• Home
  • »
  • News
  • »
  • sports
  • »
  • T20 WC 2022 IND vs PAK: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಕಣಕ್ಕಿಳಿಯಬಾರದು, ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಮಾಜಿ ಆಟಗಾರ

T20 WC 2022 IND vs PAK: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಕಣಕ್ಕಿಳಿಯಬಾರದು, ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಮಾಜಿ ಆಟಗಾರ

ಕಮ್ರಾನ್ ಅಕ್ಮಲ್

ಕಮ್ರಾನ್ ಅಕ್ಮಲ್

T20 WC 2022 IND vs PAK: ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ತನ್ನ ಆಟಗಾರರನ್ನು ಮುಂದಿನ ವರ್ಷ ODI ವಿಶ್ವಕಪ್‌ಗೆ (ODI World Cup) ಭಾರತಕ್ಕೆ ಕಳುಹಿಸಲು ಒಪ್ಪಲಿಲ್ಲ ಎಂದು ವರದಿಯಾಗಿದೆ. 

  • Share this:

ಮುಂದಿನ ವರ್ಷ ಏಷ್ಯಾಕಪ್‌ಗಾಗಿ (Asia Cup) ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಬಿಸಿಸಿಐ (BCCi) ಕಾರ್ಯದರ್ಶಿ ಜಯ್ ಶಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅವರ ಹೇಳಿಕೆಯ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯು (PCB) ತನ್ನ ಆಟಗಾರರನ್ನು ಮುಂದಿನ ವರ್ಷ ODI ವಿಶ್ವಕಪ್‌ಗೆ (ODI World Cup) ಭಾರತಕ್ಕೆ ಕಳುಹಿಸಲು ಒಪ್ಪಲಿಲ್ಲ ಎಂದು ವರದಿಯಾಗಿದೆ. ಪಿಸಿಬಿಯ ಈ ಕಮೆಂಟ್ ನಂತರ ಇದೀಗ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ (Kamran Akmal) ಕೂಡ BCCI ವಿರುದ್ಧ ಮಾತನಾಡಿದ ಕ್ರಿಕೆಟಿಗರ ಪಟ್ಟಿಗೆ ಸೇರಿಕೊಂಡಿದ್ದಾರೆ.


ವಿಶ್ವಕಪ್​ನಲ್ಲಿ ಭಾರತ-ಪಾಖ್ ಪಂದ್ಯ ಬೇಡ:


ಕಮ್ರಾನ್ ARY ನ್ಯೂಸ್‌ಗೆ, ‘ಜಯ್ ಶಾ ಅವರ ಹೇಳಿಕೆ ಅನಿರೀಕ್ಷಿತವಾಗಿದೆ ಎಂದು ನಾನು ಭಾವಿಸುತ್ತೇನೆ. ಈ ವರ್ಷ ಅವರು ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಕಾಣಿಸಿಕೊಂಡಿದ್ದರು. ಅವರು ತಮ್ಮ ರಾಜಕೀಯವನ್ನು ಆಟದ ಮಧ್ಯೆ ಎಳೆಯಬಾರದು. ಏಷ್ಯಾ ಕಪ್ ಅನ್ನು ಪಾಕಿಸ್ತಾನದಲ್ಲಿ ಆಯೋಜಿಸಬೇಕು ಮತ್ತು ಅದು ಸಂಭವಿಸದಿದ್ದರೆ ಪಾಕಿಸ್ತಾನವು ಯಾವುದೇ ಮಟ್ಟದಲ್ಲಿ ಭಾರತದ ವಿರುದ್ಧ ಆಡಬಾರದು. ಅಲ್ಲದೇ ಐಸಿಸಿ ಪಂದ್ಯಗಳು, ಏಷ್ಯಾ ಕಪ್ ಪಂದ್ಯಗಳು ಅಥವಾ ಅಕ್ಟೋಬರ್ 23 ರಂದು ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಗಳಲ್ಲಿಯೂ ಭಾರತ-ಪಾಕ್ ಮುಖಾಮುಖಿ ಆಗಬಾರದು‘ ಎಂದು ಹೇಳಿದ್ದಾರೆ.


ಐಸಿಸಿ ಟೂರ್ನಿಗಳ ಮೇಲೆ ಪರಿಣಾಮ ಬೀರಬಹುದು:


ಆದರೆ, ಅಕ್ಟೋಬರ್ 23ರಂದು ನಡೆಯಲಿರುವ ಈ ರೋಚಕ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಬಿಸಿಸಿಐನ ಈ ಕ್ರಮವು ಭಾರತದಲ್ಲಿ ನಡೆಯಲಿರುವ ಪಾಕಿಸ್ತಾನದ ಮುಂಬರುವ ಐಸಿಸಿ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿದೆ.


ಇದನ್ನೂ ಓದಿ: T20 WC India vs Pakistan: ಭಾರತ-ಪಾಕಿಸ್ತಾನ ಪಂದ್ಯ, ಹೇಗಿದೆ ಪಿಚ್​ ರಿಪೋರ್ಟ್? ಇಲ್ಲಿದೆ ಹವಾಮಾನ ವರದಿ


ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಕ್ರೀಡೆಗಳ ಮೇಲೆ ಪ್ರಭಾವ ಬೀರುತ್ತಿರುವುದು ಕಂಡುಬರುತ್ತಿದೆ. 2008ರ ಏಷ್ಯಾಕಪ್ ಬಳಿಕ ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸಿಲ್ಲ. ಇದೇ ಪಾಕಿಸ್ತಾನ ತಂಡ ಕೊನೆಯ ಬಾರಿಗೆ 2016ರಲ್ಲಿ ಟಿ20 ವಿಶ್ವಕಪ್‌ಗಾಗಿ ಭಾರತಕ್ಕೆ ಬಂದಿತ್ತು. ಅಲ್ಲದೆ, 2012-2013 ರಿಂದ ಉಭಯ ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ.


ಮುಂದಿನ ವರ್ಷ ಪಾಕಿಸ್ತಾನದಲ್ಲಿ ಏಷ್ಯಾಕಪ್ ಟೂರ್ನಿ​:


ICC ಯಿಂದ ಇತ್ತೀಚೆಗೆ ಬಿಡುಗಡೆಯಾದ ಫ್ಯೂಚರ್ ಟೂರ್ ಪ್ರೋಗ್ರಾಂ ಅಂದರೆ FTP ಅಲ್ಲಿ, ಪಾಕಿಸ್ತಾನವು ಮುಂದಿನ 3 ವರ್ಷಗಳಲ್ಲಿ ಎರಡು ಪ್ರಮುಖ ICC ಈವೆಂಟ್‌ಗಳನ್ನು ಆಯೋಜಿಸುತ್ತದೆ. ಮುಂದಿನ ವರ್ಷ 50 ಓವರ್‌ಗಳ ಮಾದರಿಯಲ್ಲಿ ಏಷ್ಯಾ ಕಪ್ ಮತ್ತು 2025 ರಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಡ ಪಾಕಿಸ್ತಾನದಲ್ಲಿ ನಡೆಯಲಿದೆ. ಸುಮಾರು ಒಂದು ದಶಕದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಪಾಕಿಸ್ತಾನಕ್ಕೆ ಮರಳಿದೆ. ಅದರ ನಂತರ, ಪಾಕಿಸ್ತಾನವು ಎರಡು ಪ್ರಮುಖ ಐಸಿಸಿ ಟೂರ್ನಿಗಳ ಆತಿಥ್ಯವನ್ನು ಪಡೆದಿರುವುದು ಇದೇ ಮೊದಲು. ಆದರೆ, ತಟಸ್ಥ ಸ್ಥಳದಲ್ಲಿ ಏಷ್ಯಾಕಪ್ ಆಯೋಜನೆ ಮಾಡಬೇಕು ಎಂದು ಬಿಸಿಸಿಐ ಹೇಳಿಕೆ ನೀಡಿದೆ. ಆದರೆ ಇದರ ಬಳಿಕ ಈ ವಿಚಾರದಲ್ಲಿ ಪಾಕಿಸ್ತಾನದ ನಿಲುವೇನು ಎಂಬುದನ್ನು ಕಾದು ನೋಡಬೇಕಿದೆ.


ಇದನ್ನೂ ಓದಿ: T20 WC India vs Pakistan: ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರದ್ದಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಇಲ್ಲಿದೆ ಮಾಹಿತಿ


ಟಿ20 ವಿಶ್ವಕಪ್​ನಲ್ಲಿ ಇಂಡೋ-ಪಾಕ್ ಕದನ:


ಇನ್ನು, ಟೀಂ ಇಂಡಿಯಾ ವಿಶ್ವಕಪ್ 2022ರ ಅಭಿಯಾನದ ಮೊದಲ ಪಂದ್ಯದಲ್ಲಿಯೇ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ.  ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಮುಖ್ಯವಾಗಿ, ಸುಮಾರು 1 ಲಕ್ಷ ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿರುವ ಎಂಸಿಜಿಯಲ್ಲಿ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಒಂದು ತಿಂಗಳು ಮುಂಚಿತವಾಗಿ ಮಾರಾಟವಾಗಿವೆ.

Published by:shrikrishna bhat
First published: