• Home
  • »
  • News
  • »
  • sports
  • »
  • Virat Kohli: ಪಾಕಿಸ್ತಾನಿ ಆ್ಯಂಕರ್ ಜೊತೆ ವಿರಾಟ್, ಕಿಂಗ್​ ಕೊಹ್ಲಿ ಅಭಿಮಾನಿಗಳಲ್ಲಿ ಹೆಚ್ಚಾಯ್ತು ಟೆನ್ಷನ್

Virat Kohli: ಪಾಕಿಸ್ತಾನಿ ಆ್ಯಂಕರ್ ಜೊತೆ ವಿರಾಟ್, ಕಿಂಗ್​ ಕೊಹ್ಲಿ ಅಭಿಮಾನಿಗಳಲ್ಲಿ ಹೆಚ್ಚಾಯ್ತು ಟೆನ್ಷನ್

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

Virat Kohli: ವಿರಾಟ್ ಕೊಹ್ಲಿ ಅವರನ್ನು ಪಾಕಿಸ್ತಾನಿ ಆ್ಯಂಕರ್​ ಝೈನಾಬ್ ಅವರು ಸಂದರ್ಶನ ಮಾಡಿದ್ದಾರೆ. ಆದರೆ ಇದು ವಿರಾಟ್ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಏಕೆಂದರೆ ಭಾರತ-ಪಾಕಿಸ್ತಾನ ಪಂದ್ಯದ ಮೊದಲು ಇದು ಕೆಟ್ಟ ಶಕುನ ಎಂದು ಹೇಳುತ್ತಿದ್ದಾರೆ.

  • Share this:

ಕಳೆದ ಕೆಲವು ವರ್ಷಗಳಿಂದ ಪಾಕಿಸ್ತಾನಿ ಆ್ಯಂಕರ್ ಝೀನಬ್ ಅಬ್ಬಾಸ್ (Zainab Abbas) ಹೆಸರು ಸುದ್ದಿಯಲ್ಲಿದೆ. ಈ ಕ್ರೀಡಾ ಆ್ಯಂಕರ್ ನ ಹಲವು ವರ್ಷಗಳ ಕನಸು ನನಸಾಗಿದೆ. ಟೀಂ ಇಂಡಿಯಾದ ಲೆಜೆಂಡರಿ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಅವರನ್ನು ಸಂದರ್ಶಿಸಲು ಝೀನಬ್ ಅಬ್ಬಾಸ್ ಅವರಿಗೆ ಅವಕಾಶ ಸಿಕ್ಕಿದೆ. ವಿರಾಟ್ ಜೊತೆಗಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ (Social media) ಪೋಸ್ಟ್ ಮಾಡುವ ಮೂಲಕ ಝೀನಬ್ ಅಬ್ಬಾಸ್ ಈ ಮಾಹಿತಿ ನೀಡಿದ್ದಾರೆ. ಆದರೆ ಈ ಪೋಸ್ಟ್ ನಂತರ ವಿರಾಟ್ ಅಭಿಮಾನಿಗಳು ಈಗ ವಿರಾಟ್ ಕೊಹ್ಲಿಯ ದುರಾದೃಷ್ಟ ಶುರುವಾಗಿದೆ ಎಂದು ವಿಚಿತ್ರವಾದ ಕಾಮೆಂಟ್‌ಗಳನ್ನು ಮಾಡಲು ಪ್ರಾರಂಭಿಸಿದ್ದಾರೆ.


ಕೊಹ್ಲಿ ಸಂದರ್ಶನ ಮಾಡಿದ ಪಾಕ್ ಆ್ಯಂಕರ್:


ಝೀನಬ್ ತಮ್ಮ ಪೋಸ್ಟ್‌ನಲ್ಲಿ, 'ಯಾವಾಗಲೂ ಕೊಹ್ಲಿಯೊಂದಿಗೆ ಮಾತನಾಡಲು ನಿಮಗೆ ಅವಕಾಶ ಸಿಗುವುದಿಲ್ಲ, ಸಂಪೂರ್ಣ ಸಂದರ್ಶನವನ್ನು ಶೀಘ್ರದಲ್ಲೇ ಐಸಿಸಿ ಚಾನೆಲ್‌ನಲ್ಲಿ ತೋರಿಸಲಾಗುವುದು' ಎಂದು ಬರೆದಿದ್ದಾರೆ. ಒಂದು ಕಡೆ, ವಿರಾಟ್‌ನ ಸಂದರ್ಶನದ ನಂತರ ಝೈನಾಬ್‌ನ ಮುಖವು ಸಂತೋಷವಾಗಿದೆ. ಆದರೆ ಇನ್ನೊಂದು ಕಡೆ ವಿರಾಟ್ ಅಭಿಮಾನಿಗಳಿಗೆ ಇದು ಇಷ್ಟವಾಗಲಿಲ್ಲ. ಏಕೆಂದರೆ  ಭಾರತ-ಪಾಕಿಸ್ತಾನ ಪಂದ್ಯದ ಮೊದಲು ಝೀನಬ್ ಅವರನ್ನು ಭೇಟಿಯಾಗಿರುವುದು ಕೆಟ್ಟ ಶಕುನ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.2017 ರಲ್ಲಿ ವಿರಾಟ್ ಜೊತೆ ಝೈನಾಬ್ ಸೆಲ್ಫಿ:


2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರೊಂದಿಗೆ ಝೈನಾಬ್ ಸೆಲ್ಫಿ ತೆಗೆದುಕೊಂಡರು. ಆದರೆ ಈ ಸೆಲ್ಫಿಯ ನಂತರ, ಮುಂದಿನ ಪಂದ್ಯದಲ್ಲಿ ವಿರಾಟ್ ಮತ್ತು ಡಿವಿಲಿಯರ್ಸ್ ಇಬ್ಬರೂ ಶೂನ್ಯಕ್ಕೆ ಔಟಾದರು. ಹೀಗಾಗಿ ಇದು ಪುನರಾವರ್ತನೆಯಾಗಬಹುದು ಎಂದು ವಿರಾಟ್ ಅಭಿಮಾನಿಗಳು ಹೇಳುತ್ತಿದ್ದಾರೆ.


ಇದನ್ನೂ ಓದಿ: Virat Kohli: ಐಸಿಸಿ ಹೊಸ ವಿಡಿಯೋಗೆ ವಿರಾಟ್ ಕೊಹ್ಲಿ ಫ್ಯಾನ್ಸ್ ಗರಂ, ಅಷ್ಟಕ್ಕೂ ಅಂಥದ್ದೇನಿದೆ ನೋಡಿ


ಏಷ್ಯಾಕಪ್‌ನಿಂದ ವಿರಾಟ್ ಅದ್ಭುತ ಫಾರ್ಮ್‌:


ಏತನ್ಮಧ್ಯೆ, ಏಷ್ಯಾಕಪ್‌ನಿಂದ ಮತ್ತೆ ವಿರಾಟ್ ಬ್ಯಾಟ್‌ನಿಂದ ರನ್‌ಗಳ ಹರಿವು ಆರಂಭವಾಗಿದೆ. ಆದರೆ ಅದಕ್ಕೂ ಮುನ್ನ ವಿರಾಟ್ ಕೆಟ್ಟ ಫಾರ್ಮ್‌ನಲ್ಲಿದ್ದರು. ಅದಕ್ಕಾಗಿ ವಿರಾಟ್ ದೊಡ್ಡ ಬ್ರೇಕ್ ತೆಗೆದುಕೊಂಡಿದ್ದರು. ಬಳಿಕ ಏಷ್ಯಾಕಪ್ ನಲ್ಲಿ ವಿರಾಟ್ ದಿಟ್ಟ ಪ್ರದರ್ಶನ ನೀಡಿದರು. ಅವರು ಫಾರ್ಮ್‌ಗೆ ಮರಳಿದರು. ಅಷ್ಟೇ ಅಲ್ಲ, ಅಫ್ಘಾನಿಸ್ತಾನ ವಿರುದ್ಧವೂ ವಿರಾಟ್ ಶತಕ ಬಾರಿಸಿ ಮೂರು ವರ್ಷಗಳ ಶತಕದ ಬರ ನೀಗಿಸಿದರು. ಆ ಪಂದ್ಯದಲ್ಲಿ ವಿರಾಟ್ 122 ರನ್ ಗಳಿಸಿದ್ದರು. ಹೀಗಾಗಿ ಟಿ20 ವಿಶ್ವಕಪ್‌ನಲ್ಲೂ ವಿರಾಟ್‌ನಿಂದ ಟೀಂ ಇಂಡಿಯಾ ಹೆಚ್ಚಿನ ನಿರೀಕ್ಷೆ ಹೊಂದಿದೆ. ಆದರೆ ಇದೀಗ ಇದೊಂದು ಕಾರಣದಿಂದ ಕೊಹ್ಲಿ ಅಭಿಮಾನಿಗಳ ಚಿಂತೆ ಹೇಚ್ಚಿಸಿದೆ.


ಇದನ್ನೂ ಓದಿ: T20 WC IND vs PAK: ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗೆ ಎಚ್ಚರಿಕೆ ನೀಡಿದ ಪಾಕ್​ ಬೌಲರ್​, ಮಾರಕ ಯಾರ್ಕರ್​ಗೆ ಆಸ್ಪತ್ರೆ ಸೇರಿದ ಅಫ್ಘಾನ್ ಬ್ಯಾಟರ್


ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

Published by:shrikrishna bhat
First published: