• Home
  • »
  • News
  • »
  • sports
  • »
  • T20 World Cup 2022: ಭಾರತ-ಪಾಕ್​ ಪಂದ್ಯಕ್ಕೂ ಮುನ್ನ ಬಿಗ್​ ಅಪ್​ಡೇಟ್,​ ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ ಪಾಕಿಸ್ತಾನ​ ಬೌಲರ್​

T20 World Cup 2022: ಭಾರತ-ಪಾಕ್​ ಪಂದ್ಯಕ್ಕೂ ಮುನ್ನ ಬಿಗ್​ ಅಪ್​ಡೇಟ್,​ ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ ಪಾಕಿಸ್ತಾನ​ ಬೌಲರ್​

ಶಾಹೀನ್ ಅಫ್ರಿದಿ

ಶಾಹೀನ್ ಅಫ್ರಿದಿ

T20 World Cup 2022: ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಬಗ್ಗೆ ಪಾಕಿಸ್ತಾನ ದೊಡ್ಡ ಅಪ್​ಡೇಟ್​ ನೀಡಿದೆ. ಅಫ್ರಿದಿಯನ್ನು ಟಿ20 ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಲಾಗುವುದು ಮತ್ತು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆ ನೀಡಿದೆ.

ಮುಂದೆ ಓದಿ ...
  • Share this:

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ICC T20 ವಿಶ್ವಕಪ್ 2022 ಗಾಗಿ ಭಾರತ ತಂಡವನ್ನು(India T20 World Cup Squad) ಘೋಷಿಸಿದ್ದು, ಈಗಾಗಲೇ ಟೀಂ ಇಂಡಿಯಾ ಸಹ ಆಸ್ಟ್ರೇಲಿಯಾಗೆ ತಲುಪಿದೆ. ಈ ಬಾರಿ ರೋಹಿತ್ ಶರ್ಮಾ (Rohit Sharma) ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್​ಗೆ ಈಗಾಗಲೇ ಭಾರತ ತಂಡ ಭರ್ಜರಿ ಸಿದ್ಧತೆಯಲ್ಲಿ ತೊಡಗಿದೆ. ICC ಪುರುಷರ T20 ವಿಶ್ವಕಪ್ 2022 ರಲ್ಲಿ, ಭಾರತ ಮತ್ತು ಪಾಕಿಸ್ತಾನವು (IND vs PAK) ಅಕ್ಟೋಬರ್ 23 ರಂದು ಮುಖಾಮುಖಿಯಾಗಲಿದೆ. ಉಭಯ ತಂಡಗಳ ನಡುವಿನ ಈ ಹೈ ವೋಲ್ಟೇಜ್ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಪಾಕ್​ ಮಾಜಿ ಆಟಗಾರ ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.


ಬಿಗ್​ ಅಪ್​ಡೇಟ್​ ನೀಡಿದ ಪಾಕಿಸ್ತಾನ:


ಪಾಕಿಸ್ತಾನದ ವೇಗಿ  ಶಾಹೀನ್ ಶಾ ಆಫ್ರಿದಿ ಗಾಯದಿಂದ ವಾಪಸಾಗಿದ್ದು, ಅಭ್ಯಾಸ ಪಂದ್ಯಗಳಿಗೆ ಮುನ್ನ ಪಾಕಿಸ್ತಾನ ತಂಡವನ್ನು ಸೇರಿಕೊಳ್ಳಲಿದ್ದಾರೆ. ಶಾಹೀನ್ ಅಫ್ರಿದಿ ಅವರು ಪಿಸಿಬಿ ವೈದ್ಯಕೀಯ ಸಲಹಾ ಸಮಿತಿಯ ಮೇಲ್ವಿಚಾರಣೆಯಲ್ಲಿ ಪುನರ್ವಸತಿ ಕೇಂದ್ರಕ್ಕೆ ಒಳಗಾದ ನಂತರ ಆಸ್ಟ್ರೇಲಿಯಾದಲ್ಲಿ ಐಸಿಸಿ ಪುರುಷರ T20 ವಿಶ್ವಕಪ್ 2022 ಗಾಗಿ ಪಾಕಿಸ್ತಾನ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಕ್ಟೋಬರ್ 17 ಮತ್ತು 19 ರಂದು ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯಗಳಿಗೆ ಅವರು ಲಭ್ಯವಿರುತ್ತಾರೆ ಎಂದು ಪಾಕ್​ ಮಂಡಳಿ ತಿಳಿಸಿದೆ.



ಟಿ20 ವಿಶ್ವಕಪ್‌ಗಾಗಿ ರಾಷ್ಟ್ರೀಯ ತಂಡವನ್ನು ಸೇರಲು ಜೊತೆಗೆ ನನ್ನ ಪಾತ್ರವನ್ನು ನಿರ್ವಹಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ ಎಂದು ಶಾಹೀನ್ ಹೇಳಿದ್ದಾರೆ. ಕ್ರಿಕೆಟ್ ಮತ್ತು ನಾನು ಪ್ರೀತಿಸುವ ತಂಡದಿಂದ ದೂರ ಉಳಿಯಲು ನನಗೆ ಕಷ್ಟದ ಅವಧಿಯಾಗಿದೆ ಮತ್ತು ಈ ಅವಧಿಯಲ್ಲಿ ಅನೇಕ ರೋಚಕ ಪಂದ್ಯಗಳ ಭಾಗವಾಗಲು ಸಾಧ್ಯವಾಗಲಿಲ್ಲ. ಅಲ್ಲದೇ ತಂಡದ ಪ್ರಮುಖ ಪಂದ್ಯದಲ್ಲಿ ನಾನು ಮತ್ತೆ ಉತ್ತಮವಾಗಿ ಆಡುವ ಮೂಲಕ ತಂಡಕ್ಕೆ ಜಯ ತಂದುಕೊಡಲು ಕಾತುರನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: Hardik Pandya: ಅಂದು ಐಪಿಎಲ್‌ನಲ್ಲಿ 10 ಲಕ್ಷಕ್ಕೂ ಸೇಲ್ ಆಗ್ತಿರಲಿಲ್ಲ, ಇಂದು ಇವರ ವ್ಯಾಲ್ಯೂ ಕೋಟಿ ಕೋಟಿ!


ಸ್ಟ್ರಾಂಗ್​ ಆಗಿ ಕಂಬ್ಯಾಕ್​ ಮಾಡುತ್ತೇನೆ:


ನಾನು ಕಳೆದ 10 ದಿನಗಳಿಂದ ಪೂರ್ಣ ರನ್ ಅಪ್ ಮತ್ತು ವೇಗದೊಂದಿಗೆ 6 ರಿಂದ 8 ಓವರ್‌ಗಳನ್ನು ತೊಂದರೆಯಿಲ್ಲದೆ ಬೌಲಿಂಗ್ ಮಾಡುತ್ತಿದ್ದೇನೆ. ನಾನು ನೆಟ್ಸ್‌ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಅನ್ನು ಆನಂದಿಸುತ್ತಿರುವೆ.  ಎರಡು ಅಭ್ಯಾಸ ಪಂದ್ಯಗಳಲ್ಲಿ ಶಾಹೀನ್ ಅವರ ಮ್ಯಾಚ್ ಫಿಟ್ನೆಸ್ ಅನ್ನು ತಂಡದ ಮ್ಯಾನೇಜ್ಮೆಂಟ್ ಮೌಲ್ಯಮಾಪನ ಮಾಡುತ್ತದೆ. ಶಾಹೀನ್ ಅಫ್ರಿದಿ ಬಲ ಮೊಣಕಾಲಿನ ಅಸ್ಥಿರಜ್ಜು ಗಾಯದ ನಂತರ ಪುನರ್ವಸತಿ ಪೂರ್ಣಗೊಳಿಸಲು ಲಂಡನ್‌ಗೆ ತೆರಳಿದ್ದರು, ಇದರಿಂದಾಗಿ ಅವರು ಏಷ್ಯಾ ಕಪ್‌ನಿಂದ ಹೊರಗುಳಿದಿದ್ದರು.


ಇದನ್ನೂ ಓದಿ: Shreyas Iyer: ಟಿ20 ವಿಶ್ವಕಪ್​ಗೂ ಮುನ್ನ ರೋಹಿತ್​ ತಲೆನೋವು ಹೆಚ್ಚಿಸಿದ ಶ್ರೇಯಸ್ ಅಯ್ಯರ್, ಈ ಅಂಕಿಅಂಶಗಳೇ ಕಾರಣವಂತೆ!


ಟಿ20 ಅಲ್ಲಿ ಅಪಾಯಕಾರಿ ಬೌಲರ್​ ಅಫ್ರಿದಿ:


ಶಾಹೀನ್ ಅಫ್ರಿದಿ ಪಾಕಿಸ್ತಾನದ ಪರವಾಗಿ 40 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 47 ವಿಕೆಟ್ ಪಡೆದಿದ್ದಾರೆ. ಶಹೀನ್ ಶಾ ಆಫ್ರಿದಿ ಟಿ20ಯಲ್ಲಿ ಅತ್ಯಂತ ಅಪಾಯಕಾರಿ ಬೌಲರ್. ಈ ವರ್ಷ 22ರ ಹರೆಯದ ಅವರು 119 ಟಿ20 ಪಂದ್ಯಗಳಲ್ಲಿ 165 ವಿಕೆಟ್‌ಗಳನ್ನು ಪಡೆದಿದ್ದಾರೆ. 19 ರನ್‌ಗಳಿಗೆ 6 ವಿಕೆಟ್ ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಅವರು ತಮ್ಮ ಟಿ20 ವೃತ್ತಿಜೀವನದಲ್ಲಿ ನಾಲ್ಕು ಬಾರಿ ಐದು ವಿಕೆಟ್ ಪಡೆದಿದ್ದಾರೆ. ಇನ್ನು, ಇದೇ ಅಕ್ಟೋಬರ್​ 23ರಂದು ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಎದುರಾಗಲಿದೆ. ಈ ಪಂದ್ಯಕ್ಕಾಗಿ ಈಗಾಗಲೇ ಎಲ್ಲಾ ಟಿಕೆಟ್​ಗಳು ಮಾರಾಟವಾಗಿದ್ದು, ಪಂದ್ಯದ ಮೇಲಿನ ನಿರೀಕ್ಷೆ ಹೆಚ್ಚಿದೆ.

Published by:shrikrishna bhat
First published: