• Home
  • »
  • News
  • »
  • sports
  • »
  • T20 World Cup AUS vs NZ: ಸೌಥಿ ದಾಳಿಗೆ ತತ್ತರಿಸಿದ ಹಾಲಿ ಚಾಂಪಿಯನ್, ಟೂರ್ನಿಯಲ್ಲಿ ಶುಭಾರಂಭ ಮಾಡಿದ ಕಿವೀಸ್

T20 World Cup AUS vs NZ: ಸೌಥಿ ದಾಳಿಗೆ ತತ್ತರಿಸಿದ ಹಾಲಿ ಚಾಂಪಿಯನ್, ಟೂರ್ನಿಯಲ್ಲಿ ಶುಭಾರಂಭ ಮಾಡಿದ ಕಿವೀಸ್

ಕಿವೀಸ್​ ತಂಡಕ್ಕೆ ಜಯ

ಕಿವೀಸ್​ ತಂಡಕ್ಕೆ ಜಯ

T20 World Cup AUS vs NZ: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ (AUS vs NZ) ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

  • Share this:

ಟಿ20 ವಿಶ್ವಕಪ್ (T20 World Cup) 2022 ಸೂಪರ್ 12 ಹಂತವು ದೊಡ್ಡ ರೀತಿಯಲ್ಲಿ ಪ್ರಾರಂಭವಾಗಿದೆ. ಗ್ರೂಪ್ 1ರ ಭಾಗವಾಗಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ (AUS vs NZ) ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.  ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಕಿವೀಸ್​ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 200 ರನ್ ಗಳಿಸಿತು. ಈ ಬೃಹತ್ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 17.1 ಓವರ್​ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 111 ರನ್ ಗಳಿಸುವ ಮೂಲಕ 89 ರನ್ ಗಳಿಂದ ಸೋಲನ್ನು ಅನುಭವಿಸಿತು. ಈ ಮೂಲಕ ಹಾಲಿ ಚಾಂಪಿಯನ್ ತಂಡಕ್ಕೆ ಟೂರ್ನಿಯ ಆರಂಭದಲ್ಲಿಯೇ ಭಾರಿ ಮುಖಭಂಗವಾಗಿದೆ.


ಕಿವೀಸ್​ ಪರ ಅಬ್ಬರಿಸಿದ ಕಾನ್ವೆ:


ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್​ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 200 ರನ್ ಗಳಿಸಿತು. ಡೆವೊನ್ ಕಾನ್ವೆ (58 ಎಸೆತಗಳಲ್ಲಿ ಔಟಾಗದೆ 92; 7 ಬೌಂಡರಿ, 2 ಸಿಕ್ಸರ್) ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದು ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಮತ್ತೊಬ್ಬ ಆರಂಭಿಕ ಆಟಗಾರ ಫಿನ್ ಅಲೆನ್ (16 ಎಸೆತಗಳಲ್ಲಿ 42; 5 ಬೌಂಡರಿ, 3 ಸಿಕ್ಸರ್) ಆಸ್ಟ್ರೇಲಿಯ ಬೌಲರ್ ಗಳನ್ನು ನಡುಗಿಸಿದರು. ಕೊನೆಯಲ್ಲಿ ಜೇಮ್ಸ್ ನೀಶಮ್ (13 ಎಸೆತಗಳಲ್ಲಿ ಔಟಾಗದೆ 26; 2 ಸಿಕ್ಸರ್) ಬಲಿಷ್ಠವಾಗಿ ಆಡಿದ್ದರಿಂದ ಕಿವೀಸ್ ದೊಡ್ಡ ಸ್ಕೋರ್ ಗಳಿಸಿತು. ಆಸ್ಟ್ರೇಲಿಯಾದ ಬೌಲರ್‌ಗಳ ಪೈಕಿ ಹೇಜಲ್ ವುಡ್ 2 ವಿಕೆಟ್ ಪಡೆದರು. ಆಡಮ್ ಝಂಪಾ ಒಂದು ವಿಕೆಟ್ ಪಡೆದರು.



ಈ ಹಂತದಲ್ಲಿ ಕಿವೀಸ್ 200ರ ಗಡಿ ಮುಟ್ಟುವುದು ಕಷ್ಟ ಎನಿಸಿತು. ಆದರೆ ಕ್ರೀಸ್ ಗೆ ಬಂದ ಆಲ್ ರೌಂಡರ್ ಜೇಮ್ಸ್ ನೀಶಮ್ ಬಿರುಸಿನ ಆಟವಾಡಿದರು. ಅವರು ಬೌಂಡರಿಗಳ ಮಳೆಗರೆದರು.  ಕಾನ್ವೇ ಕೂಡ ಶತಕ ಬಾರಿಸುವಲ್ಲಿ ವಿಫಲರಾಗಿ ಉತ್ತಮ ಹೊಡೆತಗಳನ್ನು ಆಡುತ್ತಿದ್ದ ನೀಶಮ್ ಕೆ ಅವರಿಗೆ ಹೆಚ್ಚಿನ ಸ್ಟ್ರೈಕಿಂಗ್ ಗೆ ಅವಕಾಶ ನೀಡಿದರು. ಇದರೊಂದಿಗೆ ಕಾನ್ವೆ ಶತಕಕ್ಕೆ 8 ರನ್ ನಿಂದ ವಂಚಿತರಾದರು.


ಇದನ್ನೂ ಓದಿ: Team India: 29 ಆಟಗಾರರನ್ನು ಬದಲಿಸಿದ್ದ ಟೀಂ ಇಂಡಿಯಾ, ರೋಹಿತ್ ಮಾತು ಕೇಳಿದ್ರೆ ಶಾಕ್​ ಆಗ್ತೀರಾ!


ಬ್ಯಾಟಿಂಗ್​ನಲ್ಲಿ ಎಡವಿದ ಆಸೀಸ್​:


ಕಿವೀಸ್ ನೀಡಿದ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ 17.1 ಓವರ್​ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 111 ರನ್ ಗಳಿಸುವ ಮೂಲಕ 89 ರನ್ ಗಳಿಂದ ಸೋಲನ್ನು ಅನುಭವಿಸಿತು. ಆಸೀಸ್​ ಪರ ಡೇವಿಡ್ ವಾರ್ನರ್ 5 ರನ್, ಅರೋನ್ ಪಿಂಚ್ 13 ರನ್, ಮಿಚೆಲ್ ಮಾರ್ಷ್ 16 ರನ್, ಗ್ಲೇನ್ ಮ್ಯಾಕ್ಸ್​ವೆಲ್ 28 ರನ್, ಮಾರ್ಕ್ ಸ್ಟೋನಿಸ್ 7 ರನ್, ಟೀಂ್ ಡೇವಿಡ್ 11 ರನ್, ಪ್ಯಾಟ್ ಕಮಿನ್ಸ್ 21 ರನ್ ಗಳಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.


ಇದನ್ನೂ ಓದಿ: IND vs PAK: ಭಾರತ-ಪಾಕಿಸ್ತಾನ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ?


ಇತ್ತ, ಟಿಮ್ ಸೌಥಿ 2.1 ಓವರ್​ಗಳಲ್ಲಿ 6 ರನ್ ನೀಡಿ 3 ವಿಕೆಟ್​ ಮತ್ತು ಮಿಚೆಲ್ ಸಹ 3 ವಿಕೆಟ್​ ಪಡೆದು ಮಿಂಚಿದರು. ಟ್ರೆಂಟ್​ ಬೌಲ್ಟ್ 2 ವಿಕೆಟ್ ಹಾಗೂ ಲುಕಿ ಪರ್ಗ್ಯೂಸನ್ -ಇಶ್ ಸೌಧಿ ತಲಾ 1 ವಿಕೆಟ್ ಪಡೆದಿದರು.

Published by:shrikrishna bhat
First published: