• Home
  • »
  • News
  • »
  • sports
  • »
  • T20 WC Team India: ಟೀಂ ಇಂಡಿಯಾ 17 ದಿನ ಮುಂಚಿತವಾಗಿ ಆಸ್ಟ್ರೇಲಿಯಾಗೆ ಹೋಗಿದ್ದು ಈ ಕಾರಣಕ್ಕಂತೆ, ಕೊನೆಗೂ ರಿವೀಲ್​ ಆಯ್ತು ರಹಸ್ಯ

T20 WC Team India: ಟೀಂ ಇಂಡಿಯಾ 17 ದಿನ ಮುಂಚಿತವಾಗಿ ಆಸ್ಟ್ರೇಲಿಯಾಗೆ ಹೋಗಿದ್ದು ಈ ಕಾರಣಕ್ಕಂತೆ, ಕೊನೆಗೂ ರಿವೀಲ್​ ಆಯ್ತು ರಹಸ್ಯ

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

T20 WC Team India: ಬಿಸಿಸಿಐ ಇತ್ತೀಚೆಗೆ ವಿಡಿಯೋವೊಂದನ್ನು ಹಂಚಿಕೊಂಡಿದೆ. ಇದರಲ್ಲಿ ತಂಡದ ತಯಾರಿಯಿಂದ ಹಿಡಿದು ಆಸ್ಟ್ರೇಲಿಯಾ ತಲುಪುವವರೆಗಿನ ಹಲವು ವಿಷಯಗಳನ್ನು ಹಾರ್ದಿಕ್ ಪಾಂಡ್ಯ ಬಹಿರಂಗಪಡಿಸಿದ್ದಾರೆ.

  • Share this:

ಟಿ20 ವಿಶ್ವಕಪ್​ 2022ರ (T20 World Cup 2022) ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತ್ತು. ಮುಂಬರುವ ಪಂದ್ಯಗಳಲ್ಲಿ ಟೀಂ ಇಂಡಿಯಾಗೆ (Team India) ಈ ಗೆಲುವು ಮುಖ್ಯವಾಗಿದೆ. ಸೂಪರ್ 12 ಸುತ್ತಿನಲ್ಲಿ ಭಾರತದ ಮೊದಲ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ (IND vs PAK) ವಿರುದ್ಧ ನಡೆಯಲಿದೆ. ಅಕ್ಟೋಬರ್ 23ರ ಪಂದ್ಯಕ್ಕೂ ಮುನ್ನ ಭಾರತ ತಂಡ ಬುಧವಾರ ನ್ಯೂಜಿಲೆಂಡ್ ವಿರುದ್ಧ ಮತ್ತೊಂದು ಅಭ್ಯಾಸ ಪಂದ್ಯವನ್ನು ಆಡಲಿದೆ. ಕಳೆದ 15 ವರ್ಷಗಳಿಂದ ಟೀಂ ಇಂಡಿಯಾ ಎರಡನೇ ಟಿ20 ಪ್ರಶಸ್ತಿಗಾಗಿ ಕಾಯುತ್ತಿದೆ. ಅದಕ್ಕಾಗಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾವನ್ನು ಸುಮಾರು 17 ದಿನ ಮುಂಚಿತವಾಗಿ ಪ್ರವೇಶಿಸಿದೆ. ಆದರೆ ವಿಶ್ವಕಪ್ ಅಭಿಯಾನಕ್ಕೆ 17 ದಿನಗಳ ಮೊದಲು ಭಾರತ ತಂಡ ಏಕೆ ಆಸ್ಟ್ರೇಲಿಯಾ (Australia) ತಲುಪಿತು ಎಂದು ಹಲವರು ಆಶ್ಚರ್ಯ ಪಡುತ್ತಿದ್ದರು.


ರಹಸ್ಯ ಬಯಲು ಮಾಡಿದ ಪಾಂಡ್ಯ:


ಬಿಸಿಸಿಐ ಇತ್ತೀಚೆಗೆ ವಿಡಿಯೋವೊಂದನ್ನು ಶೇರ್ ಮಾಡಿದೆ. ಇದರಲ್ಲಿ ತಂಡದ ತಯಾರಿಯಿಂದ ಹಿಡಿದು ಆಸ್ಟ್ರೇಲಿಯಾ ತಲುಪುವವರೆಗಿನ ಹಲವು ವಿಷಯಗಳನ್ನು ಹಾರ್ದಿಕ್ ಪಾಂಡ್ಯ ಬಹಿರಂಗಪಡಿಸಿದ್ದಾರೆ. ಈ ವಿಡಿಯೋದಲ್ಲಿ ಹಾರ್ದಿಕ್, 'ನಾವು ವಿಶ್ವಕಪ್‌ಗೆ 17 ದಿನಗಳ ಮೊದಲು ಆಸ್ಟ್ರೇಲಿಯಾ ಪ್ರವೇಶಿಸಿದ್ದೇವೆ. ಕಾರಣ ಇಲ್ಲಿನ ಪರಿಸರಕ್ಕೆ ಒಗ್ಗಿಕೊಳ್ಳಬೇಕು. ಅದಕ್ಕಾಗಿ ನಾವು ಬಿಸಿಸಿಐಗೆ ಆಭಾರಿಯಾಗಿದ್ದೇವೆ. ನೀವು ಬೌಲರ್ ಆಗಿರಲಿ ಅಥವಾ ಬ್ಯಾಟ್ಸ್‌ಮನ್ ಆಗಿರಲಿ, ನೀವು ಒಂದೇ ಸ್ಥಳದಲ್ಲಿ ಹೆಚ್ಚು ಸಮಯ ಕಳೆಯುತ್ತೀರಿ, ಆಡುವುದರಿಂದ ನಿಮಗೆ ಹೆಚ್ಚು ಪ್ರಯೋಜನವಾಗುತ್ತದೆ‘ ಎಂದು ಹೇಳಿದ್ದಾರೆ.



ಬ್ಯಾಟಿಂಗ್ ಬಗ್ಗೆ ಹಾರ್ದಿಕ್ ಹೇಳಿದ್ದೇನು?:


ಇದೇ ವೇಳೆ ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಹಾರ್ದಿಕ್, ನನಗೆ ತೃಪ್ತಿ ಇದೆ ಎಂದಿದ್ದಾರೆ. "ನೀವು 20 ಎಸೆತಗಳಲ್ಲಿ ಇನ್ನಿಂಗ್ಸ್ ಅನ್ನು ಮುನ್ನಡೆಸಿದಾಗ, ನಿಮ್ಮ ನೈತಿಕತೆ ಹೆಚ್ಚಾಗುತ್ತದೆ. ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆದಷ್ಟೂ ಆತ್ಮವಿಶ್ವಾಸ ಹೆಚ್ಚುತ್ತದೆ’ ಎಂದಿದ್ದಾರೆ.


ಇದನ್ನೂ ಓದಿ: T20 WC Team India: ಪಾಕ್‌ಗೆ ಬೆಣ್ಣೆ, ಭಾರತಕ್ಕೆ ಸುಣ್ಣ; ಹೋಟೆಲ್‌ ರೂಂ ಕೊಡುವಲ್ಲೂ ಐಸಿಸಿ ತಾರತಮ್ಯ!


ಬುಧವಾರ ಎರಡನೇ ಅಭ್ಯಾಸ ಪಂದ್ಯ:


ಏತನ್ಮಧ್ಯೆ, ಟೀಂ ಇಂಡಿಯಾ ತನ್ನ ಎರಡನೇ ಅಭ್ಯಾಸ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಬುಧವಾರ ಆಡಲಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು 6 ರನ್‌ಗಳಿಂದ ಸೋಲಿಸಿದೆ. ಹೀಗಾಗಿ ವಿಶ್ವಕಪ್ ಅಭಿಯಾನದಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಹೆಚ್ಚು ಪ್ರದರ್ಶನ ನೀಡದಿದ್ದರೂ ಸೂರ್ಯಕುಮಾರ್ ಯಾದವ್ ಮತ್ತು ಕೆಎಲ್ ರಾಹುಲ್ ಆಕರ್ಷಕ ಅರ್ಧಶತಕ ಗಳಿಸಿದರು. ಆ ಬಳಿಕ ಮೊಹಮ್ಮದ್ ಶಮಿ ಕೊನೆಯ ಓವರ್​ನಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಸೂಪರ್ ಕಂಬ್ಯಾಕ್ ಮಾಡಿದರು.


ಇದನ್ನೂ ಓದಿ: Shikhar Dhawan: ಶಿಖರ್ ಧವನ್ ಕೇಳದೆ ಮದುವೆ ಫಿಕ್ಸ್ ಮಾಡಿದ ತಂದೆ, ವಿಡಿಯೋ ವೈರಲ್


ಟಿ20 ವಿಶ್ವಕಪ್​ಗೆ ಭಾರತ ತಂಡ:



ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.


Published by:shrikrishna bhat
First published: