• Home
  • »
  • News
  • »
  • sports
  • »
  • T20 World Cup 2022: ಟಿ20 ವಿಶ್ವಕಪ್​ ಫೈನಲ್​ನಲ್ಲಿ ಮ್ಯಾಚ್​ ಫಿಕ್ಸಿಂಗ್​!? ಹೊಸ ಬಾಂಬ್​ ಸಿಡಿಸಿದ ಪಾಕ್​ ಮಾಜಿ ಆಟಗಾರ

T20 World Cup 2022: ಟಿ20 ವಿಶ್ವಕಪ್​ ಫೈನಲ್​ನಲ್ಲಿ ಮ್ಯಾಚ್​ ಫಿಕ್ಸಿಂಗ್​!? ಹೊಸ ಬಾಂಬ್​ ಸಿಡಿಸಿದ ಪಾಕ್​ ಮಾಜಿ ಆಟಗಾರ

PAK vs ENG

PAK vs ENG

T20 World Cup 2022: ನವೆಂಬರ್ 13 ರ ಭಾನುವಾರ ಮೆಲ್ಬೋರ್ನ್‌ನಲ್ಲಿ ನಡೆದ T20 ವಿಶ್ವಕಪ್ 2022 ರ ಫೈನಲ್‌ನಲ್ಲಿ ಇಂಗ್ಲೆಂಡ್ 5 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತು. ಸೋಲಿನ ನಂತರ, ಪಾಕಿಸ್ತಾನ ತಂಡವು ವಿಶೇಷವಾಗಿ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಟೀಕೆಗಳನ್ನು ಎದುರಿಸುತ್ತಿದೆ.

ಮುಂದೆ ಓದಿ ...
  • Share this:

ಟಿ20 ವಿಶ್ವಕಪ್ 2022 (T20 World Cup 2022) ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ (ENG vs PAK) ಸೋತ ನಂತರ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ (Javed Miandad) ಹೇಳಿಕೆ ಇದೀಗ ಹೊಸ ಸಂಚಲನವನ್ನೇ ಮೂಡಿಸಿದೆ. ಮಿಯಾಂದಾದ್ ಪಾಕಿಸ್ತಾನಿ ತರಬೇತುದಾರರು ಮತ್ತು ಕ್ರಿಕೆಟ್ ಮಂಡಳಿಯನ್ನು ಟೀಕಿಸಿದ್ದಾರೆ. ಪಾಕಿಸ್ತಾನಿ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜಾವೇದ್, ಕಳೆದ ಕೆಲವು ವರ್ಷಗಳಿಂದ ತಮ್ಮ ತಂಡವು ವಿದೇಶಿ ಕೋಚ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಮ್ಯಾಥ್ಯೂ ಹೇಡನ್ ತಂಡದ ಮೆಂಟರ್ ಆಗಿದ್ದರೆ, ಶಾನ್ ಟೈಟ್ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಿಯಾಂದಾದ್ ಹೇಳಿದರು. ಆಡಳಿತವು ವಿದೇಶಿ ಕೋಚ್‌ಗಳತ್ತ ವಾಲುತ್ತಿರುವ ಕಾರಣ, ಪ್ರಸ್ತುತ ಆಟಗಾರರ ಭವಿಷ್ಯದ ಬಗ್ಗೆ ಮಿಯಾಂದಾದ್ ಅನುಮಾನ ವ್ಯಕ್ತಪಡಿಸಿದ್ದಾರೆ.


ಮ್ಯಾಚ್ ಫಿಕ್ಸಿಂಗ್ ಬಗ್ಗೆ ಹೊಸ ಬಾಂಬ್ ಸಿಡಿಸಿದ ಮಿಯಾಂದಾದ್:


ಪಾಕಿಸ್ತಾನ ಕ್ರಿಕೆಟ್‌ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಮಿಯಾಂದಾದ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ನಾನು ನನ್ನ ಬಗ್ಗೆ ಮಾತನಾಡುವುದಿಲ್ಲ, ನನಗೆ ಈ ಹಿಂದೆ ಅನೇಕ ಆಫರ್‌ಗಳು ಬಂದಿವೆ ಆದರೆ ನಾನು ಒಂದನ್ನೂ ಸ್ವೀಕರಿಸಿಲ್ಲ. ಈಗ ಇರುವ ಆಟಗಾರರ ಗತಿಯೇನು? ಅವರು ಪ್ರದರ್ಶನ ನೀಡದಿದ್ದರೆ ಮುಂದೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರಿಗೆ ತಿಳಿದಿದೆ. ಇದು ಫಿಕ್ಸಿಂಗ್‌ಗೆ ಕಾರಣವಾಗುತ್ತದೆ. ಎಲ್ಲರೂ ತಮ್ಮ ವೃತ್ತಿಜೀವನ ಮುಗಿದುಹೋಗುತ್ತದೆ ಎಂದು ಭಯಪಡುತ್ತಿದ್ದಾರೆ ಎಂದು ಹೇಳಿದ್ದಾರೆ.


ವಿಶ್ವಕಪ್ ಫೈನಲ್‌ನಲ್ಲಿ ಸೋಲಿನ ನೋವಿನಿಂದ ಪಾಕ್ ತಂಡ ಇನ್ನೂ ಹೊರಬರದಿರುವಾಗ, ಜಾವೇದ್ ಮಿಯಾಂದಾದ್ ಫಿಕ್ಸಿಂಗ್ ಬಗ್ಗೆ ಹೇಳುವ ಮೂಲಕ ದೊಡ್ಡ ಬಾಂಬ್ ಅನ್ನು ಸಿಡಿಸಿದ್ದಾರೆ. ಅಲ್ಲದೇ ಇದೀಗ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಬೇರೆಯದೇ ಆಯಾಮ ಪಡೆದುಕೊಂಡಿದ್ದು, ಅನೇಕರು ಇಂಗ್ಲೆಂಡ್​ ವಿರುದ್ಧದ ಫೈನಲ್​ ಪಂದ್ಯವು ಮ್ಯಾಚ್​ ಫಿಕ್ಸಿಂಗ್​ ಆಗಿದೆಯೇ ಎಂಬ ಮಾತುಗಳು ಕೇಳಿಬರುತ್ತಿದೆ.


ಇದನ್ನೂ ಓದಿ: Faf du Plessis: ವಾರ್ನರ್​ ಮೇಲೆ ಗಂಭೀರ ಆರೋಪ ಮಾಡಿದ RCB ನಾಯಕ, ಫಾಫ್ ಆತ್ಮಚರಿತ್ರೆಯಲ್ಲಿ ಬಹಿರಂಗವಾಯ್ತು ಕರಾಳ ಸತ್ಯ!


ಆಟಗಾರರ ಭವಿಷ್ಯವೇನು?:


ನಾವು ಕೌಂಟಿ ಆಡಿದ್ದೇವೆ, ಆದರೆ ಈಗ ಆಡುತ್ತಿರುವವರ ಭವಿಷ್ಯವೇನು ಎಂದು ಪಾಕಿಸ್ತಾನ ಕ್ರಿಕೆಟ್ ಕುರಿತು ಜಾವೇದ್ ಮಿಯಾಂದಾದ್ ಹೇಳಿದ್ದಾರೆ. ಅಲ್ಲದೇ ಇದೀಗ ಅವರ ಹೇಲಿಕೆಯು ಸಂಚಲನ ಮೂಡಿಸಿದ್ದು,  ಪಾಕಿಸ್ತಾನಿ ಕ್ರಿಕೆಟ್ ಇತಿಹಾಸದಲ್ಲಿ ಮಿಯಾಂದಾದ್ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿrಉವುದರಿಂದ ಪಾಕಿಸ್ತಾನದ ಆಡಳಿತವು ಅವರ ಬಗ್ಗೆ ಎಷ್ಟು ಗಮನ ಹರಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


ಇದನ್ನೂ ಓದಿ: IPL 2023: ಸ್ಟಾರ್ ಆಟಗಾರರನ್ನು ಉಳಿಸಿಕೊಂಡ RCB, ಶಾರ್ದುಲ್ ಠಾಕೂರ್​ ಕೈಬಿಟ್ಟ ಡಿಸಿ


2ನೇ ಬಾರಿ ವಿಶ್ವಕಪ್​ ಗೆದ್ದ ಆಂಗ್ಲರು:

 ಪಾಕಿಸ್ತಾನ ನೀಡದ 138 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ತಂಡಕ್ಕೂ ಸಹ ಆರಂಭಿಕ ಆಘಾತ ಉಂಟಾಯಿತು. ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಅಲೇಕ್ಸ್ ಹೇಲ್ಸ್ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ ನಾಯಕ ಜೋಸ್ ಬಟ್ಲರ್ 26 ರನ್ ಗಳಿಸಿ ಔಟ್​ ಆಗುವ ಮೂಲಕ ತಂಡಕ್ಕೆ ಆರಂಭಿಕ ಆಘಾತ ಆಯಿತು. ಆದರೆ ಏಕದಿನ ವಿಶ್ವಕಪ್​ ಹೀರೋ ಬೆನ್ ಸ್ಟೋಕ್ಸ್ 49 ಎಸೆತದಲ್ಲಿ 1 ಸಿಕ್ಸ್ 5 ಪೋರ್​ಗಳ ಮೂಲಕ 52 ರನ್ ಗಳಿಸಿ ತಂಡದ ಗೆಲುವಿನಲ್ಲಿ ಹೀರೋ ಆಗಿ ಹೊರಹೊಮ್ಮಿದರು. ನಂತರ ಫಿಲ್ ಸಾಲ್ಟ್ 10 ರನ್, ಹ್ಯಾರಿ ಬ್ರೋಕ್ 20 ರನ್,  ಮೋಯಿನ್ ಅಲಿ 19 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Published by:shrikrishna bhat
First published: