• Home
  • »
  • News
  • »
  • sports
  • »
  • T20 WC: ಪಾಕ್​ ವಿರುದ್ಧದ ಪಂದ್ಯಕ್ಕೂ ಮುನ್ನ 4 ಮ್ಯಾಚ್​ ಆಡಲಿದೆ ಟೀಂ ಇಂಡಿಯಾ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

T20 WC: ಪಾಕ್​ ವಿರುದ್ಧದ ಪಂದ್ಯಕ್ಕೂ ಮುನ್ನ 4 ಮ್ಯಾಚ್​ ಆಡಲಿದೆ ಟೀಂ ಇಂಡಿಯಾ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

T20 WC: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಪಿಚ್‌ನಲ್ಲಿ ಚೆಂಡಿನ ವೇಗ ಮತ್ತು ಬೌನ್ಸ್‌ಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಸಾಕಷ್ಟು ವಿಶಿಷ್ಟವಾಗಿದೆ ಮತ್ತು ನಮ್ಮ ಅನೇಕ ಆಟಗಾರರು ಆಸ್ಟ್ರೇಲಿಯಾದಲ್ಲಿ ಹೆಚ್ಚು T20 ಕ್ರಿಕೆಟ್ ಆಡಿಲ್ಲ ಎಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಸಂಘಟಿತ ಅಭ್ಯಾಸ ಪಂದ್ಯಗಳಿಗಾಗಿ ಬ್ರಿಸ್ಬೇನ್‌ಗೆ ಹೋಗುವ ಮೊದಲು ತಂಡವು ಪರ್ತ್‌ನಲ್ಲಿ ತಮ್ಮ ನಡುವೆ ಕೆಲವು ಅಭ್ಯಾಸ ಪಂದ್ಯಗಳನ್ನು ಆಡುತ್ತದೆ.

ಮುಂದೆ ಓದಿ ...
  • Share this:

ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿರುವ ಭಾರತ ತಂಡ (Team India) ಇದೀಗ ಮುಂದಿನ ಟೂರ್ನಿಯಾಗಿ ಐಸಿಸಿ ಟಿ20 ವಿಶ್ವಕಪ್ 2022 (T20 World Cup) ​ ನಲ್ಲಿಪಾಲ್ಗೊಳ್ಳಲಿದೆ. ಅಕ್ಟೋಬರ್ 16 ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದೆ. ಅಕ್ಟೋಬರ್ 23 ರಂದು ಪಾಕಿಸ್ತಾನ (IND vs PAK) ವಿರುದ್ಧದ ಪಂದ್ಯಾವಳಿಯಲ್ಲಿ ಭಾರತವು ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ, ಆದರೆ ತನ್ನ ಅಭಿಯಾನವನ್ನು ಪ್ರಾರಂಭಿಸುವ ಮೊದಲು, ಭಾರತವು ಆಸ್ಟ್ರೇಲಿಯಾದಲ್ಲಿ ಕೆಲವು ಅಭ್ಯಾಸ ಪಂದ್ಯಗಳನ್ನು ಸಹ ಆಡಲಿದೆ. ರೋಹಿತ್ ಶರ್ಮಾ (Rohit Sharma) ನಾಯಕತ್ವದ ಟೀಂ ಇಂಡಿಯಾ ಗುರುವಾರ ಅಕ್ಟೋಬರ್ 6 ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದೆ.


ವಿಶ್ವಕಪ್​ಗಿಂತಲೂ ಮುನ್ನ ಅಭ್ಯಾಸ ಪಂದ್ಯ:


ಆಸ್ಟ್ರೇಲಿಯ ತಂಡವು ನಿಗದಿತ ಸಮಯಕ್ಕಿಂತ ಸ್ವಲ್ಪ ಮುಂಚಿತವಾಗಿಯೇ ಸ್ವದೇಶಕ್ಕೆ ತೆರಳಲಿದೆ. ಇದರಿಂದ ಹೆಚ್ಚಿನ ಅಭ್ಯಾಸ ಪಂದ್ಯಗಳನ್ನು ಅಲ್ಲಿ ಆಡಬಹುದು. ಈ ಹಿಂದೆ ಭಾರತವು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಕೇವಲ ಎರಡು ಅಭ್ಯಾಸ ಪಂದ್ಯಗಳನ್ನು ಮಾತ್ರ ಆಡಬೇಕಾಗಿತ್ತು, ಆದರೆ ಈಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತನ್ನ ಅಭಿಯಾನದ ಮೊದಲು 4 ಪಂದ್ಯಗಳನ್ನು ಆಡಲಿದೆ ಎಂದು ವರದಿಯಾಗಿದೆ.



ಟೀಂ ಇಂಡಿಯಾದ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ:


'ಮೆನ್ ಇನ್ ಬ್ಲೂ' ತಂಡವು ಪರ್ತ್‌ನಲ್ಲಿ ತಮ್ಮ ಶಿಬಿರವನ್ನು ಆರಂಭಿಸಲಿದೆ. ಅಲ್ಲಿ ಅವರು ಪಶ್ಚಿಮ ಆಸ್ಟ್ರೇಲಿಯಾ XI ವಿರುದ್ಧ ಅಕ್ಟೋಬರ್ 10 ಮತ್ತು 12 ರಂದು ಸಂಜೆ 4 ಗಂಟೆಗೆ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದ್ದಾರೆ. ಇದರ ನಂತರ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ಎರಡು ಪೂರ್ವ ನಿಗದಿತ ಅಭ್ಯಾಸ ಪಂದ್ಯಗಳು ನಡೆಯಲಿವೆ. ಅಕ್ಟೋಬರ್ 17 ರಂದು ಆಸ್ಟ್ರೇಲಿಯಾ ವಿರುದ್ಧ ಮತ್ತು ಅಕ್ಟೋಬರ್ 19 ರಂದು ಬ್ರಿಸ್ಬೇನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯಗಳನ್ನು ಮೊದಲೇ ನಿಗದಿಪಡಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾದ ಪರಿಸ್ಥಿತಿಗಳಿಗೆ ಉತ್ತಮವಾಗಿ ಹೊಂದಿಕೊಳ್ಳಲು ಇನ್ನೂ ಎರಡು ಪಂದ್ಯಗಳ ಅಗತ್ಯವಿದೆ ಎಂದು ನಿರ್ಧರಿಸಿ ಹೆಚ್ಚಿನ 2 ಪಂದ್ಯಗನ್ನು ಆಡಲಿದ್ದಾರೆ.


ಇದನ್ನೂ ಓದಿ: IND vs SA: ರೋಹಿತ್, ಚಾಹರ್, ಹರ್ಷಲ್, ಅರ್ಷ್‌ದೀಪ್ ಅಭಿಮಾನಿಗಳು ಯಾರನ್ನೂ ಬಿಡಲಿಲ್ಲ; ಇಲ್ಲಿವೆ ಟಾಪ್ ಮೀಮ್‌ಗಳು


ವಿಶ್ವಕಪ್​ನ ಭಾರತ ವೇಳಾಪಟ್ಟಿ:


ಭಾರತದ ಮೊದಲ ಪಂದ್ಯವು ಪಾಕಿಸ್ತಾನದೊಂದಿಗೆ ಅಕ್ಟೋಬರ್ 23 ರಂದು ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಇದರ ನಂತರ, ಭಾರತ ಕ್ರಿಕೆಟ್ ತಂಡವು ಅಕ್ಟೋಬರ್ 27 ರಂದು ಸಿಡ್ನಿಯಲ್ಲಿ ಎರಡನೇ ಪಂದ್ಯದಲ್ಲಿ ಎ ಗುಂಪಿನ ರನ್ನರ್ ಅಪ್ ಅನ್ನು ಎದುರಿಸಲಿದೆ. ಟೀಂ ಇಂಡಿಯಾದ ಮೂರನೇ ಪಂದ್ಯ ಅಕ್ಟೋಬರ್ 30 ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿದೆ. ಟೂರ್ನಿಯ ತನ್ನ ನಾಲ್ಕನೇ ಪಂದ್ಯದಲ್ಲಿ ಭಾರತವು ನವೆಂಬರ್ 2 ರಂದು ಬಾಂಗ್ಲಾದೇಶವನ್ನು ಎದುರಿಸಲಿದೆ, ಅದು ಅಡಿಲೇಡ್‌ನಲ್ಲಿ ನಡೆಯಲಿದೆ. ತನ್ನ ಐದನೇ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ ನವೆಂಬರ್ 6 ರಂದು ಮೆಲ್ಬೋರ್ನ್‌ನಲ್ಲಿ ಬಿ ಗುಂಪಿನ ವಿಜೇತ ತಂಡವನ್ನು ಎದುರಿಸಲಿದೆ.

Published by:shrikrishna bhat
First published: