• Home
  • »
  • News
  • »
  • sports
  • »
  • T20 WC 2022 IND vs NZ: ಭಾರತ-ನ್ಯೂಜಿಲೆಂಡ್ ಪಂದ್ಯ ರದ್ದು, ಟೀಂ ಇಂಡಿಯಾ ಮುಂದಿನ ಎದುರಾಳಿ ಪಾಕ್

T20 WC 2022 IND vs NZ: ಭಾರತ-ನ್ಯೂಜಿಲೆಂಡ್ ಪಂದ್ಯ ರದ್ದು, ಟೀಂ ಇಂಡಿಯಾ ಮುಂದಿನ ಎದುರಾಳಿ ಪಾಕ್

IND vs NZ

IND vs NZ

T20 WC 2022 IND vs NZ: ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಮೊದಲ ಪಂದ್ಯ ಭಾನುವಾರ ಪಾಕಿಸ್ತಾನ ವಿರುದ್ಧ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ನಡೆಸಲು ಭಾರತ ತಂಡಕ್ಕೆ ಇದು ಕೊನೆಯ ಅವಕಾಶವಾಗಿತ್ತು. ಆದರೆ ಮಳೆಯಿಂದ ಪಂದ್ಯ ರದ್ದಾಗಿದೆ.

  • Share this:

ಟಿ20 ವಿಶ್ವಕಪ್‌ನ (T20 WC) ಸೂಪರ್ 12 ಸುತ್ತಿನ ಮೊದಲು ಭಾರತ ಮತ್ತು ನ್ಯೂಜಿಲೆಂಡ್ (IND vs NZ) ತಮ್ಮ ಅಂತಿಮ ಅಭ್ಯಾಸ ಪಂದ್ಯವನ್ನು ಇಂದು ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ಆಡಬೇಕಿತ್ತು. ಆದರೆ ಮಳೆಯಿಂದಾಗಿ (Rain) ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಲಿಲ್ಲ. ಇಂದು ಬೆಳಗ್ಗೆ ಇದೇ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ (PAK vs AFG) ನಡುವಿನ ಪಂದ್ಯ ಸಹ ಮಳೆಯಿಂದಾಗಿ ರದ್ದಾಗಿತ್ತು. ಅಫ್ಘಾನಿಸ್ತಾನದ ಇನ್ನಿಂಗ್ಸ್ ಮುಗಿದ ನಂತರ ಪಾಕಿಸ್ತಾನ ತಂಡ ಬ್ಯಾಟಿಂಗ್‌ಗೆ ಇಳಿದಿದೆ. ಆದರೆ ಮಳೆ ಹೆಚ್ಚಾದ ಕಾರಣ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಇದರಿಂದಾಗಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯವೂ ಅನಿಶ್ಚಿತವಾಗಿತ್ತು ಆದರೆ ಅಂತಿಮವಾಗಿ ಈ ಪಂದ್ಯವೂ ಒಂದೇ ಒಂದು ಎಸೆತವನ್ನು ಆಡದೆ ರದ್ದುಗೊಳಿಸಲಾಗಿದೆ.


ಭಾರತ-ಕಿವೀಸ್ ಪಂದ್ಯ ರದ್ದು:


ಭಾರತ-ಕಿವೀಸ್ ಪಂದ್ಯವು ಭಾರತೀಯ ಕಾಲಮಾನ 4.16ಕ್ಕೆ ಆರಂಭವಾಗಬೇಕಿತ್ತು. ಅದಕ್ಕೂ ಮುನ್ನ ಪಂದ್ಯ ಆರಂಭವಾದರೆ ಕನಿಷ್ಠ 5-5 ಓವರ್ ಗಳು ನಡೆಸುವುದಾಗಿ ಹೇಳಲಾಗಿತ್ತು. ಆದರೆ ನಂತರವೂ ಮಳೆ ಮುಂದುವರಿದಿದ್ದು, ಮಳೆಯಿಂದಾಗಿ ಪಂದ್ಯವನ್ನು ಸಂಪೂರ್ಣ ರದ್ದು ಮಾಡಲಾಗಿದೆ. ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಮೊದಲ ಪಂದ್ಯ ಭಾನುವಾರ ಪಾಕಿಸ್ತಾನ ವಿರುದ್ಧ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ನಡೆಸಲು ಭಾರತ ತಂಡಕ್ಕೆ ಇದು ಕೊನೆಯ ಅವಕಾಶವಾಗಿತ್ತು. ಆದರೆ ಮಳೆಯ ಅಡ್ಡಿಯಿಂದಾಗಿ ಈ ಅವಕಾಶ ಕೈತಪ್ಪಿತು.ಪಾಕಿಸ್ತಾನ-ಅಫ್ಘಾನಿಸ್ತಾನ ಪಂದ್ಯ ರದ್ದು:


ಇಂದು ಬೆಳಗಿನ ಸೆಷನ್‌ನಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಅಭ್ಯಾಸ ಪಂದ್ಯ ನಡೆಯಿತು. ಅಫ್ಘಾನಿಸ್ತಾನ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುವಾಗ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 154 ರನ್ ಗಳಿಸಿತು. ನಾಯಕ ಮೊಹಮ್ಮದ್ ನಬಿ 51 ರನ್ ಗಳಿಸಿದರೆ, ಇಬ್ರಾಹಿಂ ಜದ್ರಾನ್ 35 ರನ್ ಗಳಿಸಿದರು. ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ನಾಲ್ಕು ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸುವಾಗ 29 ರನ್‌ಗಳಿಗೆ ಎರಡು ವಿಕೆಟ್ ಪಡೆದರು. ಆ ಬಳಿಕ ಮೊದಲ ಅಭ್ಯಾಸ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಪಾಕ್ ಇನ್ನಿಂಗ್ಸ್ ಆರಂಭಿಸಿದರು. ಆದರೆ 2.2 ಓವರ್‌ಗಳ ನಂತರ ಮಳೆ ಆರಂಭವಾಯಿತು. ಮಳೆ ಮುಂದುವರಿದಿದ್ದರಿಂದ ಅಂಪೈರ್‌ಗಳು ಪಂದ್ಯವನ್ನು ರದ್ದುಗೊಳಿಸಿದರು.


ಇದನ್ನೂ ಓದಿ: Virat Kohli: ಐಸಿಸಿ ಹೊಸ ವಿಡಿಯೋಗೆ ವಿರಾಟ್ ಕೊಹ್ಲಿ ಫ್ಯಾನ್ಸ್ ಗರಂ, ಅಷ್ಟಕ್ಕೂ ಅಂಥದ್ದೇನಿದೆ ನೋಡಿ


ಭಾರತದ ಮುಂದಿನ ಎದುರಾಳಿ ಪಾಕ್:


ಏತನ್ಮಧ್ಯೆ, ಅಕ್ಟೋಬರ್ 23 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಗ್ರ್ಯಾಂಡ್ ಮ್ಯಾಚ್ ನಡೆಯಲಿದೆ. ಈ ಬಾರಿಯ ವಿಶ್ವಕಪ್‌ನಲ್ಲಿ ಉಭಯ ತಂಡಗಳ ಮೊದಲ ಪಂದ್ಯ ಇದಾಗಿದೆ. ಆದರೆ ಈ ಗ್ರ್ಯಾಂಡ್ ಮ್ಯಾಚ್‌ನಲ್ಲಿ ಮಳೆಯ ಸಾಧ್ಯತೆಯೂ ಇದೆ. ಮೆಲ್ಬೋರ್ನ್‌ನಲ್ಲಿ ಭಾನುವಾರ ಶೇ.90ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಇದನ್ನೂ ಓದಿ: T20 World Cup 2022: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ಆಟಗಾರ ಕಣಕ್ಕಿಳಿಯುವುದು ಡೌಟ್​, ಇಲ್ಲಿದೆ ನೋಡಿ ಕಾರಣ


ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

Published by:shrikrishna bhat
First published: