T20 World Cup 2022: ಟಿ20 ವಿಶ್ವಕಪ್​ಗೆ ದ್ರಾವಿಡ್​ ಮಾಸ್ಟರ್​ ಪ್ಲ್ಯಾನ್​, ಆಸೀಸ್​ಗೆ ತೆರಳಲು ಟೀಂ ಇಂಡಿಯಾ ಡೇಟ್​ ಫಿಕ್ಸ್

T20 World Cup 2022: T20 ವಿಶ್ವಕಪ್‌ನ 15 ವರ್ಷಗಳ ಬರವನ್ನು ಕೊನೆಗೊಳಿಸಲು ಭಾರತ ತಂಡ ಭರ್ಜರಿ ತಯಾರಿ ನಡೆಸುತ್ತಿದೆ. ಭಾರತ ತಂಡವು ಅಕ್ಟೋಬರ್ 5 ರಂದು ಆಸ್ಟ್ರೇಲಿಯಾಕ್ಕೆ ಹಾರಬಹುದು. ಇದೇ ವೇಳೆ ಭಾರತ ತಂಡ ಹೆಚ್ಚುವರಿ ಅಭ್ಯಾಸ ಪಂದ್ಯಗಳನ್ನೂ ಆಡಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರೋಹಿತ್ ಶರ್ಮಾ (Rohith Sharma) ನೇತೃತ್ವದ ಟೀಂ ಇಂಡಿಯಾ (Team India) ಟಿ20 ವಿಶ್ವಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ. ಇದಕ್ಕಾಗಿ ಭಾರತ ತಂಡ ಆಸೀಸ್​ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಆಡಲಿದೆ. ಟಿ20 ವಿಶ್ವಕಪ್​ಗಾಗಿ (T20 World Cup 2022) ಭಾರತ ತಂಡವು ಆಸ್ಟ್ರೇಲಿಯಾದ (Australia) ಪರ್ತ್ ಗೆ ಆದಷ್ಟು ಬೇಗ ತೆರಳಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ.  ಇದಕ್ಕೆ ಬಿಸಿಸಿಐ ಕೂಡ ಗ್ರೀನ್ ಸಿಗ್ನಲ್ ನೀಡಿದೆ. ಪರ್ತ್ ಅನ್ನು ಬೇಸ್ ಮಾಡಲು ದೊಡ್ಡ ಕಾರಣವೆಂದರೆ ಅಲ್ಲಿಯ ವಿಕೆಟ್‌ಗಳಲ್ಲಿನ ಹೆಚ್ಚುವರಿ ಬೌನ್ಸ್. ಟಿ20 ವಿಶ್ವಕಪ್‌ಗೂ ಮುನ್ನ ಭಾರತೀಯ ಬ್ಯಾಟ್ಸ್‌ಮನ್‌ಗಳು ಇಲ್ಲಿ ಅಭ್ಯಾಸ ಮಾಡುವ ಮೂಲಕ ಬೌನ್ಸ್ ಮತ್ತು ಹೆಚ್ಚುವರಿ ವೇಗಕ್ಕೆ ಹೊಂದಿಕೊಳ್ಳಲು ಸಹಾಯಕವಾಗಲಿದೆ. ಇದು ವಿಶ್ವಕಪ್​ಗೆ ಸಹಾಯಕವಾಗಲಿದೆ ಎನ್ನಲಾಗುತ್ತಿದೆ.

ಮುಂಚಿತವಾಗಿ ಆಸೀಸ್​ಗೆ ಹಾರಲಿರುವ ಭಾರತ:

ಮಾಹಿತಿ ಪ್ರಕಾರ, ಟೀಂ ಇಂಡಿಯಾ ಪರ್ತ್‌ನಲ್ಲಿ 2 ವಾರಗಳ ಕಾಲ ಅಭ್ಯಾಸ ನಡೆಸಲಿದ್ದು, ವಿಶ್ವಕಪ್‌ನ ಅಭ್ಯಾಸ ಪಂದ್ಯಕ್ಕೂ ಮುನ್ನ ಇಂಟ್ರಾ ಸ್ಕ್ವಾಡ್ ಪಂದ್ಯಗಳನ್ನು ಆಡಲಿದೆ. ವಿಶ್ವಕಪ್‌ಗೆ ಎರಡು ಅಥವಾ ಎರಡೂವರೆ ವಾರಗಳ ಮೊದಲು ಭಾರತ ತಂಡ ಆಸ್ಟ್ರೇಲಿಯಾ ತಲುಪಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.  ತಂಡವು ಪರ್ತ್‌ನಲ್ಲಿ ತರಬೇತಿ ಮತ್ತು ಅಭ್ಯಾಸ ನಡೆಸಲಿದೆ. ಅಷ್ಟೇ ಅಲ್ಲ ಕೆಲವು ಅಭ್ಯಾಸ ಪಂದ್ಯಗಳೂ ಅಲ್ಲಿ ನಡೆಯಲಿವೆ.

ಟೀಮ್ ಇಂಡಿಯಾ ಈ ಹಿಂದೆ ಅಕ್ಟೋಬರ್ 9 ರಂದು ಆಸ್ಟ್ರೇಲಿಯಾಕ್ಕೆ ತೆರಳಲು ನಿರ್ಧರಿಸಿತ್ತು. ಆದರೆ ಕೋಚ್ ರಾಹುಲ್ ದ್ರಾವಿಡ್ ತಂಡಕ್ಕೆ ಹೆಚ್ಚುವರಿ ಅಭ್ಯಾಸ ಪಂದ್ಯಗಳಿಗೆ ವ್ಯವಸ್ಥೆ ಮಾಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿರುವ ಬಿಸಿಸಿಐ ಕೆಲ ದಿನಗಳ ಮುಂಚಿತವಾಗಿಯೇ ತಂಡವನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಲು ನಿರ್ಧರಿಸಿದೆ.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ 2022ಗೆ ಎಲ್ಲಾ ತಂಡಗಳು ಪ್ರಕಟ, ಯಾವ ಟೀಂ ಸಖತ್​ ಸ್ಟ್ರಾಂಗ್​? ಇಲ್ಲಿದೆ ಸಂಪೂರ್ಣ ಪಟ್ಟಿ

ಭಾರತಕ್ಕೆ ಹೆಚ್ಚುವರಿ ಅಭ್ಯಾಸ ಪಂದ್ಯ:

ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಹೆಚ್ಚುವರಿ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಆಸ್ಟ್ರೇಲಿಯಾ ವಿರುದ್ಧದ 3 ಟಿ20 ಸರಣಿಯ ನಂತರ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಇದರ ಕೊನೆಯ ಪಂದ್ಯ ಅಕ್ಟೋಬರ್ 4 ರಂದು ಇಂದೋರ್‌ನಲ್ಲಿ ನಡೆಯಲಿದೆ. ಇದೀಗ ಈ ಪಂದ್ಯ ಮುಗಿದ ನಂತರ ಭಾರತ ತಂಡ ಅಕ್ಟೋಬರ್ 5ರಂದು ಆಸ್ಟ್ರೇಲಿಯಾಕ್ಕೆ ತೆರಳಲಿದೆ. ಮೊದಲ ತಂಡವು ಅಕ್ಟೋಬರ್ 9 ರಂದು ಆಸ್ಟ್ರೇಲಿಯಾಕ್ಕೆ ಹೋಗಲು ಯೋಜಿಸಲಾಗಿತ್ತು.

ಐಸಿಸಿ, ನ್ಯೂಜಿಲೆಂಡ್ (ಅಕ್ಟೋಬರ್ 17) ಮತ್ತು ಆಸ್ಟ್ರೇಲಿಯಾ (ಅಕ್ಟೋಬರ್ 18) ಟೀಮ್ ಇಂಡಿಯಾಗೆ ನಿಗದಿಪಡಿಸಿದ ಎರಡು ಅಭ್ಯಾಸ ಪಂದ್ಯಗಳ ಹೊರತಾಗಿ, ಬಿಸಿಸಿಐ ಕನಿಷ್ಠ ಮೂರು ಅಭ್ಯಾಸ ಪಂದ್ಯಗಳ ಯೋಜನೆಯನ್ನು ರೂಪಿಸುತ್ತಿದೆ. ಭಾರತ ತಂಡ ಅಕ್ಟೋಬರ್ 23 ರಂದು ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್‌ನಲ್ಲಿ ಮೊದಲ ಪಂದ್ಯವನ್ನು ಆಡಲಿದೆ.

ಇದನ್ನೂ ಓದಿ: Mohammad Amir: ಜೈಲಿನಲ್ಲಿ ಪ್ರೀತಿ, ವಕೀಲೆ ಜೊತೆ ಮದುವೆ; ಮೂರನೇ ಬಾರಿಗೆ ತಂದೆಯಾದ ಕ್ರಿಕೆಟಿಗ!

ಟಿ20 ವಿಶ್ವಕಪ್​ 2022ಗೆ ಭಾರತ ತಂಡ:

 ರೋಹಿತ್ ಶರ್ಮಾ (C), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಸ್ಟ್ಯಾಂಡ್ ಬೈ ಆಟಗಾರರು: 
ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.
Published by:shrikrishna bhat
First published: