• Home
  • »
  • News
  • »
  • sports
  • »
  • T20 World Cup: ಬುಮ್ರಾ ಬದಲಿಗೆ ಈ ಆಟಗಾರನ ಆಯ್ಕೆ ಬಹುತೇಕ ಖಚಿತ, ಸುಳಿವು ನೀಡಿದ ಬಿಸಿಸಿಐ

T20 World Cup: ಬುಮ್ರಾ ಬದಲಿಗೆ ಈ ಆಟಗಾರನ ಆಯ್ಕೆ ಬಹುತೇಕ ಖಚಿತ, ಸುಳಿವು ನೀಡಿದ ಬಿಸಿಸಿಐ

ಬುಮ್ರಾ

ಬುಮ್ರಾ

T20 World Cup: ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಬುಮ್ರಾ ಅಭ್ಯಾಸದ ವೇಳೆ ಬೆನ್ನು ನೋವಿನಿಂದ ಬಳಲುತ್ತಿದ್ದರು. ಇದರ ನಂತರ ಅವರು ಈ ಸರಣಿಯಿಂದ ಹೊರಗುಳಿಯುವ ಸುದ್ದಿ ಮುನ್ನೆಲೆಗೆ ಬಂದಿತು. ನಂತರ BCCI ಅವರನ್ನು T20 ವಿಶ್ವಕಪ್‌ನಿಂದ ಹೊರಗಿಡುವ ಬಗ್ಗೆ ಮಾಹಿತಿ ನೀಡಿತು.

ಮುಂದೆ ಓದಿ ...
  • Share this:

ಐಸಿಸಿ ಟಿ20 ವಿಶ್ವಕಪ್ (T20 World Cup) ಆಡಲು ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ತಲುಪಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಗಾಯಗೊಂಡಿರುವ ಕಾರಣ ಟೀಮ್ ಇಂಡಿಯಾ (Team India) ಪಂದ್ಯಾವಳಿಯ ಮೊದಲು ದೊಡ್ಡ ಹಿನ್ನಡೆ ಅನುಭವಿಸಿತು. ಅವರ ಬದಲಿಯಾಗಿ ತಂಡಕ್ಕೆ ಸೇರ್ಪಡೆಗೊಳ್ಳುವ ಬೌಲರ್‌ನ ಹೆಸರನ್ನು ಇದುವರೆಗೆ ಬಿಸಿಸಿಐ (BCCI) ಪ್ರಕಟಿಸಿಲ್ಲ. ಈಗ ಅವರ ಬದಲಿಗೆ ಅನುಭವಿ ಮೊಹಮ್ಮದ್ ಶಮಿ (Mohammed Shami) ತಂಡಕ್ಕೆ ಸೇರ್ಪಡೆಗೊಳ್ಳಬಹುದು ಎಂಬ ಸುದ್ದಿ ಇದೆ. ಅಂದಹಾಗೆ, ಈಗಾಗಲೇ ಆಯ್ಕೆಗಾರರು ಅವರನ್ನು ಟಿ20 ವಿಶ್ವಕಪ್ ತಂಡದಲ್ಲಿ ಸ್ಟ್ಯಾಂಡ್‌ಬೈನಲ್ಲಿ ಹೆಸರಿಸಿದ್ದಾರೆ. ಆದರೆ ಈ ಕುರಿತು ಬಿಸಿಸಿಐ ಈವರೆಗೂ ಯಾವುದೇ ಅಧಿಕೃತ ಮಾಹಿತಿ ತಿಳಿಸಿಲ್ಲ.


ಬುಮ್ರಾ ಬದಲಿಗೆ ಶಮಿ?:


ಟಿ20 ವಿಶ್ವಕಪ್‌ಗೆ ತಂಡ ಆಯ್ಕೆಯಾದಾಗಿನಿಂದ ಈ ಬೌಲರ್‌ನ ಹೆಸರು ನಿರಂತರ ಚರ್ಚೆಯಲ್ಲಿದೆ. ಆಯ್ಕೆದಾರರು ಶಮಿಯಂತಹ ಅನುಭವಿ ಬೌಲರ್ ಅನ್ನು ಸ್ಟ್ಯಾಂಡ್ ಬೈ ಆಗಿ ಆಯ್ಕೆ ಮಾಡಿದಾಗ ಎಲ್ಲರಿಗೂ ಆಶ್ಚರ್ಯವಾಯಿತು. ಈ ಬಗ್ಗೆ ಅನುಭವಿಗಳು ಪ್ರಶ್ನೆಗಳನ್ನು ಎತ್ತಿದ್ದು, ಅಭಿಮಾನಿಗಳು ಕೂಡ ಈ ನಿರ್ಧಾರದಿಂದ ಬೇಸರಗೊಂಡಿದ್ದರು. ಟೂರ್ನಿಗೂ ಮುನ್ನ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು, ಇದೀಗ ಶಮಿಯನ್ನು ಆಸ್ಟ್ರೇಲಿಯಾಕ್ಕೆ ಬದಲಿ ಬೌಲರ್ ಆಗಿ ಕಳುಹಿಸಬಹುದು ಎಂಬ ಸುದ್ದಿ ಕೇಳಿಬರುತ್ತಿದೆ.


