• Home
  • »
  • News
  • »
  • sports
  • »
  • Team India: ಸೋಲಿನ ನಂತರ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ, ರೋಹಿತ್ ಬದಲು ಟಿ20 ಕ್ರಿಕೆಟ್​ಗೆ ಹೊಸ ನಾಯಕ?

Team India: ಸೋಲಿನ ನಂತರ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ, ರೋಹಿತ್ ಬದಲು ಟಿ20 ಕ್ರಿಕೆಟ್​ಗೆ ಹೊಸ ನಾಯಕ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Team India: ಮುಂದಿನ ಟಿ20 ವಿಶ್ವಕಪ್ ಅನ್ನು ಪರಿಗಣಿಸಬೇಕಾದರೆ, ರೋಹಿತ್ ಬದಲಿಗೆ ಬಿಸಿಸಿಐ ಹೊಸ ನಾಯಕತ್ವವನ್ನು ಹುಡುಕಬೇಕಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ ಮುಂಬರುವ ವಿಶ್ವಕಪ್‌ನಲ್ಲಿ ಹಿರಿಯ ಆಟಗಾರರ ಬದಲು ಯುವ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

  • Share this:

ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲಿನ ನಂತರ ಇದೀಗ ಭಾರತ ತಂಡ (Team India) ಟಿ20 ತಂಡದಲ್ಲಿ ಬದಲಾವಣೆಯಾಗುವುದು ಖಚಿತ ಎಂದು ಹೇಳಲಾಗುತ್ತಿದೆ. ಹಲವು ಹಿರಿಯ ಆಟಗಾರರು ತಂಡವನ್ನು ತೊರೆಯುವ ಲಕ್ಷಣಗಳಿವೆ. ಬಿಸಿಸಿಐ (BCCI) ಮೂಲಗಳ ಪ್ರಕಾರ ಮುಂದಿನ ವರ್ಷ ಭಾರತ ಟಿ20 ತಂಡದಲ್ಲಿ (T20 Team) ಪ್ರಮುಖ ಬದಲಾವಣೆಗಳನ್ನು ಕಾಣಲಿದೆ. ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ (Virat Kohli), ದಿನೇಶ್ ಕಾರ್ತಿಕ್ ಮತ್ತು ಅಶ್ವಿನ್ ಅವರಂತಹ ಹಿರಿಯ ಆಟಗಾರರು ಕ್ರಮೇಣ ಟಿ20 ತಂಡದಿಂದ ಹೊರಗುಳಿಯಲಿದ್ದಾರೆ. ಅಷ್ಟೇ ಅಲ್ಲ ಹೊಸ ನಾಯಕನ ನೇತೃತ್ವದಲ್ಲಿ ಯುವ ಟೀಂ ಇಂಡಿಯಾ ಮೈದಾನಕ್ಕೆ ಇಳಿಯುವ ಸಾಧ್ಯತೆಯೂ ಇದೆ. ಹಾಗಿದ್ದರೆ ನೂತನ ನಾಯಕ ಆಯ್ಕೆ ಪಟ್ಟಿಯಲ್ಲಿ ಯಾರಿದ್ದಾರೆ ಎಂದು ನೋಡೋಣ ಬನ್ನಿ.


ರೋಹಿತ್ ನಂತರ ಟಿ20 ನಾಯಕ ಯಾರು?:


ಕಳೆದ ವರ್ಷ ವಿರಾಟ್ ಕೊಹ್ಲಿ ನಂತರ ರೋಹಿತ್ ಶರ್ಮಾ ಅವರಿಗೆ ಟಿ20 ತಂಡವನ್ನು ವಹಿಸಲಾಗಿತ್ತು. ರೋಹಿತ್ ಈ ಮಾದರಿಯಲ್ಲಿ ಯಶಸ್ವಿ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರು ಐಪಿಎಲ್‌ನಲ್ಲಿ ಐದು ಬಾರಿ ಮುಂಬೈ ಇಂಡಿಯನ್ಸ್ ಗೆದ್ದಿದ್ದಾರೆ. ಅಷ್ಟೇ ಅಲ್ಲ, ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿಯೂ ನಾಯಕನಾಗಿ ಉತ್ತಮ ದಾಖಲೆ ಹೊಂದಿದ್ದಾರೆ. ಆದರೆ ಈಗ ಮುಂದಿನ ಟಿ20 ವಿಶ್ವಕಪ್ ಅನ್ನು ಪರಿಗಣಿಸಬೇಕಾದರೆ, ರೋಹಿತ್ ಬದಲಿಗೆ ಬಿಸಿಸಿಐ ಹೊಸ ನಾಯಕತ್ವವನ್ನು ಹುಡುಕಬೇಕಾಗಿದೆ. ಮುಂಬರುವ ವಿಶ್ವಕಪ್‌ನಲ್ಲಿ ಹಿರಿಯ ಆಟಗಾರರ ಬದಲು ಯುವ ಆಟಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಇನ್ನು ನಾಯಕತ್ವಕ್ಕೆ ಹಾರ್ದಿಕ್ ಪಾಂಡ್ಯ ಹೆಸರು ಚರ್ಚೆಯಲ್ಲಿದೆ.


ಹಾರ್ದಿಕ್ ಭಾರತ ಟಿ20 ನಾಯಕ?:


ಸದ್ಯ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಅನುಭವಿ ಆಟಗಾರರಲ್ಲಿ ಒಬ್ಬರು. ಟಿ20ಯಲ್ಲಿ ಅವರ ಫಾರ್ಮ್ ಕೂಡ ಅದ್ಭುತವಾಗಿದೆ. ಮುಂದಿನ ವಿಶ್ವಕಪ್‌ಗೂ ಮುನ್ನ ಭಾರತ ತಂಡವನ್ನು ಪುನರ್‌ನಿರ್ಮಾಣ ಮಾಡಬೇಕಾದರೆ ಹಾರ್ದಿಕ್ ನಾಯಕತ್ವಕ್ಕೆ ಉತ್ತಮ ಆಯ್ಕೆಯಾಗಿದ್ದಾರೆ. ಮುಂಬರುವ ನ್ಯೂಜಿಲೆಂಡ್ ಪ್ರವಾಸಕ್ಕೆ ಅವರಿಗೆ ನಾಯಕತ್ವ ನೀಡಲಾಗಿದೆ. ಅಂದಿನಿಂದ ಪ್ರತಿ ಟಿ20 ಸರಣಿಯಲ್ಲಿ ಪಾಂಡ್ಯ ಭಾರತವನ್ನು ಮುನ್ನಡೆಸುವ ಸಾಧ್ಯತೆಯಿದೆ. ಕಳೆದ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸುವಾಗ ಮೊದಲ ಪ್ರಯತ್ನದಲ್ಲೇ ಪ್ರಶಸ್ತಿ ಜಯಿಸಿದ್ದರು. ಹೀಗಾಗಿ ಹೊಸ ನಾಯಕನಾಗಿ ಹಾರ್ದಿಕ್ ಹೆಸರು ಸದ್ಯ ಹೆಚ್ಚು ಚರ್ಚೆಯಾಗುತ್ತಿದೆ.


ಇದನ್ನೂ ಓದಿ: ENG vs PAK T20 World Cup 2022: ವಿಶ್ವಕಪ್ ಫೈನಲ್ ನಾಳೆಯಲ್ಲ ನಾಡಿದ್ದು? ಮಳೆಯಿಂದ ರದ್ದಾದ್ರೆ ಯಾರಾಗ್ತಾರೆ ವಿನ್ನರ್?


ಹಿರಿಯ ಆಟಗಾರರ ಭವಿಷ್ಯವೇನು?:


ಮುಂದಿನ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಹಾಗಾಗಿ ರೋಹಿತ್, ವಿರಾಟ್ ಅವರಂತಹ ಆಟಗಾರರು ಈಗ ಏಕದಿನ ಮತ್ತು ಟೆಸ್ಟ್ ಸರಣಿಗಳಲ್ಲಿ ಮಾತ್ರ ಸ್ಥಾನ ಪಡೆಯಬಹುದು. ಅದರ ನಂತರ 2024ರಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಆದರೆ ಅಂದು ಭಾರತ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆಯುತ್ತಾರಾ? ಹೀಗೊಂದು ಪ್ರಶ್ನೆ ಮೂಡುತ್ತಿದೆ. ಇದರ ನಡುವೆ ಟಿ20 ವಿಶ್ವಕಪ್​ ಸೋಲಿನ ಬಳಿಕದ ನಡೆದ ಸುದ್ದಿಗೋಷ್ಠಿಯಲ್ಲಿ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಈ ಕುರಿತು ಬದಲಾವಣೆ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆ ವೇಳೆ ದ್ರಾವಿಡ್, ಈ ಬಗ್ಗೆ ಇಷ್ಟು ಬೇಗ ಮಾತನಾಡುವುದು ಸೂಕ್ತವಲ್ಲ, ಮುಂದಿನ ವಿಶ್ವಕಪ್‌ಗೆ ಇನ್ನೂ ಸಾಕಷ್ಟು ಸಮಯವಿದೆ ಎಂದಿದ್ದಾರೆ.

Published by:shrikrishna bhat
First published: