ಏಷ್ಯನ್ ಗೇಮ್ಸ್​​ನಲ್ಲಿ ಬಜರಂಗ್ ಕೊರಳಿಗೆ ಚಿನ್ನದ ಹಾರ; ಈಜಿನಲ್ಲಿ ಸಾಜನ್ ಫೈನಲ್​​ಗೆ

news18
Updated:August 19, 2018, 10:33 PM IST
ಏಷ್ಯನ್ ಗೇಮ್ಸ್​​ನಲ್ಲಿ ಬಜರಂಗ್ ಕೊರಳಿಗೆ ಚಿನ್ನದ ಹಾರ; ಈಜಿನಲ್ಲಿ ಸಾಜನ್ ಫೈನಲ್​​ಗೆ
news18
Updated: August 19, 2018, 10:33 PM IST
ನ್ಯೂಸ್ 18 ಕನ್ನಡ

18ನೇ ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಪದಕದ ಬೇ ಆರಂಭವಾಗಿದೆ. ಕುಸ್ತಿಪಟು ಬಜರಂಗ್ ಪೊನಿಯಾ ಅವರು​ 65 ಕೆಜಿ ವಿಭಾಗದ ಕುಸ್ತಿಯಲ್ಲಿ ಫೈನಲ್ ತಲುಪಿದ್ದು ಪದಕವನ್ನು ಖಚಿತ ಪಡಿಸಿದ್ದಾರೆ. ಸೆಮಿಫೈನಲ್​​ನಲ್ಲಿ ಮಂಗೋಲಿಯಾದ ಬ್ಯಾಟ್ಮಾಗ್​​​​ನೈ ಬ್ಯಾಚುಲುನ್ ಅವರ ವಿರುದ್ಧ 11-8 ಯಲ್ಲಿ ಗೆಲುವು ದಾಖಲಿಸಿ ಚಿನ್ನದ ಪದಕವನ್ನು ಗೆದ್ದು ಫೈನಲ್​​​ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಭಾರತ ಚಿನ್ನಡ ಬೇಟೆಯನ್ನು ಆರಂಭಿಸಿದೆ. ಫೈನಲ್​​ನಲ್ಲಿ ಚಿನ್ನಕ್ಕಾಗಿ ಜಪಾನ್​​​ನ ದೈಚಿ ತಕಟಾನಿ ಅವರ ವಿರುದ್ಧ ಸೆಣೆಸಾಟ ನಡೆಸಲಿದ್ದಾರೆ.ಇನ್ನು ಈಜು ಸ್ಪರ್ಧೆಯಲ್ಲಿ ಭಾರತದ ಸಾಜನ್ ಪ್ರಕಾಶ್ ಫೈನಲ್​​ಗೆ ಲಗ್ಗೆ ಇಟ್ಟಿದ್ದಾರೆ. ಇಂದು ನಡೆದ 200 ಮೀ. ಬಟರ್ ಫ್ಲೈ ವಿಭಾಗದಲ್ಲಿ 1:57.75 ಸೆಕೆಂಡ್​​​​​​ ಕಾಲಾವಧಿಯಲ್ಲಿ 100 ಮೀ. ಬ್ಯಾಕ್ ಸ್ಟ್ರೋಕ್​​ನಲ್ಲಿ ಫೈನಲ್​​​ಗೆ ಪ್ರವೇಶ ಪಡೆದು ಸಾಜನ್ ಅವರು ಇತಿಹಾಸ ನಿರ್ಮಿಸಿದ್ದಾರೆ.ಆದರೆ ಭಾರತದ ಹೆಮ್ಮೆಯ ಕ್ರೀಡಾಪಟು ಸುಶೀಲ್ ಕುಮಾರ್​ ಸೋಲು ಕುಸ್ತಿಯಲ್ಲಿ ಅನಿಭವಿಸಿದ್ದಾರೆ. ಪದಕ ಜಯಿಸುವ ನಿರೀಕ್ಷೆ ಮೂಡಿಸಿದ್ದ ಸುಶೀಲ್ ಅವರು ಅರ್ಹತಾ ಸುತ್ತಿನಲ್ಲಿಯೇ  ಸೋತು ಹೊರಬಿದ್ದಿದ್ದಾರೆ.

ಪುರುಷರ 74 ಕೆಜಿ ವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಬಹ್ರೇನ್​ ​​ನ ಆ್ಯದಮ್ ಬಟಿರೋವದ ಅವರ ವಿರುದ್ಧ 3-5 ಪಾಯಿಂಟ್​ಗಳಿಂದ ಸುಶೀಲ್ ಕುಮಾರ್ ಅವರು ಪರಾಭವಗೊಂಡಿದ್ದಾರೆ. ಮೊದಲಾರ್ಧದಲ್ಲಿ 2-1 ರಿಂದ ಮುನ್ನಡೆಯಲ್ಲಿದ್ದ ಸುಶೀಲ್ ಅವರು ಗೆಲುವು ದಾಖಲಿಸುವ ಮುನ್ಸೂಚನೆ ನೀಡಿದ್ದರು. ಆದರೆ ನಂತರದ ಹಂತದಲ್ಲಿ ತಿರುಗೇಟು ನೀಡಿದ ಆ್ಯದಮ್ ಅವರು ಎರಡು ಅಂಕಗಳಲ್ಲಿ ತನ್ನದಾಗಿಸುವ ಮೂಲಕ ಜಯ ಸಾಧಿಸಿದರು.
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