ಇತ್ತೀಚೆಗೆ, ಶಮಿ ಕೊರೋನಾ ಸೋಂಕಿಗೆ ಒಳಗಾಗಿದ್ದರು, ನಂತರ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡಲು ಸಾಧ್ಯವಾಗಲಿಲ್ಲ. ಇದೀಗ ಫಿಟ್ ನೆಸ್ ಪಡೆದ ಬಳಿಕ ಅಭ್ಯಾಸ ಆರಂಭಿಸಿದ್ದಾರೆ. ಇನ್ನೆರಡು ಮೂರು ದಿನಗಳಲ್ಲಿ ಅವರು ಆಸ್ಟ್ರೇಲಿಯಾಕ್ಕೆ ತೆರಳಬಹುದು ಎಂದು ಪಿಟಿಐ ಮಾಹಿತಿ ನೀಡಿದೆ. ಪಿಟಿಐ ಮೂಲವೊಂದು ಹೇಳಿದ್ದು, "ಮೊಹಮ್ಮದ್ ಶಮಿ ಅವರು ಸಂಪೂರ್ಣ ಫಿಟ್ ಆಗಿದ್ದರೆ, ಬದಲಿ ಆಟಗಾರರಿಗೆ ಅವರು ಯಾವಾಗಲೂ ಮೊದಲ ಆಯ್ಕೆಯಾಗಿರುತ್ತಾರೆ. ಅವರಂತಹ ಉತ್ತಮ ಗುಣಮಟ್ಟದ ಬೌಲರ್ ಟೀಂ ಇಂಡಿಯಾಗೆ ಸಿಗಲಿದೆ. ಮುಂದಿನ ವಾರ ಅವರು ತಂಡವನ್ನು ಸೇರಿಕೊಳ್ಳುವ ಸಾಧ್ಯತೆ ಇದೆ‘ ಎಂದು ತಿಳಿದುಬಂದಿದೆ.


ಇದನ್ನೂ ಓದಿ: T20 World Cup 2022: ಆಸೀಸ್​ನಲ್ಲಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ, ಈ ಸಲ ಕಪ್ ನಮ್ದೇ ಎಂದ ಫ್ಯಾನ್ಸ್​


ಟೀಂ ಇಂಡಿಯಾದ ತರಬೇತಿ ಅವಧಿ ಆರಂಭ:


ಪರ್ತ್‌ಗೆ ಆಗಮಿಸಿದ ನಂತರ ಟೀಂ ಇಂಡಿಯಾ ವಾಕಾ ಮೈದಾನಕ್ಕೆ ಪ್ರವೇಶಿಸಿತು. ಇಲ್ಲಿ ಟೀಂ ಇಂಡಿಯಾದ ಮೊದಲ ತರಬೇತಿ ಸೆಷನ್ ನಡೆಯಿತು. ಅಕ್ಟೋಬರ್ 23 ರಂದು ಭಾರತ ತಂಡದ ವಿಶ್ವಕಪ್ ಅಭಿಯಾನ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾ ಪರ್ತ್‌ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಮೊದಲ ಅಭ್ಯಾಸ ಪಂದ್ಯ ಅಕ್ಟೋಬರ್ 17 ರಂದು ಮತ್ತು ಎರಡನೇ ಅಭ್ಯಾಸ ಅಕ್ಟೋಬರ್ 19 ರಂದು ನಡೆಯಲಿದೆ.


ಗಾಯದ ಸಮಸ್ಯೆಯಿಂದ ಜಸ್ಪ್ರೀತ್ ಬುಮ್ರಾ ಔಟ್


ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಬುಮ್ರಾ ಅಭ್ಯಾಸದ ವೇಳೆ ಬೆನ್ನು ನೋವಿನಿಂದ ಬಳಲುತ್ತಿದ್ದರು. ಇದರ ನಂತರ ಅವರು ಈ ಸರಣಿಯಿಂದ ಹೊರಗುಳಿಯುವ ಸುದ್ದಿ ಮುನ್ನೆಲೆಗೆ ಬಂದಿತು.ಇದೇ ಸೋಮವಾರ, 3 ಅಕ್ಟೋಬರ್, BCCI ಅವರು T20 ವಿಶ್ವಕಪ್‌ನಿಂದ ಹೊರಗಿಡುವ ಬಗ್ಗೆ ಮಾಹಿತಿ ನೀಡಿದರು.


ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ಗೂ ಮುನ್ನ ಟೀಂ ಇಂಡಿಯಾಗೆ ಮತ್ತೊಂದು ಆಘಾತ, ಸ್ಟಾರ್ ಬೌಲರ್​ಗೆ ಇಂಜುರಿ


ಟಿ20 ವಿಶ್ವಕಪ್‌ಗೆ ಭಾರತ ತಂಡ:


ರೋಹಿತ್ ಶರ್ಮಾ (ಸಿ), ಕೆಎಲ್ ರಾಹುಲ್ (ವಿಸಿ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಆರ್ ಪಂತ್ (ಡಬ್ಲ್ಯುಕೆ), ದಿನೇಶ್ ಕಾರ್ತಿಕ್ (ಡಬ್ಲ್ಯುಕೆ), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ವೈ ಚಾಹಲ್, ಅಕ್ಷರ್ ಪಟೇಲ್, ಬಿ. ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.


ಸ್ಟ್ಯಾಂಡ್-ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Published by:shrikrishna bhat
First published: