• Home
  • »
  • News
  • »
  • sports
  • »
  • T20 World Cup 2022: ವಿಶ್ವಕಪ್‌ಗೂ ಮುನ್ನ ಮತ್ತೆ ಗಾಯದ ಸಮಸ್ಯೆಗೆ ತುತ್ತಾದ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್!

T20 World Cup 2022: ವಿಶ್ವಕಪ್‌ಗೂ ಮುನ್ನ ಮತ್ತೆ ಗಾಯದ ಸಮಸ್ಯೆಗೆ ತುತ್ತಾದ ಟೀಂ ಇಂಡಿಯಾ ಸ್ಟಾರ್​ ಪ್ಲೇಯರ್!

ಜಸ್ಪ್ರೀತ್ ಬುಮ್ರಾ

ಜಸ್ಪ್ರೀತ್ ಬುಮ್ರಾ

T20 World Cup 2022: ಕಳೆದ ಹಲವು ಪಂದ್ಯಗಳಿಂದ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದ ಹಾಗೂ ಆಸ್ಟ್ರೇಲಿಯ ವಿರುದ್ಧ ಕಮ್ ಬ್ಯಾಕ್ ಮಾಡಿದ್ದ ಟೀಂ ಇಂಡಿಯಾದ ಪ್ರಮುಖ ಬೌಲರ್ ಮತ್ತೊಮ್ಮೆ ಗಾಯದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಿಂದ ಹೊರಗುಳಿದರು.

  • Share this:

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ (Team India) ಅಬ್ಬರದ ಬ್ಯಾಟಿಂಗ್​ ಮತ್ತು ಬೌಲಿಂಗ್​ ಮಾಡುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಜೊತೆಗೆ ರೋಹಿತ್ ಶರ್ಮಾ (Rohith Sharma)  ತಂಡದಲ್ಲಿ ಹಲವು ಬದಲಾವಣೆಗಳನ್ನು ಮಾಡಿದ್ದರು. ಕೆಲವು ಆಟಗಾರರಿಗೆ ವಿಶ್ರಾಂತಿ ನೀಡಿ ಇತರ ಹೊಸ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲಾಯಿತು. ಆದರೆ ಕಳೆದ ಹಲವು ಪಂದ್ಯಗಳಿಂದ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದು ಆಸ್ಟ್ರೇಲಿಯ ವಿರುದ್ಧ ಕಂಬ್ಯಾಕ್ ಮಾಡಿದ್ದ ಟೀಂ ಇಂಡಿಯಾದ ಪ್ರಮುಖ ಬೌಲರ್ ಗಾಯದಿಂದಾಗಿ ಮತ್ತೆ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಆಡಲಾಗಲಿಲ್ಲ. ಅವರ ಸ್ಥಾನಕ್ಕೆ ರೋಹಿತ್ ಅರ್ಷದೀಪ್ ಸಿಂಗ್ (Arshdeep Singh) ಅವರಿಗೆ ತಂಡದಲ್ಲಿ ಸ್ಥಾನ ನೀಡಿದರು. ಆದರೆ ವಿಶ್ವಕಪ್ ಗೂ ಮುನ್ನ ಈ ಪ್ರಮುಖ ಬೌಲರ್ ಗಾಯಗೊಂಡಿರುವುದು ಟೀಂ ಇಂಡಿಯಾದ ಟೆನ್ಷನ್ ಹೆಚ್ಚಿಸಲಿದೆ.


ಮೊತ್ತೊಮ್ಮೆ ಗಾಯಗೊಂಡ ಬುಮ್ರಾ:


ಬೆನ್ನುನೋವಿನಿಂದಾಗಿ ಜಸ್ಪ್ರೀತ್ ಬುಮ್ರಾ ಏಷ್ಯಾಕಪ್‌ನಲ್ಲಿ ಆಡಲು ಸಾಧ್ಯವಾಗಲಿಲ್ಲ.  ಇದು ಟೀಂ ಇಂಡಿಯಾಗೆ ಹೆಚ್ಚು ಹೊಡೆತ ಬಿದ್ದಿತು. ಏಕೆಂದರೆ ಭಾರತ ತಂಡ ಏಷ್ಯಾ ಕಪ್ ಅನ್ನು ಸೂಪರ್ ಫೋರ್ ಸುತ್ತಿನಲ್ಲಿಯೇ ಹೊರಬಂದಿತು. ಆದರೆ ನಂತರ ನಾಗ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಬುಮ್ರಾ ಪುನರಾಗಮನ ಮಾಡಿದರು. ಆ ಬಳಿಕ ಹೈದರಾಬಾದ್ ಪರ ಕೊನೆಯ ಟಿ20ಯಲ್ಲಿ ಆಡಿದ್ದರು. ಆದರೆ ಈ ಎರಡು ಪಂದ್ಯಗಳ ಬಳಿಕ ಬುಮ್ರಾ ಗಾಯದ ಸಮಸ್ಯೆ ಮತ್ತೊಮ್ಮೆ ಒಳಗಾಗಿದ್ದಾರೆ.



ಅಭ್ಯಾಸದ ವೇಳೆ ಗಾಯಗೊಂಡ ಬುಮ್ರಾ:


ಏತನ್ಮಧ್ಯೆ, ನಿನ್ನೆ ಅಭ್ಯಾಸದ ಅವಧಿಯಲ್ಲಿ ಬುಮ್ರಾ  ಬೌಲಿಂಗ್ ಮಾಡುವಾಗ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20ಯಲ್ಲಿ ಅವರು ಕಣಕ್ಕಿಳಿಯಲಿಲ್ಲ. ಬಿಸಿಸಿಐನ ವೈದ್ಯಕೀಯ ತಂಡ ಸದ್ಯ ಬುಮ್ರಾ ಗಾಯದ ಮೇಲೆ ನಿಗಾ ಇರಿಸಿದೆ.


ಇದನ್ನೂ ಓದಿ: KL Rahul: ಆಫ್ರಿಕಾ ವಿರುದ್ಧ ಅಬ್ಬರಿಸಿ ದಾಖಲೆ ಬರೆದ ಕನ್ನಡಿಗ, ಈ ಸಾಧನೆ ಮಾಡಿದ ಮೊದಲ ಭಾರತೀಯ


2022 ರಲ್ಲಿ ಕೇವಲ 5 ಪಂದ್ಯಗಳು:


ಜಸ್ಪ್ರೀತ್ ಬುಮ್ರಾ ಅವರ ಫಿಟ್ನೆಸ್ ಸಮಸ್ಯೆಯಿಂದಾಗಿ, ಅವರು ಈ ವರ್ಷ ಕೆಲವೇ ಕೆಲವು ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧ ಎರಡು, ಆಗಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಒಂದು ಮತ್ತು ಇತ್ತೀಚಿನ ಆಸ್ಟ್ರೇಲಿಯಾ ವಿರುದ್ಧದ ಎರಡು ಸರಣಿ ಸೇರಿದಂತೆ ಈ ವರ್ಷ ಒಟ್ಟು 5 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಲ್ಲಿ ಟೀಂ ಇಂಡಿಯಾದ ಈ ಸ್ಟಾರ್ ಬೌಲರ್ ಫಿಟ್ನೆಸ್ ಬಗ್ಗೆ ಚಿಂತೆ ಹೆಚ್ಚಾಗಿದೆ.


ಇದನ್ನೂ ಓದಿ: IND vs SA: ಗೆದ್ದರೂ ಕೆಟ್ಟ ದಾಖಲೆ ಬರೆದ ಟೀಂ ಇಂಡಿಯಾ, ಅದೂ ಸಹ ಯಾವುದರಲ್ಲಿ ಗೊತ್ತಾ?


ಭಾರತ-ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ:


ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ, ಆರ್. ಅಶ್ವಿನ್.


ದಕ್ಷಿಣ ಆಫ್ರಿಕಾ ಸಂಭಾವ್ಯ ತಂಡ: ಟೆಂಬಾ ಬವುಮಾ (C), ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಆನ್ರಿಚ್ ನಾರ್ಟ್ಜೆ, ಕಗಿಸೊ ರಬಡಾ, ರಿವ್ಸಿ ರಬಾಡಾ, ಟ್ರಿಸ್ಟಾನ್ ಸ್ಟಬ್ಸ್/ ಜಾರ್ನ್ ಫಾರ್ಟುಯಿನ್.

Published by:shrikrishna bhat
First published: