• Home
  • »
  • News
  • »
  • sports
  • »
  • T20 World Cup 2022: ಭಾರತ ತಂಡಕ್ಕೆ ಮತ್ತೊಂದು ಆಘಾತ, ವೀಸಾ ಸಮಸ್ಯೆಯಿಂದ ಫ್ಲೈಟ್​ ತಪ್ಪಿಸಿಕೊಂಡ ಇಬ್ಬರು ಪ್ಲೇಯರ್ಸ್​

T20 World Cup 2022: ಭಾರತ ತಂಡಕ್ಕೆ ಮತ್ತೊಂದು ಆಘಾತ, ವೀಸಾ ಸಮಸ್ಯೆಯಿಂದ ಫ್ಲೈಟ್​ ತಪ್ಪಿಸಿಕೊಂಡ ಇಬ್ಬರು ಪ್ಲೇಯರ್ಸ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

T20 World Cup 2022: ಟಿ20 ವಿಶ್ವಕಪ್ ಗಾಗಿ ಆಸ್ಟ್ರೇಲಿಯಾಕ್ಕೆ ತೆರಳಬೇಕಿದ್ದ ಉಮ್ರಾನ್ ಮಲಿಕ್ ಮತ್ತು ಕುಲ್ದೀಪ್ ಸೇನ್ ವೀಸಾ ಸಮಸ್ಯೆಯಿಂದ ಆಸೀಸ್​ಗೆ ತೆರಳಲಾಗಲಿಲ್ಲ ಎಂದು ವರದಿಯಾಗಿದೆ.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್ (IPL) ವೇಳೆ ತಮ್ಮ ವೇಗದ ಬೌಲಿಂಗ್​ನಿಂದ ಎಲ್ಲರ ಗಮನ ಸೆಳೆದಿದ್ದ ಉಮ್ರಾನ್ ಮಲಿಕ್ (Umran Malik) ಮತ್ತು ಕುಲದೀಪ್ ಸೇನ್ (Kuldeep Sen) ಆಸ್ಟ್ರೇಲಿಯಾಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಹೌದು, ಈ ಇಬ್ಬರೂ ಯುವ ಬೌಲರ್‌ಗಳು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಟಿ20 ವಿಶ್ವಕಪ್‌ಗಾಗಿ ತಂಡಕ್ಕೆ ನೆಟ್​ ಬೌಲರ್​ಗಳಾಗಿ ಆಯ್ಕೆ ಆಗಿದ್ದರು. ಆದರೆ, ಆಸ್ಟ್ರೇಲಿಯಾಕ್ಕೆ ವೀಸಾ ಪಡೆಯಲು ವಿಳಂಬವಾದ ಕಾರಣ, ಅವರಿಬ್ಬರು ಆಸೀಸ್​ಗೆ ಹೊರಡಲು ಸಾಧ್ಯವಾಗಲಿಲ್ಲ. ಉಮ್ರಾನ್ ಪ್ರಸ್ತುತ ದೇಶೀಯ ಟಿ20 ಟೂರ್ನಿ ಮುಷ್ತಾಕ್ ಅಲಿ ಟ್ರೋಫಿ ಆಡುತ್ತಿದ್ದಾರೆ. ಮತ್ತೊಂದೆಡೆ ಟೀಂ ಇಂಡಿಯಾ ವೆಸ್ಟರ್ನ್ ಆಸ್ಟ್ರೇಲಿಯ ವಿರುದ್ಧ ಅಭ್ಯಾಸ ಪಂದ್ಯವನ್ನಾಡಿದೆ. ಎರಡನೇ ಪಂದ್ಯ ಇಂದು ನಡೆಯಲಿದೆ.


ನೆಟ್​ ಬೌಲರ್​ಗಳಾಗಿದ್ದ ಮಲಿಕ್​-ಸೇನ್​:


ಸೌರಾಷ್ಟ್ರದ ಚೇತನ್ ಸಕರಿಯಾ ಮತ್ತು ಮಹಾರಾಷ್ಟ್ರದ ಮುಖೇಶ್ ಚೌಧರಿ ಜೊತೆಗೆ ಮಧ್ಯಪ್ರದೇಶದ ಕುಲದೀಪ್ ಸೇನ್ ಮತ್ತು ಜಮ್ಮು ಮತ್ತು ಕಾಶ್ಮೀರದ ಉಮ್ರಾನ್ ಮಲಿಕ್ ಅವರನ್ನು ನೆಟ್ ಬೌಲರ್‌ಗಳಾಗಿ ಆಯ್ಕೆ ಮಾಡಲಾಗಿತ್ತು. ಸಕರಿಯಾ ಮತ್ತು ಚೌಧರಿ ಈಗಾಗಲೇ ಆಸ್ಟ್ರೇಲಿಯಾಕ್ಕೆ ವೀಸಾ ಹೊಂದಿದ್ದರು. ಬಿಸಿಸಿಐ ನಂತರ ಇತರ ಇಬ್ಬರು ವೇಗದ ಬೌಲರ್‌ಗಳಿಗೂ ವೀಸಾಕ್ಕಾಗಿ ಅರ್ಜಿ ಸಲ್ಲಿಸಿತು. ಆದರೆ ಮಾಹಿತಿ ಪ್ರಕಾರ, ಮಲಿಕ್ ಮತ್ತು ಸೇನ್ ಇನ್ನೂ ವೀಸಾ ಪಡೆದಿಲ್ಲ ಮತ್ತು ಈಗ ಅವರನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸದಿರಲು ಮಂಡಳಿ ನಿರ್ಧರಿಸಿದೆ. ಮಾಹಿತಿ ಪ್ರಕಾರ ಇದೀಗ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಮೊಹಮ್ಮದ್ ಶಮಿ ಜೊತೆ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದಾರೆ.


ಆಯ್ಕೆಯಾದ 15 ಆಟಗಾರರ ಹೊರತಾಗಿ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್ ಮತ್ತು ದೀಪಕ್ ಚಹಾರ್ ಅವರನ್ನು ಆರಂಭದಲ್ಲಿ ಸ್ಟ್ಯಾಂಡ್‌ಬೈ ಎಂದು ಹೆಸರಿಸಲಾಯಿತು. ಆದರೆ, ನಂತರ ಗಾಯದ ಕಾರಣ ಚಹಾರ್ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮಲಿಕ್ ಮತ್ತು ಸೇನ್ ಅಧಿಕೃತ ಪಟ್ಟಿಯಲ್ಲಿಲ್ಲದ ಕಾರಣ, ಅವರ ವೀಸಾಗಳ ಪ್ರಕ್ರಿಯೆಯು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದರಿಂದ ಇಬ್ಬರೂ ಆಸೀಸ್​ಗೆ ತೆರಳಲು ಆಗಲಿಲ್ಲ.


ಇದನ್ನೂ ಓದಿ: Virat Kohli: ಪಾಕ್​ ನಿದ್ದೆಗೆಡಿಸಿದ ಕಿಂಗ್​ ಕೊಹ್ಲಿ ವಿಡಿಯೋ, ಹೊಸ ಹೇರ್​ಸ್ಟೈಲ್​ನಲ್ಲಿ ಮಿಂಚಿದ ವಿರಾಟ್​


ಶಾರ್ದೂಲ್ ಟ್ವೀಟ್, ಭಜ್ಜಿ ಕ್ಷಮೆಯಾಚನೆ:


ಇದರ ನಡುವೆ ಮತ್ತೊಂದು ಘಟನೆ ನಡೆದಿದ್ದು, ಮುಂಬೈ ವಿಮಾನ ನಿಲ್ದಾಣದ ಟರ್ಮಿನಲ್-2 ರಿಂದ ಶಾರ್ದೂಲ್ ಅವರ ಬ್ಯಾಗ್ ನಾಪತ್ತೆಯಾಗಿದೆ. ಆ ಬಳಿಕ ಶಾರ್ದೂಲ್ ಟ್ವೀಟ್ ಮಾಡಿ ಸಹಾಯ ಕೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ನನ್ನ ಕಿಟ್ ಬ್ಯಾಗ್ ಇನ್ನೂ ಬಂದಿಲ್ಲ. ಲಗೇಜ್ ಬೆಲ್ಟ್ ಮೇಲೆ ನನ್ನ ಲಗೇಜ್ ಗಾಗಿ ಕಾಯುತ್ತಿದ್ದೇನೆ. ಇಲ್ಲಿ ವಿಮಾನಯಾನ ಸಂಸ್ಥೆಯವರು ಯಾರೂ ಇಲ್ಲ. ಶಾರ್ದೂಲ್ ಠಾಕೂರ್ ಟ್ವೀಟ್ ಗೆ ಹರ್ಭಜನ್ ಸಿಂಗ್ ಉತ್ತರ ನೀಡಿದ್ದಾರೆ. ಮತ್ತು ಕ್ಷಮೆಯಾಚಿಸಿದ ನಂತರ ತಕ್ಷಣವೇ ಸಹಾಯ ಮಾಡಿದ್ದಾರೆ.ಶಾರ್ದೂಲ್ ಟ್ವೀಟ್‌ ಗೆ ತಕ್ಷಣ ಉತ್ತರಿಸಿದ್ದ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಹರ್ಭಜನ್... 'ಚಿಂತಿಸಬೇಡಿ, ನಿಮ್ಮ ವಸ್ತು ನಿಮಗೆ ಸಿಗುತ್ತದೆ. ನಮ್ಮ ಸಿಬ್ಬಂದಿ ಅಲ್ಲಿಗೆ ತಲುಪುತ್ತಾರೆ. ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ‘ ಎಂದು ಹೇಳಿದ್ದಾರೆ.

Published by:shrikrishna bhat
First published: