಷ್ಯಾಕಪ್‌ನಲ್ಲಿ ಸತತ ಎರಡು ಅರ್ಧಶತಕಗಳನ್ನು ಗಳಿಸಿದ ನಂತರ ಕೊಹ್ಲಿ ಅಫ್ಘಾನಿಸ್ತಾನ ವಿರುದ್ಧ 61 ಎಸೆತಗಳಲ್ಲಿ ಅಜೇಯ 122 ರನ್ ಗಳಿಸಿದರು. 1020 ದಿನಗಳ ನಂತರ ಕೊಹ್ಲಿಯ ಬ್ಯಾಟ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ದಾಖಲಾಗಿದೆ. ಏಷ್ಯಾಕಪ್‌ನಲ್ಲಿ 5 ಪಂದ್ಯಗಳಲ್ಲಿ 276 ರನ್ ಗಳಿಸಿದ್ದರು. ಈ ಎಲ್ಲಾ ಅಂಶಗಳ ಕುರಿತು ಮಾತಾನಡಿದ ದಾದಾ, ‘ಏಷ್ಯಾ ಕಪ್‌ನಲ್ಲಿ ವಿರಾಟ್ ಉತ್ತಮ ಪ್ರದರ್ಶನ ನೀಡಿರುವುದು ತುಂಬಾ ಒಳ್ಳೆಯ ಸುದ್ದಿ ಮತ್ತು ಅವರು ಅದನ್ನು ಮುಂದುವರಿಸುತ್ತಾರೆ ಎಂದು ಭಾವಿಸುತ್ತೇವೆ‘ಎಂದು ಹೇಳಿದ್ದಾರೆ.
Published by:shrikrishna bhat
First published: