• Home
  • »
  • News
  • »
  • sports
  • »
  • T20 World Cup IND vs PAK: ಭಾರತ-ಪಾಕ್​ ಹೈವೋಲ್ಟೇಜ್​ ಕದನ, ಜಸ್ಟ್​ 10 ನಿಮಿಷದಲ್ಲೇ 90 ಸಾವಿರ ಟಿಕೆಟ್​ ಸೋಲ್ಡ್​ ಔಟ್​!

T20 World Cup IND vs PAK: ಭಾರತ-ಪಾಕ್​ ಹೈವೋಲ್ಟೇಜ್​ ಕದನ, ಜಸ್ಟ್​ 10 ನಿಮಿಷದಲ್ಲೇ 90 ಸಾವಿರ ಟಿಕೆಟ್​ ಸೋಲ್ಡ್​ ಔಟ್​!

 IND vs PAK

IND vs PAK

T20 World Cup: ಟಿ20 ವಿಶ್ವಕಪ್​ ಅಕ್ಟೋಬರ್ 16 ರಿಂದ ಪ್ರಾರಂಭವಾಗುತ್ತಿದೆ. ಆರಂಭದಲ್ಲಿ 8 ತಂಡಗಳ ನಡುವೆ ಪಂದ್ಯಗಳು ನಡೆಯಲಿದ್ದು, ಈ ಪೈಕಿ 4 ತಂಡಗಳು ಸೂಪರ್ 12 ಸುತ್ತಿಗೆ ಪ್ರವೇಶಿಸಲಿವೆ. ಅಕ್ಟೋಬರ್ 22 ರಿಂದ ಸೂಪರ್ 12 ಸುತ್ತು ಆರಂಭವಾಗಲಿದ್ದು, ಮೊದಲ ಪಂದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ.

ಮುಂದೆ ಓದಿ ...
  • Share this:

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ (T20 World Cup) 600,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಹೆಚ್ಚು ಪ್ರಶಂಸೆಗೆ ಪಾತ್ರವಾಗಿದೆ. ಈ ಜಾಗತಿಕ ಟೂರ್ನಿಯು ಅಕ್ಟೋಬರ್ 16ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಪ್ರಾಥಮಿಕ ಹಂತದ ಪಂದ್ಯಗಳು ನಡೆಯಲಿವೆ. ಇದಾದ ಬಳಿಕ ಅಕ್ಟೋಬರ್ 22ರಿಂದ ಸೂಪರ್ 12 ಪಂದ್ಯಗಳು ಆರಂಭವಾಗಲಿವೆ. ಆಸ್ಟ್ರೇಲಿಯಾದ ಏಳು ನಗರಗಳು ಈ ಟೂರ್ನಿಯನ್ನು ಆಯೋಜಿಸುತ್ತಿವೆ. ನ್ಯೂಜಿಲೆಂಡ್ ವಿರುದ್ಧ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾದ (NZ vs AUS) ಆರಂಭಿಕ ಪಂದ್ಯ ಅಕ್ಟೋಬರ್ 22 ರಂದು ನಡೆಯಲಿದೆ. ಕಳೆದ ವರ್ಷದ ಫೈನಲ್ ಪಂದ್ಯದಂತೆಯೇ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದು, 23ರಂದು ಭಾರತ-ಪಾಕಿಸ್ತಾನ (IND vs PAK) ಹೈವೋಲ್ಟೇಜ್ ಪಂದ್ಯ ನಡೆಯಲಿದೆ.


ಭಾರತ-ಪಾಕ್ ಪಂದ್ಯದ ಟಿಕೆಟ್​ ಸೋಲ್ಡ್​ ಔಟ್​:


ಇನ್ನು, ಏಷ್ಯಾ ಕಪ್​ 2022ರ ನಂತರ ಮತ್ತೆ ಭಾರತ-ಪಾಕಿಸ್ತಾನ ಪಂದ್ಯವು ಟಿ20 ವಿಶ್ವಕಪ್​ನಲ್ಲಿ ಅಕ್ಟೋಬರ್ 23 ರಂದು ನಡೆಯಲಿದೆ, ಈ ಪಂದ್ಯಕ್ಕಾಗಿ ಕೇವಲ 10 ನಿಮಿಷಗಳಲ್ಲಿ 90,000ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಈ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ನಮೀಬಿಯಾ ಮತ್ತು ಶ್ರೀಲಂಕಾ ನಡುವೆ ನಡೆಯಲಿರುವ ಈವೆಂಟ್‌ನ ಆರಂಭಿಕ ದಿನಕ್ಕೆ ಕೆಲವೇ ಟಿಕೆಟ್‌ಗಳು ಮಾತ್ರ ಉಳಿದಿವೆ. ಇದಾದ ಬಳಿಕ ಅಕ್ಟೋಬರ್ 16ರಂದು ಯುಎಇ ತಂಡ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳು ಜಿಲಾಂಗ್‌ನಲ್ಲಿರುವ 36,000 ಸಾಮರ್ಥ್ಯದ ಕಾರ್ಡಿನಿಯಾ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿವೆ.


ಭಾರತದ ಎಲ್ಲಾ ಪಂದ್ಯಗಳ ಟಿಕೆಟ್​ ಮಾರಾಟ್:


ಐಸಿಸಿ ಟಿ 20 ವಿಶ್ವಕಪ್ ಮುಖ್ಯಸ್ಥ ಮಿಚೆಲ್ ಎನ್‌ರೈಟ್ ಈ ಕುರಿತು ಮಾತನಾಡಿದ್ದು, ‘ಈ ಭಾನುವಾರ ಗೀಲಾಂಗ್‌ನಲ್ಲಿ ನಡೆಯುವ ಈವೆಂಟ್‌ನ ಆರಂಭಿಕ ಪಂದ್ಯ ಮತ್ತು ಒಂದು ವಾರದ ನಂತರ ಸೂಪರ್ 12 ಹಂತವನ್ನು ವೀಕ್ಷಿಸಲು ನಾವು ದೊಡ್ಡ ಪ್ರೇಕ್ಷಕರನ್ನು ಹೊಂದಿದ್ದೇವೆ ಎಂದು ನಮಗೆ ಸಂತೋಷವಾಗಿದೆ. ಅಕ್ಟೋಬರ್‌ನಲ್ಲಿ ಕ್ರಿಕೆಟ್‌ಗಾಗಿ ಸಂಪೂರ್ಣ ಕ್ರೀಡಾಂಗಣವನ್ನು ನೋಡಲು ಸಂತೋಷವಾಗುತ್ತದೆ.


ಇದನ್ನೂ ಓದಿ: IND vs PAK: ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ನಡೆಯುತ್ತಾ? ಬಿಸಿಸಿಐ ಕೊಟ್ಟ ಉತ್ತರವೇನು?


ಸ್ಪರ್ಧೆಗೆ ಮುಂಚಿತವಾಗಿ ಅಧಿಕೃತ ಮಾರಾಟ ಕೇಂದ್ರವನ್ನು ಪ್ರಾರಂಭಿಸಲಾಗುವುದು, ಅಲ್ಲಿ ಅಭಿಮಾನಿಗಳು ಟಿಕೆಟ್‌ಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 27 ರಂದು, ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ ಮತ್ತು ಭಾರತ vs ಗ್ರೂಪ್ ಎ ರನ್ನರ್ಸ್ ಅಪ್ ಡಬರ್ ಹೆಡರ್ ಪಂದ್ಯಗಳು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ. ಈ ಪಂದ್ಯದ ಸದ್ಯದ ಎಲ್ಲಾ ಟಿಕೆಟ್‌ಗಳೂ ಸೋಲ್ಡ್ ಔಟ್ ಆಗಿವೆ‘ ಎಂದು ಹೇಳಿದ್ದಾರೆ.


ಟಿಕೆಟ್​ ಬುಕ್​ ಮಾಡುವುದು ಹೇಗೆ?:


ಹೆಚ್ಚಿನ ಪಂದ್ಯಗಳಿಗೆ ಟಿಕೆಟ್‌ಗಳು ಇನ್ನೂ ಲಭ್ಯವಿವೆ, ಆದರೆ ಕುಟುಂಬ ಸ್ನೇಹಿ ಬೆಲೆಗಳಲ್ಲಿ t20worldcup.com ನಲ್ಲಿ ತಮ್ಮ ಟಿಕೆಟ್​ಗಳನ್ನು ಪಡೆದುಕೊಳ್ಳಲು ಅಭಿಮಾನಿಗಳನ್ನು ಇನ್ನೂ ಪ್ರೋತ್ಸಾಹಿಸಲಾಗುತ್ತಿದೆ. ಮಕ್ಕಳ ಟಿಕೆಟ್‌ಗಳು (2-16 ವರ್ಷ ವಯಸ್ಸಿನವರು) ಮೊದಲ ಸುತ್ತಿನ ಮತ್ತು ಸೂಪರ್ 12 ಪಂದ್ಯಗಳಿಗೆ ಕೇವಲ $5, ಮತ್ತು ವಯಸ್ಕರ ಟಿಕೆಟ್‌ಗಳು $20 ರಿಂದ ಪ್ರಾರಂಭವಾಗುತ್ತವೆ. ಐಸಿಸಿ ಟಿ20 ವಿಶ್ವಕಪ್ ಮುಖ್ಯಸ್ಥ ಮಿಚೆಲ್ ಎನ್‌ರೈಟ್, ನೀವು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಭಾರತ, ಪಾಕಿಸ್ತಾನ ಅಥವಾ ಇತರ ಯಾವುದೇ ತಂಡವನ್ನು ಬೆಂಬಲಿಸಿದರೂ ಪರವಾಗಿಲ್ಲ, ಏಳು ಆತಿಥೇಯ ನಗರಗಳಲ್ಲಿನ ಪಂದ್ಯಗಳಲ್ಲಿ ಇನ್ನೂ ಕೆಲವು ಉತ್ತಮ ಸ್ಥಾನಗಳು ಲಭ್ಯವಿವೆ. ಇಲ್ಲಿಯೂ ಪಂದ್ಯಗಳನ್ನು ನೋಡುವ ಮೂಲಕ ಎಂಜಾಯ್ ಮಾಡಬಹುದು ಎಂದಿದ್ದಾರೆ.


ಇದನ್ನೂ ಓದಿ: Sudeep And Chris Gayle: ಯೂನಿವರ್ಸಲ್​ ಬಾಸ್​ ಜೊತೆ ಸ್ಯಾಂಡಲ್​ವುಡ್​​ ಬಾದ್​​​ಶಾ, ಕ್ರಿಕೆಟ್​ ದಿಗ್ಗಜರು vs​ ಭಾರತ ನಟರು!


ಭಾರತ-ಪಾಕ್ ಮುಖಾಮುಖಿ:


ಟೀಂ ಇಂಡಿಯಾ ವಿಶ್ವಕಪ್ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ಕಳೆದ ವರ್ಷ, ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಸೋಲಿಸಿದ್ದು ಪಾಕಿಸ್ತಾನ. ಆದರೆ ಈ ಬಾರಿ ಆ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಭಾರತ ಸಿದ್ಧವಾಗಿದೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಮುಖ್ಯವಾಗಿ, ಸುಮಾರು 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಎಂಸಿಜಿಯಲ್ಲಿ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಒಂದು ತಿಂಗಳು ಮುಂಚಿತವಾಗಿ ಮಾರಾಟವಾಗಿವೆ. ಹೀಗಾಗಿ ಈ ಅಮೋಘ ಪಂದ್ಯದ ವೇಳೆ ಎರಡೂ ತಂಡಗಳಿಗೆ ಮೈದಾನದಲ್ಲಿ ಅಭಿಮಾನಿಗಳಿಂದ ಉತ್ತಮ ಬೆಂಬಲ ಸಿಗಲಿದೆ.

Published by:shrikrishna bhat
First published: