• Home
  • »
  • News
  • »
  • sports
  • »
  • T20 World Cup 2022: ಬಾಂಗ್ಲಾ ಆಟಗಾರರನ್ನು ಮನಶ್ಶಾಸ್ತ್ರಜ್ಞರ ಬಳಿ ಕರೆದೊಯ್ಯುತ್ತಿದ್ದೆ, ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಮಾಜಿ ಆಟಗಾರ

T20 World Cup 2022: ಬಾಂಗ್ಲಾ ಆಟಗಾರರನ್ನು ಮನಶ್ಶಾಸ್ತ್ರಜ್ಞರ ಬಳಿ ಕರೆದೊಯ್ಯುತ್ತಿದ್ದೆ, ಶಾಕಿಂಗ್ ಹೇಳಿಕೆ ನೀಡಿದ ಪಾಕ್ ಮಾಜಿ ಆಟಗಾರ

ವಾಸಿಂ ಅಕ್ರಂ

ವಾಸಿಂ ಅಕ್ರಂ

T20 WC 2022: ಪಾಕಿಸ್ತಾನದ ದಂತಕತೆ ವಾಸಿಂ ಅಕ್ರಂ ಅವರು “ಪಾಕಿಸ್ತಾನ ವಿರುದ್ಧದ ಸೋಲಿಗೆ ಬಾಂಗ್ಲಾದೇಶವು ತಮ್ಮನ್ನು ತಾವೇ ದೂಷಿಸಿಕೊಳ್ಳಬೇಕು. ನಾನೇನಾದರೂ ಬಾಂಗ್ಲಾದೇಶ ಕ್ರಿಕೆಟ್ ತಂಡದ ತರಬೇತುದಾರ ಅಥವಾ ನಾಯಕನಾಗಿದ್ದರೆ, ಆಟಗಾರರನ್ನೆಲ್ಲಾ ಮೊದಲು ಮನಶ್ಶಾಸ್ತ್ರಜ್ಞರ ಬಳಿ ಕರೆದೊಯ್ಯುತ್ತಿದ್ದೆ ಎಂದಿದ್ದಾರೆ.

ಮುಂದೆ ಓದಿ ...
  • Share this:

ಭಾನುವಾರ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ (T20 World Cup 2022) ನಡೆದ ಮೂರು ಪಂದ್ಯಗಳು ರೋಚಕವಾಗಿದ್ದವು ಎಂದು ಹೇಳಬಹುದು. ದಿನದ ಮೊದಲನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ನೆದರ್ಲ್ಯಾಂಡ್ಸ್ (SA vs NED) ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತು. ನಂತರ ಪಾಕಿಸ್ತಾನ ಬಾಂಗ್ಲಾ (PAK vs BAN) ವಿರುದ್ಧ ಗೆದ್ದು ಸೆಮೀಸ್​ಗೆ ಬಂದು ಇದೀಗ ಫೈನಲ್​ ಸಹ ಪ್ರವೇಶಿಸಿದೆ. ಆದರೆ ಆಫ್ರಿಕಾ ಸೋತ ನಂತರ ಇದರಿಂದಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ಹಣಾಹಣಿ ರೋಚಕ ತಿರುವು ಪಡೆಯಿತು. ಪಂದ್ಯದಲ್ಲಿ ಗೆದ್ದವರು ಸೆಮಿಫೈನಲ್‌ಗೆ ಪ್ರವೇಶ ಪಡೆಯುವ ಪಂದ್ಯವಾಗಿ ಬದಲಾಯಿತು ಅಂತ ಹೇಳಬಹುದು. ಆಗಾಗಲೇ ಭಾರತ ತಂಡವು (Team India) ಸೆಮಿಫೈನಲ್ ನಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿತ್ತು. ನಂತರ ಪಾಕಿಸ್ತಾನ ಸಹ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶ ಪಡೆಯಿತು.


22 ರನ್ ನೀಡಿ 4 ವಿಕೆಟ್ ಪಡೆದ ಅಫ್ರಿದಿ:


ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಶಾಹೀನ್ ಅಫ್ರಿದಿ ಅವರ ವೃತ್ತಿಜೀವನದ ಅತ್ಯುತ್ತಮವಾದ ಟಿ20 ಬೌಲಿಂಗ್ ಮಾಡಿ 22 ರನ್ ನೀಡಿ 4 ವಿಕೆಟ್ ಕಬಳಿಸಿದರು. ಪಾಕಿಸ್ತಾನವು ಬಾಂಗ್ಲಾದೇಶ ತಂಡವನ್ನು ಎಂಟು ವಿಕೆಟ್ ನಷ್ಟಕ್ಕೆ 127 ರನ್ ಗಳಿಗೆ ಸೀಮಿತಗೊಳಿಸಿತು ಮತ್ತು ನಂತರ ಬ್ಯಾಟಿಂಗ್ ಗೆ ಇಳಿದ ಪಾಕಿಸ್ತಾನ ತಂಡದ ಬ್ಯಾಟ್ಸ್‌ಮನ್‌ಗಳು ಇನ್ನೂ 11 ಎಸೆತಗಳು ಬಾಕಿ ಉಳಿದಿರುವಾಗಲೇ ಬಾಂಗ್ಲಾದೇಶ ತಂಡವು ನೀಡಿದ ಗುರಿಯನ್ನು ಬೆನ್ನಟ್ಟಿತು.


ಬಾಂಗ್ಲಾವನ್ನು 5 ವಿಕೆಟ್ ಗಳಿಂದ ಮಣಿಸಿದ ಪಾಕಿಸ್ತಾನ:


ಬಾಂಗ್ಲಾದೇಶವನ್ನು 5 ವಿಕೆಟ್ ಗಳಿಂದ ಮಣಿಸಿದ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ನ ಸೆಮಿಫೈನಲ್ ಗೆ ಅರ್ಹತೆ ಪಡೆಯಿತು. ಕಳೆದ ಸೂಪರ್ 12 ಹಂತದ ಪಂದ್ಯದಲ್ಲಿ, ಬಾಂಗ್ಲಾದೇಶದ ಆರಂಭಿಕ ಆಟಗಾರ ನಜ್ಮುಲ್ ಹೊಸೇನ್ ಶಾಂಟೊ 54 ರನ್ ಗಳಿಸಿದರೆ, ಅಫಿಫ್ ಹೊಸೇನ್ 24 ರನ್ ಗಳಿಸಿ ಅಜೇಯರಾಗಿ ಉಳಿದರು. ಬಳಿಕ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು 18.1 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿತು. ಮೊಹಮ್ಮದ್ ರಿಜ್ವಾನ್ 18 ಎಸೆತಗಳಲ್ಲಿ 31 ರನ್ ಗಳಿಸಿದರೆ, ಮೊಹಮ್ಮದ್ ಹ್ಯಾರಿಸ್ 18 ಎಸೆತಗಳಲ್ಲಿ 31 ರನ್ ಗಳಿಸಿದರು.


ಇದನ್ನೂ ಓದಿ: PAK vs NZ, T20 World Cup 2022: ನ್ಯೂಜಿಲ್ಯಾಂಡ್​ ಮನೆಗೆ, ಪಾಕಿಸ್ತಾನ ಫೈನಲ್​ಗೆ; ನಾಳೆ ಭಾರತ ಗೆದ್ರೆ ಭಾನುವಾರ ‘ಬಾಡೂಟ‘ ಫಿಕ್ಸ್!


ಪಾಕ್ ಮಾಜಿ ನಾಯಕ ವಾಸಿಂ ಅಕ್ರಂ ಹೇಳಿದ್ದೇನು?:


ಪಾಕಿಸ್ತಾನದ ದಂತಕತೆ ವಾಸಿಂ ಅಕ್ರಂ ಅವರು “ಪಾಕಿಸ್ತಾನ ವಿರುದ್ಧದ ಸೋಲಿಗೆ ಬಾಂಗ್ಲಾದೇಶವು ತಮ್ಮನ್ನು ತಾವೇ ದೂಷಿಸಿಕೊಳ್ಳಬೇಕು. ನಾನೇನಾದರೂ ಬಾಂಗ್ಲಾದೇಶ ಕ್ರಿಕೆಟ್ ತಂಡದ ತರಬೇತುದಾರ ಅಥವಾ ನಾಯಕನಾಗಿದ್ದರೆ, ಆಟಗಾರರನ್ನೆಲ್ಲಾ ಮೊದಲು ಮನಶ್ಶಾಸ್ತ್ರಜ್ಞರ ಬಳಿ ಕರೆದೊಯ್ಯುತ್ತಿದ್ದೆ. ಏಕೆಂದರೆ ಒಂದು ಹಂತದಲ್ಲಿ, ಶಾಂಟೊ 54 ರನ್ ಗಳಿಸಿದ್ದರು ಮತ್ತು ಆಗ ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು. ಆದರೆ ನಂತರ ಅವರು 73 ರನ್ ಗಳಿಗೆ 2 ವಿಕೆಟ್ ಗಳನ್ನು ಕಳೆದುಕೊಂಡಿದ್ದರು. ಅವರು ಕಡಿಮೆ ಎಂದರೂ 160 ರನ್ ಗಳ ಗುರಿಯನ್ನು ಪಾಕಿಸ್ತಾನದ ಮುಂದೆ ಇಡಬಹುದು ಎಂದು ನಾನು ಭಾವಿಸಿದ್ದೆ” ಎಂದು ಹೇಳಿದ್ದಾರೆ.


“ಆದರೆ ನಂತರ ಶಾಂಟೊ ಕ್ರೀಸ್ ನಿಂದ ಹೊರ ಬಂದು ಇಫ್ತಿಕಾರ್ ಎಸೆದ ಬಾಲ್‌ಗೆ ವಿಲಕ್ಷಣ ಹೊಡೆತವನ್ನು ನೀಡಿದರು ಮತ್ತು ಬೌಲ್ಡ್ ಆದರು. ನೀವು ರನ್‌ಗಳನ್ನು ಪೇರಿಸುವುದನ್ನು ಹಾಗೆಯೇ ನಿಧಾನವಾಗಿ ಮುಂದುವರಿಸಿದ್ದರೆ, ಸ್ಕೋರ್ 155 ಕ್ಕೆ ತಲುಪುತ್ತಿತ್ತು" ಎಂದು ಅಕ್ರಂ ಹೇಳಿದ್ದಾರೆ . ಅಲ್ಲದೇ, ಬಾಂಗ್ಲಾದೇಶದ ಬ್ಯಾಟ್ಸ್ಮನ್ ಗಳು ಶಾಹೀನ್ ಅಫ್ರಿದಿ ಅವರ ಬೌಲಿಂಗ್ ಅನ್ನು ಸ್ವಲ್ಪ ಜಾಗರೂಕತೆಯಿಂದ ಆಡಬೇಕಾಗಿತ್ತು” ಎಂದು ಅವರು ಹೇಳಿದರು.


ಇದನ್ನೂ ಓದಿ: Ind vs Eng T20 World Cup 2022: ಅಭ್ಯಾಸದ ವೇಳೆ ಗಾಯಗೊಂಡ ಕೊಹ್ಲಿ, ಸೆಮೀಸ್​ ಪಂದ್ಯಕ್ಕೆ ಅಲಭ್ಯ?


"ಅಂತರರಾಷ್ಟ್ರೀಯ ಮಟ್ಟದಲ್ಲಿ, ಒಬ್ಬ ನಿರ್ದಿಷ್ಟ ಬೌಲರ್‌ನನ್ನು ನಾಯಕ ಬೌಲಿಂಗ್ ಮಾಡಲು ಆರಿಸಿದ್ದಾನೆ ಎಂದಾದಲ್ಲಿ ಆ ಬೌಲರ್ ವಿಕೆಟ್ ಪಡೆಯಲು ಖಚಿತವಾಗಿರಬೇಕು ಎಂಬುದು ಉದ್ದೇಶವಾಗಿರುತ್ತದೆ ಹಾಗೂ ಆಟಗಾರರು ಇದನ್ನು ಅರ್ಥೈಸಿಕೊಳ್ಳಬೇಕು. ಆ ಸಮಯದಲ್ಲಿ ನೀವು ದೊಡ್ಡ ಶಾಟ್‌ಗಳನ್ನು ಹೊಡೆಯುವ ಬದಲು ರನ್‌ಗಳನ್ನು ಓಡಿ ಗಳಿಸಬೇಕು. ಆದರೆ ಬಾಂಗ್ಲಾದೇಶದ ಆಟಗಾರರು ದೊಡ್ಡ ಶಾಟ್ ಆಡಲು ಹೋಗಿ ವಿಕೆಟ್ ಒಪ್ಪಿಸಿದರು ಮತ್ತು ಪಂದ್ಯವನ್ನು ಸೋಲಬೇಕಾಯಿತು" ಎಂದು ಪಾಕಿಸ್ತಾನದ ಮಾಜಿ ನಾಯಕ ಹೇಳಿದರು.

Published by:shrikrishna bhat
First published: