• Home
  • »
  • News
  • »
  • sports
  • »
  • T20 World Cup: ಟಿ20 ವಿಶ್ವಕಪ್​ ಇತಿಹಾಸದ ರೋಚಕ ಕ್ಷಣ, ಭಾರತೀಯರು ಎಂದಿಗೂ ಮರೆಯದ ಆ ಒಂದು ರನೌಟ್​

T20 World Cup: ಟಿ20 ವಿಶ್ವಕಪ್​ ಇತಿಹಾಸದ ರೋಚಕ ಕ್ಷಣ, ಭಾರತೀಯರು ಎಂದಿಗೂ ಮರೆಯದ ಆ ಒಂದು ರನೌಟ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

T20 World Cup: ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ರೋಚಕ ಜಯ ಸಾಧಿಸಿತ್ತು. ಆ ಪಂದ್ಯವನ್ನು ಯಾವ ಕ್ರಿಕೆಟ್ ಅಭಿಮಾನಿಯೂ ಎಂದಿಗೂ ಮರೆಯಲು ಸಾಧ್ಯವಿಲ್ಲ.

  • Share this:

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ (T20 World Cup) ಕ್ರಿಕೆಟ್ (Cricket) ಟೂರ್ನಿ ಆರಂಭಕ್ಕೆ ಇನ್ನು 9 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಮೆಗಾ ಟೂರ್ನಿಮೆಂಟ್​ಗಾಗಿ ಟೀಂ ಇಂಡಿಯಾ (Team India) ಆಸ್ಟ್ರೇಲಿಯಾಕ್ಕೆ ತೆರಳಿದೆ. ಇದೀಗ ತಂಡ ಅಲ್ಲಿ ಅಭ್ಯಾಸ ಪಂದ್ಯಗಳನ್ನು ಆರಂಭಿಸಲಿದೆ. ಇದರ ನಡುವೆ ನಾವು ಕಳೆದ ಕೆಲ ಟಿ20 ವಿಶ್ವಕಪ್​ಗಳ ರೋಚಕ ಕ್ಷಣಗಳನ್ನು ನೋಡೋಣ ಬನ್ನಿ. ಅದರಲ್ಲಿ ಪ್ರಮುಖವಾಗಿ 2016ರ ಟಿ20 ವಿಶ್ವಕಪ್ ಟೀಂ ಇಂಡಿಯಾ ಪಾಲಿಗೆ ವಿಶೇಷವಾಗಿತ್ತು. ಭಾರತ ಪಂದ್ಯಾವಳಿಯನ್ನು ಆಯೋಜಿಸಿ ಸೆಮಿಫೈನಲ್ ಪ್ರವೇಶಿಸಿತು. ಟೀಂ ಇಂಡಿಯಾ ಪ್ರವೇಶ ಸುಲಭವಾಗಿರಲಿಲ್ಲ.  ಕೊನೆಯವರೆಗೂ ನಡೆದ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶ (IND vs BAN) ವಿರುದ್ಧ ರೋಚಕ ಜಯ ಸಾಧಿಸಿದೆ. ಆ ಪಂದ್ಯವನ್ನು ಯಾವ ಕ್ರಿಕೆಟ್ ಅಭಿಮಾನಿಯೂ ಮರೆಯಲು ಸಾಧ್ಯವಿಲ್ಲ.


ಭಾರತೀಯರು ಎಂದೂ ಮರೆಯದ ಆ ರನೌಟ್​:


ಹೌದು, ಕೆಲ ಕ್ಷಣಗಳೇ ಹಾಗೆ. ಅವುಗಳು ಎಂದಿಗೂ ಜನಮಾನಸದಲ್ಲಿ ನೆನಪಿನಲ್ಲಿ ಉಳಿದುಬಿಡುತ್ತದೆ. ಅಂತಹ ಒಂದು ಕ್ಷಣ ಎಂದರೆ ಅದು ಭಾರತ ಮತ್ತು ಬಾಂಗ್ಲಾದೇಶದ ನಡುವಿನ 2016ರ ಟಿ20 ವಿಶ್ವಕಪ್​ ವೇಳೆಯ ಕೊನೆ ಓವರ್​ ಪಂದ್ಯ. ಈ ಸೂಪರ್ 10 ಪಂದ್ಯದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತಂತ್ರಗಾರಿಕೆಯ ಮುಂದೆ ಬಾಂಗ್ಲಾದೇಶ ತಂಡ ಅಸಹಾಯಕವಾಗಿತ್ತು. ಬಾಂಗ್ಲಾದೇಶ ಗೆಲುವಿಗೆ ಆರು ಎಸೆತಗಳಲ್ಲಿ 10 ರನ್‌ಗಳ ಅಗತ್ಯವಿತ್ತು. ಮೊದಲ ಮೂರು ಎಸೆತಗಳಲ್ಲಿ ಒಂಬತ್ತು ರನ್‌ಗಳನ್ನು ಗಳಿಸಿದ ಅವರು ನಂತರ ಧೋನಿಯ ಚಾಣಾಕ್ಷತೆಗೆ ಬಾಂಗ್ಲಾ 1 ರನ್​ನಿಂದ ಸೋತಿತು.



ಮೊದಲು ಬ್ಯಾಟ್ ಮಾಡಿದ ಭಾರತ ಏಳು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತು. ಭಾರತದ ಪರವಾಗಿ ಸುರೇಶ್ ರೈನಾ ಅತ್ಯಧಿಕ 30 ರನ್ ಗಳಿಸಿದರು. ವಿರಾಟ್ ಕೊಹ್ಲಿ 24 ರನ್ ಮತ್ತು ಶಿಖರ್ ಧವನ್ 23 ರನ್ ಕೊಡುಗೆ ನೀಡಿದರು. ನಾಯಕ ಮಹೇಂದ್ರ ಸಿಂಗ್ ಧೋನಿ 13 ರನ್ ಗಳಿಸಿ ಔಟಾಗದೆ ಉಳಿದರು.


ಇದನ್ನೂ ಓದಿ: Shubman Gill: ಏಕದಿನ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ಶುಭಮನ್ ಗಿಲ್, ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್


ಭಾರತ ನೀಡಿದ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಉತ್ತಮವಾಗಿ ಬ್ಯಾಟಿಂಗ್​ ಮಾಡಿತು. ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸುವ ಅವರ ಕನಸು ನನಸಾಗಲಿದೆ ಎಂದು ತೋರುತ್ತಿತ್ತು, ಆದರೆ ವಿಕೆಟ್ ಹಿಂದೆ ನಿಂತಿದ್ದ ಧೋನಿ ಅದೇ ಸಮಯದಲ್ಲಿ ತಮ್ಮ ವಿಭಿನ್ನ ಶೈಲಿಯ ನಿರ್ಧಾರದಿಂದ ಮತ್ತೆ ಎಲ್ಲರ ಗಮನ ಸೆಳೆದರು.  19ನೇ ಓವರ್‌ಗೆ ಬಾಂಗ್ಲಾದೇಶ ಆರು ವಿಕೆಟ್‌ಗೆ 136 ರನ್ ಗಳಿಸಿತ್ತು. ಕೊನೆಯ ಓವರ್‌ನಲ್ಲಿ ಗೆಲುವಿಗೆ ಆರು ಎಸೆತಗಳಲ್ಲಿ 10 ರನ್‌ಗಳ ಅಗತ್ಯವಿತ್ತು.


ಕೊನೆಯ ಓವರ್ ಬೌಲ್ ಮಾಡಿದ ಹಾರ್ದಿಕ್:


ನಾಯಕ ಧೋನಿ ಕೊನೆಯ ಮತ್ತು ಅತ್ಯಂತ ಮಹತ್ವದ ಓವರ್ ಅನ್ನು ಹಾರ್ದಿಕ್‌ಗೆ ನೀಡಿದರು. ಅವರು ಎಸೆದ ಮೊದಲ ಎಸೆತದಲ್ಲಿ ಒಂದು ರನ್, ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಸತತ ಎರಡು ಬೌಂಡರಿಗಳು. ಹಾಗಾಗಿ ಕೊನೆಯ ಮೂರು ಎಸೆತಗಳಲ್ಲಿ ಬಾಂಗ್ಲಾದೇಶಕ್ಕೆ ಕೇವಲ ಒಂದು ರನ್ ಬೇಕಾಗಿತ್ತು. ಆದರೆ ನಾಯಕ ಧೋನಿ ಹಾರ್ದಿಕ್ ಅವರನ್ನು ಬದಿಗೆ ಕರೆದು ಅವರಿಗೆ ಸಲಹೆಗಳನ್ನು ನೀಡಿದರು. ಮುಂದಿನ ಎಸೆತದಲ್ಲಿ ಮುಶ್ಫಿಕರ್ ರಹೀಮ್ ಔಟ್​ ಆದರು. ಅದರ ನಂತರದ ಎಸೆತದಲ್ಲಿಯೇ  ಮಹಮ್ಮದುಲ್ಲಾ ಅವರು ರವೀಂದ್ರ ಜಡೇಜಾಗೆ ಕ್ಯಾಚ್ ನೀಡಿದರು.


ಇದನ್ನೂ ಓದಿ: Virat Kohli: ವಿರಾಟ್ ಕೈಯಲ್ಲಿ ದುಬಾರಿ ವಾಚ್, ಕೊಹ್ಲಿ ಒಮ್ಮೆ ಹೇರ್​ ಕಟ್ ಮಾಡೋ ದುಡ್ಡಲ್ಲಿ ಸ್ಪ್ಲೆಂಡರ್ ಬೈಕೇ ಕೊಳ್ಬೋದಿತ್ತಂತೆ!


ರೋಚಕ ಕ್ಷಣಕ್ಕೆ ಸಾಕ್ಷಿಯಾದ ಕೊನೆ ಎಸೆತ:


ಆಗ ಬಾಂಗ್ಲಾದೇಶಕ್ಕೆ ಒಂದು ಎಸೆತದಲ್ಲಿ ಒಂದು ರನ್ ಬೇಕಿತ್ತು. ಹಾರ್ದಿಕ್ ಕೊನೆಯ ಎಸೆತವನ್ನು ಬೌಲ್ ಮಾಡುವ ಮೊದಲು, ಧೋನಿ ತಮ್ಮ ಕೀಪಿಂಗ್ ಗ್ಲೌಸ್ ಅನ್ನು ಪಕ್ಕಕ್ಕೆ ಇರಿಸಿದರು. ಹಾರ್ದಿಕ್ ಎಸೆದ ಚೆಂಡನ್ನು ಬ್ಯಾಟ್ಸ್ ಮನ್ ಹೊಡೆಯಲು ಸಾಧ್ಯವಾಗಲಿಲ್ಲ. ಆದರೆ, ಮುಸ್ತಫಿಜುರ್ ರೆಹಮಾನ್ ನಾನ್ ಸ್ಟ್ರೈಕ್ ನಿಂದ ಓಡಿದರು. ಅಷ್ಟರಲ್ಲಿ ಚಿರತೆಯ ಚಾಣಾಕ್ಷತನದಿಂದ ಚೆಂಡನ್ನು ಹಿಡಿದ ಧೋನಿ ವಿಕೆಟ್ ಕಡೆಗೆ ಓಡಿದರು. ರೆಹಮಾನ್ ಕ್ರೀಸ್ ತಲುಪುವ ಮುನ್ನವೇ ಧೋನಿ ರನೌಟ್​ ಮಾಡಿದರು. ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ತಂಡ ಒಂದು ರನ್‌ನಿಂದ ಜಯ ಸಾಧಿಸಿತು. ಈ ಪಂದ್ಯವು ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಗಿದೆ.

Published by:shrikrishna bhat
First published: