• Home
  • »
  • News
  • »
  • sports
  • »
  • T20 WC 2022 IND vs PAK: ಭಾರತ-ಪಾಕ್​ ಪಂದ್ಯ; ಲೈವ್ ಸ್ಟ್ರೀಮಿಂಗ್, ಮ್ಯಾಚ್​ ಸಮಯದ ಸಂಪೂರ್ಣ ವಿವರ

T20 WC 2022 IND vs PAK: ಭಾರತ-ಪಾಕ್​ ಪಂದ್ಯ; ಲೈವ್ ಸ್ಟ್ರೀಮಿಂಗ್, ಮ್ಯಾಚ್​ ಸಮಯದ ಸಂಪೂರ್ಣ ವಿವರ

IND vs PAK

IND vs PAK

T20 WC 2022 IND vs PAK: ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ತಂಡಗಳು ಭಾನುವಾರ T20 ವಿಶ್ವಕಪ್‌ನಲ್ಲಿ ಸ್ಪರ್ಧಿಸಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗಿವೆ. ಮೂರು ದಿನಗಳ ಹಿಂದೆಯೇ ಮೆಲ್ಬೋರ್ನ್ ತಲುಪುವ ಮೂಲಕ ಟೀಂ ಇಂಡಿಯಾ ತನ್ನ ತಯಾರಿ ಆರಂಭಿಸಿದೆ.

  • Share this:

ಭಾರತ ಕ್ರಿಕೆಟ್ ತಂಡವು ಭಾನುವಾರ (ಅಕ್ಟೋಬರ್ 23) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (IND vs PAK) ವಿರುದ್ಧ T20 ವಿಶ್ವಕಪ್‌ನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ನಡೆಯಲಿದೆ. ಉಭಯ ತಂಡಗಳು ಸದ್ಯ ಈ ಅಮೋಘ ಪಂದ್ಯಕ್ಕೆ ತಯಾರಿ ನಡೆಸುತ್ತಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಈ ಹೈ ವೋಲ್ಟೇಜ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1:30 ರಿಂದ ನಡೆಯಲಿದೆ. ಈ ಪಂದ್ಯಕ್ಕೂ ಮಳೆಯ (Rain) ಭೀತಿ ಎದುರಾಗಿದೆ.


ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಎರಡು ಅಧಿಕೃತ ಅಭ್ಯಾಸ ಪಂದ್ಯಗಳನ್ನು ಆಡಬೇಕಿತ್ತು. ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 6 ರನ್‌ಗಳಿಂದ ಸೋಲಿಸಿದರೆ, ಬ್ರಿಸ್ಬೇನ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಮೂರು ದಿನ ಮುಂಚಿತವಾಗಿ ಟೀಂ ಇಂಡಿಯಾ ಮೆಲ್ಬೋರ್ನ್ ತಲುಪಿದೆ. ಈಗಾಗಲೇ ಟೀಂ ಇಂಡಿಯಾ ಆಟಗಾರರು 2 ಶಡ್ಯೂಲ್​ನಲ್ಲಿ ಅಭ್ಯಾಸ ಸಹ ಆರಂಭಿಸಿದ್ದಾರೆ.


ಪಂದ್ಯದ ಸಂಪೂರ್ಣ ವಿವರ:


ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ಯಾವಾಗ ಹಣಾಹಣಿ ನಡೆಯಲಿದೆ?
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಭಾನುವಾರ (ಅಕ್ಟೋಬರ್ 23) ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಲಿವೆ.


ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ T20 ವಿಶ್ವಕಪ್ ಪಂದ್ಯ ಎಲ್ಲಿ ನಡೆಯಲಿದೆ?
ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ನಡೆಯಲಿದೆ.


ಇದನ್ನೂ ಓದಿ: T20 World Cup 2022 IND vs PAK: ಪಾಕಿಸ್ತಾನದಲ್ಲಿ ರೋಹಿತ್ ಶರ್ಮಾಗೆ ಹೀಗೆ ಕರೆಯುತ್ತಾರಂತೆ, ಕೇಳಿದ್ರೆ ಅಚ್ಚರಿ ಪಡ್ತೀರಾ!


ಭಾರತ ಮತ್ತು ಪಾಕಿಸ್ತಾನ ನಡುವಿನ T20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯದ ಸಮಯ?
ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್‌ನ ಹೈ ವೋಲ್ಟೇಜ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1:30 ರಿಂದ ನಡೆಯಲಿದೆ. ಟಾಸ್ ಅರ್ಧ ಗಂಟೆ ಮೊದಲು ಅಂದರೆ ಮಧ್ಯಾಹ್ನ 1:00 ಗಂಟೆಗೆ ನಡೆಯಲಿದೆ.


ಭಾರತದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ T20 ವಿಶ್ವಕಪ್ ಹೈ-ವೋಲ್ಟೇಜ್ ಪಂದ್ಯದ  ಲೈವ್ ಟೆಲಿಕಾಸ್ಟ್ ಅನ್ನು ಎಲ್ಲಿ ವೀಕ್ಷಿಸಬಹುದು?
ಭಾರತ ಮತ್ತು ಪಾಕಿಸ್ತಾನ ನಡುವಿನ T20 ವಿಶ್ವಕಪ್ ಹೈ-ವೋಲ್ಟೇಜ್ ಪಂದ್ಯದ ನೇರ ಪ್ರಸಾರವನ್ನು ಭಾರತದಲ್ಲಿನ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದು.


ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಎಲ್ಲಿ ವೀಕ್ಷಿಸಬೇಕು?
ಭಾರತ ಮತ್ತು ಪಾಕಿಸ್ತಾನ ನಡುವಿನ T20 ವಿಶ್ವಕಪ್ ಹೈ ವೋಲ್ಟೇಜ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ನೀವು Disney + Hotstar ನಲ್ಲಿ ವೀಕ್ಷಿಸಬಹುದು. ಇದರೊಂದಿಗೆ ನೀವು ಲೈವ್ ಅಪ್‌ಡೇಟ್‌ಗಳಿಗಾಗಿ ನಮ್ಮ ವೆಬ್‌ಸೈಟ್ News18 ಕನ್ನಡವನ್ನು ಅನುಸರಿಸಬಹುದು.


ಇದನ್ನೂ ಓದಿ: T20 World Cup 2022: ಟೀಂ ಇಂಡಿಯಾಗೆ ಶುಭಕೋರಿದ ಅಮಿತಾಬ್ ಬಚ್ಚನ್, ಬಿಗ್​ ಬಿ ವಿಡಿಯೋಗೆ ನೆಟ್ಟಿಗರು ಫಿದಾ


ಟಿ20 ವಿಶ್ವಕಪ್​ಗಾಗಿ ಭಾರತ ತಂಡ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

Published by:shrikrishna bhat
First published: