ಏಷ್ಯನ್ ಗೇಮ್ಸ್ 2018: ಹೆಪ್ಟಾಥ್ಲಾನ್​​​​ನಲ್ಲಿ ಭಾರತಕ್ಕೆ ಚಿನ್ನ; ದಾಖಲೆ ಬರೆದ ಸ್ವಪ್ನ ಬರ್ಮನ್

news18
Updated:August 29, 2018, 7:40 PM IST
ಏಷ್ಯನ್ ಗೇಮ್ಸ್ 2018: ಹೆಪ್ಟಾಥ್ಲಾನ್​​​​ನಲ್ಲಿ ಭಾರತಕ್ಕೆ ಚಿನ್ನ; ದಾಖಲೆ ಬರೆದ ಸ್ವಪ್ನ ಬರ್ಮನ್
news18
Updated: August 29, 2018, 7:40 PM IST
ನ್ಯೂಸ್ 18 ಕನ್ನಡ

ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​​ನ ಪುರುಷರ ತ್ರಿಪಲ್​​​ ಜಂಪ್​​ನಲ್ಲಿ ಹಾಗೂ ಮಹಿಳೆಯರ ಹೆಪ್ಟಾಥ್ಲಾನ್​ ಕ್ರೀಡೆಯಲ್ಲಿ ಭಾರತ ಚಿನ್ನ ಬಾಜಿಕೊಂಡಿದೆ. ತ್ರಿಪಲ್​​​ ಜಂಪ್​​ನಲ್ಲಿ ಅರ್ಪಿಂದರ್​ ಸಿಂಗ್​​​​ ಅವರು 16.77 ಮೀಟರ್​​ ದೂರಕ್ಕೆ ಜಿಗಿದ ಚಿನ್ನಕ್ಕೆ ಕೊರಳೊಡ್ಡಿದ್ದಾರೆ. ಇದು 48 ವರ್ಷಗಳ ಬಳಿಕ ಭಾರತ ತ್ರಿಪಲ್ ಜಂಪ್​​ನಲ್ಲಿ ಚಿನ್ನದ ಪದಕ ಗೆದ್ದಂತಾಗಿದೆ. ಇನ್ನು ಹೆಪ್ಟಾಥ್ಲಾನ್​ ಸ್ವಪ್ನ ಬರ್ಮನ್​​ ಅವರು ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದು ಏಷ್ಯನ್ ಗೇಮ್ಸ್​​ನ ಹೆಪ್ಟಾಥ್ಲಾನ್​​ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಚಿನ್ನದ ಪದಕವಾಗಿದೆ. ಈ ಮೂಲಕ ಏಷ್ಯನ್​ ಗೇಮ್ಸ್​ನಲ್ಲಿ ಭಾರತಕ್ಕೆ 11ನೇ ಚಿನ್ನದ ಪದಕ ದೊರಕಿದೆ.

ಇನ್ನು ಇಂದು ನಡೆದ ಟೇಬಲ್ ಟೆನಿಸ್​ನಲ್ಲಿ ಭಾರತ ಕಂಚಿನ ಪದಕ ತನ್ನದಾಗಿಸಿದೆ. ಟೇಬಲ್​ ಟೆನಿಸ್​ನ​ ಮಿಕ್ಸೆಡ್​ ಡಬಲ್ಸ್​​ನಲ್ಲಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ 2ನೇ ಕಂಚಿನ ಪದಕ ದಕ್ಕಿದೆ. 4-11, 12-10, 6-11, 11-6, 11-8 ಗೇಮ್​​ಗಳಿಂದ ಗೆಲ್ಲುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದ ಭಾರತದ ಟೇಬಲ್​ ಟೆನಿಸ್​ನ​ ಮಿಕ್ಸೆಡ್​ ಡಬಲ್ಸ್​​ನಲ್ಲಿ ಸೆಮೀಸ್​ನಲ್ಲಿ ಚೀನಾದ ವಿರುದ್ಧ 9-11, 5-11, 13-11, 4-11, 8-11 ಗೇಮ್​ಗಳಿಂದ ಸೋಲುಂಡಿದೆ.

ಅಂತೆಯೆ ಮಹಿಳೆಯರ 200 ಮೀ. ಓಟದ ಫೈನಲ್​​ ಸ್ಪರ್ಧೆಯಲ್ಲಿ ಭಾರತದ ದ್ಯುತಿ ಚಂದ್ ಅವರು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. 23:20 ಸೆಕೆಂಡ್​​ಗಳಲ್ಲಿ ಗುರಿ ಮುಟ್ಟಿ ಎರಡನೇ ಸ್ಥಾನ ತಲುಪಿದರು.

ಭಾರತ 11 ಚಿನ್ನದ ಪದಕ, 20 ಬೆಳ್ಳಿ ಪದಕ ಹಾಗೂ 23 ಕಂಚಿನ ಪದಕ ಗೆದ್ದಿದ್ದು, ಒಟ್ಟಾರೆ 54 ಪದಕದೊಂದಿಗೆ 8ನೇ ಸ್ಥಾನದಲ್ಲಿದೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...