• Home
  • »
  • News
  • »
  • sports
  • »
  • T20 World Cup 2022: ಪಂದ್ಯದ ವೇಳೆ ಶಮಿ ಮೇಲೆ ಸಿಟ್ಟಾದ ರೋಹಿತ್, ವಿಡಿಯೋ ವೈರಲ್

T20 World Cup 2022: ಪಂದ್ಯದ ವೇಳೆ ಶಮಿ ಮೇಲೆ ಸಿಟ್ಟಾದ ರೋಹಿತ್, ವಿಡಿಯೋ ವೈರಲ್

ರೋಹಿತ್ ಶರ್ಮಾ

ರೋಹಿತ್ ಶರ್ಮಾ

T20 World Cup 2022: ಟಿ20 ವಿಶ್ವಕಪ್​ ಸೆಮಿ ಫೈನಲ್​ನಲ್ಲಿ ಭಾರತ ತಂಡವು ಇಂಗ್ಲೆಂಡ್​ ವಿರುದ್ಧ ಹೀನಾಯವಾಗಿ ಸೋಲುವ ಮೂಲಕ ಫೈನಲ್​ಗೇರುವ ಅವಕಾಶವನ್ನು ಕಳೆದುಕೊಂಡಿದೆ. ಆದರೆ ಈ ಪಂದ್ಯದ ವೇಳೆ ನಾಯ ರೋಹಿತ್ ಆಟಗಾರನ ಮೇಲೆ ಸಿಟ್ಟಾಗಿದ್ದಾರೆ.

  • Share this:

ನಿನ್ನೆ ನಡೆದ ಟಿ20 ವಿಶ್ವಕಪ್ ನಲ್ಲಿ (T20 World Cup 2022) ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ (IND vs ENG) ಹೀನಾಯ ಸೋಲು ಕಂಡಿದೆ. ಈ ಸೋಲಿನ ನಂತರ ರೋಹಿತ್ ಶರ್ಮಾ (Rohit Sharma) ಡಗೌಟ್​ನಲ್ಲಿ ಕಣ್ಣೀರು ಹಾಕಿದ್ದಾರೆ. ಅಲ್ಲದೇ ಈ ಪಂದ್ಯದ ನಂತರ ಟೀಂ ಇಂಡಿಯಾದ (Team India) ಆಟಗಾರರು ಇನ್ನಿಲ್ಲದ ಬೇಸರದಲ್ಲಿ ಇರುವುದು ಕಂಡುಬಂದಿದೆ. ಅದರಲ್ಲಿಯೂ ರೋಹಿತ್ ಶರ್ಮಾ ಕಣ್ಣೀರು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಆದರೆ ಪಂದ್ಯದ ನಡುವೆ ಮೈದಾದನಲ್ಲಿಯೇ ರೋಹಿತ್ ಶರ್ಮಾ ಆಟಗಾರರ ಮೇಲೆ ಸಿಟ್ಟಾಗಿದ್ದು, ಎಲ್ಲಡೆ ವೈರಲ್ ಆಗಿದೆ.  ಹೌದು, ಭರ್ಜರಿಯಾಗಿ ಆಡುತ್ತಿದ್ದ ಇಂಗ್ಲೆಂಡ್​ನ ಬಟ್ಲರ್ ಮತ್ತು ಹೇಲ್ಸ್ ವಿಕೆಟ್ ಪಡೆಯಲು ಭಾರತೀಯ ಬೌಲರ್​ಗಳು ಕಷ್ಟಪಡುತ್ತಿದ್ದಾಗ ಫಿಲ್ಡಿಂಗ್​ನಲ್ಲಿ ಮಿಸ್ ಮಾಡಿದಕ್ಕೆ ರೋಹಿತ್ ಸಿಟ್ಟಾಗಿದ್ದರು.


ಸಿಟ್ಟಾದ ನಾಯಕ ರೋಹಿತ್:


ಹೌದು, ಪಂದ್ಯವು ಇನ್ನೇನು ಕೈ ತಪ್ಪುತ್ತಿದೆ ಎಂಬ ಹತಾಶೆಯಲ್ಲಿರುವಾಗಲೇ ನಾಯಕ ರೋಹಿತ್ ಶರ್ಮಾ ಅವರು ಬೌಲರ್ ಮೊಹಮ್ಮದ್ ಶಮಿ ಮತ್ತಷ್ಟು ಸಿಟ್ಟುತರಿಸಿದರು.  ಭಾರತದ ಫೀಲ್ಡಿಂಗ್ ಕೂಡ ಕಳಪೆಯಾಗಿತ್ತು. ಇದರಿಂದ ರೋಹಿತ್ ಶರ್ಮಾ ಸಿಟ್ಟುಗೊಂಡ ಘಟನೆ ಕೂಡ ನಡೆಯಿತು. ಪಂದ್ಯದ 9ನೇ ಓವರ್​ ಅನ್ನು ಆಲ್​ ರೌಂಡರ್ ಹಾರ್ದಿಕ್ ಪಾಂಡ್ಯ ಮಾಡುತ್ತಿದ್ದರು. ಆ ವೇಳೆ ಇಂಗ್ಲೆಂಡ್ ಆಟಗಾರ ಬಟ್ಲರ್ ಔಟ್​ಸೈಡ್ ಡೆಲಿವರಿಯನ್ನು ಪುಲ್ ಮಾಡಿದರು. ವಿಕೆಟ್ ಹಿಂದೆ ಹೋದ ಚೆಂಡನ್ನು ಬೌಂಡರಿ ಗೆರೆ ಬಳಿ ಮೊಹಮ್ಮದ್ ಶಮಿ ತಡೆದರು.









View this post on Instagram






A post shared by ICC (@icc)





ಆದರೆ ಅದನ್ನು ನೇರವಾಗಿ ವಿಕೆಟ್ ಕೀಪರ್ ಅವರ ಕೈಗೆ ಎಸೆಯದೇ ಪಕ್ಕದಲ್ಲಿದ್ದ ಭುವನೇಶ್ವರ್ ಕುಮಾರ್​ಗೆ ನೀಡಿದರು. ಆದರೆ ಶಮಿ ಮಾಡಿದ ಥ್ರೋ ಸ್ವಲ್ಪ ವೇಗವಾಗಿದ್ದರಿಂದ ಅದು ಭುವಿ ಅವರ ತಲೆ ಮೇಲೆ ಹಾರಿ ಮತ್ತೆ ಮಿಸ್ ಆಗಿ ಹೋಯಿತು. ಇದರಿಂದಾಗಿ ಬಟ್ಲರ್ ಮತ್ತೊಂದು ರನ್ ಓಡಿದರು. ಶಮಿ ಮಾಡಿದ ಈ ತಪ್ಪಿನಿಂದ ನಾಯಕ ರೋಹಿತ್ ಶರ್ಮಾ ಶಮಿ ಮೇಲೆ ಸಿಟ್ಟಾಗಿ ಅಸಮಾಧಾನ ಹೊರಹಾಕಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲಡೆ ಸಖತ್ ವೈರಲ್ ಆಗುತ್ತಿದೆ.


ಸೋಲಿನ ಬಳಿಕ ಕಣ್ಣೀರಿಟ್ಟ ರೋಹಿತ್:


ಟೀಂ ಇಂಡಿಯಾ ಟಿ20 ವಿಶ್ವಕಪ್‌ 2022ರಿಂದ ಹೊರಬಿದ್ದಿದೆ. ಇಂದು ನಡೆದ ಇಂಗ್ಲೆಂಡ್ ವಿರುದ್ಧದ ಸೆಮೀಸ್​ ಪಂದ್ಯದಲ್ಲಿ ಭಾರತ 10 ವಿಕೆಟ್​ ಗಳಿಂದ ಹೀನಾಯವಾಗಿ ಸೋತಿತು. ಈ ಮೂಲಕ ಇಂಗ್ಲೆಂಡ್ ಫೈನಲ್ ಪ್ರವೇಶಿಸಿದ್ದು, ನವೆಂಬರ್ 13ರಂದು ಪಾಕ್ ವಿರುದ್ಧ ಆಂಗ್ಲರು ಸೆಣಸಲಿದ್ದಾರೆ. ಆದರೆ ಇಂತಹ ಮಹತ್ವದ ಪಂದ್ಯದಲ್ಲಿ ಸೋತಿದ್ದರಿಂದ ಭಾರತದ ಕೋಟ್ಯಂತರ ಅಭಿಮಾನಿಗಳು ನಿರಾಸೆ ಅನುಭವಿಸಿದ್ದಾರೆ. ಅದೇ ರೀತಿ ನಾಯಕ ರೋಹಿತ್ ಶರ್ಮಾ ಸಹ ಪಂದ್ಯದ ಬಳಿಕ ಡಗೌಟ್​ನಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ. ಇದರ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ.


ಇದರ ಜೊತೆಗೆ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಎಲ್ಲರೂ ಮಂಕಾಗಿರುವುದು ಕಂಡುಬಂದಿತು. ಟೀಂ ಇಂಡಿಯಾಗೆ ಇಂಗ್ಲೆಂಡ್ ಎರಡನೇ ಸೆಮಿಫೈನಲ್‌ನಲ್ಲಿ ಆಟದ ಪ್ರತಿಯೊಂದು ಕ್ಷೇತ್ರವೂ ಫೇಲ್​ ಆಯಿತು. ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲಿಂಗ್, ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಪ್ರದರ್ಶನ ನೀಡಿತು.

Published by:shrikrishna bhat
First published: